ದುರ್ಯೋಧನ ಯಾರಿಗೆ ಹೇಳುವನು?
ಉತ್ತರ: ನಿಮಗೆ ನಮಸ್ಕರಿಸಿ ಹೋಗಲು ಬಂದನಷ್ಟೇ ಎಂದು
ದುರ್ಯೋಧನನು ಆಚಾರ್ಯ ಭೀಷ್ಕರಿಗೆ ಹೇಳುವನು.
ಉತ್ತರ: ದಿನಪಸುತ ಎಂದರೆ ಕರ್ಣ.
ಉತ್ತರ: ಆಪ್ತಮಿತ್ರ ಕರ್ಣನನ್ನು ಕೊಂದ ಅರ್ಜುನ ಹಾಗೂ
ದುಶ್ಯಾಸನನನ್ನು ಕೊಂದ ಭೀಮ ಇವರಿಬ್ಬರನ್ನು ಕೊಂದ ಬಳಿಕ ಸಂಧಿ
ಮಾಡಿ ಕೊಳ್ಳುವುದಾಗಿ ದುರ್ಯೋಧನ ಹೇಳುತ್ತಾನೆ.
-ಉತ್ತರ: ಛಲವನ್ನೇ ಮರೆಯುವುದಾಗಿ ನಿರ್ಧರಿಸಿದವನು
ದುರ್ಯೊಧನ.
ಉತ್ತರ: ಅಂತಕಾತ್ಮಜ ಎಂದರೆ ಧರ್ಮರಾಯ (ಯಮನ
ಅಂಶದಿಂದ ಜನಿಸಿದವ).
ಉತ್ತರ: ಕುರುಕ್ಷೇತ್ರ ರಣರಂಗದ ಒಂದು ಬದಿಯಲ್ಲಿ ಶರಶಯ್ಕೆ
ಯಲ್ಲಿ ಮಲಗಿದಂತಹ ಭೀಷ್ಮಾಚಾರ್ಯರನ್ನು ಕಾಣಲು ಬಂದ
ದುರ್ಯೋಧನನು ಅಜ್ಜಾ! ನಾನು ಪಾಂಡವರೊಡನೆ ರಾಜ್ಯಕ್ಕಾಗಿ
ಯುದ್ದ ಮಾಡುತ್ತೇನೆಂದು ಭಾವಿಸಿದಿರಾ? ನಾನು ಕಾದುವುದು
ಛಲಕೋಸ್ಕರ, ನನ್ನ ಪಾಲಿಗೆ ಈ ಭೂಮಿಯು ಹಾಳುಭೂಮಿ.
ಒಯಮಿತ್ರನಾದ ಕರ್ಣನನ್ನು ಕೊಂದವಳು ಈ ಭೂಮಿಯೇ ಎಂದು
ದುರ್ಯೋಧನನು ವಿವರಿಸುವನು.
ಉತ್ತರ: ಭೂಪತಿಯಾಗಿ ಮೆರೆಯಬೇಕೆಂಬ ಆಗ್ರಹದಿಂದ
ಹೋರಾಡುವುದಿಲ್ಲ. ಕೇವಲ ಛಲಕ್ಕಾಗಿ ಹೋರಾಡುತ್ತೇನೆ ಎಂಬುದು
ದುರ್ಯೋಧನನ ದೃಢ ನಿರ್ಧಾರ. ಏಕೆಂದರೆ ಪ್ರಿಯಮಿತ್ರನಾದ
ಕರ್ಣನ ರಥವನ್ನು ನುಂಗಿದ್ದೇ ಈ ಹಾಳುಭೂಮಿ. ಕಾರಣ ದ್ರೋಹಿಯಾದ
ಈ ಭೂರಮೆಯೊಡನೆ ನಾನಿನ್ನು ಸಹಬಾಳ್ವೆ ಮಾಡುವುದಿಲ್ಲವೆಂದು
ದುರ್ಯೋಧನನು ಹೇಳುತ್ತಾನೆ.
