ಸುಳಿ.
ದೀಪಿಕಾ ಸೃಷ್ಟಿ.
ದೀಪಿಕಾ
ನಿನ್ನ ನಗೆಯೆಂದರೆ
ನಿನ್ನ ಬಗೆಯಂಥದು;
ನಿನ್ನ ಬಗೆಯೆಂದರೆ
ಮಲ್ಲಿಗೆ ಧಗೆಯಂಥದು;
ಮೈಯನ್ನ ಕೆರಳಿಸಿ ಕೊರಗಿಸಿ
ಒಳಗಿನ ಕಣ್ಣನ್ನು ತೆರೆಸುವ
ನಿನ್ನ ಚೆಲುವು ನವಿಲುಗರಿಯ ಪತ್ರದಂಥದು,
ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು
ನನ್ನೊಳಗಿನ ಪದರ ಪದರಗಳು ಸೀಳಿ ಎದ್ದು ಬರುವ
ನೀನೂ ನಾನೇ ಎಂದರೆ ಒಗಟುಮಾತೆ ಹೇಳು ?
ನನ್ನ ರತಿವಿರತಿಯನ್ನ ನೆನಪಿನಲ್ಲಿ ಕಚ್ಚಿ
ಹುಗಿದ ಕಾಮನೆಯನ್ನ ಕನಸಿನಲ್ಲಿ ಬಿಚ್ಚಿ
ತಕ್ಕ ಮಾತಿಗೆ ತಡಕಿ
ನಡುಕ ಗದ್ದದದಲ್ಲಿ ಬಡಬಡಿಸುವಾಗ,
ಮೆಲ್ಲಗೇಳುತ್ತೀಯ ಮಲ್ಲಿಗೆ ಪರಿಮಳಿಸುತ್ತ
ಸುತ್ತ ತೆರೆಯುತ್ತ ಶೃಂಗಾರಲೋಕ ;
ಬೆಳಕಿಗೆ ಮಂಜನ್ನು ಬೆರೆಸಿ
ಬಿಸಿಲಿಗೆ ತಂಪನ್ನು ಕಲೆಸಿ
ಬಾಳನ್ನೇ ಹೋಳಿ ಎನಿಸುತ್ತ ದೀಪಿಕಾ.