ಊರಿನಲ್ಲಿ ಎಲ್ಲ ಜನರು ಅತೀ ಕಾಯಿಲೆಯಿಂದ ನರಳಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರು ಫಲಕಾರಿಯಾಗದೇ ಪ್ರಾಣ ಬಿಡುತ್ತಿರುವಾಗ, ವೈದ್ಯರು ಮಂಟೇಕರಿಯನಿಗೆ ಇದ್ದ ಜ್ವರದ ತಾಪವನ್ನು ನೋಡಿ ಇವನಿಗೆ ಚಿಕಿತ್ಸೆ ಕೊಡದಿದ್ದರೆ ನಾಳೆಯೊಳಗೆ ಸಾಯುತ್ತಾನೆಂದು ಹೇಳುತ್ತಾರೆ. ಆದರೆ ಆಸ್ವತ್ರೆ ಹೋಗದೇ ಯಾವುದೇ ಔಷಧಿಯನ್ನು ಪಡೆಯದೇ ಮಂಟೇ ಕರಿಯನು ಬದುಕುತ್ತಾನೆ. ಅದು ಹೇಗೆ ಎಂಬ ತಮಾಷೆಯ ಕತೆಯನ್ನು ರಾಮಸ್ವಾಮಿಯವರು ಬರೆದಿದ್ದಾರೆ.