ಮಲಿನಗೊಂಡ ಗಂಗಾ ನದಿಯ ನೀರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಯಾವುದು
ಕೋಲಿಫಾರ್ಮ್
ಗಂಗಾ ನದಿಯು ಎಷ್ಟು ದೂರ ಹರಿಯುತ್ತದೆ
ಗಂಗಾ ನದಿಯು ಹಿಮಾಲಯದಲ್ಲಿನ ಗಂಗೋತ್ರಿಯಿಂದ ಬಂಗಾಳಕೊಲ್ಲಿಯ ಗಂಗಾಸಾಗರದ ವರೆಗೆ ಸುಮಾರು 2500 ಕಿಲೋಮೀಟರ್ ದೂರ ಹರಿಯುತ್ತದೆ
ಗಂಗಾ ನದಿಯ ನೀರು ಚರಂಡಿಯಾಗಿ ಪರಿವರ್ತಿತವಾಗಲು ಕಾರಣವೇನು
- ಗಂಗಾ ನದಿಯು ಉತ್ತರ ಪ್ರದೇಶ ಬಿಹಾರ ಮತ್ತು ಪಶ್ಚಿಮ ಬಂಗಾಳದ ಸುಮಾರು ನೂರಕ್ಕೂ ಹೆಚ್ಚು ಪಟ್ಟಣ ಮತ್ತು ನಗರ ಪ್ರದೇಶಗಳ ಕಸ ಮತ್ತು ತ್ಯಾಜ್ಯಗಳನ್ನು ಗಂಗೆಯೇ ಸೇರಿಸುವುದರಿಂದ
- ಜೊತೆಗೆ ಸ್ನಾನ ಮಾಡುವುದು
- ಬಟ್ಟೆ ತೊಳೆಯುವುದು ಮತ್ತು
- ಶವ ಸಂಸ್ಕಾರದ ಬೂದಿ ಅಥವಾ ಅರೆಬೆಂದ ಶವಗಳನ್ನು ಮುಳುಗಿಸುವ ಚಟುವಟಿಕೆಗಳಿಂದ
- ಅದು ಚರಂಡಿಯಾಗಿ ಪರಿವರ್ತಿತವಾಗಿದೆ
ನಮಾಮಿ ಗಂಗೆ ಕಾರ್ಯಕ್ರಮವು ಯಾವಾಗ ಜಾರಿಯಾಯಿತು
ಜೂನ್ 2014
ಪರಿಸರವನ್ನು ಮತ್ತು ಪರಿಸರದ ಸಂಪನ್ಮೂಲಗಳನ್ನು ಸಂರಕ್ಷಿಸಲು ಬಳಸುವ ಐದು R ಗಳು ಯಾವವು
ನಿರಾಕರಣೆ Refuse
ಮಿತಿ ಬಳಕೆ Reduce
ಮರುಬಳಕೆ Reuse
ಮರು ಉದ್ದೇಶ Repurpose
ಮರು ಚಕ್ರೀ ಕರಣ Recycle
ಪರಿಸರ ಸಂರಕ್ಷಣೆಯ ಐದು ಆರು ಗಳನ್ನು ವಿವರಿಸಿ
ನಿರಾಕರಣೆ :
ನಮಗೆ ಅಗತ್ಯವಿಲ್ಲದ ಅಥವಾ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ವಸ್ತುಗಳನ್ನು ಕೊಂಡುಕೊಳ್ಳುವುದನ್ನು ನಿರಾಕರಿಸುವುದು
ಮಿತ ಬಳಕೆ
ಮಿತ ಬಳಕೆಯ ಅರ್ಥ ನೈಸರ್ಗಿಕ ಸಂಪನ್ಮೂಲಗಳ ಅನವಶ್ಯಕ ಕೆಲಸವನ್ನು ನಿಲ್ಲಿಸುವುದು
ಮರು ಬಳಕೆ:
