ಅಭ್ಯಾಸ (ಪ್ರಶೋತ್ತರಗಳು)
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ವಿವೇಕಾನಂದರೆಂದರೆ ಯಾವುದರ ರೂಪಕವಾಗಿದೆ?
ಉತ್ತರ: ವಿವೇಕಾನಂದರೆಂದರೆ ಸಾಮಾಜಿಕ ಸಂಕಟ, ಸಿಟ್ಟು,
- ಸ್ಫೋಟ, ಸ್ಪಷ್ಟತೆಗಳ ರೂಪಕವಾಗಿದೆ.
2. ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ?
ಉತ್ತರ: ವಿವೇಕಾನಂದರು ಧಾರ್ಮಿಕ ಮೂಲಭೂತವಾದಕ್ಕೆ
ಉಗ್ರ ವಿರೋಧಿಯಾಗಿದ್ದರು.
3. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು ಯಾರು?
ಉತ್ತರ: ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು
ಶೂದ್ರರು, ಅಸ್ಪೃಶ್ಯರು.
4. ಸರ್ವಧರ್ಮ ಸಮ್ಮೇಳನವು ಎಲ್ಲಿ ನಡೆಯಿತು?
ಉತ್ತರ: ಸರ್ವಧರ್ಮ ಸಮ್ಮೇಳನವು 10-9-1893ರಂದು
ಚಿಕಾಗೋದಲ್ಲಿ ನಡೆಯಿತು.
5. ವಿವೇಕಾನಂದರನ್ನು 'ಮಾನವತಾಮಿತ್ರ'ರೆಂದು ಕರೆದವರಾರು?
ಉತ್ತರ: ವಿವೇಕಾನಂದರನ್ನು ಮಾನವತಾಮಿತ್ರರೆಂದು ಕರೆದವರು
ಕುವೆಂಪು ಅವರು.
6 ವಿವೇಕಾನಂದರು ಮೊದಲನೆಯ ಆದ್ಯತೆ ಯಾವುದಕ್ಕೆ
ನೀಡಬೇಕೆಂದಿದ್ದಾರೆ?
ಉತ್ತರ: ದೈಹಿಕ ಹಸಿವನ್ನು ಹಿಂಗಿಸುವುದು ವಿವೇಕಾನಂದರ
ಮೊದಲನೆಯ ಆದ್ಯತೆಯಾಗಿತ್ತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ
ಉತ್ತರಿಸಿ:
1. ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು?
ಉತ್ತರ: ವಿವೇಕಾನಂದರು ಜಾತಿವಾದ ಮತ್ತು ಕೋಮುವಾದಕ್ಕೆ
ಪ್ರತಿರೋಧ ಒಡ್ಡಿದರು. ಹಿಂದೂ ಧರ್ಮದೊಳಗಿದ್ದೂ ಅದನ್ನು ಮೀರಿದ
ಸಾಮಾಜಿಕ ಶಕ್ತಿಯಾದರು. ಇಂದು ಜಾತಿವಾದ ಮತ್ತು
ಕೋಮುವಾದಗಳು ಮುನ್ನೆಲೆಗೆ ಬಂದು ಮಾನವೀಯ ಮೌಲ್ಯವನ್ನು ನುಂಗಿ
ನೊಣೆಯುತ್ತಿವೆ ಎನ್ನುತ್ತಿದ್ದರು.
2. ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿ
ಯಾಗಿದ್ದರು. ಏಕೆ?
ಉತ್ತರ: ಕೋಮುವಾದದ ವಿಷಯಕ್ಕೆ ಬಂದರೆ ವಿವೇಕಾನಂದರು
ಎಂದೂ ಏಕಸಂಸ್ಕೃತಿ ಮತ್ತು ಏಕಧರ್ಮ ವಿಸ್ತರಣೆಗಳ ಪರವಾಗಿರಲಿಲ್ಲ.
ಕ್ರೈಸ್ತ ಧರ್ಮವಿರಲಿ, ಇಸ್ಲಾಂ ಧರ್ಮವಿರಲಿ, ಏಕಧರ್ಮ ಶ್ರೇಷ್ಠತೆ ಮತ್ತು
ವಿಸ್ತರಣೆಯ ಜೀವವಿರೋಧವೆಂದು ಅವರು ಭಾವಿಸಿದ್ದರು.
3. ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ
ಹೇಳಿದ್ದೇನು? |
ಉತ್ತರ: 11-9-1893ರಂದು ಚಿಕಾಗೋದ ಸರ್ವಧರ್ಮ
ಸಮ್ಮೇಳನದಲ್ಲಿ ಮಾತನಾಡುತ್ತ, ವಿವೇಕಾನಂದರು ಸ್ವಮತಾಭಿಮಾನ,
ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ
ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ. ಇಂತಹ
ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ
ಇಂದಿಗಿಂತ ಎಷ್ಟೋ ಮುಂದುವರಿಯುತ್ತಿತ್ತು ಎಂದರು.