ಕುವೆಂಪು.

ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾದರು.

ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.

ಕಾವ್ಯಗಳು

  1. ಶ್ರೀ ರಾಮಾಯಣ ದರ್ಶನ೦

  2. ಕೊಳಲು

  3. ಅಗ್ನಿಹಂಸ

  4. ಅನಿಕೇತನ

  5. ಅನುತ್ತರಾ

  6. ಇಕ್ಶುಗಂಗೋತ್ರಿ

  7. ಕದರಡಕೆ

  8. ಕಥನ ಕವನಗಳು

  9. ಕಲಾಸುಂದರಿ

  10. ಕಿಂಕಿಣಿ

  11. ಕೃತ್ತಿಕೆ

  12. ಜೇನಾಗುವ

  13. ನವಿಲು

  14. ಪಕ್ಷಿಕಾಶಿ

  15. ಚಿತ್ರಾಂಗದಾ

  16. ಪ್ರೇತಕ್ಯು

  17. ಪ್ರೇಮಕಾಶ್ಮೀರ

  18. ಮಂತ್ರಾಕ್ಷತೆ

  19. ಷೋಡಶಿ

  20. ಹಾಳೂರು

  21. ಕೋಗಿಲೆ

  22. ಪಾಂಚಜನ್ಯ

  23. ಕುಟೀಚಕ