- ಸಂತಾನೋತ್ಪತ್ತಿಯ ಸಮಯದಲ್ಲಿ ತಂದೆ ತಾಯಿಗಳಿಂದ ಮುಂದಿನ ಪೀಳಿಗೆಯ ಗುಣಗಳನ್ನು ಗಳಿಸಲು DNA ಅಣುಗಳ ರೂಪದಲ್ಲಿ ಬೇಕಾದ ಮಾಹಿತಿಯನ್ನು ಒಂದು ಜೀವಕೋಶದ ನ್ಯೂಕ್ಲಿಯಸ್ ನಲ್ಲಿರುವ ಕ್ರೋಮೋಸೋಮ್ ಗಳು ಹೊಂದಿರುತ್ತವೆ
- ಡಿಎನ್ಎ ಪ್ರೋಟೀನ್ ಗಳನ್ನು ಸಂಶ್ಲೇಷಿಸುವ ಮಾಹಿತಿಯ ಆಕರವಾಗಿದೆ
ಡಿಎನ್ಎಯ ಸ್ವ ಪ್ರತೀಕರಣ ಕ್ರಿಯೆಯನ್ನು ವಿವರಿಸಿ
- ದೇಹದ ವಿನ್ಯಾಸಗಳ ರಚನೆಯಲ್ಲಿ ಪ್ರೊಟೀನ್ ಗಳ ಪಾತ್ರ ಮಹತ್ವದ್ದಾಗಿದೆ
- ಡಿಎನ್ಎ ಪ್ರೋಟೀನ್ ಗಳನ್ನು ಸಂಶ್ಲೇಷಿಸುವ ಮಾಹಿತಿಯ ಆಕರ
- ಡಿಎನ್ಎ ಪ್ರತಿಯನ್ನು ಸೃಷ್ಟಿಸುವುದು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಒಂದು ಮೂಲ ಘಟನೆಯಾಗಿದೆ
- ಜೀವಕೋಶಗಳು ತಮ್ಮ ಡಿಎನ್ಎ ಪ್ರತಿಗಳನ್ನು ನಿರ್ಮಿಸಲು ರಾಸಾಯನಿಕ ಕ್ರಿಯೆಗಳನ್ನು ಬಳಸುತ್ತವೆ
- ಜೀವಕೋಶಗಳಲ್ಲಿ ಡಿಎನ್ಎ ಎರಡು ಪ್ರತಿಗಳನ್ನು ಸೃಷ್ಟಿಸುತ್ತದೆ
- ಈ ಎರಡೂ ಪ್ರತಿಗಳಿಂದ ಡಿಎನ್ಎ ರಚನೆಗೆ ಅವಶ್ಯಕವಾದ ಒಂದು ಪ್ರತಿಯನ್ನು ನಿರ್ಮಿಸಿಕೊಳ್ಳುತ್ತದೆ
- ಈ ಕ್ರಿಯೆಯನ್ನು ಡಿ ಎನ್ ಎ ಸ್ವಪ್ರತೀಕರಣ ಎನ್ನುವರು
ಡಿಎನ್ಎ ಸ್ವ ಪ್ರತೀಕರಣ ಭಿನ್ನತೆಗೆ ಹೇಗೆ ಕಾರಣವಾಗುತ್ತದೆ
- ಡಿಎನ್ಎ ಸ್ವ ಪ್ರಕರಣದಲ್ಲಿ ಜೀವಕೋಶವೂ ಎರಡು ಪ್ರತಿಗಳನ್ನು ಸೃಷ್ಟಿಸುತ್ತದೆ
- ಮತ್ತು ಕೋಶಿಯಾ ರಚನೆಗೆ ಅವಶ್ಯಕವಾದ ಒಂದು ಪ್ರತಿಯನ್ನು ನಿರ್ಮಿಸಿಕೊಳ್ಳುತ್ತದೆ
- ಡಿಎನ್ಎ ಸ್ವ ಪ್ರತೀಕರಣ ಎಷ್ಟು ಸಹಜವಾಗಿದೆ ಎಂಬುದು ಭಿನ್ನತೆಗೆ ಆಧಾರವಾಗಿದೆ
- ಯಾವುದೇ ರಾಸಾಯನಿಕ ಕ್ರಿಯೆಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ
- ಆದ್ದರಿಂದ ಡಿಎನ್ಎ ಸ್ವ ಪ್ರತೀಕರಣವು ಕೆಲವು ಬಾರಿ ಭಿನ್ನತೆಗಳನ್ನು ಹೊಂದುತ್ತದೆ
- ಇದರ ಪರಿಣಾಮವಾಗಿ ಉತ್ಪತ್ತಿಯಾದ ಡಿಎನ್ಎ ಪ್ರತಿಗಳು ಒಂದೇ ರೀತಿಯಾಗಿರಬಹುದು ಆದರೆ ಮೂಲದಂತೆಯೇ ಇರಬೇಕೆಂದಿಲ್ಲ
- ಕೆಲವೊಮ್ಮೆ ಭಿನ್ನತೆಗಳು ಬಹಳ ತೀವ್ರವಾಗಿರಬಹುದು
- ಇದರಿಂದ ಹೊಸ ಡಿ ಎನ್ ಎ ಪ್ರತಿಯೂ ಅನುವಂಶೀಯ ಗೊಂಡು ಜೀವಕೋಶ ರಚನೆಯೊಂದಿಗೆ ಕೆಲಸ ಮಾಡುವುದಿಲ್ಲ
ಸಂತಾನೋತ್ಪತ್ತಿಯಲ್ಲಿ ಭಿನ್ನತೆಯ ಮಹತ್ವವನ್ನು ವಿವರಿಸಿ
- ಪರಿಸರದಲ್ಲಿ ಇರುವ ಜೀವಿ ಸಮುದಾಯಗಳು ಸಂತಾನೋತ್ಪತ್ತಿ ನಡೆಸುವ ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಸೂಕ್ತವಾದ ಸ್ಥಾನಗಳಲ್ಲಿ ಅಥವಾ ಆವಾಸದಲ್ಲಿ ಸೇರಿಕೊಂಡಿವೆ
- ಇದರ ಪ್ರಕಾರ ಒಂದು ಜೀವಿಯ ಡಿಎನ್ಎ ಸ್ವಪ್ರತೀಕರಣವು ಆಯಾ ಆವಾಸ ಅಥವಾ ವಾತಾವರಣದ ಮೇಲೆಯೂ ಕೂಡ ಅವಲಂಬಿತವಾಗಿದೆ
- ಕೆಲವೊಂದು ಬಾರಿ ಜೀವಿಗಳ ನಿಯಂತ್ರಣಕ್ಕೆ ಸಿಗದ ಕಾರಣಗಳಿಂದಾಗಿ ಆವಾಸಗಳು ಬದಲಾಗಬಹುದು
- ಉದಾಹರಣೆಗೆ ಭೂಮಿಯ ಮೇಲಿನ ತಾಪ ಏರುವುದು ಅಥವಾ ಇಳಿಯುವುದು ನೀರಿನ ಮಟ್ಟದಲ್ಲಿ ಬದಲಾಗುವುದು ಉಲ್ಕಾ ಪಾತ್ರಗಳು ಉಂಟಾಗುವುದು
- ಈ ಸಮಯದಲ್ಲಿ ಜೀವಿಗಳು ತಮ್ಮ ಆವಾಸ ಸ್ಥಾನವನ್ನು ಬದಲಿಸಬೇಕಾಗಬಹುದು ಹೀಗಾಗಿ ವಾತಾವರಣದ ಬದಲಾವಣೆ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಬಹುದು
- ಉದಾಹರಣೆಗೆ ಒಂದು ವೇಳೆ ಬ್ಯಾಕ್ಟೀರಿಯಾಗಳು ಸಮಶೀತೋಷ್ಣ ವಲಯದ ನೀರಿನಲ್ಲಿ ತಮ್ಮ ಸಮುದಾಯವನ್ನು ಬೆಳೆಸುತ್ತಿದ್ದರೆ ಅಂತಹ ಸಮಯದಲ್ಲಿ ಜಾಗತಿಕ ತಾಪ ಏರಿಕೆಯಿಂದಾಗಿ ನೀರಿನ ತಾಪ ಏರಿಕೆಯಾಗಬಹುದು ಹೀಗಾಗಿ ಬ್ಯಾಕ್ಟೀರಿಯಾಗಳು ಆ ಸಮಯದಲ್ಲಿ
