ಲೋಹಗಳು ಶುದ್ಧ ಸ್ಥಿತಿಯಲ್ಲಿ ಹೊಳಪಾದ ಮೇಲ್ಮೈಯನ್ನು ಹೊಂದಿರುತ್ತದೆ ಇದನ್ನು ಲೋಹಿಯ ಕಾಂತಿ ಅಥವಾ ಹೊಳಪು ಎನ್ನುವರು
ಕುಟ್ಯತೆ ಎಂದರೇನು
ಕೆಲವು ಲೋಹಗಳನ್ನು ಕುಟ್ಟಿ ತೆಳುವಾದ ಹಾಳೆಯನ್ನಾಗಿ ಮಾಡಬಹುದು ಈ ಗುಣವನ್ನು
ಕುಟ್ಯತೆ ಎನ್ನುವರು
ಅತಿ ಹೆಚ್ಚು ಕುಟ್ಯತೆ ಗುಣವನ್ನು ಹೊಂದಿರುವ ಲೋಹಗಳು ಯಾವುವು
ಚಿನ್ನ ಮತ್ತು ಬೆಳ್ಳಿ
ತನ್ಯತೆ ಎಂದರೇನು
ಲೋಹಗಳನ್ನು ತೆಳುವಾದ ತಂತಿಗಳನ್ನು ಆಗಿ ಎಳೆಯಬಹುದು ಈ ಸಾಮರ್ಥ್ಯವನ್ನು ತನ್ಯತೆ ಎನ್ನುವರು
ಅತಿ ಹೆಚ್ಚಿನ ತನ್ಯತೆ ಹೊಂದಿರುವ ಲೋಹ ಯಾವುದು
ಚಿನ್ನ
1 ಗ್ರಾಂ ಚಿನ್ನವನ್ನು ಎಷ್ಟು ಉದ್ದ ತಂತಿಯ ನ್ನಾಗಿ ಎಳೆಯಬಹುದು
2km ಉದ್ದದ ತಂತಿ
ಯಾವ ಲೋಹಗಳು ಉಷ್ಣದ ಅತ್ಯುತ್ತಮ ವಾಹಕಗಳು
ಬೆಳ್ಳಿ ಮತ್ತು ತಾಮ್ರ
ಯಾವ ಲೋಹಗಳು ಉಷ್ಣದ ದುರ್ಬಲ ವಾಹಕ ಗಳು
ಸೀಸ ಮತ್ತು ಪಾದರಸ
ಶಾಬ್ದನ ಎಂದರೇನು
ಗಟ್ಟಿಯಾದ ಮೇಲ್ಮೈಗೆ ಲೋಹಗಳನ್ನು ಬಡಿದಾಗ ಶಬ್ದವನ್ನು ಉಂಟು ಮಾಡುತ್ತದೆ ಈ ಗುಣವನ್ನು ಶಾಬ್ದನ ಎನ್ನುವರು
ಶಾಲಾ ಗಂಟೆಗಳನ್ನು ಲೋಹಗಳಿಂದ ಏಕೆ ಮಾಡಿರುತ್ತಾರೆ
ಏಕೆಂದರೆ ಲೋಹಗಳಿಗೆ ಶಾಬ್ದನ ಗುಣವಿದೆ
ಲೋಹದ ಗುಣಗಳನ್ನು ಪಟ್ಟಿ ಮಾಡಿ
- ಲೋಹಗಳು ಗಟ್ಟಿಯಾಗಿರುತ್ತವೆ
- ಲೋಹಗಳು ಹೊಳಪುಳ್ಳ ಮೇಲ್ಮೈಯನ್ನು ಹೊಂದಿರುತ್ತವೆ
- ಲೋಹಗಳಿಗೆ ಕುಟ್ಯತೆ ಮತ್ತು ತನ್ಯತೆ ಗುಣಗಳಿವೆ
- ಲೋಗಳು ಉಷ್ಣ ಮತ್ತು ವಿದ್ಯುತ್ತಿನ ಉತ್ತಮ ವಾಹಕಗಳು
- ಲೋಹಗಳು ಶಾಬ್ದನ ಗುಣವನ್ನು ಹೊಂದಿರುತ್ತದೆ