ಉತ್ತರ: ಪಾಂಡವರೈವರಲ್ಲಿ ಅರ್ಜುನ, ಭೀಮ ಎಂದರೆ
ದುರ್ಯೋಧನನಿಗೆ ಎಲ್ಲಿಲ್ಲದ ಕೋಪ. ಆದ್ದರಿಂದ - ನನ್ನ ಪ್ರೀತಿಯ
ಬಂಟನಾದ ಕರ್ಣನನ್ನೂ ತಮ್ಮನಾದ ದುಶ್ಯಾಸನನ್ನೂ ಕೊಂದ ಅರ್ಜುನ
ಭೀಮರು ಇರುವವರೆಗೆ ನನ್ನ ದೇಹದಲ್ಲಿ ಪ್ರಾಣವಿರುವವರೆಗೆ ಅವನು
ಸಂಧಿಗೆ ಒಪ್ಪಲಾರ.
ಉತ್ತರ: ಉತ್ತರಾಯಣದ ನಿರೀಕ್ಷೆಯಲ್ಲಿ ಆಚಾರ್ಯ ಭೀಷರು
ಕುರುಕ್ಷೇತ್ರ ರಣರಂಗದ ಒಂದು ಬದಿಯಲ್ಲಿ ಶ್ರೀಕೃಷ್ಣನ ಧ್ಯಾನದಲ್ಲಿ
ಆಚಾರ್ಯ ಭೀಷರು ಶರಶಯ್ಕೆಯಲ್ಲಿ ಒರಗಿದ್ದಾರೆ. ಅವರನ್ನು ಕಾಣಲು
ಬಂದಂತಹ ದುರ್ಯೋಧನನನ್ನು ಕಂಡು ಭೀಷ್ಮರಿಗೆ ತುಂಬಾ
ಕೆಡುಕೆನಿಸುತ್ತದೆ. ಛತ್ರಚಾಮರಾದಿಗಳ ವೈಭವದಲ್ಲಿ ಬರಬೇಕಾಗಿದ್ದ
ಮಹಾರಾಜನು ಪರದೇಶಿಯಂತೆ ಬರುತ್ತಿರುವನಲ್ಲಾ ಎಂದು
ನೊಂದುಕೊಂಡ ಭೀಷರು ದುರ್ಯೋಧನನಿಗೆ ಭರತ ವಂಶದಲ್ಲಿ
ಈವರೆಗೂ ಗೋತ್ರಕಲಹವೆಂಬುದು ಆಗಿದ್ದಿಲ್ಲ. ಈಗ ನಿಮ್ಮಲ್ಲಿ ಆಯಿತು.
ವ್ಯರ್ಥ ಕಾದಿ ಪ್ರಾಣಕ್ಕೆರವಾಗುವುದಕ್ಕಿಂತ ಸಂಧಿ ಮಾಡಿಕೊಂಡು
ಇರುವುದು ಲೇಸಲ್ಲವೇ ಎಂದ ಆಚಾರ್ಯರಿಗೆ ದುರ್ಯೋಧನನು
ಗುರುಗಳೇ ನಾನು ನೆಲಕ್ಕಾಗಿ ಹೋರಾಡುತ್ತಿರುವೆನೆಂದು ಭಾವಿಸಿರುವಿರಾ?