- ಸಂತಾನೋತ್ಪತ್ತಿ ಮಾಡಲು ಆಗದೇ ಇರಬಹುದು ಒಂದು ವೇಳೆ ಸಂತಾನೋತ್ಪತ್ತಿಯಿಂದ ಒಂದು ಜೀವಿಯ ಉಗಮ ವಾಯಿತೆಂದರೆ ಆಗ ಜನಿಸುವ ಹೊಸ ಬ್ಯಾಕ್ಟೀರಿಯಾವು ಬಹುತೇಕ ಶಾಖವನ್ನು ಕೂಡ ನಿರೋಧಿಸುವ ರೂಪಾಂತರಗಳನ್ನು ಗಳಿಸುತ್ತದೆ ಇದರಿಂದಾಗಿ ಉಂಟಾಗುವ ಬ್ಯಾಕ್ಟೀರಿಯಾ ಅತ್ಯಂತ ಬಲಶಾಲಿ ಆಗಬಹುದು
- ಈ ರೀತಿ ಭಿನ್ನತೆಯೂ ಮಹತ್ವದ್ದಾಗಿದೆ
ಏಕ ಕೋಶಿಯ ಜೀವಿಗಳಲ್ಲಿ ಬಳಸಲಾಗುವ ಸಂತಾನೋತ್ಪತ್ತಿಯ ವಿಧಾನಗಳು ಯಾವುವು ವಿದಳನ
- ತುಂಡರಿಕೆ
- ಪುನರುತ್ಪಾದನೆ
- ಮೊಗ್ಗುವಿಕೆ
- ಕಾಯಜ ಸಂತಾನೋತ್ಪತ್ತಿ
ವಿದಳನ ಎಂದರೇನು
ಏಕಕೋಶ ಜೀವಿಗಳು ಕೋಶ ವಿಭಜನೆಯ ಸಮಯದಲ್ಲಿ ಎರಡು ಸಮ ಭಾಗಗಳಾಗಿ ವಿಭಜನೆಗೊಳ್ಳುವ ಕ್ರಿಯೆ
ವಿದಳನ ಹೊಂದುವ ಏಕ ಕೋಶೀಯ ಜೀವಿಗಳಿಗೆ ಉದಾಹರಣೆ ಕೊಡಿ ಬ್ಯಾಕ್ಟೀರಿಯಾಗಳು
- ಅಮೀಬಾ
- ಲಿಶ್ಮೇನಿಯಾ
- ಪ್ಲಾಸ್ಮೋಡಿಯಂ
ಲಿಶ್ಮೇನಿಯಾದಲ್ಲಿ ಉಂಟಾಗುವ ವಿದಳನ ವಿಧಾನವನ್ನು ವಿವರಿಸಿ
- ಲಿಶ್ಮೇನಿಯಾ ತನ್ನ ದೇಹದ ಒಂದು ತುದಿಯಲ್ಲಿ ಚಾವಟಿ ಯಂತಹ ರಚನೆಯನ್ನು ಹೊಂದಿದೆ ಇಂತಹ ಜೀವಿಗಳಲ್ಲಿ ದ್ವಿ ವಿದಳನ ಕ್ರಿಯೆಯ ಅವುಗಳ ದೈಹಿಕ ರಚನೆಗಳಿಗೆ ಅನುಸಾರವಾಗಿ ನಡೆಯುತ್ತದೆ
- ಇಲ್ಲಿ ದ್ವಿ ವಿದಳನವು ಒಂದು ನಿಶ್ಚಿತ ಸಮತಲದಲ್ಲಿ ಉಂಟಾಗುತ್ತದೆ
ಕಾಲಾ ಅಜರ್ ರೋಗಕ್ಕೆ ಕಾರಣವಾಗುವ ಜೀವಿ ಯಾವುದು
ಲಿಶ್ಮೇನಿಯ
ದ್ವಿ ವಿದಳನ ಯಾವ ಜೀವಿಗಳಲ್ಲಿ ಕಂಡು ಬರುತ್ತದೆ
ಲಿಶ್ಮೇನಿಯ
ಬಹು ವಿದಳನ ಕ್ರಿಯೆ ಎಲ್ಲಿ ಕಂಡು ಬರುತ್ತದೆ
ಪ್ಲಾಸ್ಮೋಡಿಯಂ
ಮಲೇರಿಯಾ ರೋಗಕ್ಕೆ ಕಾರಣವಾದ ಏಕಕೋಶ ಜೀವಿ ಯಾವುದು
