ಜೈವಿಕ ಮತ್ತು ಅಜೈವಿಕ ಘಟಕಗಳ ನಡುವಿನ ಸಂಬಂಧ ಮತ್ತು ಪ್ರತಿ ವರ್ತನೆ ಯನ್ನು ನಾವು ಪರಿಸರ ವ್ಯವಸ್ಥೆ ಎನ್ನಬಹುದು
ಜೈವಿಕ ಮತ್ತು ಅಜೈವಿಕ ಘಟಕಗಳು
ಉತ್ಪಾದಕರು, ಭಕ್ಷಕರು, ವಿಘಟಕರು
ಪರಿಸರ ವ್ಯವಸ್ಥೆಯಲ್ಲಿ ಎಲ್ಲಾ ಹಸಿರು ಸಸ್ಯಗಳು ಮತ್ತು ಕೆಲವು ಬ್ಯಾಕ್ಟೀರಿಯಾಗಳು ದ್ಯುತಿ ಸಂಶ್ಲೇಷಣೆ ಕ್ರಿಯೆ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಇವುಗಳನ್ನು ಉತ್ಪಾದಕರು ಎನ್ನುವರು
ಹಸಿರು ಸಸ್ಯಗಳು ಮತ್ತು ಕೆಲವು ಬ್ಯಾಕ್ಟೀರಿಯಾಗಳು
ಉತ್ಪಾದಕರು ಉತ್ಪಾದಿಸಿದ ಆಹಾರವನ್ನು ನೇರವಾಗಿ ಅಥವಾ ಇತರ ಭಕ್ಷಕ ಜೀವಿಗಳನ್ನು ಪರೋಕ್ಷವಾಗಿ ಭಕ್ಷಿಸುವ ಜೀವಿಗಳಿಗೆ ಭಕ್ಷಕರು ಎನ್ನುವರು
ಸಸ್ಯಹಾರಿಗಳು, ಮಾಂಸಹಾರಿಗಳು, ಸರ್ವ ಹಾರಿಗಳು, ಪರಾವಲಂಬಿಗಳು
ಕೆಲವು ಸೂಕ್ಷ್ಮ ಜೀವಿಗಳು ಸತ್ತ ಜೀವಿಯ ಅವಶೇಷಗಳು ಮತ್ತು ತ್ಯಾಜ್ಯ ವಸ್ತುಗಳನ್ನು ವಿಘಟಿಸುತ್ತವೆ ಹಾಗೂ ಸಂಕೀರ್ಣ ಸಾವಯವ ಪದಾರ್ಥಗಳನ್ನು ಸರಳ ನಿರವಯವ ಪದಾರ್ಥಗಳಾಗಿ ವಿಘಟಿಸುತ್ತವೆ ಇವುಗಳನ್ನು ವಿಘಟಕಗಳು ಎನ್ನುವರು
ಪರಿಸರದ ಜೀವಿಗಳು ಒಂದನ್ನೊಂದು ಭಕ್ಷಿಸುತ್ತವೆ ಈ ರೀತಿ ಭಕ್ಷಿಸುವ ಜೀವಿಗಳ ಸರಪಣಿಯನ್ನು ನಾವು ಆಹಾರ ಸರಪಳಿ ಎನ್ನುತ್ತೇವೆ
ಆಹಾರ ಸರಪಳಿಯ ಪ್ರತಿಯೊಂದು ಹಂತ ಅಥವಾ ಮಟ್ಟವನ್ನು ಪೋಷಣಾಸ್ತರ ಎನ್ನುತ್ತೇವೆ
ಸ್ವಪೋಷಕಗಳು ಅಥವಾ ಉತ್ಪಾದಕ ಜೀವಿಗಳು
ಸಸ್ಯಾಹಾರಿಗಳು
- ಭೂ ಪರಿಸರ ವ್ಯವಸ್ಥೆಯಲ್ಲಿನ ಎಲ್ಲಾ ಹಸಿರು ಸಸ್ಯಗಳು ತಮ್ಮ ಎಲೆಗಳ ಮೇಲೆ ಬೀಳುವ ಸೌರ ಬೆಳಕಿನ ಪ್ರಮಾಣದಲ್ಲಿ ಕೇವಲ 1% ಸೆರೆಹಿಡಿಯುತ್ತವೆ ಮತ್ತು ಆಹಾರ ಶಕ್ತಿಯನ್ನಾಗಿ ಪರಿವರ್ತಿಸುವ
- ನಂತರ ಹಸಿರು ಸಸ್ಯಗಳನ್ನು ಪ್ರಾಥಮಿಕ ಭಕ್ಷಕಗಳು ಸೇವಿಸುತ್ತವೆ