ಲೋಹ ಮತ್ತು ಅಲೋಹಗಳ ಭೌತ ಗುಣಗಳ ಆಧಾರದ ಮೇಲೆ ಇರುವಂತಹ ಅಪವಾದಗಳು ಯಾವುವು
- ಲೋಹಗಳು ಸಾಮಾನ್ಯ ಕೊಠಡಿಯ ಉಷ್ಣತೆಯಲ್ಲಿ ಗಣ ರೂಪದಲ್ಲಿರುತ್ತವೆ ಆದರೆ ಪಾದರಸವು ದ್ರವ ಸ್ಥಿತಿಯಲ್ಲಿರುತ್ತವೆ
- ಲೋಹಗಳು ಸಾಮಾನ್ಯವಾಗಿ ಹೆಚ್ಚಿನ ಕರಗುವ ಬಿಂದು ಗಳನ್ನು ಹೊಂದಿವೆ ಆದರೆ ಗ್ಯಾಲಿಯಂ ಮತ್ತು ಸಿಸಿಯಂ ಕಡಿಮೆ ಕರಗುವ ಬಿಂದು ಗಳನ್ನು ಹೊಂದಿವೆ
- ಅಯೋಡಿನ್ ಒಂದು ಅಲೋಹ ಆದರೂ ಹೊಳೆಯುತ್ತದೆ
- ವಜ್ರವು ಇಂಗಾಲದ ಒಂದು ಬಹುರೂಪ ಇದು ಒಂದು ಅಲೋಹ ಆದರೂ ಇದು ನೈಸರ್ಗಿಕವಾಗಿ ದೊರೆಯುವ ಅತ್ಯಂತ ಕಠಿಣವಾದ ವಸ್ತು ಮತ್ತು ಮತ್ತು ಹೆಚ್ಚಿನ ಕುದಿಯುವ ಬಿಂದುವನ್ನು ಹೊಂದಿದೆ
- ಗ್ರಾಫೈಟ್ ಇದು ಇಂಗಾಲದ ಬಹುರೂಪ ಇದೊಂದು ಅಲೋಹ ಆದರೂ ವಿದ್ಯುತ್ ವಾಹಕ
- ಕ್ಷಾರ ಲೋಹಗಳು ಆದ ಲಿಥಿಯಂ, ಸೋಡಿಯಂ, ಪೊಟ್ಯಾಶಿಯಂ ತುಂಬಾ ಮೃದುವಾಗಿರುತ್ತದೆ ಇವು ಕಡಿಮೆ ಸಾಂದ್ರತೆ ಮತ್ತು ಕಡಿಮೆ ಕರಗುವ ಬಿಂದು ಗಳನ್ನು ಹೊಂದಿವೆ
............... ಮತ್ತು................. ಹಸ್ತದ ಮೇಲೆ ಇಟ್ಟುಕೊಂಡರು ಕರಗುವ ಲೋಹಗಳು
ಗ್ಯಾಲಿಯಂ ಮತ್ತು ಸಿಸಿಯಂ
ಕ್ಷಾರ ಲೋಹಗಳು ಉದಾಹರಣೆ ಕೊಡಿ
ಲಿಥಿಯಂ, ಸೋಡಿಯಂ, ಪೊಟ್ಯಾಶಿಯಂ
ದ್ರವ ರೂಪದ ಲೋಹವನ್ನು ಹೆಸರಿಸಿ
ಪಾದರಸ
ಲೋಹಗಳ ರಾಸಾಯನಿಕ ಗುಣಗಳನ್ನು ಹೇಗೆ ತಿಳಿಯುವುದು
ಲೋಹಗಳು ಗಾಳಿ, ನೀರು, ಇತರ ಆಮ್ಲಗಳು ಹಾಗೂ ಲೋಹಿಯ ದ್ರಾವಣಗಳೊಂದಿಗೆ ಹೇಗೆ ಪ್ರತಿವರ್ತಿಸುತ್ತವೆ ಎಂಬುದರ ಆಧಾರದ ಮೇಲೆ ಲೋಹಗಳ ಗುಣಗಳನ್ನು ತಿಳಿಯಬಹುದು
ಲೋಹಗಳು ಗಾಳಿಯಲ್ಲಿ ಉರಿಸಿದಾಗ ಹೇಗೆ ಪ್ರತಿವರ್ತಿಸುತ್ತವೆ
