೬೫ ನೇ ಸ್ವಾಂತ್ರೋತ್ಸವ ಸಂಭ್ರಮದಲ್ಲಿರುವ ನಮಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೊತ್ತೆ ಇದೆ. ಸಿಕ್ಕ ಸಂತೋಷದೊಂದಿಗೆ ಅನೇಕ ಕರಾಳ ಘಟನೆಗಳಿಗೂ ಮೂಕ ಸಾಕ್ಷಿಯಾಗಿದ್ದವರು, ಅದರ ನೋವಿನ ಬಿಸಿಯನ್ನು ಅನುಭವಿಸಿ ಸ್ವಾಂತ್ರೋತ್ಸವೆಂದರೆ ಬೆಚ್ಚಿಬೀಳುವ ಜನರ ಕತೆಯೇ ನಮಗೆ ಇನ್ನೋಂದು ಇತಿಹಾಸವನ್ನು ತೆರೆದಿಡುತ್ತದೆ. ಅಂತಹ ಘಟನೆಯನ್ನು ಆಧರಿಸಿರುವ ಕತೆಯನ್ನು ಕೋ. ಚೆನ್ನಬಸಪ್ಪನವರು ಬರೆದಿದ್ದಾರೆ. ಇದನ್ನು ಕೋಚೆ ಸಮಗ್ರ ಕತೆಗಳು ಎಂಬ ಪುಸ್ತಕದಿಂದ ಆಯ್ದು ಕೊಳ್ಳಲಾಗಿದೆ.