ಉತ್ತರ: ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯೆದೆಯ
ಹಸುರಿನಂತಿದೆ.
ಉತ್ತರ: ಕವಿಯು ನೋಡಿದ ಅಡಕೆಯ ತೋಟವು ಬನದಂಚಿನ
ಕೊನೆಗೆ ಇದೆ.
ಉತ್ತರ: ಹಸುರು ಎಂಬ ಕವಿತೆಯು ಕವಿಯ ಪ್ರಕೃತಿ ತನ್ಮಯತೆ
ಯಿಂದ ಪ್ರೇರಿತವಾಗಿದೆ.
ಉತ್ತರ: ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ
ಜಮಖಾನೆಯಂತೆ ಕಂಡಿದೆ.
ಉತ್ತರ: ಕವಿಗೆ ಆಗಸದಿಂದ ಮುಗಿಲು ಹಸುರು ಕಾಣುತ್ತದೆ.
ಗದ್ದೆಯು ಹಸುರು ಕಾಣುತ್ತದೆ. ಬಯಲು ಹಸುರು ಕಾಣುತ್ತದೆ. ಮಲೆಗಳ
ಶ್ರೇಣಿಯು ಹಸುರು ಕಾಣುತ್ತದೆ. ಕಣಿವೆ ಹಸುರು ಕಾಣುತ್ತದೆ. ಸಂಜೆಯ
ಬಿಸಿಲು ಹಸುರು ಕಾಣುತ್ತದೆ.
- ಉತ್ತರ: ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವನಧಿ
(ವನವೆಂಬ ಸಮುದ್ರ)ಯಲ್ಲಿ ಕವಿಯ ಆತ್ಮವು ಹಸುರಾಯಿತು. "ಸಪಾನ
ಸ್ನಾನದಿಂದ ಸಕಲ ಪಂಚೇಂದ್ರಿಯಗಳೂ ತೃಪ್ತಿ ಹೊಂದಿದವು. ರೂಪ,
ಸ್ಪರ್ಶ, ರಸ, ಗಂಧ, ಆಘ್ರಾಣ ಎಲ್ಲವೂಗಳಲ್ಲಿ ಹಸುರೇ ತುಂಬಿ ತುಂಬಿ
ತೃಪ್ತಿ ಹೊಂದಿದವು.
ಉತ್ತರ: ಕವಿಯ ಪ್ರಜ್ಞೆಗೆ ಸಕಲ ನಿಸರ್ಗವೇ ಮುಕ್ತಿಯ ಆನಂದದ
ಸಾಧನೆಯಾಗುತ್ತದೆ. ತನ್ನ ಸುತ್ತಲೂ ಇರುವಂತಹ ನಿಸರ್ಗವನ್ನು ಕವಿಯ
ನೋಡುವ ದೃಷ್ಟಿಯು ಬೇರೆಯೇ ಇರುತ್ತದೆ. ವರ್ಣಗಳಲ್ಲಿ ಹಸು
ಸಮೃದ್ಧಿಯ ಸಂಕೇತವಾದುದರಿಂದ ಕವಿಯ ಮನಸ್ಸು ಸಮೃದ್ದಿ ಹೊಂದಿ
ತುರೀಯ ಆನಂದವನ್ನನುಭವಿಸುತ್ತದೆ.
ಉತ್ತರ: ಹಸುರು ನವರಾತ್ರಿಯ ನವಧಾತ್ರಿಯಲ್ಲಿ ಈ ಶ್ಯಾಮಲ.