ಲೋಹಗಳನ್ನು ಗಾಳಿಯಲ್ಲಿ ಉರಿಸಿದಾಗ ಗಾಳಿಯಲ್ಲಿರುವ ಆಕ್ಸಿಜನ್ ನೊಂದಿಗೆ ಪ್ರತಿ ವರ್ತಿಸಿ ಲೋಹದ ಆಕ್ಸೈಡ್ ಕೊಡುತ್ತವೆ
ಲೋಹ ಮತ್ತು ಗಾಳಿಯ ನಡುವಿನ ರಾಸಾಯನಿಕ ಕ್ರಿಯೆಯನ್ನು ಸಾಮಾನ್ಯ ರೂಪದಲ್ಲಿ ಬರೆಯಿರಿ
ಲೋಹ + ಆಕ್ಸಿಜನ್ ------ > ಲೋಹದ ಆಕ್ಸೈಡ್
ತಾಮ್ರವು ಗಾಳಿಯೊಂದಿಗೆ ಹೇಗೆ ಪ್ರತಿ ವರ್ತಿಸುತ್ತದೆ
ತಾಮ್ರವನ್ನು ಗಾಳಿಯಲ್ಲಿ ಕಾಯಿಸಿದಾಗ ಆಕ್ಸಿಜನ್ ನ ಜೊತೆ ಸೇರಿ ತಾಮ್ರದ ಆಕ್ಸೈಡ್ ಆಗುತ್ತದೆ
ತಾಮ್ರ + ಆಕ್ಸಿಜನ್ ------- > ತಾಮ್ರದ ಆಕ್ಸೈಡ್
2Cu + O2 --------------> 2CuO
ಗಾಳಿ ಮತ್ತು ಅಲ್ಯೂಮಿನಿಯಂ ನಡುವಿನ ರಾಸಾಯನಿಕ ಕ್ರಿಯೆ ಯನ್ನು ತಿಳಿಸಿ
ಅಲ್ಯೂಮಿನಿಯಂ ಅನ್ನು ಗಾಳಿಯಲ್ಲಿ ಕಾಯಿಸಿದಾಗ ಅದು ಗಾಳಿಯಲ್ಲಿರುವ ಆಕ್ಸಿಜನ್ ನೊಂದಿಗೆ ಪ್ರತಿವರ್ತಿಸಿ ಅಲ್ಯೂಮಿನಿಯಂ ಆಕ್ಸೈಡನ್ನು ಉಂಟು ಮಾಡುತ್ತದೆ
4Al + 3O2 ---------->2Al2O3
ಉಭಯಧರ್ಮಿ ಆಕ್ಸೈಡ್ ಗಳು ಎಂದರೇನು
ಕೆಲವು ಲೋಹದ ಆಕ್ಸೈಡ್ ಗಳು ಆಮ್ಲ ಮತ್ತು ಪ್ರತ್ಯಾಮ್ಲಗಳು ಎರಡರ ಜೊತೆ ಪ್ರತಿ ವರ್ತಿಸುತ್ತವೆ ಹಾಗೂ ಲವಣ ಮತ್ತು ನೀರನ್ನು ಉತ್ಪತ್ತಿಮಾಡುತ್ತವೆ ಇವುಗಳಿಗೆ ಉಭಯ ಧರ್ಮಿ ಆಕ್ಸೈಡ್ಗಳು ಎನ್ನುವರು
ಉಭಯ ಧರ್ಮಿ ಆಕ್ಸೈಡ್ ಗಳಿಗೆ ಉದಾಹರಣೆ ಕೊಡಿ
ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್
ಉದಾಹರಣೆಯೊಂದಿಗೆ ಉಭಯ ಧರ್ಮಿ ಆಕ್ಸೈಡ್ಗಳು ಮತ್ತು ಆಮ್ಲ ಪ್ರತ್ಯಾಮ್ಲಗಳ ನಡುವಿನ ರಾಸಾಯನಿಕ ಕ್ರಿಯೆಯನ್ನು ವಿವರಿಸಿ
