ಅ ನ ಕೃಷ್ಣರಾಯರು ಬರೆದಿರುವ ಅನೇಕ ಕತೆಗಳು ಸ್ವಾತಂತ್ರ್ಯ ಹೋರಾಟ ಮತ್ತು ಅದರ ಹಿನ್ನಲೆಯನ್ನು ಒಳಗೊಂಡಿರುವಂತಹವುಗಳಾಗಿವೆ. ಅವುಗಳಲ್ಲಿ ಜೈ ಹಿಂದ್ ಕತೆಯೂ ಒಂದು. ಕೆಲವರು ಗಾಂಧಿಯವರ ತತ್ವಗಳನ್ನು ಸಂಪೂರ್ಣವಾಗಿ ನಂಬಿ ಅವುಗಳನ್ನು ಪಾಲಿಸಲು ಪ್ರಯತ್ನಿಸುವವರು ಒಂದೆಡೆಯಾದರೆ, ಇನ್ನೊಂದೆಡೆ ಏನೇನೂ ಗೊತ್ತಿಲ್ಲದೇ ಕೇವಲ ಒಂದು ಬಾರಿ ಜೈಲಿಗೆ ಹೋಗಿ ಬಂದರೆ ನಮ್ಮಗೆ ಅನೇಕ ಅನುಕೂಲಗಳಾಗುತ್ತವೆ. ಸಮಾಜದಲ್ಲಿ ನಮ್ಮ ಗೌರವ ಸ್ಥಾನಮಾನ ಹೆಚ್ಚಾಗುತ್ತದೆಂಬ ಕುರುಡು ನಂಬಿಗೆಯಿಂದ ಜೈಲು ಪಾಲಾದರವು ಎಷ್ಟು ಜನವೋ? ಇಂಥ ಸಂದರ್ಭಗಳನ್ನು ಕಾಯ್ದುಕೊಂಡ ತಮ್ಮ ಕೆಲಸ ಸಾಧಿಸಿಕೊಳ್ಳಲು ಕಾಯ್ದುಕುಳಿತ್ತಿರುವ ಅವಕಾಶವಾದಿಗಳು ಇನ್ನೊಂದಿಷ್ಟು ಜನ. ಇದೆಲ್ಲವನ್ನು ಅನಕೃ ಅವರು ಈ ಕತೆಯಲ್ಲಿ ಹೆಣೆದಿದ್ದಾರೆ. ಈ ಕತೆ ಕೇಳಿದರೆ, ನಿಜವಾಗಿ ನೆಡೆದಿದ್ದ , ನೆಡೆಯುತ್ತಿರುವ ಸನ್ನಿವೇಶಗಳು ತೆರೆಯುತ್ತವೆ.