ಉತ್ತರ: ಯಶೋಭದ್ರೆ ಮತ್ತು ಸೂರದತ್ತ ಇವರು
ಸುಕುಮಾರಸ್ವಾಮಿಯ ತಂದೆತಾಯಿಗಳು.
ಉತ್ತರ: ಸುಕುಮಾರಸ್ವಾಮಿಗೆ ಸೆಟ್ಟಿಪಟ್ಟವನ್ನು ಕಟ್ಟಲಾಯಿತು.
ಉತ್ತರ: ಈ ಸುಕುಮಾರ ಸ್ವಾಮಿಯು ಯಾವಾಗ ಋಷಿಗಳ
ರೂಪವನ್ನು ನೋಡುವನೋ ಅಂದೇ ತಪಸ್ಸಿಗೆ ತೆರಳುವನು ಎಂದು
ನೈಮಿತ್ತಿಕ (ಜೋಯಿಸ)ನು ಹೇಳಿದನು.
ಉತ್ತರ: ಯಶೋಭದ್ರೆಯು ರತ್ನಗಂಬಳಿಗಳಲ್ಲಿ ಪ್ರತಿ
ಯೊಂದನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ ಒಟ್ಟು ಮೂವತ್ತೆರಡು
ತುಂಡುಗಳನ್ನು ಮಾಡಿ ಮೂವತ್ತೆರಡು ಸೊಸೆಯಂದಿರಿಗೆ ಹಂಚಿದಳು.
ಉತ್ತರ: ಅರಸ ವೃಷಭಾಂಕನು ದೇವಲೋಕಕ್ಕೆ ಸಮಾನವಾದ
ರತ್ನಮಯವಾದ ನೆಲಗಟ್ಟುಳ್ಳ ಕೆರೆಗೆ ಸ್ನಾನ ಮಾಡಲು ಹೋದಾಗ
ಬೆರಳಲ್ಲಿದ್ದ ಉಂಗುರವು ಜಾರಿ ಬಿದ್ದಿತು.
ಉತ್ತರ: ಸೂರದತ್ತ ಸೆಟ್ಟಿಯು ಸುಕುಮಾರನಿಗೆ ಸೆಟ್ಟಿ ಪಟ್ಟವನ್ನು
ಕಟ್ಟಿ ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯು ತಾರುಣ್ಯವನ್ನು
ಪಡೆದು ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ ಕಾಂತಿಯಿಂದ ಕೂಡಿದವ
ನಾದನು. ಅವನಿಗೆ ಮೂವತ್ತೆರಡು ಲತಾಗೃಹಗಳೂ ಅತ್ಯಂತ ರೂಪ
ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದದವನಾದನು.
ಉತ್ತರ: ಸ್ನಾನಕ್ಕೆ ಏಳಿರಿ ಎಂದು ವೃಷಭಾಂಕ ಮುನಿಗೆ ಹೇಳಲು
ಹಾಗೆಯೇ ಮಾಡುವೆವು ಎಂದು ಸ್ನಾನ ಮಾಡಲು ಉದ್ಯುಕ್ತನಾಗಿ
ದೇವಲೋಕದ್ದಕ್ಕೆ ಸಮಾನವಾದ ರತ್ನಮಯವಾದ ನೆಲೆಗಟ್ಟುಳ್ಳ ಕೆರೆಗೆ
ಹೋಗಿ ಸ್ನಾನ ಮಾಡಿದನು. ಆಗ ತನ್ನ ಬೆರಳಲ್ಲಿದ್ದ ಅಮೂಲ್ಯವಾದ
ಉಂಗುರ ಬಿದ್ದು ಹೋಗಲು ಅದನ್ನು ಹುಡುಕುವುದಕ್ಕಾಗಿ ಆ ಕೆರೆಯ
ಎದುರಿನ ತೂಬನ್ನು ತೆಗೆದು ನೀರನ್ನು ಬಿಟ್ಟನು. ಆಗ ಅಲ್ಲಿ ದೇವೇಂದ್ರನ
ಖಜಾನೆಯನ್ನೇ ತೆರೆವ ರೀತಿಯಲ್ಲಿ ಶ್ರೇಷ್ಠವಾದ ಬಗೆ ಬಗೆಯ ರತ್ನಗಳ
ವಿಚಿತ್ರವಾದ ಹಲವು ಆಭರಣಗಳನ್ನು ಕಂಡು ಆಶ್ಚರ್ಯಗೊಂಡನು.