ಪ್ಲಾಸ್ಮೋಡಿಯಂ
ತುಂಡರಿಕೆ ಯಾವ ಜೀವಿಗಳಲ್ಲಿ ಕಂಡುಬರುತ್ತದೆ
ಸ್ಪೈರೋಗೈರಾ
ಪುನರುತ್ಪಾದನೆ ಎಂದರೇನು
ಜೀವಿಗಳು ತಮ್ಮ ದೇಹದ ಭಾಗಗಳನ್ನು ಸಂಪೂರ್ಣವಾಗಿ ಚೂರುಗಳಾಗಿ ತುಂಡರಿಸಿ ಪ್ರತಿ ಚೂರು ಒಂದು ಸಂಪೂರ್ಣ ಜೀವಿಯಾಗಿ ಬೆಳೆಯುವ ಪ್ರತಿಕ್ರಿಯೆಯನ್ನು ಪುನರುತ್ಪಾದನೆ ಎನ್ನುವರು
ಪುನರುತ್ಪಾದನೆ ಯಾವ ಜೀವಿಗಳಲ್ಲಿ ಕಂಡುಬರುತ್ತದೆ
ಹೈಡ್ರಾ ಮತ್ತು ಪ್ಲನೇರಿಯಾ
ಅಭಿವರ್ದನೆ ಎಂದರೇನು
ಪುನರುತ್ಪಾದನೆ ಯಿಂದ ಉಂಟಾದ ಜೀವಿಗಳು ಅಸಂಖ್ಯ ಜೀವಕೋಶಗಳನ್ನು ಉಂಟು ಮಾಡುತ್ತವೆ ಈ ಕ್ರಿಯೆಯನ್ನು ಅಭಿ ವರ್ಧನೆ ಎನ್ನುವರು
ಕಾಯಜ ಸಂತಾನೋತ್ಪತ್ತಿಯ ವಿಧಾನವನ್ನು ಎಲ್ಲಿ ಬಳಸಲಾಗುತ್ತದೆ
- ಇದನ್ನು ಲೆಯರಿಂಗ್ ಅಥವಾ ಕಸಿ ಮಾಡುವಿಕೆ ಯಂತಹ ವಿಧಾನಗಳಲ್ಲಿ ಬಳಸುತ್ತಾರೆ
ಕಾಯಜ ಸಂತಾನೋತ್ಪತ್ತಿಯ ವಿಧಾನದಿಂದ ಕಸಿ ಮಾಡಲಾಗುವ ಬೆಳೆಗಳನ್ನು ಉದಾಹರಣೆಯೊಂದಿಗೆ ಹೇಳಿ
- ಕಬ್ಬು, ಗುಲಾಬಿ ಅಥವಾ ದ್ರಾಕ್ಷಿ
ಕಾಯಜ ಸಂತಾನೋತ್ಪತ್ತಿ ಎಂದರೇನು
- ಸೂಕ್ತ ಪರಿಸ್ಥಿತಿಗಳಲ್ಲಿ ಅನೇಕ ಸಸ್ಯಗಳ ಬೇರು ಕಾಂಡ ಮತ್ತು ಎಲೆಗಳಿಂದ ಕೂಡಿದ ಭಾಗಗಳು ಹೊಸ ಸಸ್ಯಗಳಾಗಿ ಬೆಳೆಯುತ್ತದೆ ಇದನ್ನು ಕಾಯಜ ಸಂತಾನೋತ್ಪತ್ತಿ ಎನ್ನುವರು
ಕಾಯಜ ಸಂತಾನೋತ್ಪತ್ತಿಯ ಅನುಕೂಲಗಳೇನು
- ಇಲ್ಲಿ ಉತ್ಪತ್ತಿಯಾದ ಎಲ್ಲಾ ಸಸ್ಯಗಳು ಅನುವಂಶೀಯವಾಗಿ ಪೋಷಕ ಸಸ್ಯವನ್ನು ಹೋಲುತ್ತವೆ
ಲಿಂಗಾಣುಗಳು ಪರಸ್ಪರ ಭಿನ್ನವಾಗಿವೆ ಹೇಗೆ
- ಲಿಂಗಗಳು ದೇಹ ವಿನ್ಯಾಸದ ಆಧಾರದ ಮೇಲೆ ಎರಡು ವಿಧಗಳಾಗಿ ವಿಂಗಡಿಸಬಹುದು
- ಗಂಡು ಲಿಂಗಾಣು ಮತ್ತು ಹೆಣ್ಣು ಲಿಂಗಾಣು