ಮರು ಬಳಕೆಯೂ ಮರು ಚಕ್ರೀ ಕರಣವಿಧಾನಕ್ಕಿಂತ ಉತ್ತಮ ಏಕೆಂದರೆ ಮರಳು ಚಿತ್ರೀಕರಣ ವಿಧಾನದಲ್ಲಿ ಸ್ವಲ್ಪ ಮಟ್ಟಿಗೆ ಶಕ್ತಿಯು ಬಳಕೆಯಾಗುತ್ತದೆ ಮರುಬಳಕೆಯ ತಂತ್ರದಲ್ಲಿ ನಾವು ಬಳಸುವಂತಹ ವಸ್ತುಗಳನ್ನು ಮತ್ತೆ ಮತ್ತೆ ಬಳಸುವ ಬಳಸುವುದು ಅಥವಾ ಬಳಸಿ ಬಿಸಾಕಿದ ವಸ್ತುಗಳನ್ನು ಮತ್ತೆ ಬಳಸಿಕೊಳ್ಳುವುದು ಉದಾಹರಣೆಗೆ
ಮನೆಯಲ್ಲಿ ಬಳಸಿ ಬಿಸಾಕುವಂತಹ ಪ್ಲಾಸ್ಟಿಕ್ ಬಾಟಲ್ಗಳನ್ನು ಸಂಗ್ರಹಿಸಿ ಅದರಲ್ಲಿ ಮಣ್ಣು ತುಂಬಿಸಿ ಸಸ್ಯಗಳನ್ನು ಬೆಳೆಸುವುದು
-ಮರು ಉದ್ದೇಶ
ಇದರ ಅರ್ಥವೇನೆಂದರೆ ಒಂದು ವಸ್ತುವನ್ನು ಅದರ ಮೂಲ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ ಇದ್ದಾಗ ಬೇರೆ ಉದ್ದೇಶಕ್ಕಾಗಿ ಬಳಸುವುದು
-ಮರು ಚಕ್ರೀ ಕರಣ
ಇದರ ಅರ್ಥವೇನೆಂದರೆ ಉಪಯೋಗವಾದ ವಸ್ತುಗಳನ್ನು ಅಥವಾ ಉಪಯೋಗಿಸಿ ಬಿಸಾಕಿದ ವಸ್ತುಗಳನ್ನು ಅವುಗಳ ಅಗತ್ಯ ವಸ್ತುಗಳನ್ನಾಗಿ ಮಾರ್ಪಡಿಸುವುದು
ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಅಗತ್ಯವೇನಿದೆ
- ಕೆಲವು ನೈಸರ್ಗಿಕ ಸಂಪನ್ಮೂಲಗಳು ನಿರಂತರವಾಗಿ ದೊರಕುವುದಿಲ್ಲ
- ಮಾನವನ ಜನಸಂಖ್ಯೆಯ ಹೆಚ್ಚುತ್ತಿರುವ ವೇಗದಲ್ಲಿ ಈ ಸಂಪನ್ಮೂಲಗಳ ಬೇಡಿಕೆಯೂ ಹೆಚ್ಚುತ್ತಿದೆ
- ಹಾಗಾಗಿ ಭವಿಷ್ಯತ್ತಿನ ಬಳಕೆಯ ದೃಷ್ಟಿಕೋನದ ಆಧಾರದ ಮೇಲೆ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಅಗತ್ಯವಿದೆ
ವೇದಗಳ ಕಾಲದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹೇಗೆ ಮಾಡಲಾಗುತ್ತಿತ್ತು
- ವೇದಗಳ ಕಾಲದಲ್ಲಿ ಅಥವಾ ವೇದಗಳ ನಂತರದ ಕಾಲದಲ್ಲಿ ಕೃಷಿಯು ಪ್ರಬಲ ಆರ್ಥಿಕ ಚಟುವಟಿಕೆ ಚಟುವಟಿಕೆಯಾಗಿ ಹೊರಹೊಮ್ಮಿತ್ತು