ವನಸಿರಿಯಲ್ಲಿ ಎಲ್ಲೆಲ್ಲೂ ಪಸರಿಸಿರುವುದರಿಂದ ಅದನ್ನು ಕಂಡಂತಹ
ಕವಿಯ ಆತ್ಮವು ಧನ್ಯತೆಯ ಭಾವವನ್ನು ಹೊಂದಿದೆ. ಕವಿಯ ಆತ್ಮವು
ರಸಪಾನ ಸ್ಥಾನದಲ್ಲಿ ಆನಂದ ಹೊಂದಿದೆ. ಆಕಾಶವೂ ಹಸಿರು ಮುಗಿಲೂ
ಹಸಿರು ಗದ್ದೆಯ ಬಯಲೂ ಹಸಿರು, ಹಸಿರು ಪರ್ವತಗಳ ಶ್ರೇಣಿಯು
ಹಸುರು. ಆಳವಾದಂತಹ ಕಣಿವೆಗಳು ಹಸುರು. ಅಜ ಮಾಸದಲ್ಲಿ
ಭತ್ತದ ಗದ್ದೆಗಳು ಗಿಳಿಯ ಎದೆಯ ಬಣ್ಣವನ್ನು ಹೊಂದಿ ವನದ
ಅಂಚಿನಲ್ಲಿ ಇರುವಂತಹ ಅಡಕೆಯ ತೋಟವೂ ಹಸುರಾಗಿದೆ. ಸೊಂಪಾಗಿ
ಬೆಳೆದಿರುವಂತಹ ಹುಲ್ಲು ಮಕಮಲ್ಲಿನ ಹಚ್ಚ ಹಸುರಿನ ಜಮಖಾನೆಯನ್ನು
ಹಾಸಿದಂತಿದೆ. ಅದು ಎಲ್ಲ ಕಡೆಗೂ ಪಸರಿಸಿರುವುದರಿಂದ ಬೇರೆ ಬಣ್ಣವೇ
ಕಾಣದಂತಾಗಿದೆ. ಹೊಸ ಹೂವಿನ ಕಂಪೂ ಹಸುರು ಚಿಗುರೆಲೆಯ
ತಂಪೂ ಹಸುರು. ಹಕ್ಕಿಗಳ ಕೊರಳಿನ ಇಂಪೂ ಹಸುರು. ಇಳೆಯ
ಉಸಿರೇ ಹಸುರಾಗಿದೆ.
ಉತ್ತರ: ಭಾರತ ಮಾತೆಯು ಸಸ್ಯ ಶ್ಯಾಮಲೆಯು. ಇಲ್ಲಿನ
ಪ್ರಕೃತಿ ಸೌಂದರ್ಯವು ವಿದೇಶಿಯರನ್ನೂ ಆಕರ್ಷಿಸಿ ಕೈಬೀಸಿ ಕರೆಯುತ್ತಿದೆ.
ಪ್ರಕೃತಿಯ ಹಸುರು ದೇವನು ಮನುಕುಲಕ್ಕೆ ನೀಡಿದಂತಹ
ವರದಾನವಾಗಿದೆ. ಹಸುರಾದಂತಹ ಕಾಡು ಇರುವುದರಿಂದಲೇ ನಿಸರ್ಗವು
ತನ್ನದೇ ಆದಂತಹ ಸಮತೋಲನಮಯ ವಾತಾವರಣವನ್ನು
ಉಳಿಸಿಕೊಂಡು ಬಂದಿದೆ. ವನ್ಯಜೀವಿಗಳಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ
ಹಸುರು ಬೇಕೇ ಬೇಕು. ವೆಚ್ಚವಾದಂತಹ ಹಸುರಿನ ವಾತಾವರಣದಲ್ಲಿ
ಜೀವಿಗಳು ನೆಮ್ಮದಿಯಿಂದ ಬದುಕುತ್ತಿವೆ, ಸಸ್ಯಗಳು ಅಂಗಾರಾಮು.
ವಾಯುವನ್ನು ಹೀರಿ ಪ್ರಾಣವಾಯುವನ್ನು ಬಿಡುವುದರಿಂದ ಪ್ರಕೃತಿಯ
ಒಂದು ಅಪರೂಪದ ಪ್ರಯೋಗಶಾಲೆ ಎನಿಸಿದೆ. ರೈತರಿಗಂತೂ ಹಸಿರೇ
ಆnಸಿಲಾಗಿದೆ. ಹಚ್ಚ ಹಸುರಾಗಿ ಬೆಳೆದಿರುವಂತಹ ಬತ್ತದ ಗದ್ದೆಯನ್ನು
- ನೋಡಿ ಮಲೆನಾಡಿನ ರೈತರು ಆನಂದ ಪಡುತ್ತಾರೆ, ಬಾಳೆ, ತೆಂಗು,
ಅಡಕೆಯ ತೋಟಗಳು ಸಾವಿರಾರು ಜನ ಬಡವರಿಗೆ ಅನ್ನದಾತವಾಗಿವೆ.
