ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು.

ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ೧೯೩೬ ಅಕ್ಟೋಬರ ೨೯ ರಂದು ಶಿವಮೊಗ್ಗೆಯಲ್ಲಿ ಹುಟ್ಟಿದರು. ಇವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾದರು.೧೯೯೦ ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು.

ಕವನ ಸಂಕಲನ

  1. ವೃತ್ತ.

  2. ಸುಳಿ.

  3. ನಿನ್ನೆಗೆ ನನ್ನ ಮಾತು.

  4. ದೀಪಿಕಾ.

  5. ಬಾರೊ ವಸಂತ.

  6. ಚಿತ್ರಕೂಟ.

  7. ಹೊಳೆಸಾಲಿನ ಮರ.

  8. ಬೇಲಿಯಾಚೆಯ ಹೂವು.

  9. ಅರುಣಗೀತ.

  10. ಭಾವ ಸಂಗಮ (ಆಯ್ದ ಭಾವಗೀತೆಗಳ ಸಂಗ್ರಹ).

  11. ನಡೆದಿದೆ ಪೂಜಾರತಿ (ಆಯ್ದ ಭಾವಗೀತೆಗಳ ಸಂಗ್ರಹ).

ಅನುವಾದ

  1. ಸುನೀತ (ಶೇಕ್ಸಪಿಯರನ ಐವತ್ತು ಸಾನೆಟ್ಟುಗಳು)

  2. ಚಿನ್ನದ ಹಕ್ಕಿ ( ಯೇಟ್ಸ ಕವಿಯ ಐವತ್ತು ಕವನಗಳು)