ಉತ್ತರ: ಜೈಮಿನೀ ಭಾರತ ಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ.
ಉತ್ತರ: ಯಜ್ಞಾಶ್ವವನ್ನು ಕಟ್ಟಿದವನು ಲವ.
ಉತ್ತರ: ಕುದುರೆಯನ್ನು ಲವನು ಉತ್ತರೀಯದಿಂದ ಕಟ್ಟಿದನು.
ಉತ್ತರ: ಕುದುರೆಯ ಹಣೆಗೆ ಕಟ್ಟಿದ ಶ್ರೀರಾಮನ ಬಿರುದಾವಳಿ
ಯನ್ನು ಓದಿ ಮುನಿಸುತರು ಹದರಿದರು.
ಉತ್ತರ: ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯು
ವಾಲ್ಮೀಕಿ ಮಹರ್ಷಿಯ ಆಶ್ರಮದ ಉದ್ಯಾನವನಕ್ಕೆ ನುಗ್ಗಿತು. ಆ ಆಶ್ರಮದ
ಹೂವಿನ ತೋಟದಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ತಿನ್ನಲು
- ಹಾತೊರೆಯುತ್ತಿತ್ತು. ಬಾಳೆಯ ವನಗಳನ್ನೂ ಹೂದೋಟವನ್ನೂ ತುಲ್ಲಿ
ತುಳಿದು ನಾಶ ಮಾಡತೊಡಗಿತು.
ಉತ್ತರ: ಕೌಸಲ್ಯಾಪುತ್ರನಾದ ಶ್ರೀರಾಮನು ಲೋಕೈಕವೀರನು.
ಆತನು ಯಾಗ ಮಾಡಲು ಬಿಟ್ಟಿರುವ ಈ ಕುದುರೆಯನ್ನು ಕಟ್ಟುವ ಶಕ್ತಿ
ಯುಳ್ಳವರು ಕಟ್ಟಬಹುದು ಎಂದು ಬರೆದಿತ್ತು.
ಉತ್ತರ: ವಾಲ್ಮೀಕಿಗಳ ಆಶ್ರಮಕ್ಕೆ ಧುಮುಕಿದ ಅಶ್ವಮೇಧ
ಯಜ್ಞದ ಕುದುರೆಯನ್ನು ಉತ್ತರೀಯದಿಂದ ಕೊರಳಿಗೆ ಬಿಗಿದು ಲವನು
ಕಟ್ಟಿ ಹಾಕಿದನು. ಆದರೆ ಹಣೆಯ ಮೇಲಿನ ಪಟ್ಟಿಯಲ್ಲಿ ಬರೆದಂಥ
ಲಿಪಿಯನ್ನು ಮುನಿಕುಮಾರರು ಓದಿ ಹೆದರಿದರೆ ಲವನು ಹೆದರಲಿಲ್ಲ.
ಉತ್ತರ: ವಾಲ್ಮೀಕಿಗಳ ಪುಣ್ಯಾಶ್ರಮದಲ್ಲಿ ಸೀತೆಯು ಅವಳಿಗೆ
ಗಂಡು ಮಕ್ಕಳಿಗೆ ಜನ್ಮವಿತ್ತಳು. ಮುನಿಗಳ ಶ್ರೀರಕ್ಷೆಯಲ್ಲಿ ಕುಮಾರರು
ಸಕಲ ವಿದ್ಯಾಸಂಪನ್ನರಾಗಿ ಸಂಸ್ಕೃತಿಯ ಸಾಕಾರಮೂರ್ತಿಗಳಾಗಿ
ಬೆಳೆಯತೊಡಗಿದರು. ಹೀಗಿರುವಾಗ ಒಂದು ದಿನ ಶ್ರೀರಾಮನು |
ಅಶ್ವಮೇಧದ ಕುದುರೆಯು ಸಂಚರಿಸುತ್ತ ಸಂಚರಿಸುತ
ಆ ಆಶ್ರಮದ ತೋಟಕ್ಕೆ ನುಗ್ಗಿತು. ಹೂವು ಹಣ್ಣಿನ
ನಾಶ ಮಾಡತೊಡಗಿತು. ಅದರ ಹಣೆಯ ಮೇಲಿನ
ತಟದಲ್ಲಿ- ಇದು ಶ್ರೀರಾಮನ ಅಶ್ವಮೇಧ ಯಾಗದ
ಇದನ್ನು ಧೈರ್ಯಶಾಲಿಗಳಾದವರು, ಶೂರರೆನಿಸಿದವರು
ಇಲವಾದರೆ ಸೋತೆವೆಂದು ಮಾಂಡಲೀಕರಾಗಲಿ ಎಂದು
ರೆದದನ್ನು ಓದಿ ಕೋಪಗೊಂಡಂತಹ ಲವನು ಆ ಯಜ್ಞಾಶ್ವವನ್ನು ಕಟ್ಟಿ
ಹಾಕಿದನು.
ಉತ್ತರ: ಲವನ ನಡವಳಿಕೆಯು ನಿಜವಾಗಿಯೂ ಮೆಚ್ಚುವಂತ
ಹುದು. ವಾಲ್ಮೀಕಿ ಮುನಿಗಳ ಆ ಪುಣ್ಯಾಶ್ರಮಕ್ಕೆ ಬಂದಂತಹ ಯಾಗದ
ಕುದುರೆಯನ್ನು ಕಂಡು ಲವನು ಕೆಂಡವಾದನು. ಅದರ ಹಣೆಯ
ಮೇಲೆ ಬರೆದಂತಹ ಬರಹದಲ್ಲಿ ಇದು ಕೌಸಲ್ಯಾಸುತನಾದ ಶ್ರೀರಾಮನ
ಯಾಗದ ಕುದುರೆಯು ಗಂಡಸಾದವರು ಇದನ್ನು ಬಂಧಿಸಬೇಕು.