ಆದರೆ ನಿಸರ್ಗದ ಹಸುದನ್ನು ನಾವು ಇಂದು ಉಳಿಸಿಕೊಂಡು
ಬರಬೇಕಾಗಿದೆ. ಇಂದು ಭಾರತದಲ್ಲಿ ಅರಣ್ಯದ ಶೇಕಡಾವಾರು
ಸಮಾಣವು ಅತ್ಯಂತ ಕಡಿಮೆಯಾಗುತ್ತಿದ್ದು, ಈ ಪಾಶವೀ ಕೃತ್ಯವು
ಹೀಗೆಯೇ ಮುಂದುವರಿದರೆ ಮನುಕುಲದ ವಿನಾಶವು ಖಂಡಿತ
ಎಂಬುದನ್ನು ಮರೆಯಬಾರದು.
ಕವಿತೆ : ಹಸುರು
ಕವಿ : ಕುವೆಂಪು |
ಆಕರ : ಪಕ್ಷಿಕಾಶಿ - ಕವನ ಸಂಕಲನ.
ಸಂದರ್ಭ ಸ್ವಾರಸ್ಯ: ದುರ್ಗೆಯ ವಿವಿಧ ರೂಪಾವತಾರಗಳ ಹಬ್ಬ
- ವಾದ ನವರಾತ್ರಿಯ ಈ ಪರ್ವಕಾಲದಲ್ಲಿ ಧಾತ್ರಿಯು ನವಧಾತ್ರಿಯಾಗಿ
ಕಂಗೊಳಿಸುತ್ತಲಿದೆ. ಎಲ್ಲಿ ನೋಡಿದಲ್ಲಿ ತರುಲತೆ ಗುಲಗಳು ಪಲ್ಲವಿಸಿ
ಹಸುರುಮಯವಾಗಿ ಕಾಣುತ್ತಿದೆ. ಇಂತಹ ಸುಂದರ ಶ್ಯಾಮಲವನಧಿಯಲ್ಲಿ
ರಸಪಾನ ಸ್ನಾನದ ಸಡಗರದಲ್ಲಿ ಕವಿಯಾತ್ಮವೂ ಸಹ ಹಸಿರಾಗಿದೆ. ಅಂದರೆ
ಕವಿಯ ವಿಚಾರ ವಾಹಿನಿಯು ಸಮೃದ್ಧಿ ಹೊಂದಿದೆ ಎಂದರ್ಥ,
ಕವಿತೆ : ಹಸುರು |
ಕವಿ : ಕುವೆಂಪು
ಆಕರ : ಪಕ್ಷಿಕಾಶಿ - ಕವನ ಸಂಕಲನ,
ಸಂದರ್ಭ ಸ್ವಾರಸ್ಯ: ಮಳೆಗಾಲ ಕಳೆದು ಆಶ್ವಯುಜ ಮಾಸವು
ಬರಲು ಭೂಮಿಯು ಹಚ್ಚ ಹಸುರಾಗಿ ಕಂಗೊಳಿಸುತ್ತಿದೆ. ಹುಲ್ಲು
ಸೊಂಪಾಗಿ ಸಮೃದ್ಧವಾಗಿ ಬೆಳೆದಿರುವುದು ಕವಿ ಕುವೆಂಪು ಅವರಿಗೆ ವಿಶಿಷ್ಟ
ರೀತಿಯಲ್ಲಿ ಕಂಡಿದೆ. ಅದೋ ಹುಲ್ಲಿನ ಮಕಮಲ್ಲಿನ ಹೊಸದಾದ ಪಚ್ಚೆಯ
ಜಮಖಾನೆಯನ್ನು ಹಾಸಿದಂತಿದೆ. ಹುಲ್ಲುಗಾವಲು ಎಲ್ಲ ಕಡೆಗೂ
ಪಸರಿಸಿರುವುದರಿಂದ ಭೂದೇವಿಯ ಮೈ ಮುಚ್ಚಿದಂತೆ ಕಾಣುತ್ತದೆ.
