ಕನ್ನಡ ಸಾಹಿತ್ಯಕ್ಕೆ ಸುಮಾರು ೨೫೦೦ ವರ್ಷಗಳ ಇತಿಹಾಸವಿದ್ದು, ಈಗ ಇದಕ್ಕೆ ಶಾಸ್ತ್ರಿಯ ಸ್ಥಾನಮಾನ ದೊರೆತ್ತಿರುವುದು ಕನ್ನಡ ಸಾಹಿತ್ಯ ಹಿರಿಮೆಯನ್ನು ಮತ್ತಷ್ಟ ಹೆಚ್ಚಿಸಿದರೊಂದಿಗೆ ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ನಮ್ಮ ಸಾಹಿತ್ಯ ಅನೇಕ ಕಾದಂಬರಿಗಳ, ಕತೆಗಳ, ಕವನ, ಮಹಾಕಾವ್ಯ ರಾಶಿಗಳ ಆಗರವಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದು, ಅನೇಕ ಹೆಸರಾಂತ ಕವಿವರ್ಯರನ್ನು, ಮೇರು ವ್ಯಕ್ತಿತ್ತ್ವದ ಸಾಹಿತ್ಯ ದಿಗ್ಗಜ್ಜರನ್ನು, ವಿಮರ್ಶಕರನ್ನು, ಬರಹಗಾರರನ್ನು, ಉದಯೋನ್ಮಖ ಪ್ರತಿಭೆಗಳನ್ನು ಹೊಂದಿದ್ದು ಕನ್ನಡ ಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತದೆ. ಆದರೆ ಪ್ರಸ್ತುತ ಸಾಹಿತ್ಯ ಅಭ್ಯಬಿಸುವವರ, ಓದುವವರ ಸಂಖ್ಯೆ ಅಷ್ಟೇ ಅಗಣೀಯವಾಗಿ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ಇಂದು ಅತೀ ವೇಗದಲ್ಲಿ ಬದಲಾಗುತ್ತಿರುವ ಸಂಪರ್ಕ ಮಾಧ್ಯಮ, ಆಧುನಿಕ ತಂತ್ರಜ್ಞಾನ ಅಳವಡಿಕೆಯ ಜೀವನ ಶೈಲಿ. ಇದರೊಂದಿಗೆ ಕನ್ನಡ ಸಾಹಿತ್ಯವು ಹೆಜ್ಜೆ ಹಾಕುವಲ್ಲಿ ವಿಳಂಭವಾಗುತ್ತಿದೆ. ನಮ್ಮ ಸಾಹಿತ್ಯವು ಅನೇಕ ಲೇಖಕರ ಅದ್ಭುತ ಸಣ್ಣಕತೆಗಳನ್ನು ಹೊಂದಿದೆ. ಇವುಗಳು ಸಹೃದಯ ಕನ್ನಡಾಭಿಮಾನಿಗಳಿಗೆ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಇವುಗಳನ್ನು ಧ್ವನಿ ಮಾಧ್ಯಮದಲ್ಲಿ ಮುದ್ರಿಸಿ, ಈ ಮೂಲಕ ಜನರಿಗೆ ತಲುಪಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. (ನಾನು ಇಲ್ಲಿ ಓದಿರುವ ಎಲ್ಲಾ ಕತೆಗಳ "ಹಕ್ಕುಗಳು" ಆಯಾ ಲೇಖಕರಿಗೇ ಸೇರಿರುತ್ತವೆ.) ಅದರೊಂದಿಗೆ ಕೆಲವಾರು ಸಾಕ್ಷ್ಯಚಿತ್ರಗಳು ಮತ್ತು ನಾನು ಓದಿದ ಕೆಲವು ಕಾದಂಬರಿಗಳನ್ನು ವಿಮರ್ಶಿಸಿದ್ದೇನೆ. ಇವುಗಳನ್ನು ನೋಡಿ, ಕೇಳಿ ಈ ಮೂಲಕ ಕನ್ನಡ ಸಾಹಿತ್ಯವನ್ನು ಜೀವಂತವಾಗಿರಿಸೋಣ. ಇದಕ್ಕೆ ನೀವು ಖಂಡಿತ ಸಹಕರಿಸುತ್ತೀರೆಂಬ ಭರವಸೆ ನನಗಿದೆ.
-ಪ್ರತಿಭಾ ನಿರಂಜನ್.