ಛಲಕ್ಕಾಗಿ ಇರಿಯುವೆನು, ಈ ನೆಲವಿದು ನನಗೆ ಹಾಳು ನೆಲವು. ಪ್ರೀತಿಯ
ಮಿತ್ರ ಹಾಗೂ ಬಂಟನಾದ ಕರ್ಣನನ್ನು ಕೊಂದ ಈ ನೆಲದೊಡನೆ
ನಾನಂತು ಸಹಬಾಳ್ವೆ ಮಾಡಲಿ? ಕರ್ಣನನ್ನು ಕೊಂದ ಅರ್ಜುನ ಹಾಗೂ
ದುಶ್ಯಾಸನನನ್ನು ಕೊಂದ ಭೀಮ ಇವರಿಬ್ಬರೂ ಜೀವಂತವಿರುವವರೆಗೆ
ಇಮಾಧಾನವಿಲ್ಲ. ಅವರನ್ನು ಮೊದಲು ಕೊಂದು ನಂತರ ಸಂಧಾನದ
ಮಾತು ಎಂದನು.
ಉತ್ತರ: ಮಹಾಭಾರತದ ದುರ್ಯೋಧನನನ್ನು ಛಲದಂಕ
ಮಲ್ಲ ಎಂದು ಕರೆಯುತ್ತಾರೆ. ಆತನು ಉರಗ ಧ್ವಜ, ಉರಗ ಎಂದರೆ
ಹಾವು, ಹಾವಿನ ಗುಣ ರೋಷ ಹಾಗೂ ಛಲ. ಅವೇ ಗುಣಗಳು
ದುರ್ಯೋಧನನಿಗೆ ಜನತಃ ಬಂದಂತಹ ಗುಣಗಳು, ಮಹಾಕವಿ ರನ್ನನ
- ಗದಾಯುದ್ದದಲ್ಲಿ ಮೂಡಿ ಬಂದಂತಹ ದುರ್ಯೋಧನ ಪ್ರಾಯಶಃ
- ಕನ್ನಡದ ಇನ್ನಾವ ಕಾವ್ಯದಲ್ಲಿಯೂ ಮೂಡಿ ಬಂದಿಲ್ಲ ಎಂದರೆ
ಅತಿಶಯೋಕ್ತಿಯೇನಲ್ಲ. ಆಚಾರ್ಯ ಭೀಷರನ್ನು ಕಂಡು ಮುಂದಿನ
ಯುದ್ದಕ್ಕಾಗಿ ಸಲಹೆ ಕೇಳಲು ದುರ್ಯೋಧನನು ಬಂದಾಗ ಅವರು
ಮಾನವ ಸಹಜವಾದ ರೀತಿಯಲ್ಲಿ ಹಿತೋಪದೇಶವನ್ನು ಹೇಳುತ್ತ
ಆಚಾರ್ಯ ಭೀಷರು ಅಯ್ಯಾ ಕುರುಕುಲೇಂದ್ರ ನಿರಂತರವಾಗಿ
ಬಂದಿರುವ ನಿಮ್ಮ ವಂಶದಲ್ಲಿ ಇನ್ನುವರೆಗೆ ಗೋತ್ರಹತ್ಯೆಯೆಂಬುದು
ಆಗಿರಲಿಲ್ಲ. ಈಗ ನಿನ್ನಿಂದಾಯಿತು. ಈಗಲಾದರೂ ಕಾಲವು ಮಿಂಚಿಲ್ಲ.
ನಾನು ಪಾಂಡವರಿಗೆ ಬುದ್ದಿವಾದವನ್ನು ಹೇಳುತ್ತೇನೆ. ಅವರು ಎಂದಿಗೂ
ನನ್ನ ಮಾತನ್ನು ಮೀರುವುದಿಲ್ಲ. ಸಂಧಿ ಮಾಡಿಕೊಂಡು ಸುಖವಾಗಿ
ಬಾಳಿರಿ ಎನ್ನಲು ದುರ್ಯೋಧನನು ತನ್ನ ಛಲದ ಗುಣವನ್ನೇ ಮೆರೆದು,
ಅಜ್ಜಾ! ನಾನು ನೆಲಕ್ಕಿರಿವೆನಂದು ಬಗೆದಿರುವಿರಾ? ಛಲಕ್ಕೆ ಹೋರಾಡು
ತೇನೆ. ಈ ನೆಲವು ನನಗೆ ಪಾಳ್ಮೆಲ. ನನ್ನ ಆಪ್ತ ಬಂಟನಾದ ಕರ್ಣನನ್ನು
ಕೊಲ್ಲಿಸಿದ ಈ ಭೂಮಿಯೊಡನೆ ಮತ್ತೆ ನಾನು ಬಾಳಲೇ ಎಂದನು.
