- ಶಕ್ತಿಯ ಆಕರದ ಪ್ರತಿ ಘಟಕ ಪರಿಮಾಣ ಅಥವಾ ದ್ರವ್ಯರಾಶಿಗೆ ಅತಿ ಹೆಚ್ಚು ಕೆಲಸ ಮಾಡುವಂತಿರಬೇಕು
- ಶಕ್ತಿಯ ಆಕರವು ಸುಲಭವಾಗಿ ದೊರೆಯುವಂತಿರಬೇಕು
- ಶಕ್ತಿಯ ಆಕರವನ್ನು ಸಂಗ್ರಹಿಸಲು ಸಾಗಿಸಲು ಸಾಧ್ಯವಾಗುವಂತಿರಬೇಕು
- ಶಕ್ತಿಯ ಆಕರ ಮಿತವ್ಯಯಕಾರಿ ಯಾಗಿರಬೇಕು
ಕೆಲ ಶಕ್ತಿ ಸಾಂಪ್ರದಾಯಿಕ ಆಕಾರಗಳನ್ನು ಹೆಸರಿಸಿ
ಪಳೆಯುಳಿಕೆ ಇಂಧನ
ಉಷ್ಣ ವಿದ್ಯುತ್ ಸ್ಥಾವರ
ಜಲವಿದ್ಯುತ್ ಸ್ಥಾವರಗಳು
ಪಳೆಯುಳಿಕೆ ಇಂಧನಗಳ ಉಪಯೋಗವನ್ನು ಬರೆಯಿರಿ
- ಪಳೆಯುಳಿಕೆ ಇಂಧನಗಳು ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳು
- ಕಲ್ಲಿದ್ದಲನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಳಸಲಾಗುತ್ತದೆ
- ಪೆಟ್ರೋಲಿಯಂ ನಮ್ಮ ದೈನಂದಿನ ಜೀವನದಲ್ಲಿ
ವಾಹನಗಳ ಮತ್ತು ಇನ್ನಿತರ ಉಪಕರಣಗಳ ಇಂಧನವಾಗಿ ಬಳಕೆಯಾಗುತ್ತಿದೆ
ಪಳೆಯುಳಿಕೆ ಇಂಧನಗಳನ್ನು ಹೆಸರಿಸಿ
ಪಳೆಯುಳಿಕೆ ಇಂಧನಗಳು ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳು
ಪೆಟ್ರೋಲಿಯಂ ಇಂಧನಗಳ ದಹನದಿಂದ ಉಂಟಾಗುವ ಅನಾನುಕೂಲತೆಗಳು ಏನು
- ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ದಹನದಿಂದ ವಾಯು ಮಾಲಿನ್ಯ ಉಂಟಾಗುತ್ತದೆ
- ಪಳೆಯುಳಿಕೆ ಇಂಧನಗಳನ್ನು ದಹಿಸಿದಾಗ ಬಿಡುಗಡೆಯಾಗುವ ಕಾರ್ಬನ್, ನೈಟ್ರೋಜನ್ ಮತ್ತು ಸಲ್ಫರ್ ಗಳ ಆಕ್ಸೈಡ್ ಗಳು ಅಮ್ಲೀಯ ಆಕ್ಸೈಡ್ ಗಳಾಗಿವೆ ಇವು ಆಮ್ಲ ಮಳೆ ಯನ್ನುಂಟು ಮಾಡುತ್ತವೆ ಮತ್ತು ನೀರು ಮಣ್ಣಿನ ಮೇಲೆ ಪರಿಣಾಮ ಬೀರುತ್ತವೆ
- ಕಾರ್ಬನ್ ಡೈಯಾಕ್ಸೈಡ್ ಹಸಿರು ಮನೆ ಪರಿಣಾಮವನ್ನುಂಟು ಮಾಡುತ್ತದೆ
- ಹಸಿರು ಮನೆ ಪರಿಣಾಮವು ಮುಂದೆ ಜಾಗತಿಕ ತಾಪಮಾನ ಏರಿಕೆಯನ್ನುಂಟು ಮಾಡುತ್ತದೆ
ಉಷ್ಣ ವಿದ್ಯುತ್ ಸ್ಥಾವರ ಎಂದರೇನು