- ಈ ಸಮಯದಲ್ಲಿ ಪವಿತ್ರ ಒಣ, ಪವಿತ್ರ ತೋಪುಗಳು, ಪವಿತ್ರ ವಲಯಗಳು ಮತ್ತು ಬುಡಕಟ್ಟು ಜನರ ಅರಣ್ಯ ಸಂರಕ್ಷಣೆ ಚಟುವಟಿಕೆಗಳಂತಹ ವೈವಿಧ್ಯಮಯವಾದ ಸಾಂಸ್ಕೃತಿಕ ಭೂಪ್ರದೇಶಗಳ ಪರಿಕಲ್ಪನೆಗಳು ಉಂಟಾಗಿದ್ದವು
- ಈ ರೀತಿ ವೇದಗಳ ಕಾಲದಲ್ಲಿಯೂ ಕೂಡ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಆಗುತ್ತಿತ್ತು
ಬೀಡಿ ಕಟ್ಟಲು ಬಳಸುವ ಎಲೆ ಯಾವುದು
ತೆಂಡು ಎಲೆ
ಕಾಡುಗಳಿಂದ ಲಾಭ ಪಡೆಯುತ್ತಿರುವ ಪಾಲುದಾರರು ಯಾರು
- ಕಾಡಿನಲ್ಲಿ ಅಥವಾ ಅದರ ಸುತ್ತಮುತ್ತ ವಾಸಿಸುವ ಜನರು
- ಸರ್ಕಾರ ಅಥವಾ ಅರಣ್ಯ ಇಲಾಖೆ
- ಕಾರ್ಖಾನೆಗಳು
- ನಿಸರ್ಗವನ್ನು ಪ್ರೀತಿಸುವ ಜನರು
ಕಾಡಿನ ಸುತ್ತಮುತ್ತ ವಾಸಿಸುವ ಜನರು ಕಾಡಿನಿಂದ ಪಡೆಯುತ್ತಿರುವ ಲಾಭಗಳೇನು
- ಸ್ಥಳೀಯ ಜನರು ಅಧಿಕ ಪ್ರಮಾಣದಲ್ಲಿ ಉರುವಲು ಸಣ್ಣ ಮರಮುಟ್ಟುಗಳು ಮತ್ತು ಹುಲ್ಲಿನ ಅಗತ್ಯವನ್ನು ಪೂರೈಸಿಕೊಳ್ಳುತ್ತಾರೆ
- ಗುಡಿಸಲಿನ ಮೇಲ್ಛಾವಣಿಗೆ ಮತ್ತು ಆಹಾರ ಸಂಗ್ರಹಣೆಗಾಗಿ ಬುಟ್ಟಿಗಳನ್ನು ತಯಾರಿಸಲು ಬಿದಿರುಗಳನ್ನು ಬಳಸಿಕೊಳ್ಳುತ್ತಾರೆ
- ಕೃಷಿಗೆ ಮೀನುಗಾರಿಕೆಗೆ ಮತ್ತು ಬೇಟೆಯಾಡಲು ಬಳಸುವ ಉಪಕರಣಗಳನ್ನು ಹೆಚ್ಚಾಗಿ ಮರಗಳನ್ನು ಬಳಸಿ ತಯಾರಿಸಲಾಗುತ್ತದೆ
- ಇಲ್ಲಿಯ ಜನರು ಅರಣ್ಯಗಳಿಂದ ಹಣ್ಣುಗಳು ಬೀಜಗಳು ಮತ್ತು ಔಷಧಗಳನ್ನು ಕೂಡ ಸಂಗ್ರಹಿಸುತ್ತಾರೆ
- ಅವರ ಜಾನುವಾರುಗಳು ಸಹ ಅರಣ್ಯ ಪ್ರದೇಶಗಳಲ್ಲಿ ಮೇಯುತ್ತವೆ
ಅರಣ್ಯ ಇಲಾಖೆಗೆ ಅರಣ್ಯದಿಂದ ದೊರಕುವ ಲಾಭಗಳೇನು