- ಉಭಯ ಧರ್ಮಿ ಆಕ್ಸೈಡ್ಗಳು ಆಮ್ಲ ಮತ್ತು ಪ್ರತ್ಯಾಮ್ಲಗಳ ಜೊತೆ ವರ್ತಿಸಿದಾಗ ಲವಣ ಮತ್ತು ನೀರನ್ನು ಉತ್ಪತ್ತಿಮಾಡುತ್ತವೆ
- ಉದಾಹರಣೆಗೆ ಅಲ್ಯೂಮಿನಿಯಂ ಆಕ್ಸೈಡ್ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಮತ್ತು ಪ್ರತ್ಯಾಮ್ಲ ದೊಂದಿಗೆ ವರ್ತಿಸಿ ನೀರು ಮತ್ತು ಲವಣವನ್ನು ಉತ್ಪತ್ತಿ ಮಾಡುತ್ತದೆ
ಸಮೀಕರಣ
Reaction with acid :
Al2O3 + 6HCl -----------> 2AlCl3 + 3H2O
Reaction with base :
Al2O3 + 2NaOH -------------> 2NaAlO2 + H2O
ಲೋಹದ ಆಕ್ಸೈಡ್ಗಳು ನೀರಿನಲ್ಲಿ ಹೇಗೆ ವರ್ತಿಸುತ್ತದೆ
ಹೆಚ್ಚಿನ ಲೋಹದ ಆಕ್ಸೈಡ್ಗಳು ನೀರಿನಲ್ಲಿ ಕರಗುವುದಿಲ್ಲ ಆದರೆ ಕೆಲವು ನೀರಿನಲ್ಲಿ ಕರಗಿ ಕ್ಷಾರ ಗಳನ್ನು ಉಂಟು ಮಾಡುತ್ತದೆ
ಸೋಡಿಯಂ ಆಕ್ಸೈಡ್ ಮತ್ತು ಪೊಟ್ಯಾಷಿಯಂ ಆಕ್ಸೈಡ್ಗಳು ನೀರಿನಲ್ಲಿ ಕರಗಿ ಅವುಗಳ ಕ್ಷಾರ ಗಳನ್ನು ಉಂಟುಮಾಡುತ್ತದೆ
Sodium oxide reacts with water
Na2O + H2O ---------> 2NaOH
Potassium oxide reacts with water
K2O + H2O ------------> 2KOH
ಆನೋಡೀಕರಣ ಎಂದರೇನು
ಲೋಹಗಳ ಮೇಲೆ ದಪ್ಪ ಆಕ್ಸೈಡ್ ಪದರನ್ನು ಉಂಟುಮಾಡುವ ಕ್ರಿಯೆಗೆ ಆನೋಡೀಕರಣ ಎನ್ನುವರು
ಆನೋಡೀಕರಣದ ಮಹತ್ವವೇನು
- ಆನೋಡಿಕರಣದಿಂದ ಲೋಹಗಳ ಮೇಲೆ ದಪ್ಪವಾದ ಆಕ್ಸೈಡ್ ಪದರನ್ನು ಉಂಟುಮಾಡಲಾಗುತ್ತದೆ