ಇಂಧನಗಳನ್ನು ದಹಿಸಿ ಉಷ್ಣ ಶಕ್ತಿಯನ್ನು ಪಡೆದು ಆ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುವ ಕೇಂದ್ರಗಳನ್ನು ಉಷ್ಣ ವಿದ್ಯುತ್ ಸ್ಥಾವರ ಎಂದು ಕರೆಯುವರು
ಉಷ್ಣ ವಿದ್ಯುತ್ ಸ್ಥಾವರದ ಕಾರ್ಯನಿರ್ವಹಿಸುವ ವಿಧಾನವನ್ನು ವಿವರಿಸಿ
- ಉಷ್ಣ ವಿದ್ಯುತ್ ಕೇಂದ್ರದಲ್ಲಿ ಪ್ರತಿದಿನ ಹೇರಳವಾಗಿ ಪಳೆಯುಳಿಕೆ ಇಂಧನಗಳನ್ನು ದಹಿಸಿ ನೀರನ್ನು ಕಾಯಿಸಲಾಗುತ್ತದೆ
- ಕಾಯ್ದ ನೀರಿನಿಂದ ಬರುವ ಹಬೆಯಿಂದ ಟರ್ಬೈನ್ ನನ್ನು ಚಲಿಸಲಾಗುತ್ತದೆ
- ಚಲಿಸುವ ಟರ್ಬೈನ್ ಮುಖಾಂತರ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ
- ಉಷ್ಣ ವಿದ್ಯುತ್ ಸ್ಥಾವರದಲ್ಲಿ ಉಷ್ಣ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ
ಜಲ ವಿದ್ಯುತ್ ಸ್ಥಾವರಗಳು ಎಂದರೇನು
ನಿರ್ದಿಷ್ಟ ಎತ್ತರದಲ್ಲಿರುವ ನೀರಿನ ಪ್ರಚ್ಛನ್ನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಕೇಂದ್ರಗಳನ್ನು ಜಲವಿದ್ಯುತ್ ಸ್ಥಾವರ ಎನ್ನುತ್ತಾರೆ
ಜಲವಿದ್ಯುತ್ ಸ್ಥಾವರಗಳ ಕಾರ್ಯ ವಿಧಾನವನ್ನು ವಿವರಿಸಿ
- ಹರಿಯುವ ನದಿಯ ನೀರನ್ನು ತಡೆದು ಜಲ ವಿದ್ಯುತ್ ಶಕ್ತಿಯನ್ನು ಪಡೆಯಲು ನದಿಗೆ ಅಡ್ಡಲಾಗಿ ಹೆಚ್ಚು ಎತ್ತರದ ಅಣೆಕಟ್ಟುಗಳನ್ನು
ಕಟ್ಟಲಾಗುತ್ತದೆ
- ದೊಡ್ಡ ಜಲಾಶಯಗಳಲ್ಲಿ ನೀರಿನ ಸಂಗ್ರಹ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿ ಹರಿಯುವ ನೀರಿನ ಚಲನಶಕ್ತಿಯು ಜಲಾಶಯಗಳಲ್ಲಿ ತಕ್ಷಣ ಶಕ್ತಿಯಾಗಿ ಬದಲಾಗುತ್ತದೆ
- ಎತ್ತರದ ಹಂತದಲ್ಲಿರುವ ನೀರನ್ನು ಕೊಳವೆಗಳ ಮೂಲಕ ಜಲಾಶಯದ ತಳದಲ್ಲಿರುವ ಟರ್ಬೈನ್ ಗಳಿಗೆ ಹರಿಸಲಾಗುತ್ತದೆ
- ಟರ್ಬೈನ್ ಗಳ ಚಲನೆಯ ಮುಖಾಂತರ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ
ಬೃಹತ್ ಅಣೆಕಟ್ಟುಗಳ ನಿರ್ಮಾಣಕ್ಕೆ ಇರುವ ಸಮಸ್ಯೆಗಳು ಯಾವವು
