ಉತ್ತರ: ಬಿರುಗಾಳಿಗೆ ಹೊಯ್ದಾಡುವ ಹಡಗವನ್ನು ಎಚ್ಚರದಿಂದ
ಮುನ್ನಡೆಸಬೇಕು.
ಉತ್ತರ: ನದೀಜಲಗಳು ಕಲುಷಿತವಾಗಿವೆ.
ಉತ್ತರ: ಕಲುಷಿತವಾದ ಈ ನದೀಜಲಗಳಿಗೆ ಮುಂಗಾರಿನ
ಮಳೆಯಾಗಬೇಕು.
ಉತ್ತರ: ಕಾಡುಮೇಡುಗಳು ಬರಡಾಗಿವೆ.
ಉತ್ತರ: ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು
ಬದುಕಬೇಕಾಗಿದೆ.
ಉತ್ತರ: ಸುತ್ತಲು ಕವಿಯುತ್ತಿರುವ ಕತ್ತಲೆಯೊಳಗೆ ಪ್ರೀತಿಯ
ಹಣತೆಯನ್ನು ಹಚ್ಚಿ ಅದರ ಬೆಳಕಿನಲ್ಲಿ ಬಿರುಗಾಳಿಗೆ ಹೊಯ್ದಾಡುತ್ತಿರುವ
ಹಡಗನ್ನು ಎಚ್ಚರದಿಂದ ನಡೆಸಬೇಕಿದೆ.
ಉತ್ತರ: ಕಲುಷಿತವಾಗುತ್ತಿರುವಂತಹ ನದೀಜಲಗಳಿಗೆ
ಮುಂಗಾರಿನ ಮಳೆಯಾಗಿ ಬರಡಾಗಿರುವಂತಹ ಈ ಕಾಡುಮೇಡುಗಳಿಗೆ
ಸಮೃದ್ದಿಯ ವಸಂತವಾಗೋಣ.
ಉತ್ತರ: ಬಿದ್ದುದನ್ನು ಮೇಲಕ್ಕೆ ಎಬ್ಬಿಸಿ ಅಂದರೆ ಕೆಳಗೆ ಬಿದ್ದವರನ್ನು
ಆಶಾಕಿರಣಗಳ ಮೂಲಕ ಮೇಲಕ್ಕೆತ್ತಿ ಮನುಜರ ನಡುವಿನ
ಅಡ್ಡಗೋಡೆಗಳನ್ನು ಕೆಡುವುತ್ತ ಸೇತುವೆಗಳಾಗೋಣ.
ಉತ್ತರ: ಮತಗಳೆಲ್ಲವೂ ಪಥಗಳು ಎನ್ನುವಂತಹ ಹೊಸ
ಎಚ್ಚರದಲ್ಲಿ ನಾವು ಬದುಕಬೇಕು. ಭಯ ಸಂಶಯದಲ್ಲಿ ಕಂದಿರುವಂತಹ
ಕಣ್ಣಿನಲ್ಲಿ ನಾಳಿನ ಕನಸನ್ನು ಬಿತ್ತೋಣ.
ಉತ್ತರ: ಇದು ಸಂಕಲ್ಪ ಯುಗವಾಗಿದೆ. ಸ್ವಾತಂತ್ರ್ಯ ಉದಯದ
ಮತ್ತು ಪೂರ್ವದ ಕಾಲದಲ್ಲಿ ಯುಗಪುರುಷರು ಅನೇಕ ಸತ್ ಸಂಕಲ್ಪ
ಗಳನ್ನು ಮಾಡಿಕೊಂಡಿದ್ದರು. ಸ್ವಾತಂತ್ರ ವೇ ನನ್ನ ಜನ್ಮಸಿದ್ಧ ಹಕ್ಕು.