- ಈ ಆಕ್ಸೈಡ್ ಪದರು ಲೋಹಗಳು ಮತ್ತು ಆಕ್ಸಿಜನ್ ನಡುವಿನ ವರ್ತನೆಯನ್ನು ಕಡಿಮೆಗೊಳಿಸುತ್ತದೆ ಅಥವಾ ಉತ್ಕರ್ಷಣ ಕ್ರಿಯೆಯನ್ನು ಕಡಿಮೆಗೊಳಿಸುತ್ತವೆ
ಇದರಿಂದ ತುಕ್ಕು ಹಿಡಿಯುವುದನ್ನು ತಡೆಗಟ್ಟಬಹುದು
ಲೋಹಗಳು ಮತ್ತು ನೀರಿನ ನಡುವಿನ ಪ್ರತಿ ವರ್ತನೆಯ ರಾಸಾಯನಿಕ ಕ್ರಿಯೆಯನ್ನು ಬರೆಯಿರಿ
ಲೋಹಗಳು ನೀರಿನೊಂದಿಗೆ ಪ್ರತಿ ವರ್ತಿಸಿದಾಗ ಲೋಹದ ಆಕ್ಸೈಡ್ ಮತ್ತು ಹೈಡ್ರೋಜನ್ ಅನಿಲ ವನ್ನು ಬಿಡುಗಡೆ ಮಾಡುತ್ತದೆ
ಈ ಲೋಹದ ಅಕ್ಷರಗಳು ಪುನಹ ನೀರಿನಲ್ಲಿ ಕರಗಿ ಲೋಹದ ಹೈಡ್ರಾಕ್ಸೈಡ್ ಗಳಾಗುತ್ತವೆ
ಲೋಹ ಮತ್ತು ನೀರಿನ ಪ್ರತಿವರ್ತನೆಯನ್ನು ಸಾಮಾನ್ಯ ರಾಸಾಯನಿಕ ರೂಪದಲ್ಲಿ ಬರೆಯಿರಿ
ಲೋಹ + ನೀರು ------- > ಲೋಹದ ಆಕ್ಸೈಡ್ + ಹೈಡ್ರೋಜನ್
ಲೋಹದ ಆಕ್ಸೈಡ್ + ನೀರು -------- > ಲೋಹದ ಹೈಡ್ರಾಕ್ಸೈಡ್
ಪೊಟಾಸಿಯಂ ಮತ್ತು ಸೋಡಿಯಂ ನೀರಿನೊಂದಿಗೆ ಹೇಗೆ ವರ್ತಿಸುತ್ತವೆ
- ಪೊಟ್ಯಾಶಿಯಂ ಮತ್ತು ಸೋಡಿಯಂ ಲೋಹಗಳು ನೀರಿನೊಂದಿಗೆ ಅತ್ಯಂತ ರಭಸವಾಗಿ ಪ್ರತಿ ವರ್ತಿಸುತ್ತವೆ ಹಾಗೂ ಅಲ್ಲಿ ಹೈಡ್ರೋಜನ್ ಮತ್ತು ಉಷ್ಣ ಶಕ್ತಿಯು ಬಿಡುಗಡೆಯಾಗುತ್ತವೆ ಜೊತೆಗೆ ಹೈಡ್ರಾಕ್ಸೈಡ್ ಅನ್ನು ಉತ್ಪತ್ತಿ ಮಾಡುತ್ತವೆ
- ಇದೊಂದು ಬಹಿರುಷ್ಣಕ ವಾಗಿರುತ್ತದೆ
2K + 2H2O -----------> 2KOH + H2 + Heat energy
2Na + 2H2O ----------> 2NaOH + H2 + Heat energy
ನೀರಿನೊಂದಿಗೆ ಕ್ಯಾಲ್ಸಿಯಂ ನ ಪ್ರತಿ ವರ್ತನೆ ಯನ್ನು ವಿವರಿಸಿ
- ನೀರಿನೊಂದಿಗೆ ಕ್ಯಾಲ್ಸಿಯಂ ಪ್ರತಿ ವರ್ತನೆಯ ತೀವ್ರತೆ ಕಡಿಮೆ