- ಸ್ವತಂತ್ರ ಭಾರತದಲ್ಲಿ ಅರಣ್ಯ ಇಲಾಖೆಯು ಬ್ರಿಟಿಷರಿಂದ ಅರಣ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡಿದೆ
- ಹಾಗಾಗಿ ಇಲ್ಲಿ ವಿಶಾಲವಾದ ಅರಣ್ಯ ಪ್ರದೇಶಗಳನ್ನು ಪೈನ್ ತೇಗ ಅಥವಾ ನೀಲಗಿರಿಯಂತಹ ಏಕ ಫಸಲಿನ ಬೆಳೆಗಳನ್ನು ಬೆಳೆಯಲಾಗುತ್ತದೆ
- ಈ ಮರಗಳನ್ನು ಬೆಳೆಸುವ ಸಲುವಾಗಿ ಮೊದಲಿಗೆ ಬೃಹತ್ ಪ್ರದೇಶಗಳಲ್ಲಿನ ಎಲ್ಲ ಸಸ್ಯವರ್ಗವನ್ನು ತೆರವುಗೊಳಿಸಲಾಗುತ್ತದೆ
- ಇಂತಹ ನೆಡುತೋಪು ಗಳಿಂದ ಬರುವ ನಿರ್ದಿಷ್ಟ ಆದಾಯವೂ ಅರಣ್ಯ ಇಲಾಖೆಗೆ ಪ್ರಮುಖ ಆದಾಯದ ಮೂಲವಾಗಿದೆ
ರಾಜಸ್ಥಾನದ ಪರಿಸರ ಪ್ರೇಮಿ ಜನಸಮುದಾಯ ಯಾವುದು
ಬಿಷ್ಣೋಯಿ ಜನಸಮುದಾಯ
ವನ್ಯಜೀವಿಗಳ ಸಂರಕ್ಷಣೆಗಾಗಿ ಯುವಂತಹ ರಾಷ್ಟ್ರೀಯ ಪ್ರಶಸ್ತಿ ಯಾವುದು
ಅಮೃತಾ ದೇವಿ ಬಿಷ್ಣೋಯಿ ರಾಷ್ಟ್ರೀಯ ಪ್ರಶಸ್ತಿ
ಬಿಷ್ಣೋಯಿ ಜನಸಮುದಾಯ೧೭೩೧ ರಲ್ಲಿ ಯಾವ ಮರಗಳ ಉಳಿವಿಗಾಗಿ ಹೋರಾಡಿತು
ಖೇಜ್ರಿ ಮರಗಳು
ಚಿಪ್ಕೊ ಚಳವಳಿಯ ಎಲ್ಲಿ ಯಾವಾಗ ನಡೆಯಿತು
1970 ರಲ್ಲಿ ಹಿಮಾಲಯದ ಎತ್ತರ ಪ್ರದೇಶದ ಗರ್ವಾಲ್ ನ ರೇಣಿ ಗ್ರಾಮದಲ್ಲಿ
ಅರಣ್ಯಗಳ ನಿರ್ವಹಣೆಯಲ್ಲಿ ಜನರ ಭಾಗವಹಿಸುವಿಕೆಗೆ ಉದಾಹರಣೆ ಕೊಡಿ
- 1972 ರಲ್ಲಿ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ರಾಜ್ಯದ ನೈರುತ್ಯ ಜಿಲ್ಲೆಗಳಲ್ಲಿ ನಶಿಸಿ ಹೋದ ಸಾಲ್ ಮರಗಳನ್ನು ಪುನರುಜ್ಜೀವನಗೊಳಿಸಿ ವಲ್ಲಿ ಅದರ ವೈಫಲ್ಯತೆಗಳನ್ನು ಗುರುತಿಸಿತ್ತು
- ಇದರಿಂದಾಗಿ ಜನರನ್ನು ಆಡಳಿತದಿಂದ ಸಂಪೂರ್ಣವಾಗಿ ಹೊರ ಹಾಕುವಿಕೆ ಎಡೆಮಾಡಿಕೊಟ್ಟಿತ್ತು
- ಇದರ ಪರಿಣಾಮವಾಗಿ ಅರಣ್ಯಾಧಿಕಾರಿಗಳು ಮತ್ತು ಹಳ್ಳಿಯ ಜನರ ನಡುವೆ ಆಗಾಗ ಕಲಹಗಳು ಸಾಮಾನ್ಯವಾದವು
- ಈ ಕಲಹಗಳಲ್ಲಿ ನಕ್ಸಲೀಯ ಉಗ್ರರ ನೇತೃತ್ವ ಕಂಡು ಬರಲು ಶುರುವಾಯಿತು
- ಈ ಕಾರಣಕ್ಕಾಗಿ ಅರಣ್ಯ ಇಲಾಖೆಯು ತನ್ನ ತಂತ್ರವನ್ನು ಬದಲಿಸಿತು
- ಆಗ ದೂರದೃಷ್ಟಿಯುಳ್ಳ ಅರಣ್ಯಾಧಿಕಾರಿ ಏ ಕೆ ಬ್ಯಾನರ್ಜಿಯವರ ವಿನಂತಿ ಮೇರೆಗೆ ಗ್ರಾಮಸ್ಥರು 1272 ಹೆಕ್ಟೇರ್ ನಷ್ಟಿರುವ ಕೆಳಮಟ್ಟದ ಸಾಲ್ ಅರಣ್ಯಗಳ ರಕ್ಷಣೆಯಲ್ಲಿ ಪಾಲ್ಗೊಂಡರು
- ಈ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರಿಗೆ ಉದ್ಯೋಗ ನೀಡಲಾಯಿತು
- ಈ ಕಾರಣದಿಂದಾಗಿ ಸಾಲ್ ಅರಣ್ಯಗಳು 1983ರಲ್ಲಿ ಗಮನಾರ್ಹವಾಗಿ ಚೇತರಿಸಿಕೊಂಡಿತು
- ಈಗ ಆ ಅರಣ್ಯದ ಭಾಗದ ಮೌಲ್ಯವು 12.5 ಕೋಟಿ
ಅಣೆಕಟ್ಟುಗಳನ್ನು ಕಟ್ಟುವ ಉದ್ದೇಶವೇನು
- ದೊಡ್ಡ ಮಟ್ಟದ ನೀರಿನ ಸಂಗ್ರಹಣೆಗಾಗಿ ವಿದ್ಯುತ್ ಉತ್ಪಾದನೆಗಾಗಿ ಹಾಗೂ
- ಹೆಚ್ಚಿನ ಪ್ರಮಾಣದ ವ್ಯವಸಾಯಕ್ಕಾಗಿ
ಭಾರತದಲ್ಲಿ ಯಾವ ಅಣೆಕಟ್ಟುಗಳ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿವೆ
ಗಂಗಾ ನದಿಗೆ ನಿರ್ಮಿಸಲು ಉದ್ದೇಶಿಸಿರುವ ತೆಹ್ರಿ ಅಣೆಕಟ್ಟು
ನರ್ಮದಾ ನದಿಗೆ ಕಟ್ಟಿರುವ ಸರ್ದಾರ್ ಸರೋವರ್ ಅಣೆಕಟ್ಟು
ಬೃಹತ್ ಅಣೆಕಟ್ಟುಗಳ ನಿರ್ಮಾಣಕ್ಕೆ ಇರುವ ಸಮಸ್ಯೆಗಳು ಯಾವವು
ಸಾಮಾಜಿಕ ಸಮಸ್ಯೆಗಳು
ಆರ್ಥಿಕ ಸಮಸ್ಯೆಗಳು
ಪರಿಸರ ಸಮಸ್ಯೆಗಳು
- ಸಾಮಾಜಿಕ ಸಮಸ್ಯೆಗಳು
ಇಲ್ಲಿ ಹೆಚ್ಚಿನ ಸಂಖ್ಯೆಯ ರೈತರನ್ನು ಮತ್ತು ಬುಡಕಟ್ಟು ಜನರನ್ನು ಸಾಕಷ್ಟು ಪರಿಹಾರ ಅಥವಾ ಪುನರ್ವಸತಿ ಸೌಕರ್ಯಗಳನ್ನು ನೀಡಬೇಕಾಗುತ್ತದೆ
- ಆರ್ಥಿಕ ಸಮಸ್ಯೆಗಳು