ಪಾಠ : ಛಲಮನೆ ಮದವೆಂ
ಕವಿ : ರನ್ನ
ಆಕರ : ಸಾಹಸಭೀಮ ವಿಜಯ (ಐದನೇ ಆಶ್ವಾಸ)
ಸಂದರ್ಭ ಸ್ವಾರಸ್ಯ: ಆಚಾರ್ಯ ಭೀಷರು ಕುರುಕ್ಷೇತ್ರ
ರಣಭೂಮಿಯಲ್ಲಿ ಶರಶಯ್ಕೆಯಲ್ಲಿ ಒರಗಿ ಉತ್ತರಾಯಣದ ಬರವನ್ನು
ಹಾರೈಸುತ್ತಿದ್ದಾರೆ. ಆಗ ಕುರುಕುಲಪತಿಯಾದ ದುರ್ಯೋಧನನು ಅವರ
ದರ್ಶನಕ್ಕೆಂದು ಬಂದಾಗ ಯುದ್ಧವನ್ನು ಅವರು ಬೇಡವೆಂದು ಹಿತ
ನುಡಿದಾಗ ಆತನು - ಅಜ್ಞಾ! ನಾನು ಪಾಂಡವರೊಡನೆ ರಾಜ್ಯಕ್ಕಾಗಿ
ಯುದ್ಧ ಮಾಡುವೆನೆಂದು ಭಾವಿಸಿದಿರಾ? ನಾನು ಕಾದಾಡುವದು
ಛಲಕ್ಕೋಸ್ಕರ. ನೆಲಕ್ಕೋಸ್ಕರವಲ್ಲ. ಈ ನೆಲವು ನನ್ನ ಪಾಲಿಗೆ ಹಾಳು
ನೆಲವು ಎಂದು ಛಲವನ್ನೇ ಮೆರೆವನು.
ಪಾಠ : ಛಲಮನೆ ಮದೆವೆಂ
ಕವಿ : ರನ್ನ
ಆಕರ : ಸಾಹಸಭೀಮ ವಿಜಯ (ಐದನೇ ಆಶ್ವಾಸ)
ಸಂದರ್ಭ ಸ್ವಾರಸ್ಯ: ದುರ್ಯೊಧನನು ಆಚಾರ್ಯ ಭೀಷರನ್ನು
ಕುರಿತು- ಅಜ್ಞಾ! ನಿಮಗೆ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ
ಆಶೀರ್ವಾದ ಪಡೆಯುವ ನಿರ್ಧಾರದಿಂದ ಬಂದಿದ್ದೇನಲ್ಲದೆ
ಶತ್ರುಗಳೊಡನೆ ಸಂಧಾನವನ್ನು ಏರ್ಪಡಿಸುವುದಕ್ಕಾಗಿ ಬಂದನೆಂದು
ಭಾವಿಸಿದಿರಾ? ಯುದ್ದದಲ್ಲಿ ನಾನು ಮಾಡಬೇಕಾದ ಕಾರ್ಯ
ವೇನೆಂಬುದನ್ನು ಮಾತ್ರ ನೀವು ಅಪ್ಪಣೆ ಕೊಡಿರಿ. ಸಂಧಿಯ ಮಾತನ್ನು
ಆಡಲೇಬೇಡಿರಿ. ವೈರಿಗಳಾದ ಅರ್ಜುನ-ಭೀಮರು ಜೀವಂತ
ವಾಗಿರುವವರೆಗೆ ನಾನು ಸಂಧಿಗೆ ಒಪ್ಪನು ಎಂದನು.