ಉತ್ತರ: ವೃಷಭಾಂಕನು ಸುಕುಮಾರನನ್ನು ಭೇಟಿಯಾಗಿ
ಅವನನ್ನು ಅಪ್ಪಿಕೊಂಡು ಆನಂದ ಪಟ್ಟನು. ಶ್ರೇಷ್ಠವಾದ ಹಾಸಿಗೆಯ
ಮೇಲೆ ಕುಳ್ಳಿರಿಸಿದನು, ಸ್ವಜನರೂ ಹಾಗೂ ಸೇವಕರೂ
ಬಿಳಿಸಾಸಿವೆಯನ್ನು ಹಾಕಿದರು. ಮಂಗಳಕರವೆಂದು ಇಬ್ಬರಿಗೂ
ನದಿಶಾಕ್ಷತೆಯನ್ನು ಹಾಕಿದರು. ಆಗ ಬಿಳಿಸಾಸಿವೆಗಳ ಜೊತೆಗೆ
ಮಂrಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಗಳನ್ನು ಹಾಕಿದರು. ಆ
ಬಿಳಿ ಸಾಸುವೆ ಕಾಳುಗಳು ಸುಕುಮಾರ ಸ್ವಾಮಿಯ ಆಸನದಲ್ಲಿ
ಓದುದದಿಂದ ಸೊಂಟ ಅಲ್ಲಾಡಿಸಿದುದನ್ನೂದೀಪ ನೋಡಿದಾಗ ಕಣ್ಣೀರು
ಸುರಿಸಿದುದನ್ನು ಕಂಡು ಈತನಿಗೆ ವ್ಯಾಧಿ ಇದೆ ಎಂದು ತಿಳಿದನು.
ಉತ್ತರ: ಅರಸನು ಯಶೋಭದ್ರೆಯನ್ನು ಕಂಡು - ಅಮ್ಮ ನನ್ನ
ತಮ್ಮನಾದ ಸುಕುಮಾರನಿಗೆ ಸೊಂಟದ ರೋಗಕ್ಕೂ ಕಣ್ಣೀರು ಸುರಿಸು
ವುದಕ್ಕೂ ಊಟ ಸೇರದೆ ಇರುವುದಕ್ಕೂ ಏಕೆ ಔಷಧ ಮಾಡಿಸಿಲ್ಲವೆಂದು
ಕೇಳಿದನು. ಆಗ ಆಕೆ - ಒಡೆಯರೇ ಇವು ಅವನಿಗೆ ರೋಗಗಳಲ್ಲ.
ಮಂತ್ರಾಕ್ಷತೆಯಾಗಿ ಹಾಕಿದ ಬಳಿಸಾಸುವೆಗಳು ಒತ್ತಿರುವುದರಿಂದ
ಸಹಿಸದಾದನು, ಅಲ್ಲದೇ ಯಾವಾಗಲೂ ಮಾಣಿಕ್ಯ ರತ್ನದ ಬೆಳಕಿನಲ್ಲಿ
ಅವಳು ಇರುವುದರಿಂದ ದೀಪದ ಬೆಳಕಿಗೆ ಸಹಿಸಲಾರದೆ ಅವನು ಕಣ್ಣಿನಲ್ಲಿ
ನೀರು ಬರುತ್ತದೆ. ಅದೂ ಅಲ್ಲದೆ ನೀವು ಬಂದ ಸಂದರ್ಭದಲ್ಲಿ ತಾವರೆ
ಸೈದಿಲೆ ಹೂಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ
ಅಕ್ಕಿಯನ್ನು ಮಿಶ್ರ ಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು
ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು. ಉಳಿದ ಅನ್ನವನ್ನು
ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಗಳಾಗಿವೆ.
ಎಂದು ಹೇಳಿದಳು.
ಉತ್ತರ: ಜಂಬೂದ್ವೀಪದ ದಕ್ಷಿಣ ಭರತ ಭೂಮಿಯಲ್ಲಿ
ಅವಂತಿಯೆಂಬ ನಾಡಿದೆ. ಅಲ್ಲಿ ಉಚ್ಚನಿ ಎಂಬ ಪಟ್ಟಣದಲ್ಲಿ
ಇಂದ್ರದತ್ತನೆಂಬ ವರ್ತಕನಿದ್ದನು. ಅವನ ಹೆಂಡತಿ ಗುಣವತಿಯೆಂಬವಳು.
ಆ ಇಬ್ಬರಿಗೂ ಸೂರದತ್ತನೆಂಬ ಮಗನು ಜನಿಸಿದನು. ಅದಲ್ಲದೇ
ಆ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಹೊನ್ನುಳ್ಳ ಸುಭದ್ರನೆಂಬ ಸೆಟ್ಟಿ
ಇದನು. ಅವನ ಹೆಂಡತಿ ಸರ್ವಯಶಿಯೆಂಬವಳು. ಈ ಇಬ್ಬರಿಗೆ
ತ್ರಿವೇದಿಯಾಗಿದ್ದ ದೇವನ ಜೀವದಿಂದ ಯಶೋಭದ್ರೆಯೆಂಬ ಮಗಳು
ಜನಿಸಿದಳು. ಆ ಯಶೋಭದ್ರೆಯನ್ನು ಸೂರದತ್ತನಿಗೆ ಕೊಟ್ಟರು. ಆ
ಇಬ್ಬರಿಗೂ ನಾಗಶ್ರೀಯಾಗಿದ್ದದೇವನು ಬಂದು ಸುಕುಮಾರಸ್ವಾಮಿ
ಎಂಬ ಮಗನಾಗಿ ಹುಟ್ಟಿದನು. ಅವನು ಹುಟ್ಟಿದ ದಿನವೇ ವೈರಾಗ್ಯ
ಉಂಟಾಗಿ ಸೂರದತ್ತ ಶೆಟ್ಟಿಯು ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು
ವಹಿಸಿಕೊಟ್ಟು ತಪಸ್ಸಿಗೆ ತೆರಳಿದನು. ಸುಕುಮಾರಸ್ವಾಮಿಯು ಎಲ್ಲಾ
ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು.
ಮತ್ತೊಂದು ದಿನ ಜೋಯಿಸನು ಈ ರೀತಿಯಾಗಿ ಭವಿಷ್ಯವನ್ನು
ಹೇಳಿದನು. ಈ ಸುಕುಮಾರಸ್ವಾಮಿ ಯಾವಾಗ ಋಷಿಗಳ ರೂಪವನ್ನು
ಕಾಣುವನೋ ಅಂದೇ ತಪಸ್ಸಿಗೆ ತೆರಳುವನು. ಈ ಕಾರಣದಿಂದ
ಯಶೋಭದ್ರೆಯು ಮನೆಗೆ ಭದ್ರವಾದ ಕಾವಲನ್ನು ಇರಿಸಿದಳು. ಹಾಗೆಯೇ
ಕಾಲ ಕಳೆಯಿತು.
ಮತ್ತೊಂದು ದಿವಸ ರತ್ನದ್ವೀಪದಿಂದ ಒಬ್ಬ ವರ್ತಕನು ಲಕ್ಷ
ದೀವಾರ ಬೆಲೆಯುಳ್ಳ ರತ್ನಗಂಬಳಿಯನ್ನು ತೆಗೆದುಕೊಂಡು ಬಂದನು.