ಇಲ್ಲಿ ಸರಿಯಾದ ಪ್ರಮಾಣದ ಯೋಜನೆಗಳನ್ನು ಸೃಷ್ಟಿಸದೆ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕ ಹಣವನ್ನು ನುಂಗಿ ಹಾಕಲಾಗುತ್ತದೆ
- ಪರಿಸರದ ಸಮಸ್ಯೆಗಳು
ಇಲ್ಲಿ ಬೃಹತ್ ಪ್ರಮಾಣದ ಅರಣ್ಯ ನಾಶ ಮತ್ತು ಜೀವ ವೈದ್ಯ ವೈವಿಧ್ಯತೆಯ ನಾಶವಾಗುತ್ತದೆ
ಭಾರತದಲ್ಲಿ ಪುರಾತನ ನೀರು ಕೊಯ್ಲು ಇರುವ ರಚನೆಗಳಿರುವ ರಾಜ್ಯಗಳು ಯಾವುವು
- ರಾಜಸ್ಥಾನದಲ್ಲಿನ ಖಾದಿನ್ ಕೆರೆಗಳು ಮತ್ತು ನಾದಿಸ್
- ಮಹಾರಾಷ್ಟ್ರದಲ್ಲಿನ ಬಾಂದಾರಗಳು ಮತ್ತು ತಾಲ್ ಗಳು
- ಉತ್ತರ ಪ್ರದೇಶದಲ್ಲಿ ಬುಂಧೀಸ್ ಗಳು
- ಬಿಹಾರದಲ್ಲಿನ ಆಹರ್ ಗಳು ಪೈನ್ ಗಳು
- ಹಿಮಾಚಲ ಪ್ರದೇಶದ ಕುಲ್ಸ್ ಗಳು
- ಜಮ್ಮುವಿನ ಕಂದಿ ಪಟ್ಟಿಯಲ್ಲಿನ ಕೊಳಗಳು
- ತಮಿಳುನಾಡಿನಲ್ಲಿರುವ ಎರಿಗಳು
- ಕೇರಳದಲ್ಲಿನ ಸುರಂಗಗಳು
- ಕರ್ನಾಟಕದ ಪುರಾತನ ಕಟ್ಟಡಗಳು
ಡಾಕ್ಟರ್ ರಾಜೇಂದ್ರ ಸಿಂಗ್ ಅವರು ಪಡೆದ ಪ್ರಶಸ್ತಿ ಯಾವುದು
ಸ್ಟಾಕ್ ಹೋಂ ನ ಜಲ ಪಾರಿತೋಷಕ ಪ್ರಶಸ್ತಿ
ಡಾಕ್ಟರ್ ರಾಜೇಂದ್ರ ಸಿಂಗ್ ಅವರಿಗೆ ಸ್ಟಾಕ್ಹೋಮ್ ಜಲಪರಿ ದೋಷ ಪ್ರಶಸ್ತಿ ದೊರೆಯಲು ಕಾರಣವೇನು
- ಡಾಕ್ಟರ್ ರಾಜನ್ ಸಿಂಗ್ ಅವರು ಎರಡು ದಶಕಗಳ ಪರಿಶ್ರಮದಿಂದ ನೀರನ್ನು ಸಂಗ್ರಹಿಸಲು ಎಂಡ್ ಸಾವಿರದ ಆರುನೂರು ಜೋಹಡ್ ಗಳು ಮತ್ತು ಇತರ ರಚನೆಗಳನ್ನು ರಾಜಸ್ಥಾನದಲ್ಲಿ ಕಟ್ಟಲಾಯಿತು
- ರಾಜ್ಯಾದ್ಯಂತ ಸುಮಾರು ಒಂದು ಸಾವಿರ ಹಳ್ಳಿಗಳಿಗೆ ನೀರನ್ನು ಪುನಃ ತರಲಾಯಿತು ಇದಕ್ಕಾಗಿ ಅವರಿಗೆ ಪುರಸ್ಕಾರ ದೊರಕಿತು
ಶಕ್ತಿಯ ಬಳಕೆಯ ವಿಧಾನಗಳಲ್ಲಿ ಬದಲಾವಣೆಯನ್ನುಂಟು ಮಾಡುವ ಕೆಲವು ಸರಳ ಆಯ್ಕೆಗಳು ಯಾವುವು
- ಬಸ್ಗಳಲ್ಲಿ ಪ್ರಯಾಣ ಮಾಡುವುದು ಅಥವಾ ಸೈಕಲ್ ಅಥವಾ ನಡಿಗೆಯಿಂದ ಪ್ರಯಾಣ ಮಾಡುವುದು