- ಅಣೆಕಟ್ಟುಗಳನ್ನು ಕೆಲವೇ ನಿರ್ದಿಷ್ಟ ಸ್ಥಳಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಕಟ್ಟಬಹುದು
- ಅಣೆಕಟ್ಟುಗಳ ನಿರ್ಮಾಣದಿಂದ ವಿಶಾಲವಾದ ವ್ಯವಸಾಯ ಯೋಗ್ಯ ಭೂಮಿ ಮಾನವ ವಾಸ ಯೋಗ್ಯ ಪ್ರದೇಶಗಳು ಮುಳುಗಡೆಯಾಗುವುದರಿಂದ ನಾವು ಅವುಗಳನ್ನು ತ್ಯಾಗ ಮಾಡಬೇಕಾಗುತ್ತದೆ ಅಣೆಕಟ್ಟಿನ ನೀರಿನಲ್ಲಿ -
- ಮುಳುಗಡೆಯಾಗುವುದರಿಂದ ಪರಿಸರ ವ್ಯವಸ್ಥೆಯಲ್ಲಿ ನಾಶವಾಗುತ್ತದೆ
- ಈ ಜಲಾಶಯಗಳಲ್ಲಿ ಮುಳುಗಡೆಯಾದ ಸಸ್ಯರಾಶಿಯ ಆಕ್ಸಿಜನ್ ರಹಿತ ಸ್ಥಿತಿಯಲ್ಲಿ ಕೊಳೆತು ಅಪಾರ ಪ್ರಮಾಣದ ಹಸಿರು ಮನೆ ಅನಿಲ ಮಿಥೇನ್ ಅನ್ನು ಬಿಡುಗಡೆಗೊಳಿಸುತ್ತದೆ - ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಸಮಸ್ಯೆ ಉಂಟಾಗುತ್ತದೆ
ಜೈವಿಕ ಅನಿಲ ಹೇಗೆ ಬಿಡುಗಡೆಯಾಗುತ್ತದೆ
ಹಸುವಿನ ಸಗಣಿ ಹಲವಾರು ಸಸ್ಯ ಪದಾರ್ಥಗಳು ಮತ್ತು ಬೆಳೆಗಳ ಸುಗ್ಗಿ ಕೊಯ್ಲಿನ ನಂತರ ಉಳಿಯುವ ಪದಾರ್ಥಗಳು ಅಥವಾ ಕಳೆ ನಿರುಪಯುಕ್ತ ತರಕಾರಿ ಬಚ್ಚಲು ನೀರು ಮುಂತಾದವುಗಳು ಆಮ್ಲಜನಕ ರಹಿತ ವ್ಯವಸ್ಥೆಯಲ್ಲಿ ವಿಘಟನೆ ಹೊಂದಿ ಜೈವಿಕ ಅನಿಲವನ್ನು ಬಿಡುಗಡೆ ಮಾಡುತ್ತವೆ
ಜೈವಿಕ ಅನಿಲದ ಆರಂಭಿಕ ವಸ್ತು ಯಾವುದು
ಹಸುವಿನ ಸಗಣಿ
ಜೈವಿಕ ಅನಿಲದ ಸಾಮಾನ್ಯ ಹೆಸರು ಏನು
ಗೋಬರ್ ಅನಿಲ
ಜೈವಿಕ ಅನಿಲ ಸ್ಥಾವರದ ಕಾರ್ಯ ವಿಧಾನವನ್ನು ವಿವರಿಸಿ
- ಜೈವಿಕ ಅನಿಲ ಸ್ಥಾವರವೂ ಇಟ್ಟಿಗೆಯಿಂದ ಕಟ್ಟಿದ ಗುಮ್ಮಟಾಕಾರದ ರಚನೆಯನ್ನು ಹೊಂದಿದೆ
- ಸಗಣಿ ಮತ್ತು ನೀರಿನ ಮಿಶ್ರಣವನ್ನು ಮಿಶ್ರಣ ತೊಟ್ಟಿಯಲ್ಲಿ ತಯಾರಿಸಿ ಅಲ್ಲಿಂದ ಪಾಚಕ ವ್ಯವಸ್ಥೆಗೆ ಪೂರೈಸಲಾಗುತ್ತದೆ
- ಪಾಚಕ ಒಂದು ಆಕ್ಸಿಜನ್ ರಹಿತ ಮೊಹರಾದ ಕೋಣೆಯಾಗಿದೆ
-ಆಕ್ಸಿಜನ್ ರಹಿತ ಉಸಿರಾಟ ನಡೆಸುವ ಸೂಕ್ಷ್ಮಾಣುಜೀವಿಗಳು ಸಗಣಿ ಬಗ್ಗಡ ದಲ್ಲಿರುವ ಸಂಕೀರ್ಣ ಸಂಯುಕ್ತಗಳನ್ನು ವಿಘಟಿಸುತ್ತದೆ