- ಇಲ್ಲಿ ಬಿಡುಗಡೆಯಾಗುವ ಉಷ್ಣವು ಹೈಡ್ರೋಜನ್ ನನ್ನು ಹೊತ್ತಿಕೊಳ್ಳಲು ಸಾಕಾಗುವುದಿಲ್ಲ
- ಹೈಡ್ರೋಜನ್ ಅನಿಲದ ಗುಳ್ಳೆಗಳು ಲೋಹದ ಮೇಲ್ಮೆಗೆ ಅಂಟಿಕೊಂಡಿರುತ್ತವೆ ಹಾಗಾಗಿ ಕ್ಯಾಲ್ಸಿಯಂ ನೀರಿನ ಮೇಲೆ ತೇಲಲು ಆರಂಭಿಸುತ್ತದೆ
Ca + 2H2O ----------> Ca(OH)2 + H2
ನೀರಿನ ಜೊತೆಗೆ ಅಲ್ಯೂಮಿನಿಯಂ, ಸತು ಹಾಗೂ ಕಬ್ಬಿಣದ ಲೋಹಗಳ ಪ್ರತಿ ವರ್ತನೆ ಯನ್ನು ವಿವರಿಸಿ
- ಅಲ್ಯೂಮಿನಿಯಂ, ಕಬ್ಬಿಣ ಮತ್ತು ಸತುವಿನಂತಹ ಲೋಹಗಳು ತನ್ನ ನೆಯ ಅಥವಾ ಬಿಸಿ ನೀರಿನ ಜೊತೆ ಪ್ರತಿ ವರ್ತಿಸುವುದಿಲ್ಲ
- ಆದರೆ ಹಬೆಯ ಜೊತೆ ಪ್ರತಿ ವರ್ತಿಸಿ ಲೋಹದ ಆಕ್ಸೈಡ್ ಮತ್ತು ಹೈಡ್ರೋಜನ್ ನನ್ನು ಉಂಟು ಮಾಡುತ್ತದೆ
2Al + 3H2O -----------> Al2O3 + 3H2
3Fe + 4H2O ----------> Fe3O4 + 4H2
ನೀರಿನೊಂದಿಗೆ ಪ್ರತಿ ವರ್ತಿಸದೆ ಇರುವ ಲೋಹಗಳು ಯಾವುವು
ಸೀಸ, ತಾಮ್ರ, ಬೆಳ್ಳಿ, ಚಿನ್ನ
ಲೋಹಗಳು ಮತ್ತು ಆಮ್ಲಗಳು ಹೇಗೆ ಪ್ರತಿ ವರ್ತಿಸುತ್ತವೆ
ಲೋಹಗಳು ಮತ್ತು ಆಮ್ಲಗಳು ಪ್ರತಿ ವರ್ತಿಸಿದಾಗ ಲವಣ ಮತ್ತು ಹೈಡ್ರೋಜನ್ ಅನ್ನು ಉತ್ಪತ್ತಿ ಮಾಡುತ್ತದೆ
ಲೋಹಗಳು ಮತ್ತು ಆಮ್ಲಗಳ ಪ್ರತಿ ವರ್ತನೆಯ ರಾಸಾಯನಿಕವಾಗಿ ಸಾಮಾನ್ಯ ರೂಪವನ್ನು ಬರೆಯಿರಿ
ಲೋಹ + ಆಮ್ಲ ------- > ಲವಣ .....ಹೈಡ್ರೋಜನ್
ಲೋಹವು ನೈಟ್ರಿಕ್ ಆಮ್ಲದ ಜೊತೆ ವರ್ತಿಸಿದಾಗ ಹೈಡ್ರೋಜನ್ ಅನಿಲ ಬಿಡುಗಡೆಯಾಗುವುದಿಲ್ಲ ಏಕೆ
- ನೈಟ್ರಿಕ್ ಆಮ್ಲ ವು ಪ್ರಬಲ ಉತ್ಕರ್ಷಕ