- ಈಗ ಶಕ್ತಿಯು ಉತ್ಪಾದಕರಿಂದ ಪ್ರಾಥಮಿಕ ಭಕ್ಷಕರಿಗೆ ಸಾಗುತ್ತದೆ
- ನಂತರ ಪ್ರಾಥಮಿಕ ಭಕ್ಷಕರು ಸೇವಿಸಿದ ಆಹಾರವನ್ನು ಹಾಗೂ ಶಕ್ತಿಯ ಭಾಗವನ್ನು ತಮ್ಮ ಬೆಳವಣಿಗೆ, ಜೀರ್ಣಕ್ರಿಯೆ, ಕೆಲಸ ಮಾಡಲು ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಉಪಯೋಗಿಸಿಕೊಳ್ಳುತ್ತದೆ
- ಪ್ರಾಥಮಿಕ ಭಕ್ಷಕರು ತಮ್ಮ ಎಲ್ಲ ಜೀವನ ಕ್ರಿಯೆಗಳಿಗೆ ಶಕ್ತಿಯನ್ನು ಬಳಸಿಕೊಂಡು ನಂತರ ಶೇಕಡಾ 10 ರಷ್ಟು ಭಾಗದ ಶಕ್ತಿಯು ತನ್ನದೇ ದೇಹ ಕಣವಾಗಿ ಮಾರ್ಪಾಡಾಗುತ್ತದೆ ಮತ್ತು ಮುಂದಿನ ಹಂತದ ಭಕ್ಷಕ ರಿಗೆ ಲಭ್ಯವಾಗುತ್ತದೆ
- ಹಾಗೆಯೇ ಪ್ರತಿಯೊಂದು ಹಂತದಲ್ಲಿ ಕಂಡುಬರುವ ಸಾವಯವ ಪದಾರ್ಥದ ಪ್ರಮಾಣದಲ್ಲಿ ಸರಾಸರಿ ಶೇಕಡ 10ರಷ್ಟು ಶಕ್ತಿಯ ವರ್ಗಾವಣೆಯಾಗುತ್ತದೆ
- ಸಾಮಾನ್ಯವಾಗಿ ಪರಿಸರ ವ್ಯವಸ್ಥೆಯ ಕೆಳಗಿನ ಪೋಷಣಾಸ್ತರ ದಲ್ಲಿ ಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತವೆ ಅವುಗಳಲ್ಲಿ ಉತ್ಪಾದಕರ ಸಂಖ್ಯೆ ಅಧಿಕ
ಪರಿಸರ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯು ಸಾಮಾನ್ಯವಾಗಿ ಅನೇಕ ಜೀವಿಗಳಿಂದ ತಿನ್ನಲ್ಪಡುತ್ತದೆ ಹಾಗಾಗಿ ಇದನ್ನು ಕವಲೊಡೆದ ಆಹಾರ ಸರಪಳಿಯಂತೆ ತೋರಿಸಲಾಗುತ್ತದೆ ಇದನ್ನು ಆಹಾರ ಜಾಲ ಎನ್ನುವರು
- ಶಕ್ತಿಯ ಹರಿವು ಏಕ ಮುಖವಾಗಿದೆ
- ಸ್ವಪೋಷಕ ಗಳಿಂದ ಸೆರೆಹಿಡಿಯಲಾದ ಶಕ್ತಿಯು ಪುನಹ ಸೌರಶಕ್ತಿಗೆ ಹಿಂದಿರುಗುವುದಿಲ್ಲ
- ಶಕ್ತಿಯು ವಿವಿಧ ಪೋಷಣ ಸ್ತರ ಗಳ ಮುಖಾಂತರ ಕ್ರಮೇಣವಾಗಿ ಮುಂದೆ ಸಾಗಿದಂತೆ ಹಿಂದಿನ ಪೋಷಣಾಸ್ತರ ಗಳಿಗೆ ಸಿಗುವುದಿಲ್ಲ
- ಪ್ರತಿಯೊಂದು ಪೋಷಣ ಸ್ಥಳದಲ್ಲಿ ಲಭ್ಯವಿರುವ ಶಕ್ತಿಯು ಪ್ರತಿ ಹಂತದಲ್ಲಿ ಶಕ್ತಿಯ ನಷ್ಟದಿಂದಾಗಿ ಕ್ರಮೇಣವಾಗಿ ಕಡಿಮೆಯಾಗುತ್ತದೆ