- ಈ ವಿಘಟನಾ ಕ್ರಿಯೆ ಪೂರ್ಣಗೊಂಡು ಅನಿಲಗಳಾದ ಮೀಥೇನ್ ಕಾರ್ಬನ್ ಡೈ ಆಕ್ಸೈಡ್ , ಹೈಡ್ರೋಜನ್ ಮತ್ತು ಹೈಡ್ರೋಜನ್ ಸಲ್ಫೈಡ್ ಉತ್ಪತ್ತಿಯಾಗಲು ಕೆಲವು ದಿನಗಳು ಬೇಕಾಗುತ್ತವೆ
- ಪಾಚಕ ವ್ಯವಸ್ಥೆಯ ಮೇಲಿರುವ ಅನಿಲ ತೊಟ್ಟಿಯಲ್ಲಿ ಅನಿಲ ಶೇಖರಣೆಯಾಗಿ ಅಲ್ಲಿಂದ ಕೊಳವೆಗಳ ಮೂಲಕ ಬಳಕೆಗೆ ಪಡೆಯಲಾಗುತ್ತದೆ
- ಜೈವಿಕ ಅನಿಲದಲ್ಲಿ 75% ಮೀಥೇನ್ ಅನಿಲ ವಿರುವುದರಿಂದ ಇದು ಅತ್ಯುತ್ತಮ ಇಂಧನವಾಗಿದೆ
ಜೈವಿಕ ಆಳದಲ್ಲಿರುವ ಮೀಥೇನ್ ವಿಭಾಗ ಎಷ್ಟು
75%
ಪವನ ಶಕ್ತಿ ಕೇಂದ್ರದ ಕಾರ್ಯ ವಿಧಾನವೇನು
ಪವನ ಶಕ್ತಿ ಕೇಂದ್ರದಲ್ಲಿ
ಮಾರುತಗಳ ಚಲನೆಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ
ಮಾರುತಗಳ ರಾಷ್ಟ್ರ ಎಂದು ಯಾವ ದೇಶವನ್ನು ಕರೆಯುತ್ತಾರೆ
ಡೆನ್ಮಾರ್ಕ್
ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಯಾವ ದೇಶ ಮೊದಲ ಸ್ಥಾನದಲ್ಲಿದೆ
ಜರ್ಮನಿ
ಭಾರತದ ಅತಿದೊಡ್ಡ ಪವನ ಕ್ಷೇತ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ
ತಮಿಳುನಾಡಿನ ಕನ್ಯಾಕುಮಾರಿಯ ಸಮೀಪ
ಕನ್ಯಾಕುಮಾರಿಯಲ್ಲಿ ಎಷ್ಟು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ
380MW
ಪವನ ಕ್ಷೇತ್ರದಲ್ಲಿ ಗಾಳಿಯ ವೇಗವೂ ಎಷ್ಟಿರಬೇಕು
15Km/h
ಭಾರತವು ಒಂದು ವರ್ಷಕ್ಕೆ ಎಷ್ಟು ಸೌರಶಕ್ತಿಯನ್ನು ಪಡೆಯುತ್ತದೆ
5000 trillion KWh
ಸೌರ ಸ್ಥಿರಾಂಕ ಎಂದರೇನು
ಭೂಮಿಯ ವಾತಾವರಣದ ಹೊರ ಅಂಚಿನ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬಿದ್ದಾಗ ಪ್ರತಿ ಏಕಮಾನ ಕ್ಷೇತ್ರವು ಸ್ವೀಕರಿಸುವ ಶಕ್ತಿಯನ್ನು ಸೌರ ಸ್ಥಿರಾಂಕ ಎನ್ನುತ್ತಾರೆ
ಸೌರಸ್ಥಿರಾಂಕದ ಬೆಲೆ ಎಷ್ಟು
1.4 KW/m2
ಒಂದು ಮಾದರಿ ಸೌರ ಕೋಶವು ಬಿಸಿಲಿಗೆ ಒಡ್ಡಿದಾಗ ಉಂಟು ಮಾಡುವ ವೋಲ್ಟೇಜ್ ಎಷ್ಟು