ಅದನ್ನು ನಾವು ಸಾಧಿಸದೆ ಬಿಡಲಾರೆನು ಎಂದು ಒಬ್ಬರ ಸಂಕಲ್ಪವಾದರೆ
ಚಲೇಜಾವ್ ಎನ್ನುವುದು ಇನ್ನೊಬ್ಬರು ಬ್ರಿಟಿಷರ ವಿರುದ್ಧ ಘೋಷಣೆ
ಕೂಗಿ ಸ್ವಾತಂತ್ರ ವನ್ನು ಪಡೆಯುವ ಸಂಕಲ್ಪ ಮಾಡಿದರು. ಅದನ್ನು
ಸಾಧಿಸಿಯೂ ಬಿಟ್ಟರು.
ಅದರಂತೆ ಪ್ರಸ್ತುತದ ಸಂಕಲ್ಪ ಗೀತೆಯಲ್ಲಿಯೂ ರಾಷ್ಟ್ರಕವಿ
ಜಿ.ಎಸ್. ಶಿವರುದ್ರಪ್ಪನವರೂ ಅಜ್ಞಾನವನ್ನು ತೊಡೆದು ಹಾಕುವ ಅಲ್ಲಿ
ಪ್ರೀತಿಯ ಹಣತೆಯನ್ನು ಬೆಳಗಿಸುವ ಜೀವನದಲ್ಲಿನ ದುಃಖವೆಂಬ
ಬಿರುಗಾಳಿಗೆ ಸಿಲುಕಿ ಹೊಯ್ದಾಡುವ ಹಡಗವನ್ನು ಎಚ್ಚರದಿಂದ ನಡೆಸುವ
ಸತ್ಸಂಕಲ್ಪ ಮಾಡಿದ್ದಾರೆ.
ಉತ್ತರ: ಜಗತ್ತಿನಲ್ಲಿ ಯಾವ ಮನುಷ್ಯನೇ ಆಗಿರಲಿ,
ಸ್ತ್ರೀಯಾಗಿರಲಿ ಪುರುಷನಾಗಿರಲಿ ಒಂದು ಪ್ರತಿಜ್ಞೆ ಅಥವಾ ಸಂಕಲ್ಪವನ್ನು
ಮಾಡಬೇಕು. ಆದರೆ ಅದನ್ನು ಅನುಷ್ಠಾನದಲ್ಲಿ ತಂದಾಗ ಮಾತ್ರ ಆ
ಸಂಕಲ್ಪಕ್ಕೆ ಒಂದು ಬೆಲೆ ಇದೆ. ಒಂದು ಅರ್ಥವಿದೆ. ಇಂದು ಭಾರತದ
ಜೀವನಾಡಿಗಳೆನಿಸಿದ ನದಿಗಳೆಲ್ಲಾ ಕಲುಷಿತ ಜಲದಿಂದ ತುಂಬಿ
ಹೋಗಿವೆ. ಆ ಕಲುಷಿತ ಜಲಕ್ಕೆ ಮುಂಗಾರಿನ ಮಳೆ ಆಗಿ ಅಲ್ಲಿ ಹೊಸ
ನೀರು ಪ್ರವಹಿಸುವಂತೆ ಪ್ರತಿಜ್ಞೆ ಮಾಡೋಣ. ಬರಡಾಗಿರುವಂತಹ
ಕಾಡು ಮೇಡುಗಳನ್ನು ಸಮೃದ್ಧಿಯಾಗುವಂತೆ ಮಾಡೋಣ, ಸಮಾಜ
ದಲ್ಲಿ ಯಾರು ಬಿದ್ದವರಾಗಿರುವರೋ ಅವರಲ್ಲಿ ಆತ್ಮಸ್ಥೆರ್ಯವನ್ನು
ತುಂಬಿ ನಮ್ಮ ನಮ್ಮ ನಡುವೆ ಇರುವಂತಹ ವೈಷಮ್ಯದ ಅಡ್ಡಗೋಡೆ
ಗಳನ್ನು ಕೆಡವಿ ಸ್ನೇಹದ ಸೇತುವೆಯನ್ನು ಕಟ್ಟೋಣ, ಮತ ಮತಗಳಲ್ಲಿನ
ಮೌಡ್ಯಗಳನ್ನು ತೊಡೆದು ಹಾಕಿ ನಾಳಿನ ಕನಸನ್ನು ಬಿತ್ತೋಣ ಎಂಬುದು
ಶಿವರುದ್ರಪ್ಪನವರ ಆಶಯವಾಗಿದೆ.