- ಒಂದು ಲಿಂಗಾಣು ದೊಡ್ಡದಾಗಿದ್ದು ಸಂಗ್ರಹಿತ ಆಹಾರವನ್ನು ಹೊಂದಿದ್ದರೆ ಅದನ್ನು ಹೆಣ್ಣು ಲಿಂಗಾಣು ಎಂದು ಕರೆಯುತ್ತಿವೆ
- ಒಂದು ಲಿಂಗಾಣು ಚಲನಶೀಲವಾಗಿದ್ದರೆ ಅದನ್ನು ಗಂಡು ಲಿಂಗಾಣು ಎಂದು ಕರೆಯಲಾಗುತ್ತದೆ
ಹೂವಿನ ಸಂತಾನೋತ್ಪತ್ತಿಯ ಭಾಗಗಳು ಯಾವುವು
- ಕೇಸರ ಮತ್ತು ಶಲಾಕ
ಒಂದು ಹೂವು ಏಕಲಿಂಗಿಯಾಗಿದೆ ಎಂದು ಹೇಗೆ ಕಂಡುಹಿಡಿಯಬಹುದು
- ಒಂದು ಹೂವು ಕೇವಲ ಕೇಸಗಳನ್ನು ಅಥವಾ ಶಲಾಕಗಳನ್ನು ಹೊಂದಿದ್ದರೆ ಅದು ಏಕಲಿಂಗಿಯಾಗಿದೆ
ಏಕ ಲಿಂಗಿ ಹೂವುಗಳಿಗೆ ಉದಾಹರಣೆ ಕೊಡಿ
- ಪಪಾಯ ಮತ್ತು ಕಲ್ಲಂಗಡಿ
ಒಂದು ಹೂವು ದ್ವಿಲಿಂಗಿ ಯಾಗಿದೆ ಎಂದು ಹೇಗೆ ಹೇಳಬಹುದು
- ಒಂದು ಹೂವು ಕೇಸರ ಮತ್ತು ಶಲಾಕ ಗಳೆರಡನ್ನೂ ಹೊಂದಿದ್ದರೆ ಅದು ದ್ವಿಲಿಂಗಿ ಆಗಿದೆ
ದ್ವಿಲಿಂಗಿ ಹೂವುಗಳಿಗೆ ಉದಾಹರಣೆ ಕೊಡಿ
- ದಾಸವಾಳ ಮತ್ತು ಸಾಸಿವೆ
ಹೂವಿನ ಗಂಡು ಸಂತಾನೋತ್ಪತ್ತಿಯ ಭಾಗ ಯಾವುದು
- ಕೇಸರ
ಹೂವಿನ ಹೆಣ್ಣು ಲಿಂಗಾನು ಸಂತಾನೋತ್ಪತ್ತಿಯ ಭಾಗ ಯಾವುದು
- ಶಲಾಕ
ಶಲಾಕೆಯ ಭಾಗಗಳು ಯಾವುವು
- ಅಂಡಾಶಯ
- ಶಾಲಾನಳಿಕೆ
- ಶಲಾಕಾಗ್ರ
ಸ್ವಕೀಯ ಪರಾಗಸ್ಪರ್ಶ ಎಂದರೇನು
- ಪರಾಗದ ವರ್ಗಾವಣೆಯೂ ಅದೇ ಹೂವಿನಲ್ಲಿ ನಡೆದರೆ ಅದನ್ನು ಸ್ವಕೀಯ ಪರಾಗಸ್ಪರ್ಶ ಎನ್ನುವರು
ಪರಕೀಯ ಪರಾಗ ಸ್ಪರ್ಶ ಎಂದರೇನು
- ಪರಾಗವು ಒಂದು ಹೂವಿನಿಂದ ಇನ್ನೊಂದು ಹೂವಿಗೆ ವರ್ಗಾವಣೆಗೊಂಡರೆ ಅದನ್ನು ಪರಕೀಯ ಪರಾಗ ಸ್ಪರ್ಶ ಎನ್ನುವವರು
ಪರಾಗ ಸ್ಪರ್ಶಕ್ಕೆ ಇರುವ ಮಾಧ್ಯಮಗಳು ಯಾವುವು
- ಗಾಳಿ, ನೀರು ಅಥವಾ ಪ್ರಾಣಿಗಳು
ಮೊಳೆಯುವಿಕೆ ಎಂದರೇನು
- ಬೀಜವು ಭವಿಷ್ಯದ ಸಸ್ಯ ಅಥವಾ ಭ್ರೂಣವನ್ನು ಹೊಂದಿದ್ದು ಸೂಕ್ತ ಪರಿಸ್ಥಿತಿಗಳಲ್ಲಿ ಅದು ಮೊಳಕೆಯೊಡೆಯುತ್ತದೆ ಈ ಪ್ರಕ್ರಿಯೆಯನ್ನು ಮೊಳೆಯುವಿಕೆ ಯನ್ನು ಕರೆಯುವರು