0.5 - 1V ಮತ್ತು 0.7W ವಿದ್ಯುತ್ ಉತ್ಪತ್ತಿಯಾಗುತ್ತದೆ
ಸೌರಕೋಶ ಎಂದರೇನು
ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನವನ್ನು ಸೌರ ಕೋಶ ಎನ್ನುವರು
ಸೌರಕೋಶಗಳ ಉಪಯೋಗದಿಂದ ಆಗುವ ಅನುಕೂಲಗಳೇನು
- ಸೌರಕೋಶಗಳು ಚಲನಶೀಲ ಭಾಗಗಳನ್ನು ಹೊಂದಿಲ್ಲ
- ಕಡಿಮೆ ನಿರ್ವಹಣೆ ಮತ್ತು ಯಾವುದೇ ಕೇಂದ್ರೀಕರಿಸುವ ಸಾಧನ ಸಹಾಯವಿಲ್ಲದೆ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತವೆ
- ಇವು ಜನರು ತಲುಪಲಾಗದಂಥ ಅಥವಾ ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಅಳವಡಿಸಲು ಸಾಧ್ಯವಾಗದ ದುರ್ಗಮ ಪ್ರದೇಶ, ತಂತಿ ಅಳವಡಿಸಲು ಹೆಚ್ಚು ಖರ್ಚಾಗುವ ಪ್ರದೇಶ ವ್ಯಾವಹಾರಿಕವಾಗಿ ಲಾಭದಾಯಕವಲ್ಲದ ಪ್ರದೇಶಗಳಲ್ಲೂ ಸೌರ ಫಲಕಗಳನ್ನು ಅಳವಡಿಸಬಹುದು
ಸೌರಕೋಶಗಳ ಬಳಕೆಯಲ್ಲಿರುವ ಅನಾನುಕೂಲಗಳೇನು
- ಸೌರಕೋಶಗಳನ್ನು ತಯಾರಿಸಲು ಬಳಸುವ ಸಿಲಿಕಾನ್ ಪ್ರಕೃತಿಯಲ್ಲಿ ಸಮೃದ್ಧವಾಗಿದೆ
- ಆದರೆ ಸೌರ ಕೋಶದ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆ ಹೆಚ್ಚು ದುಬಾರಿಯಾಗಿದೆ
- ಸೌರ ಫಲಕದಲ್ಲಿ ಸೌರಕೋಶಗಳನ್ನು ಒಂದಕ್ಕೊಂದು ಸಂಪರ್ಕಿಸಲು ಬಳಸುವ ಬೆಳ್ಳಿಯೂ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತದೆ
ಸೌರಕೋಶಗಳ ಇನ್ನಿತರ ಅನ್ವಯಗಳನ್ನು ತಿಳಿಸಿ
- ಸೌರಕೋಶಗಳನ್ನು ಹಲವಾರು ವೈಜ್ಞಾನಿಕ ಹಾಗೂ ತಾಂತ್ರಿಕ ಅನ್ವಯದಲ್ಲಿ ಬಳಸುತ್ತೇವೆ
- ಕೃತಕ ಉಪಗ್ರಹಗಳು ಮತ್ತು ಮಂಗಳ ಗ್ರಹ ಕಕ್ಷಾಗಾಮಿ ಗಳಂತಹ ಬಾಹ್ಯಾಕಾಶ ಶೋಧಕಗಳು ಸೌರ ಕೋಶವನ್ನು ಶಕ್ತಿಯ ಆಕರವಾಗಿ ಬಳಸುತ್ತವೆ
- ದೂರ ಪ್ರದೇಶಗಳಲ್ಲಿ ಸ್ಥಾಪಿಸಿರುವ ರೇಡಿಯೋ ಅಥವಾ ತಂತಿರಹಿತ ಪ್ರಸರಣ ವ್ಯವಸ್ಥೆಗಳು ಅಥವಾ ದೂರದರ್ಶನ ಪ್ರಸಾರ ಕೇಂದ್ರಗಳಲ್ಲಿ ಸೌರಫಲಕಗಳನ್ನು ಬಳಸುತ್ತಾರೆ