ಯಾರೂ ಕೊಳ್ಳದೇ ಇರಲು ಯಶೋಭದ್ರೆಯು ಅದನ್ನು ಲಕ್ಷ ದೀನಾರ
ಬೆಲೆಗೆ ಕೊಂಡುಕೊಂಡು ಅದನ್ನು ಮೂವತ್ತೆರಡು ತುಂಡು ಮಾಡಿ ತನ್ನ
ಸೊಸೆಯಂದಿರಿಗೆ ಹಂಚಿದಳು. ಅವರು ಆ ತುಂಡುಗಳನ್ನು ತಮ್ಮ
ಪಾದುಕೆಗಳಿಗೆ ಸಿಕ್ಕಿಸಿಕೊಂಡರು. ಈ ಸಂಗತಿಯನ್ನು ಕೇಳಿ ರಾಜ
ಆಶ್ಚರ್ಯಪಟ್ಟು, ಸುಕುಮಾರಸ್ವಾಮಿಯ ವೈಭವವನ್ನು ನೋಡಲು ಅವನ
ಮನೆಗೆ ಬರುತ್ತಿದ್ದನು. ಅವನ ಸುಕುಮಾರತೆಯನ್ನು ಕಂಡು ಬೆರಗಾಗಿ
ಅವನಿಗೆ ಆವಂತಿ ಸುಕುಮಾರನೆಂದು ಕರೆದನು.
ಉತ್ತರ: ತಾಯಿಯು - ನಮ್ಮನ್ನು ಆಳುವವರು ಬಂದಿದ್ದಾರೆ
ಎಂದು ಹೇಳಲು ಸುಕುಮಾರನು ನಮ್ಮನ್ನು ಆಳುವವರು ಇದ್ದಾರೆಯೇ
ಎಂದು ಆಶ್ಚರ್ಯಪಟ್ಟು ತಾಯಿಯ ಮಾತಿಗೆ ವಿಧೇಯನಾಗಿ ಬಂದನು.
ಅವನನ್ನು ರಾಜನು ಕಂಡು ಕಣ್ಣನ್ನು ಪಡೆದದ್ದು ಇಂದು ಸಫಲವಾಯಿತು
ಎಂದು ಬಿಳಿ ಸಾಸಿವೆಗಳನ್ನು ಮಂಗಳಕರವೆಂದು ಇಬ್ಬರಿಗೂ
ಮಂತ್ರಾಕ್ಷತೆಗಳನ್ನು ಹಾಕಿದಳು. ಆ ಬಿಳಿಸಾಸಿವೆ ಅವನೊಡನೆ ಹಾಸುಗೆಯ
ಮೇಲೆ ಕುಳಿತನು, ಸ್ವಜನರೂ ಸೇವಕರೂ ಬಿಳಿಸಾಸಿವೆಗಳನ್ನು
ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಗಳನ್ನು ಹಾಕಿದಳು. ಆ
ಬಿಳಿ ಸಾಸಿವೆ ಕಾಳುಗಳು ಸುಕುಮಾರ ಸ್ವಾಮಿಯ ಆಸನದಲ್ಲಿ
ಒತ್ತಿದುದರಿಂದ ಸೊಂಟ ಅಲ್ಲಾಡಿಸಿದುದನ್ನೂ ದೀಪ ನೋಡಿದಾಗ
ಕಣ್ಣೀರು ಸುರಿಸುವುದನ್ನೂ ಕಂಡು ಈತನಿಗೆ ರೋಗಗಳಿವೆಯೆಂದು
ಭಾವಿಸಿಕೊಂಡಿದ್ದನು.
- ಅರಸನು ಸ್ನಾನ ಮಾಡಿ ಬಂದು ಸುಕುಮಾರನೊಡನೆ ಊಟಕ್ಕೆ
ಕುಳಿತಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು.