ಕಾವ್ಯಭಾಗ : ಸಂಕಲ್ಪಗೀತೆ
ಕವಿ : ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ
ಆಕರ : ಎದೆತುಂಬಿ ಹಾಡಿದೆನು ಕವನ ಸಂಕಲನ.
ವಿವರಣೆ: ಇಂದು ನಮ್ಮ ಸುತ್ತಮುತ್ತ ಎಲ್ಲ ಕಡೆಗೂ ಅಜ್ಞಾನದ
ಕತ್ತಲೆಯೇ ತುಂಬಿದೆ. ತಮಸೋಮಾ ಜ್ಯೋತಿರ್ಗಮಯ ಋಷಿ
ಮುನಿಗಳು ಹಾಡಿದಂತೆ ನಾವು ಇಂದು ಈ ಕತ್ತಲೆಯನ್ನು ಆಮೂಲಾಗ್ರ
ವಾಗಿ ಅಳಿಸಿ ಹಾಕಿ ಅದರ ಸ್ಥಾನದಲ್ಲಿ ಒಂದು ಪ್ರೀತಿಯ ಹಣತೆಯನ್ನು
ಹಚ್ಚಣ ಎನ್ನುತ್ತಾರೆ ಡಾ. ಜಿ.ಎಸ್. ಶಿವರುದ್ರಪ್ಪ,
ಕಾವ್ಯಭಾಗ : ಸಂಕಲ್ಪಗೀತೆ
ಕವಿ : ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ
ಆಕರ : ಎದೆತುಂಬಿ ಹಾಡಿದೆನು ಕವನ ಸಂಕಲನ.
ವಿವರಣೆ: ಹಲವಾರು ಕಾರಣಗಳಿಂದ ಇದು ಭಾರತದಲ್ಲಿನ
ನದಿಗಳೆಲ್ಲವೂ ದುರ್ಗಂಧದಿಂದ ಕೂಡಿ ಜಲಮಾಲಿನ್ಯವನ್ನು ಹೊಂದಿದೆ.
ಮನು ಕುಲದ ಜೀವನಾಡಿ ಎಂದರೆ ಜಲ. ಅದರ ಪಾವಿತ್ರತೆಯನ್ನು
ನಾವು ಇಂದು ಕಾಪಾಡಿಕೊಂಡು ಬರಲು ಮುಂಗಾರಿನ ಮಳೆಯಾಗಿ
ಒಡಲಾಳದ ವಿಸ್ತಾರದಿಂದ ಹರಿದು ಶುದ್ಧವಾಗಿಸೋಣ.
ರಾವ್ಯಭಾಗ : ಸಂಕಲ್ಪಗೀತೆ
ಕವಿ : ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ
ಆಕರ : ಎದೆತುಂಬಿ ಹಾಡಿದೆನು ಕವನ ಸಂಕಲನ.