- ಸಂಚಾರ ಮಾರ್ಗದರ್ಶನ ದೀಪಗಳಲ್ಲಿ ಕ್ಯಾಲ್ಕ್ಯುಲೇಟರ್ ಗಳಲ್ಲಿ ಮತ್ತು ಹಲವಾರು ಆಟಿಕೆಗಳಲ್ಲಿ ಸೌರಕೋಶಗಳನ್ನು ಅಳವಡಿಸಿರುತ್ತಾರೆ
ಸಮುದ್ರದಿಂದ ಶಕ್ತಿಯನ್ನು ಪಡೆಯಲು ಬಳಸುವ ವಿವಿಧ ವಿಧಾನಗಳನ್ನು ಹೆಸರಿಸಿ
ಉಬ್ಬರ ಶಕ್ತಿಯಿಂದ
ಅಲೆಗಳ ಶಕ್ತಿಯಿಂದ
ಸಾಗರ ಉಷ್ಣ ಶಕ್ತಿಯಿಂದ
ಉಬ್ಬರ ಶಕ್ತಿ ಎಂದರೇನು
ಸಮುದ್ರ ಮಟ್ಟಗಳ ವ್ಯತ್ಯಾಸವನ್ನು ಅಥವಾ ಸಮುದ್ರದ ನೀರಿನ ಮಟ್ಟದಲ್ಲಿರುವ ಏರಿಳಿತಗಳನ್ನು ಉಬ್ಬರ ಶಕ್ತಿ ಎನ್ನುವರು
ಉಬ್ಬರ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಹೇಗೆ ಪಡೆಯಲಾಗುತ್ತದೆ
- ಸಮುದ್ರದ ಕಿರಿದಾದ ತೆರೆದ ಭಾಗಕ್ಕೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟುವ ಮೂಲಕ ಈ ಶಕ್ತಿಯನ್ನು ಪಡೆಯಬಹುದು
- ಅಣೆಕಟ್ಟೆಯ ದ್ವಾರದ ಬಳಿ ಸ್ಥಾಪಿಸಿರುವ ಟರ್ಬೈನ್ ಉಬ್ಬರ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ
ಸಾಗರ ಉಷ್ಣ ಶಕ್ತಿಯ ಕಾರ್ಯ ವಿಧಾನವನ್ನು ವಿವರಿಸಿ
- ಸಮುದ್ರದ ಮೇಲ್ಮೈನಲ್ಲಿರುವ ನೀರು ಸೂರ್ಯನ ಶಾಖದಿಂದ ಬಿಸಿಯಾದರೂ ಸಮುದ್ರದಾಳದ ನೀರು ತಣ್ಣಗಿರುತ್ತದೆ
- ಈ ರೀತಿಯ ಆಗಿರುವ ತಾಪಮಾನದ ವ್ಯತ್ಯಾಸದ ಆಧಾರದ ಮೇಲೆ ಸಾಗರ ಉಷ್ಣ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ
- ಸಾಗರ ಉಷ್ಣ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಪಡೆಯಲು ಸಾಗರ ಉಷ್ಣ ಶಕ್ತಿ ಪರಿವರ್ತನಾ ಸ್ಥಾವರವನ್ನು ಬಳಸಲಾಗುತ್ತದೆ
- ಈ ಸ್ಥಾವರಗಳು ಸಮುದ್ರದ ಮೇಲ್ಮೈಯಿಂದ ಸುಮಾರು 2Km ವರೆಗೂ ತಾಪಮಾನದ ವ್ಯತ್ಯಾಸ 20K ಮತ್ತು ಹೆಚ್ಚಿದ್ದಾಗ ಕಾರ್ಯನಿರ್ವಹಿಸುತ್ತವೆ
- ಬೆಚ್ಚಗಿನ ಮೇಲ್ಮೈ ನೀರನ್ನು ಅಮೋನಿಯಾ ದಂತಹ ಆವಿ ಶೀಲ ದ್ರವವನ್ನು ಕುದಿಸಲು ಬಳಸಲಾಗುತ್ತದೆ