- ಏಕೆಂದರೆ ಸ್ವಪೋಷಕ ಗಳಿಂದ ಸೆರೆಹಿಡಿಯಲಾದ ಶಕ್ತಿಯು ಪುನಹ ಸೌರಶಕ್ತಿಗೆ ಹಿಂದಿರುಗುವುದಿಲ್ಲ
- ಅದೇ ರೀತಿ ಸಸ್ಯಾಹಾರಿಗಳಿಗೆ ಸೇರಿಹೋದ ಶಕ್ತಿಯು ಪುನಹ ಸ್ವ ಪೋಷಕರಿಗೆ ಹಿಂದೆ ಬರುವುದಿಲ್ಲ
- ಹೀಗೆ ವಿವಿಧ ಪೋಷಣ ಸ್ತರ ಗಳ ಮುಖಾಂತರ ಶಕ್ತಿಯು ಮುಂದೆ ಸಾಗಿದಂತೆ ಹಿಂದಿನ ಹಂತಗಳಿಗೆ ಅದು ಲಭ್ಯವಿರುವುದಿಲ್ಲ
- ಹೀಗಾಗಿ ಶಕ್ತಿಯ ಹರಿವು ಏಕ ಮುಖವಾಗಿದೆ
ಪರಿಸರ ವ್ಯವಸ್ಥೆಯಲ್ಲಿ ಕೆಲವು ರಾಸಾಯನಿಕಗಳು ವಿಘಟನೆ ಹೊಂದದೆ ಅವು ಪೋಷಣ ಸ್ತರ ದಲ್ಲಿ ಸಂಗ್ರಹಿಸಲ್ಪಡುತ್ತದೆ
ಹೀಗೆ ಪೋಷಣಾಸ್ತರ ದಲ್ಲಿ ರಾಸಾಯನಿಕ ಅಂಶಗಳು ಸಂಗ್ರಹವಾಗುವ ವಿದ್ಯಮಾನವನ್ನು ಜೈವಿಕ ಸಂವರ್ಧನೆ ಎನ್ನುವರು
- ಜೈವಿಕ ಸಂವರ್ಧನೆ ಎಂದರೆ ಆಹಾರ ಸರಪಳಿಯಲ್ಲಿ ರಾಸಾಯನಿಕ ವಸ್ತುಗಳ ಸಂಗ್ರಹವಾಗುವ ವಿದ್ಯಮಾನ
- ನಾವು ಬೆಳೆಗಳನ್ನು ರೋಗಗಳಿಂದ ಮತ್ತು ಕೀಟಗಳಿಂದ ರಕ್ಷಿಸಲು ಕೆಲವು ರಾಸಾಯನಿಕಗಳನ್ನು ಉಪಯೋಗಿಸುತ್ತೇವೆ
- ಈ ರಾಸಾಯನಿಕಗಳು ನೀರಿನೊಂದಿಗೆ ಹರಿದು ಹೋಗಿ ಮಣ್ಣಿನ ಒಳಗೆ ಇಂಗುತ್ತದೆ ಅಥವಾ ನೀರಿನ ಆಕರಗಳನ್ನು ಸೇರುತ್ತವೆ
- ನಂತರ ಮಣ್ಣಿನ ಮುಖಾಂತರ ಇವು ಗಿಡಗಳಿಂದ ಹೀರಲ್ಪಡುತ್ತವೆ ಹಾಗೆಯೇ ನೀರನ್ನು ಸೇರಿಕೊಂಡ ರಾಸಾಯನಿಕಗಳು ಜಲ ಸಸ್ಯಗಳು ಮತ್ತು ಪ್ರಾಣಿಗಳು ಪಡೆದುಕೊಳ್ಳುತ್ತದೆ
- ಈ ರೀತಿ ರಾಸಾಯನಿಕ ವಸ್ತುಗಳು ವಿಘಟನೆಗೆ ಒಳಗಾಗದ ಆಹಾರ ಸರಪಳಿಯನ್ನು ಸೇರಿಕೊಳ್ಳುತ್ತವೆ
O3
ಓಝೋನ್ ಪ್ರಾಣಾಂತಿಕ ವಿಷಕಾರಿಯಾಗಿದೆ
ಸೌರ ಬೆಳಕಿನಿಂದ ಬರುವ ನೇರಳಾತೀತ ವಿಕಿರಣ ದಿಂದ ಭೂಮಿಯ ಮೇಲ್ಮೈಯನ್ನು ರಕ್ಷಿಸುತ್ತದೆ
- ಓಝೋನ್ ಎಂಬುದು ವಾತಾವರಣದ ಉನ್ನತ ಸ್ತರದಲ್ಲಿ
