೧೨ ಫೆಬ್ರವರಿ ೧೮೯೦ ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ರಾಮಕೃಷ್ಣ ಶಾಸ್ತ್ರಿ, ತಾಯಿ ಶಂಕರಮ್ಮ. ಕನ್ನಡ , ಸಂಸ್ಕೃತ , ಪಾಳಿ, ಹಿಂದಿ, ಬೆಂಗಾಳಿ, ಇಂಗ್ಲೀಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಪ್ರೌಢಿಮೆಯನ್ನು ಪಡೆದಿದ್ದ ಕೃಷ್ಣಶಾಸ್ತ್ರಿಯವರು ಕನ್ನಡಕ್ಕೆ ಅನುವಾದಕರಿಸುವ ಕೆಲಸದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಮೈಸೂರು ಅಠಾರ ಕಛೇರಿಯನ್ನಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದ ಶಾಸ್ತ್ರಿಯವರು ಮದ್ರಾಸು ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪದವಿಯನ್ನು ಪಡೆದು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ಸಂಶೋಧಕರಾಗಿ, ನಂತರ ಮುಖ್ಯಸ್ಥರಾಗಿ ನಿವೃತ್ತರಾದರು. ೧೯೧೪ರಲ್ಲಿ ಹೈದರಾಬಾದಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದ ಕೃಷ್ಣಶಾಸ್ತ್ರಿಯವರು ೧ ಫೆಬ್ರವರಿ ೧೯೬೮ ರಲ್ಲಿ ಮರಣ ಹೊಂದಿದರು.
ಕಾದಂಬರಿಗಳು:
ವಚನ ಭಾರತ
ನಿರ್ಮಲ ಭಾರತಿ
ಕಥಾಮೃತ
ಜೀವನ ಚರಿತ್ರೆಗಳು:
ರಾಮಕೃಷ್ಣ ಪರಮಹಂಸ
ಬಂಕಿಮಚಂದ್ರ ಚಟರ್ಜಿ
ನಾಗಮಹಾಶಯ
ಕಥಾಸಂಕಲನ:
ಶ್ರೀಪತಿಯ ಕಥೆಗಳು
ಪ್ರಶಸ್ತಿಗಳು:
ಕೇಂದ್ರ ಸಾಹಿತ್ಯ ಅಕಾಡೆಮಿ
ಓದಿರುವ ಕತೆಗಳು: