ಉತ್ತರ: ಶ್ರೀರಾಮನ ತಂದೆಯ ಹೆಸರು ದಶರಥ.
ಉತ್ತರ: ಶ್ರೀರಾಮನಿಗೆ ಸಮರ್ಪಿಸಲು ಶಬರಿಯು ಬೋರೆ
ಹಣ್ಣು ಇತ್ಯಾದಿ ತಾಜಾ ತಾಜಾ ಹಣ್ಣುಗಳನ್ನು, ಸುವಾಸಿಕ ಪುಷ್ಪಗಳನ್ನು
ಸಂಗ್ರಹಿಸಿದ್ದಳು.
ಉತ್ತರ: ಮತಂಗಾಶ್ರಮದಲ್ಲಿದ್ದ ತಪಸ್ವಿನಿ ಶಬರಿ.
ಉತ್ತರ: ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು
ಸೂಚಿಸಿದವನು ದನು.
ಉತ್ತರ: ಶಬರಿ ಗೀತನಾಟಕದ ಕರ್ತೃ ಪು.ತಿ. ನರಸಿಂಹಾಚಾರ್.
ಉತ್ತರ: ರಾಮನು ಗಿರಿವನಗಳನ್ನು ಕುರಿತು - ಗಿರಿವನಗಳೇ,
ನನ್ನ ಸೀತೆಯು ದೊರೆಯುವಳೇ, ಕಾವ ಕಲ್ಪಲತೆಗಳೇ, ಆ ಚೆಲುವೆ
ದೊರೆಯುವಳೇ? ಬೇಡುವೆನು ಬೇಡುವೆನು ನನ್ನ ಸೀತೆ ಎಲ್ಲಿರುವಳು?
ಅವಳ ನೆಲೆಯನ್ನು ಅರಿತಿರುವಿರಾ? ಎಂದು ಪ್ರಾರ್ಥಿಸಿದನು.
ಉತ್ತರ: ಲಕ್ಷಣನು ಅಣ್ಣನನ್ನು ಹೇಗೆ ಸಂತೈಸಿದನೆಂದರೆ -
ತಾಳಿಕೋ ಅಣ್ಣನೇ ತಾಳಿಕೋ. ಸೂರ್ಯನೇ ತೇಜಸ್ಸನ್ನು ಕಳೆದುಕೊಂಡರೆ
ಪುನಃ ತೇಜವನ್ನು ತುಂಬುವವರು ಯಾರು? ಸಹನೆಯ ಮೂರ್ತಿ
ನಿನಗೆ ನಾನು ಬುದ್ದಿವಾದ ಹೇಳಲೇ ಎಂದನು.
ಉತ್ತರ: ಶ್ರೀರಾಮನು ನನ್ನ ಆಶ್ರಮಕ್ಕೆ ಬರಲಾರನೆ? ನನಗೇನೂ
ತೋಚದಂತಾಗಿದೆ ಎಂದು ಚಿಂತಿಸುತ್ತಿದ್ದ ಶಬರಿಯು ಶ್ರೀರಾಮನಿಗಾಗಿ
- ಕಡು ಸವಿಯಾದ ಹಣ್ಣುಗಳನ್ನು ಮಧುರ ಗೀತವು ಊರಿರುವ
ಮಧುವನ್ನು, ಮಧುಪರ್ಕವನ್ನು ಸಿದ್ಧ ಮಾಡಿ ಇಟ್ಟುಕೊಂಡಿದ್ದಾಳೆ.
ಉತ್ತರ: ಶಬರಿಯು ರಾಮ-ಲಕ್ಷ್ಮಣರನ್ನು ಒಳ್ಳೆಯ ಆದರಾತಿಥ್ಯ
ಗಳಿಂದ ಸತ್ಕರಿಸಿದಳು. ಶಬರಿಯು ರಾಮ ಬರುವುದನ್ನು ಕಂಡಳು.
ಆಶ್ಚರ್ಯವಾಯಿತು. ಸರಳ ರೀತಿಯಲ್ಲಿ ಬಂದ ಮೇಲೆ ಆತನ ಸನಿಹಕ್ಕೆ
ಹೋಗಿ ಮೈಮುಟ್ಟಿ ಸ್ಪರ್ಶಿಸಿ ರಾಮಲಕ್ಷ್ಮಣನಿಗೆ ಸವಿ ಫಲವನ್ನಿತ್ತಳು.
- ಉತ್ತರ: ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು- ತಾಯಿಯೇ
ನಿನ್ನ ಈ ಆತಿಥ್ಯದಲ್ಲಿ ಸ್ವಲ್ಪವೂ ಕುಂದು ಇಲ್ಲ. ಅಯೋಧ್ಯೆಯ ಅರಮನೆ
ಯಲ್ಲಿಯೂ ಸಹ ಇಂತಹ ಸುಖ ಸಿಗದು. ಸಾಕ್ಷಾತ್ ನಮ್ಮ ತಾಯಿಯನ್ನು
ಕಂಡಂತಾಯಿತು. ನಿನ್ನ ಕೈಗಳು ಉದಾರವಾಗಿವೆ ಎಂದರು.
ಉತ್ತರ: ಕೋಟಿ ಕೋಟಿ ಕಿರಣಗಳಿಂದ ರವಿಯು ಎತ್ತಿರುವ
ನೀಲವಾಚೆಯ ಗಮನ ನಿನಗೆ ಈ ಮಾಯೆಯ ಆಚೆಗೆ ಪಯಣ.
ನೀನು ಹಕ್ಕಿಗಳಂತೆ ಹಾರಬಯಸುವೆಯಾ? ಬಿಳಿ ಮುಗಿಲಂತೆ ತೇಲ
ಬಯಸುವಿಯಾ? ಕಾರ್ಮೋಡದ ಮರೆಯಲ್ಲಿರುವ ಸೆಳೆಮಿಂಚಿನ
ತೆರದಲ್ಲಿ ಭವವನ್ನು ಬಿಡಲು ಬಯಸಿರುವೆಯಾ? ಮಾತೆಯ ತರಹ
ನೀನು ನಮ್ಮನ್ನು ಉಪಚರಿಸಿದೆ. ಬಳಿಕ ಈ ರೀತಿ ನುಡಿಯುವುದು ನಿನಗೆ
ಸರಿಯೇ ತಾಯೇ ಎಂದು ರಾಮನೆಂದಾಗ ಶಬರಿಯು ಪುಣ್ಯಲೋಕ
ದೊರೆಯಲಿ ಎಂಬ ಹರಕೆಯ ನೀಡು ನನಗೆ ಎನ್ನುತ್ತಾಳೆ. ಇಷ್ಟೊಂದು
ವಾತ್ಸಲ್ಯಮಯವಾದಂತಹ ಉಪಚರಿಸಿದ ನಿನಗೆ ನಾವು ಕೊಡುವ
ಪ್ರತಿಫಲವೆಂದರೆ ಮುಕ್ತಿ ಎನ್ನುವನು. ಶಬರಿಯು ಆ ಮಾತಿಗೆ ಸಮ್ಮತಿಸಿ
ಅಸ್ತು ಅಸ್ತು ಪೋಗವ್ವಾ ನಿನ್ನ ಅಭೀಷ್ಟ ಸಿದ್ಧಿಗೆ ಎನ್ನುತ್ತಾನೆ.
ಉತ್ತರ: ಗೀತ ನಾಟಕಗಳಲ್ಲಿ ಮೇಳಗೀತದವರ ಪಾತ್ರವು
ತುಂಬಾ ಮಹತ್ವದ್ದು. ಆಯಾ ಪಾತ್ರಗಳು ವ್ಯಕ್ತ ಮಾಡುವ ಭಾವನೆ
ಗಳಿಗೆ ಮೇಳದವರು ತಮ್ಮ ಮೇಳಗೀತೆಯ ಮೂಲಕ ಮೆರಗನ್ನು
ನೀಡುತ್ತಾರೆ. ಕಂಡಳು ಶಬರಿ ರಾಮ ಬಂದು ನಿಂದಿರುವುದು. ಆಗ
ಆದಂಥ ಆಶ್ಚರ್ಯವು ಬಯಲಾದ ಮೇಲೆ ಶಬರಿಯು ಶ್ರೀರಾಮನ
ಸನಿಹಕ್ಕೆ ಹೋಗುತ್ತಾಳೆ. ಆತನ ಮೈಯ ಮುಟ್ಟಿ ದಿವ್ಯವಾದಂತಹ
ಸ್ವರ್ಗಸುಖದ ಆನಂದವನ್ನು ಪಡೆದಾದ ಮೇಲೆ ಆತನ ಶ್ರೀಚರಣ
ಗಳಲ್ಲಿ ಕೆಡೆದು (ಬಿದ್ದು) ಆನಂದ ಭಾಷ್ಪಗಳಿಂದ ಪಾದಗಳನ್ನು
ತೊಳೆಯುತ್ತಾಳೆ . ಬನ್ನಿರಯ್ಯ ಬನ್ನಿರಿ ಎಂದು ಗದ್ಗದ ಕಂಠದಿಂದ ಸ್ವಾಗತ
ಕೋರಿ ಅಯ್ಯೋ ನಾನು ಇನ್ನೂ ಯಾವ ತಯಾರಿಯನ್ನು ಮಾಡಿಲ್ಲವಲ್ಲ
ಎಂದು ಮರುಗುತ್ತಾ ಬಗೆ ಬಗೆಯ ಕಂಪನ್ನು ಸೂಸುವಂಥ ಪುಷ್ಪಹಾರವನ್ನು
ಆತನ ಸಿರಿಕಂಠಕ್ಕೆ ಮುಡಿಸಿ ಆನಂದಿಸುತ್ತಾಳೆ,
3, ನಂಬಿ ಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ?
ಉತ್ತರ: ಭಾರತೀಯ ಪರಂಪರೆಯಲ್ಲಿ ನಂಬಿಕೆಗೆ ಬಹಳ
ಮಹತ್ವ ಸ್ಥಾನವಿದೆ. ದಾಸರೂ ಸಹ ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ವಂಬದ ಕೆಟ್ಟರೆ ಕೆಡಲಿ, ಅಂಬಿಗ ನಾ ನಿನ್ನ ನಂಬಿದೆ ಜಗದಂಬಾ ರಮಣ
ನಿನ್ನ ನಂಬಿದೆ ಎಂದು ಹಾಡಿದ್ದಾರೆ. ಅದರಂತೆ ಮತಂಗಾಶ್ರಮದ
ಶಬರಿಯು ಒಂದಿಲ್ಲೊಂದು ದಿನ ಶ್ರೀರಾಮನು ತನ್ನ ಆಶ್ರಮಕ್ಕೆ ಬಂದೇ
ಬರುತ್ತಾನೆ. ತನ್ನ ಆತಿಥ್ಯವನ್ನು ಸ್ವೀಕರಿಸಿಯೇ ಸ್ವೀಕರಿಸುತ್ತಾನೆ ಎಂಬ
ಬಲವಾದ ನಂಬಿಕೆಯಿಂದ ಕಾದಿದ್ದಳು. ಕಾದಿರುವಳು ಶಬರಿ ರಾಮ
ಬರುವನೆಂದು ತನ್ನ ಸೇವೆ ಸ್ವೀಕರಿಸುವನು ಎಂಬಂತೆ ಅವಳ ಕನಸು
ಅದೊಂದಿನ ನನಸಾಯ್ತು. ತನ್ನ ಆಶ್ರಮದ ಕಡೆಗೆ ಬರುತ್ತಿರುವವನು
ಕೌಸಲ್ಯಾ ಸುತನಾದ ರಾಮನಲ್ಲ, ತನಗೆ ಮುಕ್ತಿಯ ಪಥ ತೋರುವ
ಚೈತನ್ಯಶಕ್ತಿ. ಆ ಪ್ರಕಾರ ಶ್ರೀರಾಮನು ಶಬರಿಯು ಹಾಕಿದ ಸುಗಂಧದ
ಹಾರ ಸ್ವೀಕರಿಸಿ ತನಿವಣ್ಣುಗಳನ್ನು ತಿಂದು ಮುಕ್ತಿಯನ್ನು ಕರುಣಿಸಿದ.
ಹೀಗೆ ನಾವು ದೇವರನ್ನು ಸಾತ್ವಿಕ ಭಕ್ತಿಯಿಂದ ನಂಬಿದ್ದೇ ಆದರೆ
- ಅವನೆಂದಿಗೂ ಕೈಬಿಡಲಾರನು.
ಗದ್ಯ ಪಾಠ : ಶಬರಿ (ಗೀತನಾಟಕ)
ಲೇಖಕರು : ಪು.ತಿ.ನರಸಿಂಹಾಚಾರ್
ಆಕರ : ಶಬರಿ ಸಂ: ಶ್ರೀರಂಗ, ನಾ. ಕಸ್ತೂರಿ
ವಿವರಣೆ: ಮತಂಗಾಶ್ರಮದ ಪರಿಸರವು ಶ್ರೀರಾಮನಿಗೆ
ಚಿತ್ರಕೂಟವನ್ನು ಸ್ಮರಣೆಗೆ ತರುತ್ತಿದೆ. ಆದರೆ ಇಂದು ಜಾನಕಿಯು
ಇಲ್ಲದುದೇ ಒಂದು ಕೊರಗು ಎಂದಾಗ ಲಕ್ಷ್ಮಣನು - ಅಹುದು
ಚಿತ್ರಕೂಟವೇ ನೆನಪಿಗೆ ಬರುತ್ತಿದೆ. ಜತೆಯಲ್ಲಿ ಅತ್ತಿಗೆಯಿದ್ದರು.
ಅವರನ್ನು ಒಂಟಿಯಾಗಿ ಬಿಟ್ಟು ಹೋಗಿರುವ ತಪ್ಪು ನನ್ನದೇ ಎಂದಾಗ
ಶ್ರೀರಾಮನು ಮರುಗದಿರು ತಮ್ಮಯಾ ಮತಂಗರ ತಪಸ್ವಿನಿಯ .
ಆಶ್ರಮವಿದುವೇ. ಅಗೋ ಲಕ್ಷಣ ಆವುದು ಈ ಮರುಳು? ನಮ್ಮ
ಕಡೆಗೆ ಬರುತ್ತಿರುವುದಾಗಿ ಎನ್ನುತ್ತಾನೆ.
ಗದ್ಯ ಪಾಠ : ಶಬರಿ (ಗೀತನಾಟಕ)
ಲೇಖಕರು : ಪು.ತಿ.ನರಸಿಂಹಾಚಾರ್
ಆಕರ : ಶಬರಿ ಸಂ: ಶ್ರೀರಂಗ, ನಾ. ಕಸ್ತೂರಿ
ವಿವರಣೆ: ರಾಮನು ತನ್ನ ಆಶ್ರಮಕ್ಕೆ ಬಾರನೇ? ನನಗೆ
ಏನೊಂದೂ ತೋಚದು ಬಾರಯ್ಯ ರಾಮಾ ಬಾ ನನ್ನ ಕೈಯಾರೆ ಆತಿಥ್ಯ
ವನ್ನು ಸ್ವೀಕರಿಸು ಎನ್ನುತ್ತ ಶಬರಿ ಪರ್ಣಶಾಲೆಯೊಳಗೆ ಹೋಗುವಳು.
ರಾಮ- ಲಕ್ಷಣರು ಕಾಣಿಸಿಕೊಳ್ಳುತ್ತಾರೆ. ಎಂತಹ ಉದಾರಿ ಈ ಶಬರಿ!
ನನ್ನಿಂದ ಇವಳಿಗೆ ಸ್ವಲ್ಪವೂ ಉಪಕಾರವಿಲ್ಲ. ಆದರೂ ಪ್ರೀತಿಯಿಂದ
ನೆನೆಯುತ್ತಿರುವಳು. ಈ ಪೂಜೆಯ ನಲುಮೆಯಿಂದ ನಾನು ನಾಚಿಕೊಳ್ಳು
ತ್ತಿದ್ದೇನೆ.