ಇನ್ನುಳಿದ ಅರ್ಧಾಂಶದ ಆಹಾರವನ್ನು ಉಗುಳುತ್ತಿದ್ದನು. ಏಕೆಂದರೆ
ತಾವರೆ ನೈದಿಲೆಗಳ ಸುವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ
| ಅಕ್ಕಿಯನ್ನು ಮಿಶ್ರಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು
ಸುವಾಸನೆಯ ಅನ್ನವನ್ನು ಮಾತ್ರ ಸ್ವೀಕರಿಸಿ ಉಳಿದುದನ್ನು
ಉಗುಳುತ್ತಿದ್ದನು. ಇದು ರೋಗದ ಲಕ್ಷಣವೆಂದು ತಿಳಿದಿದ್ದ ರಾಜನಿಗೆ
ನಂತರ ಅವನ ಸುಕುಮಾರತೆಯ ಅರಿವಾಯಿತು.
ಪಾಠ: ಸುಕುಮಾರಸ್ವಾಮಿಯ ಕತೆ.
ಲೇಖಕರು : ಶಿವಕೋಟ್ಯಾಚಾರ್ಯ
ಆಕರ : ವಡ್ಡಾರಾಧನೆ
ಸಂದರ್ಭ ಸ್ವಾರಸ್ಯ: ಸುಕುಮಾರಸ್ವಾಮಿಯು ತಾರುಣ್ಯವನ್ನು
ಪಡೆದು ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ ಕಾಂತಿಯಿಂದ
ಕೂಡಿದವನಾದನು. ಅವನಿಗೆ ಮೂವತ್ತೆರಡು ಲತಾ ಗ್ರಹಗಳೂ ಅತ್ಯಂತ
ರೂಪ ಲಾವಣ್ಯ ಸೌಭಾಗ್ಯ, ಕಾಂತಿ, ಹಾವಭಾವ, ವಿಲಾಸ ವಿಭ್ರಮ
ಗಳಿಂದ ಕೂಡಿ ಸುಕುಮಾರಸ್ವಾಮಿಯು ಎಲ್ಲಾ ರೀತಿಯ ಸುಖ
ಗಳನ್ನು ಅನುಭವಿಸುತ್ತಿದ್ದನು. ಮತ್ತೊಂದು ದಿನ ಜೋಯಿಸನು ಈ
ರೀತಿಯಾಗಿ ಭವಿಷ್ಯವನ್ನು ಹೇಳಿದನು. ಈ ಸುಕುಮಾರಸ್ವಾಮಿ
ಯಾವಾಗ ಋಷಿಗಳ ರೂಪವನ್ನು ಕಾಣುವನೋ ಅಂದೇ ತಪಸ್ಸಿಗೆ
ತೆರಳುವನು.
ಪಾಠ : ಸುಕುಮಾರಸ್ವಾಮಿಯ ಕತೆ.
ಲೇಖಕರು : ಶಿವಕೋಟ್ಯಾಚಾರ್ಯ
ಆಕರ : ವಡ್ಡಾರಾಧನೆ
ಸಂದರ್ಭ ಸ್ವಾರಸ್ಯ: ಸ್ವಾಮಿ ಅವನು ಬಹಳ ಸಾಧು. ನೀವು
ಬಂದುದನ್ನು ಅವನು ತಿಳಿದಿಲ್ಲ. ಉಪ್ಪರಿಗೆಯ ಮೇಲೆ ಇದ್ದಾನೆ ಎಂದು
ಹೇಳಲು ದೂತರೊಡನೆ ಹೇಳಿ ಕಳುಹಿಸಿ ಅವನನ್ನು ಬರಮಾಡಿ
ಎಂದನು. ಆಗ ತಾಯಿ ಯಶೋಭದ್ರೆ ಹೋಗಿ ಮಗನೇ ರಾಜರು
ಬಂದಿದ್ದಾರೆ ಬಾ ಹೋಗೋಣ, ಆಗ ಸುಕುಮಾರನು ರಾಜರು ಎಂದರೆ
- ಯಾರು? ಎಂದು ಕೇಳಲು ತಾಯಿಯು ನಮ್ಮನ್ನು ಅಳುವವರು ಎಂದಾಗ
ಕುಮಾರನು ನಮ್ಮನ್ನು ಆಳುವವರೂ ಇದ್ದಾರೆಯೇ? ಎಂದು
ಆಶ್ಚಯಪಟ್ಟನು.