- ಇದು ಉತ್ಪತ್ತಿಯಾದ ಹೈಡ್ರೋಜನ್ ಅನ್ನು ಉತ್ಕರ್ಷಿಸಿ ನೀರನ್ನು ಉತ್ಪತ್ತಿ ಮಾಡುತ್ತದೆ ಮತ್ತು ಸ್ವತಃ ಯಾವುದಾದರೊಂದು ನೈಟ್ರೋಜನ್ ಆಕ್ಸೈಡ್ ಆಗಿ ಅಪಕರ್ಷಣೆ ಹೊಂದುತ್ತದೆ ಆದ್ದರಿಂದ ಹೈಡ್ರೋಜನ್ ಅನಿಲ ಬಿಡುಗಡೆ ಆಗುವುದಿಲ್ಲ
ರಾಜ ದ್ರವ ಎಂದರೇನು
ರಾಜ ದ್ರವ ಎಂಬುದು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರಬಲ ನೈಟ್ರಿಕ್ ಆಮ್ಲಗಳು 3 : 1 ರ ತಾಜ ಮಿಶ್ರಣ
ರಾಜ ದ್ರವ ದ ಗುಣಗಳೇನು
- ರಾಜ ದ್ರವ ತನ್ನಲ್ಲಿ ಚಿನ್ನ ಮತ್ತು ಪ್ಲಾಟಿನಂಗಳನ್ನು ಕರಗಿಸಿಕೊಳ್ಳುವ ಗುಣವನ್ನು ಹೊಂದಿದೆ
- ಇದು ತೀವ್ರ ನಾಶಕ ಗುಣವನ್ನು ಹೊಂದಿದೆ
- ಇದು ಹೊಗೆಯಾಡುವ ದ್ರವ
ಲೋಹಿಯ ಲವಣ ದ್ರಾವಣಗಳೊಂದಿಗೆ ಲೋಹಗಳ ಪ್ರತಿ ವರ್ತನೆ ಯನ್ನು ತಿಳಿಸಿ
ಲೋಹಗಳು ಲೋಹಿಯಾ ಲವಣ ದ್ರಾವಣಗಳೊಂದಿಗೆ ಪ್ರತಿ ವರ್ತಿಸಿದಾಗ ಅತ್ಯಂತ ಹೆಚ್ಚು ಕ್ರಿಯಾಶೀಲ ಧಾತುವು ಕಡಿಮೆ ಕ್ರಿಯಾಶೀಲ ಧಾತುವನ್ನು ಸ್ಥಾನಪಲ್ಲಟ ಗೊಳಿಸುತ್ತದೆ
ಸಮೀಕರಣ ಬರೆ ಲೋಹ A + ಲೋಹ B ಲವಣ --------> ಲೋಹ A ಲವಣ + ಲೋಹ B
ಇಲ್ಲಿ ಲೋಹ A, ಲೋಹ B ಲವಣ ದ್ರಾವಣದಿಂದ ಲವಣವನ್ನು ಮತ್ತು ಲೋಹವನ್ನು ಸ್ಥಾನಪಲ್ಲಟ ಗೊಳಿಸುತ್ತಿದೆ
ಲೋಹಗಳು ಅಲೋಹಗಳೊಂದಿಗೆ ಹೇಗೆ ಪ್ರತಿ ವರ್ತಿಸುತ್ತವೆ
- ಲೋಹಗಳು ಮತ್ತು ಅಲೋಹಗಳ ನಡುವಿನ ಪ್ರತಿ ವರ್ತನೆ ಯು ಅವುಗಳಲ್ಲಿರುವ ಎಲೆಕ್ಟ್ರಾನ್ ಗಳ ವಿನಿಮಯದ ಮೇಲೆ ಅವಲಂಬಿತವಾಗಿರುತ್ತದೆ
- ಉದಾಹರಣೆಗೆ ಸೋಡಿಯಂ ಕ್ಲೋರೈಡ್ ಅನ್ನು ತೆಗೆದುಕೊಂಡಾಗ
- ಸೋಡಿಯಂ ಕ್ಲೋರೈಡ್ ನಲ್ಲಿ ಸೋಡಿಯಂ ಲೋಹ ಮತ್ತು ಕ್ಲೋರಿನ್ ಅಲೋಹ