ವಿವರಣೆ: ನನ್ನಷ್ಟಕ್ಕೆ ನಾನು ದೊಡ್ಡವನಾಗುವದು. ಜಗತ್ತಿನಲ್ಲಿ
ಶ್ರೀಮಂತನೆನಿಸಿಕೊಳ್ಳುವುದೇನು ಮಹತ್ವದ್ದಲ್ಲ. ಆದರೆ ದುರ್ದೈವದಿಂ
ದಾಗಿ ನಮ್ಮವರೇ ಅವನತಿ ಹೊಂದಿ ಅತ್ಯಂತ ಕಠಿಣತರವಾದ ಪರಿಸ್ಥಿತಿ
ಯಲ್ಲಿ ಇರುವಾಗ ಅವರನ್ನು ಮೇಲಕ್ಕೆ ಎಬ್ಬಿಸಿ ಪರಸ್ಪರರಲ್ಲಿ ಉಂಟಾಗಿರು
ವಂತಹ ವೈಷಮ್ಯಗಳನ್ನು ತೊರೆದು ಹಾಕೋಣ. ನಾವಿಲ್ಲಿಗೆ ಜನಿಸಿ ಬಂದಿರು
ವುದು ದ್ವೇಷಿಸಲಿಕ್ಕಲ್ಲ, ಪ್ರೀತಿಸಲಿಕ್ಕೆ ಎಂಬ ಅರಿವು ಮೊದಲು ಇರಬೇಕು.
ಕಾವ್ಯಭಾಗ : ಸಂಕಲ್ಪಗೀತೆ
ಕವಿ : ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ
ಆಕರ : ಎದೆತುಂಬಿ ಹಾಡಿದೆನು ಕವನ ಸಂಕಲನ.
ವಿವರಣೆ: ಪ್ರಸ್ತುತ ವಾಕ್ಯವನ್ನು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ
ನವರು ಬರೆದ ಸಂಕಲ್ಪ ಗೀತೆ ಎಂಬ ಕವಿತೆಯಿಂದ ಆಯ್ಕೆ ಮಾಡಲಾಗಿದೆ.
ನಾವುಗಳು ಇಂದು ಸಮಾಜದಲ್ಲಿ ಸರ್ವ ಸಮಾನತೆಯನ್ನು
ತರಬೇಕಾಗಿದೆ. ಅದಕ್ಕಾಗಿ ಆರ್ಥಿಕವಾಗಿ, ಜಾತಿವಾದದಿಂದಾಗಿ ಕೆಳಗೆ
ತುಳಿಯಲ್ಪಟ್ಟವರನ್ನು ಮೇಲೆತ್ತಬೇಕಾಗಿದೆ. ಮನುಷ್ಯ ಮನುಷ್ಯರ ನಡುವೆ
ಇರುವಂತಹ ವೈಷಮ್ಯದ ಗೋಡೆಯನ್ನು ಕೆಡವಿ ಸೇತುವೆ ಆಗಬೇಕಾಗಿದೆ.
ಮತಗಳೆಲ್ಲವೂ ಒಂದೊಂದು ಪಥಗಳು ಎನ್ನುವ ಹೊಸ ಎಚ್ಚರದಲ್ಲಿ
ಬಾಳೋಣ. ಅಂದಾಗಲೇ ಭಾರತವು, ಮನುಕುಲವು ಉದ್ದಾ
ರವಾಗಬಲ್ಲದು ಎಂಬುದು ಕವಿಯ ಮತವಾಗಿದೆ.
1. ಸಂಕಲ್ಪಗೀತೆ ಪದ್ಯವನ್ನು ....... ಕವನ ಸಂಕಲನದಿಂದ
ಆರಿಸಿಕೊಳ್ಳಲಾಗಿದೆ.
ಉತ್ತರ: ಸಂಕಲ್ಪಗೀತೆ ಪದ್ಯವನ್ನು ಎದೆತುಂಬಿ ಹಾಡಿದೆನು ಕವನ
ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
2. ಕತ್ತಲೆಯೊಳಗೆ ಪ್ರೀತಿಯ .... ಹಳ್ಳೋಣ.
ಉತ್ತರ: ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಳ್ಳೋಣ.
3. ಜಿ.ಎಸ್. ಶಿವರುದ್ರಪ್ಪನವರು ........ರಲ್ಲಿ ಸಮಾವೇಶಗೊಂಡ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು.
ಉತ್ತರ: ಜಿ.ಎಸ್. ಶಿವರುದ್ರಪ್ಪನವರು 1992ರಲ್ಲಿ ಸಮಾವೇಶಗೊಂಡ
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.