As part of Student Faculty Program organized on 29th of April 2023, by the Department of Physics for I B.Sc students. Miss Gagana L U, III B.Sc Student delivered a lecture on the topic “AC Circuits”.
ಮೈಸೂರಿನ ಎಂ ಎಂ ಕೆ ಮತ್ತು ಎಸ್ಡಿ ಎಂ ಮಹಿಳಾ ಮಹಾವಿದ್ಯಾಲಯ ಸಂಸ್ಕೃತವಿಭಾಗದ ವತಿಯಿಂದ ರಾಷ್ಟ್ರಿಯ ದಾರ್ಶನಿಕರ ದಿನಾಚರಣೆಯ ಅಂಗವಾಗಿ ಶಂಕರಾಚಾರ್ಯರ ಜೀವನ ಮತ್ತು ತತ್ವಸಂದೇಶಗಳು ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ವಾನ್ ಶ್ರೀ ಗಣಪತಿ ಭಟ್, ಪ್ರಾಂಶುಪಾಲರು, ಭಾರತೀಯೋಗಧಾಮ ಮೈಸೂರು ಇವರು ತಮ್ಮ ಉಪನ್ಯಾಸದಲ್ಲಿ ಶ್ರೀಶಂಕರಾಚಾರ್ಯರು ಜಗತ್ತು ಕಂಡ ಮಹಾದಾರ್ಶನಿಕರಲ್ಲಿ ಅಗ್ರಗಣ್ಯರೆನಿಸಿದ್ದು ಕರ್ಮವೇ ಪ್ರಧಾನವೆಂಬ ಕಾಲಘಟ್ಟದಲ್ಲಿ ಅದ್ವೈತ ಸಿದ್ಧಾಂತದ ಬೆಳಕನ್ನು ನೀಡಿದವರು .
ತಮ್ಮ ಎಂಟನೇ ವರ್ಷದ ವಯಸ್ಸಿನಲ್ಲಿಯೇ ನಾಲ್ಕೂ ವೇದಗಳನ್ನು ಅಧ್ಯಯನ ಮಾಡಿದ ಭಾರತೀಯ ಶ್ರೇಷ್ಠ ದಾರ್ಶನಿಕ , ಮತ್ತು ತಮ್ಮ ಹನ್ನೆರಡನೆಯ ವಯಸ್ಸಿನೊಳಗೆ ಸಕಲ ಶಾಸ್ತ್ರಗಳೆಲ್ಲವನ್ನು ಅಭ್ಯಸಿಸಿ , ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆದು ಅದ್ವೈತಸಿದ್ಧಾಂತವನ್ನು ವಿಶ್ವವಿಖ್ಯಾತಗೊಳಿಸಿದರು. ಸಕಲ ವೇದಶಾಸ್ತ್ರಗಳನ್ನು ಒಂದೇ ಓದಿಗೆ ಅರ್ಜಿಸಿಕೊಳ್ಳುವ ಪ್ರತಿಭೆ ಶ್ರೀ ಶಂಕರಾಚಾರ್ಯರಲ್ಲಿ ಕಾಣಬಹುದು. ಬುದ್ಧಿವಂತಿಕೆ ಪ್ರಾಮಾಣಿಕತೆ ಪ್ರಯತ್ನಶೀಲತೆ ಇವುಗಳನ್ನು ಶಂಕರಾಚಾರ್ಯರ ಜೀವನದ ಹಿನ್ನೆಲೆಯಲ್ಲಿ ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಿದೆ. ಅದ್ವೈತ ತತ್ವದ ಮೂಲಕ ಪ್ರಪಂಚದ ವಿಶಿಷ್ಟತೆಯನ್ನು ಧಾರ್ಮಿಕವಾಗಿ ಸುಸಂಪನ್ನಗೊಳಿಸಿದವರು ಶಂಕರಾಚಾರ್ಯರು. ವಿದ್ಯಾಭ್ಯಾಸ ಜೀವನಕ್ಕೆ ನೆಮ್ಮದಿಯನ್ನು ತಂದುಕೊಡುವ ವ್ಯವಸ್ಥೆಯಾಗಿದ್ದು, ವಿಶ್ವದ ಜ್ಞಾನವೆಲ್ಲವನ್ನೂ ಓದಿನ ಮೂಲಕ ಪಡೆಯಲು ಸಾಧ್ಯ.. ಶ್ರೀ ಶಂಕರಾಚಾರ್ಯರು ಚಾಂಡಾಲನನ್ನೂ ಮಹಾಪುರುಷನಂದು ಉದ್ಧರಿಸಿ ಕಾಶೀ ವಿಶ್ವನಾಥನ ದರ್ಶನ ಪಡೆದವರು . ಅಲ್ಲದೆ ಭಾರತದ ನಾಲ್ಕು ದಿಕ್ಕುಗಳಲ್ಲಿಯೂ ಪೀಠವನ್ನು ಸ್ಥಾಪಿಸಿ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿದ ಮಹನೀಯರಾಗಿದ್ದಾರೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಾಯಿನಾಥ ಮಲ್ಲಿಗೆಮಾಡು ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶ್ರೀ ಶಂಕರರ ಜನ್ಮದಿನವನ್ನು ದಾರ್ಶನಿಕರ ದಿನವೆಂದು ಘೋಷಿಸಿದ್ದು ವಿಶ್ವಕ್ಕೆ ಭಾರತೀಯರ ಕೊಡುಗೆ ಅನನ್ಯವಾಗಿದ್ದು ಇಡೀ ವಿಶ್ವವೇ ಭಾರತವನ್ನು ವಿಶ್ವಗುರುವೆಂದು ಅರ್ಥೈಸಿಕೊಳ್ಳುವ ರೀತಿಗೆ ಬೆಳೆದಿದೆ.. ಶಂಕರರು ವಿವಾದಕ್ಕೆ ವಾದಮಾಡದೆ ಸತ್ಯಕ್ಕೆ ಚರ್ಚಿಸುವ ವಿಶ್ವಚೇನವಾಗಿದ್ದಾರೆ. ಶಂಕರರ ಜಯಂತಿಯ ಈ ಶುಭ ಸಂದರ್ಭದಲ್ಲಿ ಶಂಕರರ ಜೀವನ ಸಂದೇಶಗಳು ಇಂದಿನ ಎಲ್ಲಾ ಪೋಷಕರಿಗೂ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿಯಾಗಿದ್ದು ಅವರ ತತ್ವ ಆದರ್ಶಗಳು ಜೀವನದಲ್ಲಿ ಅನುಸರಣೀಯವಾಗಿವೆ.