- ಇದು ನೇರಳಾತೀತ ವಿಕಿರಣ ಗಳು ಮತ್ತು ಆಕ್ಸಿಜನ್ ಅಣುವಿನ ನಡುವಿನ ವರ್ತನೆಯಿಂದ ಉಂಟಾದ ಸಂಯುಕ್ತವಾಗಿದೆ
- ಹೆಚ್ಚಿನ ತೀವ್ರತೆಯ ನೇರಳಾತೀತ ವಿಕಿರಣ ಗಳು ಕೆಲವು ಆಕ್ಸಿಜನ್ ಅಣು ಗಳನ್ನು ಆಕ್ಸಿಜನ್ ಪರಮಾಣುಗಳ ಆಗಿ ವಿಭಜಿಸುತ್ತದೆ
- ಈ ಆಕ್ಸಿಜನ್ ಪರಮಾಣುಗಳ ಇನ್ನಿತರ ಆಕ್ಸಿಜನ್ ಅಣುಗಳೊಂದಿಗೆ ಸೇರಿ ಓಝೋನ್ ರೂಪಗೊಳ್ಳುತ್ತದೆ
O2 ---------- > O + O
O2 + O ------ > O3
ಕ್ಲೋರೋ ಫ್ಲೋರೋ ಕಾರ್ಬನ್ ( CFC )
ಯಾವ ವಸ್ತುಗಳು ಜೈವಿಕ ಕ್ರಿಯೆಗಳಿಂದ ವಿಭಜಿಸಲ್ಪಟ್ಟಿದೆ ಯು ಅಂತಹ ವಸ್ತುಗಳನ್ನು ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳು ಎನ್ನುವರು
- ನಾವು ಉತ್ಪಾದಿಸುವ ತ್ಯಾಜ್ಯಗಳ ಎರಡು ವಿಧವಾಗಿ ಇವೆ
- ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳು ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳು
- ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳು ಜೈವಿಕ ಕ್ರಿಯೆಗಳಿಂದ ವಿಘಟಿಸಲ್ಪ ಡುತ್ತವೆ ಹಾಗೆಯೇ ಜೈವಿಕ ವಿಘಟನೆಗೆ ಒಳಗಾಗದ ವಸ್ತುಗಳು ಯಾವುದೇ ಜೈವಿಕ ಕ್ರಿಯೆಗಳಿಂದ ವಿಭಜಿಸಲ್ಪಡುವುದಿಲ್ಲ
- ಸೂಕ್ಷ್ಮ ಜೀವಿಗಳಾದ ಕೊಳೆತಿನಿಗಳು ಜೈವಿಕ ವಿಭಜನೆ ಕ್ರಿಯೆಯಲ್ಲಿ ಭಾಗವಹಿಸುತ್ತವೆ
-ಪ್ಲಾಸ್ಟಿಕ್ ನಂತಹ ಮಾನವ ನಿರ್ಮಿತ ವಸ್ತುಗಳು ಬ್ಯಾಕ್ಟೀರಿಯಾ ಅಥವಾ ಇತರ ಕೊಳೆತಿನಿ ಗಳ ಮುಖಾಂತರ ವಿಭಜನೆಗೆ ಒಳಗಾಗುವುದಿಲ್ಲ
- ಹಾಗಾಗಿ ಇಂತಹ ವಸ್ತುಗಳು ಜಡವಾಗಿ ಇರಬಹುದು ಮತ್ತು ಪರಿಸರದಲ್ಲಿ ದೀರ್ಘಕಾಲದವರೆಗೆ ಉಳಿದುಬಿಡಬಹುದು
- ಇದರಿಂದ ಅನೇಕ ಜೀವಿಗಳಿಗೆ ಹಾನಿಯುಂಟಾಗುತ್ತದೆ