- ನಂತರ ದ್ರವದ ಆವಿಯನ್ನು ವಿದ್ಯುತ್ ಜನಕದ ಟರ್ಬೈನ್ ತಿರುಗಿಸಲು ಬಳಸಲಾಗುತ್ತದೆ
- ಸಮುದ್ರ ತಳದಲ್ಲಿ ತಣ್ಣೀರನ್ನು ಮೇಲಕ್ಕೆ ಪಂಪ್ ಮಾಡಿ ಆವಿಯನ್ನು ಮತ್ತೆ ದ್ರವಿಸಲಾಗುತ್ತದೆ
ಉಷ್ಣ ತಾಣಗಳು ಎಂದರೇನು
ಭೂಗರ್ಭ ಪ್ರತಿಕ್ರಿಯೆಗಳಿಂದಾಗಿ ಭೂಮಿಯ ಆಳದ ಬಿಸಿಯಾದ ಪ್ರದೇಶದಲ್ಲಿ ಉಂಟಾದ ದ್ರವಿತ ಶಿಲಾಪಾಕ ಮೇಲ್ಮುಖವಾಗಿ ತಳ್ಳಲ್ಪಟ್ಟು ನಿರ್ದಿಷ್ಟ ಪ್ರದೇಶಗಳಲ್ಲಿ ಸೆರೆಯಾಗಿದೆ ಈ ಭಾಗಗಳನ್ನು ಉಷ್ಣ ತಾಣಗಳು ಎನ್ನುವವರು
ಬಿಸಿನೀರಿನ ಬುಗ್ಗೆಗಳು ಎಂದರೇನು
ಭೂಗತವಾದ ನೀರು ಉಷ್ಣ ತಾಣಗಳ ಸಂಪರ್ಕಕ್ಕೆ ಬಂದಾಗ ಆವಿ ಯುಂಟಾಗುತ್ತದೆ ಈ ಭಾಗದ ನೀರು ಬಿಸಿನೀರು ಮೇಲ್ಮೈ ಮೇಲಿನ ಹೊರ ಕುಳಿಗಳ ಮೂಲಕ ಹೊಮ್ಮುತ್ತದೆ ಇಂತಹ ಹೊರ ಕುಳಿಗಳನ್ನು ಬಿಸಿ ನೀರಿನ ಬುಗ್ಗೆಗಳು ಎನ್ನುವರು
ಭೂಗರ್ಭ ಉಷ್ಣ ಶಕ್ತಿ ಸ್ಥಾವರಗಳ ಕಾರ್ಯ ವಿಧಾನವನ್ನು ತಿಳಿಸಿ
- ಉಷ್ಣ ತಾಣಗಳಿಂದ ಉಂಟಾದ ಬಿಸಿನೀರಿನ ಬುಗ್ಗೆಗಳು ನೀರಿನ ಹವೆಯನ್ನು ಉಂಟುಮಾಡುತ್ತವೆ
- ಕಲ್ಲು ಸಂಧಿಯಲ್ಲಿರುವ ಆವಿಯನ್ನು ಕೊಳವೆಗಳ ಮೂಲಕ ಟರ್ಬೈನ್ ಗೆ ಹಾಯಿಸಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ
ಭೂಗರ್ಭ ಉಷ್ಣ ಶಕ್ತಿ ಸ್ಥಾವರಗಳು ಎಲ್ಲಿ ಕಂಡುಬರುತ್ತವೆ
ನ್ಯೂಜಿಲೆಂಡ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ
ನ್ಯೂಕ್ಲಿಯ ಶಕ್ತಿ ಎಂದರೇನು
ಭಾರಿ ಪರಮಾಣು ಬೀಜವನ್ನು ಕಡಿಮೆ ಶಕ್ತಿಯ ನ್ಯೂಟ್ರಾನ್ ನಿಂದ ತಾಗಿಸಿದಾಗ ಹಗುರ ಬೀಜಗಳಾಗಿ ವಿಭಜನೆ ಹೊಂದುತ್ತವೆ ನಂತರ ಮೂಲ ಬೀಜದ ದ್ರವ್ಯರಾಶಿಯು ಉತ್ಪನ್ನಗಳ ವೈಯುಕ್ತಿಕ ದ್ರವ್ಯರಾಶಿಯ ಮೊತ್ತಕ್ಕಿಂತ ತುಸುವೇ ಹೆಚ್ಚಾಗಿದ್ದರೆ ಅಗಾಧವಾದ ಶಕ್ತಿ ಬಿಡುಗಡೆಯಾಗುತ್ತದೆ
ಇದನ್ನು ನ್ಯೂಕ್ಲಿಯ ಶಕ್ತಿ ಎನ್ನುವರು