ಹಸಿರಿನ ಹೊರತಾಗಿ ಬೇರೆ ಯಾವ ಬಣ್ಣವೂ ಅಲ್ಲಿ ಗೋಚರಿಸುವುದಿಲ್ಲ.
ಕವಿತೆ : ಹಸುರು
ಕವಿ ಕುವೆಂಪು
ಆಕರ : ಪಕ್ಷಿಕಾಶಿ - ಕವನ ಸಂಕಲನ.
ಸಂದರ್ಭ ಸ್ವಾರಸ್ಯ: ಅಶ್ವಯುಜ ಮಾಸದಲ್ಲಿ ಬತ್ತದ ಗದ್ದೆಗಳ
ಬಣ್ಣವು ಗಿಳಿಯ ಎದೆಯ ಬಣ್ಣದಂತಿರುತ್ತದೆ. ಹೊಸ ಹೊಸ ಜಾತಿಯ
ಹೂಗಳು ಅರಳಿರುವುದರಿಂದ ಅವುಗಳ ಕಂಪೂ ಹಸುರಾಗಿದೆ. ಅಂದರೆ
ಕಂಪು ಸಮೃದ್ಧವಾಗಿದೆ. ಚಿಗುರೆಲೆಗಳ ತಂಪೂ ಹಸುರಾಗಿದೆ. ಹಕ್ಕಿಗಳ
ಕೊರಳಿಂದ ಹೊರಡುವಂತಹ ಇಂಪಾದ ಗಾನವೂ ಸಹ ಹಸುರಾಗಿದೆ.
ಭೂಮಿಯ ಉಸಿರು ಉಸಿರೂ ಹಸಿರಾಗಿದೆ. ಹೀಗೆ ನಿಸರ್ಗದೇವಿ
ಹಸುರುಡುಗೆಯನ್ನುಟ್ಟು ಸಮೃದ್ಧಿಯನ್ನು ಪಡೆದಿದ್ದಾಳೆ.
ಕವಿತೆ : ಹಸುರು
ಕವಿ : ಕುವೆಂಪು
ಆಕರ : ಪಕ್ಷಿಕಾಶಿ - ಕವನ ಸಂಕಲನ.
ಸಂದರ್ಭ ಸ್ವಾರಸ್ಯ: ಅಶ್ವಯುಜ ರೂಪದಲ್ಲಿ ಆಗಸವು ಹಸುರು.
ಮುಗಿಲೂ ಕೂಡಾ ಹಸುರು ಹಸುರಾಗಿದೆ. ಗದ್ದೆಯ ಬಯಲು
ಹಸುರಾಗಿದೆ. ಶೃಂಗಗಳ ಶ್ರೇಣಿಯೂ ಸಹ ಹಸುರಾಗಿದೆ. ಆಳವಾದಂತಹ
ಕಣಿವೆಗಳು, ಸಂಜೆಯ ಬಿಸಿಲು ಎಲ್ಲವೂ ಹಸಿರಾಗಿದೆ. ಈ ಸಂದರ್ಭದಲ್ಲಿ
ರಾಷ್ಟ್ರಕವಿ ಕುವೆಂಪು ಅವರು ಹಸುರಿತ್ತಲ್, ಹಸುರಿತ್ತಲ್, ಹಸುರತ್ತಲ್
ದ್ದರಿಸುತ್ತಾರೆ. ದೇವನು ಹೇಗೆ ಸರ್ವವ್ಯಾಪಿಯೋ ಹಾಗೆಯೇ
ಅವನು ನಿರ್ಮಿಸಿದಂಥ ಈ ಹಸುರೂ ಸಹ ಸರ್ವವ್ಯಾಪ್ತಿಯೆನಿಸಿದೆ
ಎಂಬುದು ಕವಿಯ ಅಭಿಮತ.