ಪಾಠ : ಸುಕುಮಾರಸ್ವಾಮಿಯ ಕತೆ.
ಲೇಖಕರು : ಶಿವಕೋಟ್ಯಾಚಾರ್ಯ
ಆಕರ : ವಡ್ಡಾರಾಧನೆ
ಸಂದರ್ಭ ಸ್ವಾರಸ್ಯ; ಅಷ್ಟರಲ್ಲಿ ರಾಜನನ್ನೂ ಸುಕುಮಾರನನ್ನೂ
ಊಟಕ್ಕೆ ಬನ್ನಿರಿ ಎಂದು ಕರೆಯಲು ರಾಜನು ಸುಕುಮಾರನೊಂದಿಗೆ
ಊಟದ ತಟ್ಟೆಯ ಮುಂದೆ ಕುಳಿತುಕೊಂಡು ಹಲವು ವಿಧದ
ಸವಿಯಾದ ಆಹಾರವನ್ನು ಉಣ್ಣುತ್ತ ಇರಲು, ಸುಕುಮಾರಸ್ವಾಮಿಯು
ಆಹಾರದ ಅರ್ಧಾಂಶವನ್ನು ನುಂಗುತ್ತಿದ್ದನು. ಇನ್ನುಳಿದ ಅರ್ಧಾಂಶ
ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ, ಇದು
ಒಂದು ಬಗೆಯ ರೋಗ. ಊಟದ ಮೇಲೆ ರುಚಿಯಿಲ್ಲದುದು ಎಂದು
ಭಾವಿಸಿಕೊಂಡನು.
ಪಾಠ : ಸುಕುಮಾರಸ್ವಾಮಿಯ ಕತೆ.
ಲೇಖಕರು : ಶಿವಕೋಟ್ಯಾಚಾರ್ಯ
ಆಕರ : ವಡ್ಡಾರಾಧನೆ
ಸಂದರ್ಭ ಸ್ವಾರಸ್ಯ: ಸುಕುಮಾರನಿಗೆ ಸೇವಕರು ಹಾಕಿದಂತಹ
ಬಿಳಿಯ ಸಾಸುವೆ ಮತ್ತು ಮಂತ್ರಾಕ್ಷತೆಗಳು ನಡುವಿಗೆ ನಡುತ್ತಿರಲೂ
ಯಾತನೆ ಅನುಭವಿಸುತ್ತಿದ್ದನು. ದೀಪವನ್ನು ನೋಡಿದೊಡನೆಯೇ
ಅವನಿಗೆ ಕಣ್ಣೀರು ಬರುತ್ತಿತ್ತು. ಉಣ್ಣುವಾಗ ಅರ್ಧ ತುತ್ತನ್ನು ನುಂಗಿ
ಇನ್ನರ್ಧವನ್ನು ಉಗುಳುತ್ತಿದ್ದನು. ಇದನ್ನು ನೋಡಿ ಬೇನೆಯಿರಬೇಕೆಂದು
ಭಾವಿಸಿದ ಅರಸನಿಗೆ ಆತನ ಸೌಕುಮಾರ್ಯದ ವಿಷಯ ನಂತರ
ತಿಳಿದಾಗ ಅವನು ಆಶ್ಚರ್ಯದಿಂದ ಅವನಿಗೆ ಅವಂತಿ ಸುಕುಮಾರನೆಂದು
ಹೆಸರಿಟ್ಟನು.