ಗದ್ಯ ಪಾಠ : ಶಬರಿ (ಗೀತನಾಟಕ)
ಲೇಖಕರು : ಪು.ತಿ.ನರಸಿಂಹಾಚಾರ್
ಆಕರ : ಶಬರಿ ಸಂ: ಶ್ರೀರಂಗ, ನಾ. ಕಸ್ತೂರಿ
ವಿವರಣೆ ಎಂದು ಕಾಂಬೆನು ನಾ ರಾಮನ. ಅವನು ದಶರಥ
ಪುತ್ರನಂತ, ಸಾಧು ಜನರ ಮಿತ್ರನಂತ. ಕೆಟ್ಟ ಕನಸಿನ ಇರುಳನ್ನು
ಕಳೆಯುವ ಸುಪ್ರಭಾತದಂಥವನು ರಾಮ ಎಂದು ಶಬರಿ ಕನವರಿಸು
ತಿರುವಾಗಲೇ ಬಾಗಿಲಿನ ಬಳಿಗೆ ಬಂದಂತಹ ರಾಮನು - ತಾಯೇ,
ದಾರಿಗರಿಗೆ ಬೀಡು ಇಲ್ಲಿ ದೊರೆವುದೇ? ಎಂದು ಕೇಳುವನು.
ಗದ್ಯ ಪಾಠ : ಶಬರಿ (ಗೀತನಾಟಕ) .
ಲೇಖಕರು : ಪು.ತಿ.ನರಸಿಂಹಾಚಾರ್
ಆಕರ : ಶಬರಿ ಸಂ: ಶ್ರೀರಂಗ, ನಾ. ಕಸ್ತೂರಿ
ವಿವರಣೆ: ಶಬರಿಯು 'ಶ್ರೀರಾಮನಿಗೆ ಮಾತೃವಾತ್ಸಲ್ಯವನ್ನೇ
ಧಾರೆಯೆರೆದು ತನಿವಣ್ಣುಗಳನಿತ್ತು ಜೇನು, ಮಧುಪರ್ಕವನ್ನಿತ್ತು ಆರೈಕೆ
ಮಾಡಿದ್ದಾಳೆ. ಮಗನೇ ನನ್ನ ಈ ಸೇವೆಯಲ್ಲಿ ಏನಾದರೂ ಕುಂದು
ಉಂಟಾಯಿತೇ? ಎಂದಾಗ ರಾಮ ಯಾವ ಕೊರತೆಯೂ ಇಲ್ಲ ತಾಯೆ.
ಅಯೋಧ್ಯೆಯ ಅರಮನೆಯಲ್ಲೂ ಇಂತಹ ಸುಖವಿಲ್ಲ. ನಿನ್ನ ರೂಪದಂತೆ
ಮಾತೂ ಕೂಡಾ ಎಷ್ಟೊಂದು ಉದಾರವಾಗಿದೆಯಲ್ಲ? ಎನ್ನುತ್ತಾನೆ.
ಗದ್ಯ ಪಾಠ : ಶಬರಿ (ಗೀತನಾಟಕ)
ಲೇಖಕರು : ಪು.ತಿ.ನರಸಿಂಹಾಚಾರ್
ಆಕರ : ಶಬರಿ ಸಂ: ಶ್ರೀರಂಗ, ನಾ. ಕಸ್ತೂರಿ
ವಿವರಣೆ: ಶ್ರೀರಾಮನ ದರುಶನದಿಂದ ಕಂಡು ಧನ್ಯಳಾದ
ಶಬರಿಯು ಆತನಲ್ಲಿ ಮುಕ್ತಿಯ ಫಲವನ್ನು ಯಾಚಿಸಿ ಪಡೆಯುತ್ತಾಳೆ.
ಅಗ್ನಿಗೆ ಪ್ರದಕ್ಷಿಣೆ ಹಾಕಿ ಅಗ್ನಿಪ್ರವೇಶ ಮಾಡಿದುದನ್ನು ಕಂಡ ಶ್ರೀರಾಮನು
- ಬೆಳಕಿಗೆ ಒಲಿದವರು ಉರಿವ ಬತ್ತಿಯ ಕಿರುಕನ್ನು ಕಾಣರು ಎನ್ನುತ್ತಾನೆ.
1. ಮತಂಗ - ಆಶ್ರಮ
2. ಪು.ತಿ.ನ. - ಮೇಲುಕೋಟೆ
3. ದಶರಥ - ರಾಮ
4. ಚಿತ್ರಕೂಟ - ಪರ್ವತ
5. ಭೂಮಿಜಾತೆ - ಸೀತೆ