ಪ್ರೌಢಾವಸ್ಥೆಯಲ್ಲಿ ಹುಡುಗರಲ್ಲಿ ಮತ್ತು ಹುಡುಗಿಯರಲ್ಲಿ ಆಗುವ ಬದಲಾವಣೆಗಳು ಯಾವುವು
- ಕಂಕುಳ ಮತ್ತು ಜನನಾಂಗ ಗಳಂತಹ ಭಾಗಗಳಲ್ಲಿ ದಟ್ಟವಾದ ಕೂದಲು ಬೆಳೆಯುತ್ತದೆ
- ಮುಖ, ಕೈ ಮತ್ತು ಕಾಲುಗಳ ಮೇಲೆ ಕೂಡ ತೆಳುವಾಗಿ ಕೂದಲುಗಳು ಕಾಣಿಸಿಕೊಳ್ಳುತ್ತವೆ
- ಚರ್ಮದಲ್ಲಿ ಆಗ್ಗಾಗ್ಗೆ ಎಣ್ಣೆಯ ಅಂಶ ಕಾಣಲಾರಂಭಿಸುತ್ತದೆ
- ಮುಖದ ಮೇಲೆ ಮೊಡವೆಗಳು ಮೂಡಲು ಪ್ರಾರಂಭವಾಗುತ್ತವೆ
- ನಮ್ಮ ದೇಹ ಮತ್ತು ಇತರರ ದೇಹದ ಕುರಿತು ಹೊಸ ರೀತಿಯ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗುತ್ತದೆ
ಹುಡುಗಿಯರಲ್ಲಿ ಪ್ರೌಢಾವಸ್ಥೆ ಯಲ್ಲಿ ಕಾಣಬರುವ ಬದಲಾವಣೆಗಳು ಯಾವುವು
- ಹುಡುಗಿಯರಲ್ಲಿ ಸ್ತನಗಳ ಗಾತ್ರ ದೊಡ್ಡದಾಗಲು ಪ್ರಾರಂಭವಾಗುತ್ತದೆ
- ಸ್ತನದ ತೊಟ್ಟುಗಳು ದಟ್ಟವಾದ ಬಣ್ಣವನ್ನು ಹೊಂದುತ್ತದೆ
- ಮಾಸಿಕ ಋತುಚಕ್ರ ಪ್ರಾರಂಭವಾಗುತ್ತದೆ
ಪ್ರೌಢಾವಸ್ಥೆಯಲ್ಲಿ ಹುಡುಗರಲ್ಲಿ ಕಂಡುಬರುವ ಬದಲಾವಣೆ ಯಾವುವು
- ಹುಡುಗರಲ್ಲಿ ಮುಖದ ಮೇಲೆ ಹೊಸದಾಗಿ ಕೂದಲುಗಳು ಕಾಣಿಸಿಕೊಳ್ಳುತ್ತವೆ
- ಹುಡುಗರ ಧ್ವನಿ ಒಡೆಯಲು ಪ್ರಾರಂಭವಾಗುತ್ತದೆ
- ಹಗಲುಗನಸಿನಲ್ಲಿ ಅಥವಾ ರಾತ್ರಿ ವೇಳೆಯಲ್ಲಿ ಶಿಶ್ನವು ಆಗಾಗ್ಗೆ ದೊಡ್ಡದಾಗುತ್ತದೆ ಮತ್ತು ನಿಮಿರುತ್ತದೆ
ಪ್ರೌಢಾವಸ್ಥೆ ಎಂದರೇನು
- ದೇಹದ ಸಾಮಾನ್ಯ ಬೆಳವಣಿಗೆಯ ದರವು ನಿಧಾನವಾಗಲು ಪ್ರಾರಂಭಿಸಿದಂತೆ ಸಂತಾನೋತ್ಪತ್ತಿಯ ಅಂಗಾಂಶಗಳು ಪಕ್ವವಾಗಲು ಪ್ರಾರಂಭವಾಗುತ್ತದೆ ಹದಿಹರೆಯದ ಈ ಅವಧಿಯನ್ನು ಪ್ರೌಢಾವಸ್ಥೆ ಎನ್ನುವರು