ವಿದ್ಯಾರ್ಥಿಗಳು ದಿನನಿತ್ಯದ ವೃತ್ತಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಂಡು ಸದಾ ಸದ್ವಿಚಾರಗಳನ್ನು ಓದಿದಾಗ ಬದುಕು ಪ್ರಸನ್ನವಾಗುತ್ತದೆ ಎಂದು ಕರೆ ನೀಡಿದರು.. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಪ್ರೊ. ಕೆ. ಎಸ್, ಸುಕೃತಾ, ಸಂಸ್ಕೃತವಿಭಾಗದ ಮುಖ್ಯಸ್ಥರಾದ ಶ್ರೀ ಶ್ರೀನಿವಾಸ ಕಾರಂತ್ ಅವರು ಉಪಸ್ಥಿತರಿದ್ದರು. ಕುಮಾರಿ ಅದಿತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕುಮಾರಿ ಪ್ರಣತಿ ಸ್ವಾಗತಿಸಿದರು . ಕುಮಾರಿ ಅನೂಷ ಸರ್ವರಿಗೂ ವಂದನೆ ಸಲ್ಲಿಸಿದರು.
26/04/2023-Department of Computer Science had organized a session on the topic Research Methodology by SmtSripavithra C K, Research Scholar at Christ University, Bangalore, Assistant Professor of Computer Science, Maharani’s Science College, Mysuru for all final year BCA and B Sc Computer Science students. Principal Prof. Sainath Malligemadu in his presidential speech advised the students to involve themselves in research activity. The resource person Smt C K Sripavithra emphasized on Research Procedure and Writing articles in Journals in her presentation. Smt K S Sukrutha, Head, Department of Computer Science and IQAC Coordinator and other staff members of the department were present on the occasion. 93 students participated in the programme.
On 20th April, 2023, the Department of Commerce and Management Organised Guest Lecture on "Analysis of Union Budget - 2023" .Resource Person,
CMA.Dr.Trinesha T R
Assistant Professor, Govt First Grade College,
Srirangapatana Taluk, Mandya District.
Students of Final Year and Second Year BBA and Final B. Com have participated.