ಇಲ್ಲವಾದಲ್ಲಿ ಸೋತು ಶರಣಾಗಬೇಕು ಎಂದು ಬರೆದದ್ದನ್ನು ಓದಿಲವನು
ಶ್ರೀರಾಮನೆಂದರೆ ಯಾರು ಎಂಬುದನ್ನರಿಯದೇ ಕ್ಷತ್ರಿಯ ಸಹಜ
ವಾದ ಗುಣದಿಂದ ಅದನ್ನು ಕಟ್ಟಿ ಹಾಕಿದನು. ಕ್ಷಾತ್ರ ತೇಜಕ್ಕೆ
ಕುಂದುಂಟಾದರೆ ಎದುರಿಸಲೇಬೇಕಾದ ವೀರಾಧಿವೀರನ ವರ್ತನೆಯಂತೆ
ಲವನ ನಡತೆಯಿದೆ.
ಕಾವ್ಯಭಾಗ : ವೀರ ಲವ
ಕವಿ : ಲಕ್ಷ್ಮೀಶ
ಆಕರ : ಜೈಮಿನೀ ಭಾರತ.
ವಿವರಣೆ: ಶೂರಾಧಿಶೂರರಾದ ದೊರೆಗಳೂ ಕೂಡ ರಾಮನಿಗೆ
ಹೆದರಿ ಆ ಅಶ್ವಮೇಧ ಕುದುರೆಯನ್ನು ತಡೆಯದೇ ಹಣೆಗೆ ಕಟ್ಟಿರುವ
ಬಿರುದಾವಳಿಯನ್ನು ಓದಿ ರಾಮನ ಹೆಸರನ್ನು ಕೇಳಿದ ಕೂಡಲೇ
ಅತ್ಯಂತ ಗೌರವದಿಂದ ನಮಸ್ಕಾರ ಮಾಡಿ ಗೌರವ ಆದರಗಳನ್ನು ಸಲ್ಲಿಸಿ
ಕಳಿಸುತ್ತಿದ್ದರು. ಶ್ರೀರಾಮನ ವ್ಯಕ್ತಿತ್ವವು ಅಷ್ಟೊಂದು ಘನವಾಗಿತ್ತು.
ಕಾವ್ಯಭಾಗ : ವೀರ ಲವ
ಕವಿ : ಲಕ್ಷ್ಮೀಶ
ಆಕರ : ಜೈಮಿನೀ ಭಾರತ.
ವಿವರಣೆ:ಲವನು ಶ್ರೀರಾಮನ ಅಶ್ವಮೇಧ ಯಾಗದ ಕುದುರೆಯ
ಹಣೆಯಲ್ಲಿ ಬರೆದುದನ್ನು ಓದಿದನು. ಓಹೋ ರಾಮನೊಬ್ಬನೇ
ಲೋಕದಲ್ಲಿ ವೀರನೇ? ಆಗಲಿ ಅವನ ಗರ್ವವನ್ನು ಮುರಿಯದೇ
ಹೋದರೆ ಲೋಕದ ಜನಗಳು ನನ್ನ ತಾಯಿಯನ್ನು ಬಂಜೆಯೆಂದು
ಕರೆಯರೇ? ಹಾಗಾದರೆ ಈ ನನ್ನ ತೋಳುಗಳಿಂದ ಏನು ಪ್ರಯೋಜನ?
ಎಂದನು.
ಕಾವ್ಯಭಾಗ : ವೀರ ಲವ
ಕವಿ : ಲಕ್ಷ್ಮೀಶ
ಆಕರ : ಜೈಮಿನೀ ಭಾರತ.
ವಿವರಣೆ: ಲವನು ತನ್ನ ಉತ್ತರೀಯವನ್ನೇ ಕುದುರೆಯ ಕೊರಳಿಗೆ
ಬಿಗಿದು ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದನು. ಅದನ್ನು ಕಂಡು
ಋಷಿಕುಮಾರರು ಎಲೆ ಲವನೇ ಬೇಡ ಈ ಕುದುರೆಯನ್ನು ಕಟ್ಟಬೇಡ.
ಈ ಕುದುರೆಯು ರಾಜಾಧಿರಾಜರದು. ಕುದುರೆಯನ್ನು ಕಟ್ಟಿದ
ವಾರ್ತೆಯನ್ನು ಕೇಳಿದರೆ ರಾಜಭಟರು ಬಂದು ಹೊಡೆಯುವರು
ಎಂದರು.
ಕಾವ್ಯಭಾಗ : ವೀರ ಲವ
ಆಕರ : ಜೈಮಿನೀ ಭಾರತ.
ವಿವರಣೆ; ಲವನು ಶ್ರೀರಾಮನ ಅಶ್ವಮೇಧದ ಕುದುರೆಯ
ಕೊರಳಿಗೆ ಉತ್ತರೀಯದಿಂದ ಬಿಗಿದು ಬಾಳೆಯ ಮರಕ್ಕೆ ಕಟ್ಟಿ ಹಾಕಿದನು.
ಅದನ್ನು ಕಂಡಂತಹ ಮುನಿಕುಮಾರರು ಲವನೇ ಅದು ರಾಜರ ಕುದುರೆ
ಕಟ್ಟಬೇಡ, ಎಂದಾಗ ಅವನು ಬ್ರಾಹ್ಮಣರಾದ ನೀವು ಹೆದರಿಕೊಂಡರೆ
ಸೀತೆಯ ಮಗನಾದ ನಾನು ಹೆದರುವನೇ? ಎಂದನು.