ಅನಕೃ ರವರು ಈ ಕತೆಯಲ್ಲಿ ಸ್ವಾತಂತ್ರ್ಯ ಹೋರಾಡದ ಸಂದರ್ಭದಲ್ಲಿನ ವಸ್ತುವನ್ನು ಆಯ್ಕೆಮಾಡಿಕೊಂಡಿದ್ದಾರೆ. ಬ್ರಿಟೀಷರ ಅಡಿಯಾಳುಗಳಾಗಿ, ನಮ್ಮನರೇ ನಮ್ಮವರ ವಿರುದ್ಧ ಹೋರಾಡುವ ಸ್ಥಿತಿಯಿತ್ತು. ಕೆಲಜನರಿಗೆ ಮಾತ್ರ ನಿಜವಾಗಿಯೂ ಏನು ನೆಡೆಯುತ್ತಿದೆ ಎಂಬ ಅರಿವಿತ್ತೇ ಹೊರತು, ಸಾಮಾನ್ಯರಿಗೆ ಅದರ ಗಂಧ ಗಾಳಿಯೂ ಇರಲಿಲ್ಲ. ಅದರಲ್ಲೂ ಸಾಮಾನ್ಯ ಮಹಿಳೆಯರಿಗಂತೂ ( ಮಹಿಳಾ ಚಳುವಳಿಗಾರರೂ ಇದ್ದಾರೆ) ಇದರ ಸ್ವಲ್ಪ ಜ್ಞಾನವೂ ಇರಲಿಲ್ಲ. ಅಂಥ ಪರಿಸ್ಥಿತಿಯಲ್ಲಿ ಬ್ರಿಟೀಷರ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಒಬ್ಬ ಪೋಲಿಸ್ ಅಧಿಕಾರಿಯ ಮನೆಗೆ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಆಶ್ರಯ ಕೇಳಿ ಬರುತ್ತಾನೆ!. ಅವನಿಗೆ ಆಶ್ರಯ ಸಿಕ್ಕಿತೋ? ಆಥವಾ ಸೆರೆಮನೆವಾಸವಾಯಿತೋ? ನೀವೇ ಕೇಳಿ.