ಕೋ.ಚೆನ್ನಬಸಪ್ಪನವರು ಬರೆದಿರುವ 'ಅದರ ಕತೆ ಹೀಗಿದೆ'. ಒಬ್ಬ ಬಡ ಶಾಲಾಶಿಕ್ಷಕ ತನ್ನ ವರ್ಗಾವಣೆಗಾಗಿ ಅಧಿಕಾರಿಯ ಬಳಿ ಅಲೆದಾಡುವುದು, ಅಂಗಲಾಚುವುದು, ಬೇಡುವುದು ಅಧಿಕಾರಿಗಳಿಗೆ ಸರ್ವೆಸಾಮಾನ್ಯ. ಈ ತರಹದ ದೃಶ್ಯಗಳನ್ನು ದಿನನಿತ್ಯ ಅವರ ಅವರ ಕಛೇರಿಗಳಲ್ಲಿ ನೋಡುತ್ತಿರುತ್ತಾರೆ. ಆದರೆ ಮನೆಯಲ್ಲಿ ತುಂಬು ಗರ್ಭಿಣಿಯಾಗಿರುವ ಮಗಳಲ್ಲಿ ವಿಚಿತ್ರ ವರ್ತನೆಗಳು ಕಾಣಿಸಿಕೊಂಡು ಅವಳು ಧೀನರಂತೆ, ಅಧಿಕಾರಿಯ ಬಳಿ ಬರುತ್ತಿದ್ದ ಒಬ್ಬ ಬಡ ಶಿಕ್ಷಕನಂತೆ ವರ್ತಿಸಲು ಪ್ರಾರಂಭಿಸಿದರೆ!!?? ಬೇರೆಯವರು ಬಂದು ತನ್ನ ಬೇಡಿದಾಗ ಆಗದಿದ್ದ ನೋವು ಸಂಕಟ, ತನ್ನ ಮಗಳೇ ಅವರ ರೀತಿಯಾಡಲು ಪ್ರಾರಂಬಿಸಿದಾಗ ತಂದೆಗೆ ಆಗುವ ಸಂಕಟ? ಅದರ ಕತೆ ಹೀಗಿದೆ.