ಪಾಠ : ಛಲಮನೆ ಮಜವೆಂ
ಕವಿ : ರನ್ನ
ಆಕರ : ಸಾಹಸಭೀಮ ವಿಜಯ (ಐದನೇ ಆಶ್ವಾಸ)
ಸಂದರ್ಭ ಸ್ವಾರಸ್ಯ: ನನ್ನ ಬಂಧು ಬಳಗವನ್ನು ಕಳೆದುಕೊಂಡ
ಮೇಲೆ ನನಗೇಕೆ ಸಂಧಿ? ಯುದ್ಧವನ್ನೇ ಪಟ್ಟು ಹಿಡಿಯುತ್ತೇನೆ ಎಂದನು
ದುರ್ಯೊಧನ, ನನ್ನ ನೂರುಮಂದಿ ಮಕ್ಕಳೂ ಒಡಹುಟ್ಟಿದ ನೂರು
ಮಂದಿ ತಮ್ಮಂದಿರೂ ಶತ್ರುಗಳೊಂದಿಗೆ ಯುದ್ಧ ಮಾಡಿ ಸತ್ತುಹೋದರು.
ಅವರ ಸಾವಿನಿಂದಾಗಿ ನನ್ನಲ್ಲಿ ಕೋಪವು ಹುಟ್ಟಿ ವಿಜೃಂಭಿಸಿತು. ಸತ್ತವರು
ಮತ್ತೆ ಹುಟ್ಟುವುದಿಲ್ಲವೇ? ಜೀವಗಳ್ಳನಾಗಿ ಬದುಕುವುದಕ್ಕಿಂತ ಯುದ್ದ
ದಲ್ಲಿ ಸಾಯುವುದೇ ಮೇಲು. ಆದುದರಿಂದ ಪಾಂಡವರೊಡನೆ ಯುದ್ಧ
ವನ್ನು ಮಾಡಿ ಛಲವನ್ನೇ ಸಾಧಿಸುತ್ತೇನೆ ಎಂದು ದುರ್ಯೊಧನನು
ಹೇಳುತ್ತಾನೆ.
ಪಾಠ : ಛಲಮನೆ ಮದೆವೆಂ
ಕವಿ : ರನ್ನ
ಆಕರ : ಸಾಹಸಭೀಮ ವಿಜಯ (ಐದನೇ ಆಶ್ವಾಸ)
ಈ ಸಂದರ್ಭ ಸ್ವಾರಸ್ಯ; ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಕುರುಪತಿ
ದುರ್ಯೋಧನನಿಗೂ ಆಚಾರ್ಯ ಭೀಷರಿಗೂ ಸಂಭಾಷಣೆ ನಡೆದಿದೆ.
ಸಂಧಿ ಮಾಡಿಕೋ ಎಂದು ಹೇಳಿದ ಆಚಾರ್ಯರ ಮಾತನ್ನು ರಾಜನು
ಅಲ್ಲಗಳೆದು - ಅಜ್ಞಾ! ಪಾಂಡವರೊಡನೆ ಹೋರಾಡಿಯೇ ತೀರುತ್ತೇನೆ.
ಇಂದಿನ ಯುದ್ದದಲ್ಲಿ ಇಲ್ಲವೇ ಪಾಂಡವರು ಉಳಿಯಬೇಕು ಅಥವಾ
ನಾನು ಉಳಿಯಬೇಕು. ಇಬ್ಬರೂ ಉಳಿಯುವುದು ಸಾಧ್ಯವಿಲ್ಲ. ನಾನು
ಅಳಿದರೆ ಭೂಮಿಯು ಪಾಂಡವರ ಪಾಲಾಯ್ತು. ಅವರು ಅಳಿದರೆ
ಅಖಂಡವಾದ ಭೂಮಂಡಲವು ಕೌರವನಿಗಾಯ್ತು ಎಂದನು.