ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ ಪ್ರೀತಿಯಲ್ಲಿ ಬೆಳೆಯುತ್ತಾಳೆ ಹಸೀನಾ. ಚಿಕ್ಕಮ್ಮ ಮನೆಗೆ ಬಂದದ್ದು ತಮಗೆ ಇಷ್ಟವಿಲ್ಲವೆಂಬಂತೆ ಹಸೀನಾಳ ಇಬ್ಬರು ಅಣ್ಣದಿಂದು ದೂರಾಗುತ್ತಾರೆ. ಚಿಕ್ಕಮ್ಮನ ಜೊತೆಗೆ ಮನೆಗೆ ಬಂದವನು ಆಕೆಯ ಮಗ ಅಮೀದ್ ಮನೆಯಲ್ಲಿ ಪರಕೀಯನಾಗಿ ಉಳಿಯುತ್ತಾನೆ. ಮುಸ್ಲಿಂ ಸಂಪ್ರದಾಯದಂತೆ ಅಮೀದ್ ಗೆ ಹಸೀನಾಳನ್ನು ಮದುವೆ ಮಾಡುತ್ತಾರೆ. ಚಿಕ್ಕ ಮಯಸ್ಸಿನಿಂದ ಒಟ್ಟಿಗೆ ಬೆಳೆದರೂ ಇಬ್ಬರಲ್ಲಿ ಅಷ್ಟೇನೂ ಆತ್ಮೀಯತೆ ಇರುವುದಿಲ್ಲ. ಮದುವೆಯಾದರೂ ಅವನ ಮೇಲೆ ಯಾವ ಭಾವನೆಗಳೂ ಹುಟ್ಟಿರುವುದಿಲ್ಲ. ಇವಳ ಅಣ್ಣಂದಿರಿಬ್ಬರು ಈ ಮದುವೆಯನ್ನು ವಿರೋಧಿಸುತ್ತಾರೆ. ಇದಾದ ಕೆಲ ದಿನಗಳ ಬಳಿಕ ಹಸೀನಾ ತಂದೆ ಮರಣ ಹೊಂದುತ್ತಾರೆ. ಅಣ್ಣಂದಿರು ಮನೆಗೆ ಬಂದು ಚಿಕ್ಕಮ್ಮ ಮತ್ತು ಅವಳ ಮಗಗನ್ನು ಅವರ ತೌರಿಗೆ ಕಳುಹಿಸಿ ಹಸೀನಾಳಿಗೆ ಮದುವೆ ಮಾಡಲು ನಿರ್ಧರಿಸುತ್ತಾರೆ!!!!! ಕನಿಕರವನ್ನು ಹೊರತುಪಡಿಸಿ, ಪತಿಯೆಂಬ ಭಾವನೆಯಿಲ್ಲದ ಅಮೀದ್ ನನ್ನು ಮದುವೆಯಾದ ಹಸೀನಾ ಅವನನ್ನು ಬಿಡುತ್ತಾಳೆಯೇ????? ಮದುವೆಗಿಂತ ಮುಂಚೆ, ಮದುವೆಯಾದ ಮೇಲೂ ಒಮ್ಮೆಯೂ ಮಾತನಾಡಿಸದ ಗಂಡನನ್ನು ಒಪ್ಪುತ್ತಾಳೆಯೇ???? ಹಸೀನಾ ಮತ್ತು ಅಮೇದ್ ಗೂ ತಲಾಖ್ ದೊರೆಯುತ್ತದೆಯೇ????? ನಿಜವಾಗಿಯೂ ಅಮೀದ್ ಗೆ ನನ್ನ ಮೇಲೆ ಪ್ರೀತಿಯಿದೆಯೇ? ಅಣ್ಣಂದಿರು ನೋಡಿದ ಹುಡುಗನನ್ನು ಮದುವೆಯಾಗುತ್ತಾಳೆಯೇ?????? ಹಸೀನಾಳ ನಿರ್ಧಾರವೇನು? ಚಿಕ್ಕಮ್ಮ ಮನೆಗೆ ಬಂದಾಗ ಸಾಮಾನ್ಯ ಕತೆಗಳಲ್ಲಿ ಇರುವಂತೆ ಕಿರುಕುಳವನ್ನು ಊಹಿಸಿದ್ದೆ. ಆದರೆ ಇದು ಭಿನ್ನವಾಗಿ ಮುನ್ನೆಡೆಯುತ್ತದೆ.
ಹೆಣ್ಣು ಎಂದಾಕ್ಷಣ ಅವಳಿಗೆ ಯಾವುದೇ ಸ್ವಾತಂತ್ರ್ಯವಿಲ್ಲ, ಅವಳಿಗೆ ಜೀವನದ ಆಯ್ಕೆ ತಿಳಿಯುವುದಿಲ್ಲ. ಅವಳ ಭಾವನೆಗಳು ಯಾರಿಗೂ ಅವಶ್ಯವಿಲ್ಲ. ಅವಳ ಜೀವನವನ್ನು ನಿರ್ಧರಿಸುವಷ್ಟು ವಿವೇಚನೆಯಿರುವುದಿಲ್ಲ ಎಂಬಂತೆ ಮನೆಯಲ್ಲಿಯೇ ಇರುವ ಹುಡುಗನಿಗೆ ಕೊಟ್ಟು ಮದುವೆ ಮಾಡುವ ತಂದೆ, ಅಂದಾಗ್ಯೂ, ಮದುವೆಯಾಗಿರುವ ತಂಗಿಯ ಅಭಿಪ್ರಾಯವೇನೆಂದು ತಿಳಿಯದೇ ನೆಡೆದುಕೊಳ್ಳವ ಅಣ್ಣದಿಂರಿಗೆ ಅಂತಿಮವಾಗಿ ಹಸೀನಾಳ ಉತ್ತರವೇನು? (ಇಂದಿಗೂ ನಾವು ಹಲವೆಡೆ ಇಂತಹ ಪರಿಸ್ಥಿತಿಗೆ ಒಳಗಾಗುವ ಸ್ತ್ರಿಯನ್ನು ಕಾಣಬಹುದಾಗಿದೆ.) ಇದೆಲ್ಲರ ನಿರ್ಧಾರವನ್ನು ಸಾರಾ ಅಬೂಬಕ್ಕರ ಈ ಕತೆಯಲ್ಲಿ ತಿಳಿಸಿದ್ದಾರೆ.