ವಿವಿಧ ನ್ಯೂಕ್ಲಿಯರ್ ಧಾತುಗಳನ್ನು ಹೆಸರಿಸಿ
ಯುರೇನಿಯಂ, ಪ್ಲುಟೋನಿಯಂ, ಥೋರಿಯಂ
ನ್ಯೂಕ್ಲಿಯರ್ ಶಕ್ತಿ ವಿಧಾನದಿಂದ ಬಿಡುಗಡೆಯಾಗುವ ಶಕ್ತಿಯ ಪ್ರಮಾಣ ಎಷ್ಟು
ಕಲ್ಲಿದ್ದಲಿನಲ್ಲಿರುವ ಕಾರ್ಬನ್ ಒಂದು ಅಣುವಿನ ದಹನ ಕ್ರಿಯೆಯಿಂದ ಬಿಡುಗಡೆಯಾಗುವ ಶಕ್ತಿಯ 10 ಮಿಲಿಯನ್ ಪಟ್ಟು ಹೆಚ್ಚಾಗಿರುತ್ತದೆ
ಪರಮಾಣು ವಿದ್ಯುತ್ ಸ್ಥಾವರಗಳ ಕಾರ್ಯ ವಿಧಾನವನ್ನು ತಿಳಿಸಿ
- ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ನ್ಯೂಕ್ಲಿಯರ್ ವಿಧಾನದಿಂದ ಬಿಡುಗಡೆಯಾಗುವ ಶಕ್ತಿಯನ್ನು ಹಬೆಯನ್ನು ಉತ್ಪಾದಿಸಲು ಬಳಸುತ್ತಾರೆ
- ನಂತರ ಹಬೆಯನ್ನು ಟರ್ಬೈನ್ ಮೂಲಕ ಹಾಯಿಸಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ
ಆಲ್ಬರ್ಟ್ ಐನ್ ಸ್ಟೀನ್ ಅವರ ಶಕ್ತಿ ಸಮೀಕರಣವನ್ನು ಬರೆಯಿರಿ
E= mc2
ಬೈಜಿಕ ವಿಜ್ಞಾನದಲ್ಲಿ ಶಕ್ತಿಯನ್ನು ಹೇಗೆ ವ್ಯಕ್ತಪಡಿಸಲಾಗುತ್ತದೆ
ಇಲೆಕ್ಟ್ರಾನ್ ವೋಲ್ಟ್ ಗಳಲ್ಲಿ ( eV)
1 ಇಲೆಕ್ಟ್ರಾನ್ ವೋಲ್ಟ್ ( eV) ಬೆಲೆ ಎಷ್ಟು
1eV = 1.602X10-19 J
ಭಾರತದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳನ್ನು ಹೆಸರಿಸಿ
ತಾರಾಪೂರ ಮಹಾರಾಷ್ಟ್ರ
ರಾಣಾ ಪ್ರತಾಪ ಸಾಗರ ರಾಜಸ್ಥಾನ್
ಕಲ್ಪಾಕಂ ತಮಿಳುನಾಡು
ನರೋರಾ ಯುಪಿ
ಕಾಕ್ರಾ ಪಾರ್ ಗುಜರಾತ್
ಕೈಗಾ ಕರ್ನಾಟಕ
ಪರಮಾಣು ವಿದ್ಯುತ್ ಸ್ಥಾವರಗಳ ಸ್ಥಾಪನೆಯಲ್ಲಿ ಇರುವ ತೊಂದರೆಗಳು ಏನು
- ನ್ಯೂಕ್ಲಿಯರ್ ಕ್ರಿಯಾ ಕಾರ್ಯ ಸ್ಥಾಪನೆಯ
ವೆಚ್ಚವೂ ದುಬಾರಿಯಾಗಿದೆ
ಇದು ಅತಿ ಹೆಚ್ಚು ಪರಿಸರ ಮಾಲಿನ್ಯದ ಅವಘಡವನ್ನು ಹೊಂದಿದೆ
ಯುರೇನಿಯಂ ಸೀಮಿತ ಲಭ್ಯತೆಗಳು ಬೃಹತ್ ಮಟ್ಟದಲ್ಲಿ ಹೊಂದಿದೆ
ಬೈಜಿಕ ಸಮ್ಮಿಲನ
ಬೀಜ ಪರಮಾಣುಗಳನ್ನು ಸೇರಿಸಿ ಭಾರವಾದ ಪರಮಾಣು ಬೀಜವನ್ನು ಪಡೆಯುವ ವಿಧಾನವನ್ನು ಬೈಜಿಕ ಸಮ್ಮಿಲನ ಎನ್ನುತ್ತಾರೆ