- ಸೋಡಿಯಂ ನ ಪರಮಾಣು ಸಂಖ್ಯೆ 11
- ಕ್ಲೋರಿನ್ ಪರಮಾಣು ಸಂಖ್ಯೆ 17
- ಸೋಡಿಯಂನ ಕವಚ ಗಳಲ್ಲಿ 2 8 1 ಎಲೆಕ್ಟ್ರಾನ್ ಗಳನ್ನ ತುಂಬಿಸಬಹುದು
- ಹಾಗೆಯೇ ಕ್ಲೋರಿನ್ ಕವಚದಲ್ಲಿ 2 8 7 ಎಲೆಕ್ಟ್ರಾನುಗಳನ್ನು ತುಂಬಿಸಬಹುದು
- ಅಷ್ಟಕ ಎಲೆಕ್ಟ್ರಾನಿಕ್ ವಿನ್ಯಾಸವನ್ನು ಪೂರ್ಣಗೊಳಿಸುವುದಕ್ಕೆ ಸೋಡಿಯಂ ತನ್ನ ಹೊರ ಕವಚದಲ್ಲಿರುವ ಒಂದು ಎಲೆಕ್ಟ್ರಾನ್ ಅನ್ನು ಕ್ಲೋರಿನ್ ಗೆ ಬಿಟ್ಟುಕೊಡುತ್ತದೆ
- ಹಾಗಾಗಿ ಸೋಡಿಯಂ ಧನವಿದ್ಯುದಾಂಶವನ್ನು ಕ್ಲೋರಿನ್ ಋಣ ವಿದ್ಯುದಾವೇಶವನ್ನು ಹೊಂದುತ್ತದೆ ಮತ್ತು ಸೋಡಿಯಂ ಕ್ಲೋರೈಡ್ ಆಗಿ ಪರಿವರ್ತನೆ ಹೊಂದುತ್ತದೆ
ಅಯಾನಿಕ್ ಸಂಯುಕ್ತಗಳ ಗುಣಗಳನ್ನು ಬರೆಯಿರಿ
- ಅಯಾನಿಕ್ ಸಂಯುಕ್ತಗಳು ಘಣ ವಸ್ತುಗಳಾಗಿದ್ದು ಅವುಗಳು ಸ್ವಲ್ಪ ಮಟ್ಟಿಗೆ ಕಠಿಣವಾಗಿರುತ್ತದೆ
- ಅಯಾನಿಕ್ ಸಂಯುಕ್ತಗಳು ಹೆಚ್ಚಿನ ಕುದಿಯುವ ಬಿಂದು ಮತ್ತು ಕರಗುವ ಬಿಂದುವನ್ನು ಹೊಂದಿದೆ
- ಅಯಾನಿಕ್ ಸಂಯುಕ್ತಗಳು ಸಾಮಾನ್ಯವಾಗಿ ನೀರಿನಲ್ಲಿ ವಿಲೀನವಾಗುತ್ತವೆ ಮತ್ತು ಸಾವಯವ ದ್ರಾವಣ ಗಳಾದ ಸೀಮೆಯನ್ನು ಪೆಟ್ರೋಲ್ ಇತ್ಯಾದಿಗಳಲ್ಲಿ ಆಗುವುದಿಲ್ಲ
- ಘನ ಸ್ಥಿತಿಯಲ್ಲಿ ಅಯಾನಿಕ್ ಸಂಯುಕ್ತಗಳು ವಿದ್ಯುತ್ತನ್ನು ತಮ್ಮ ಮೂಲಕ ಹರಿಯಲು ಬಿಡುವುದಿಲ್ಲ ಆದರೆ ದ್ರವಿಸಿ ದ ಸ್ಥಿತಿಯಲ್ಲಿ ಅಯಾನಿಕ್ ಸಂಯುಕ್ತಗಳು ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುತ್ತದೆ
ಅಯಾನಿಕ್ ಸಂಯುಕ್ತಗಳು ಕಠಿಣವಾಗಿ ಇರಲು ಕಾರಣವೇನು
ಅಯಾನಿಕ್ ಸಂಯುಕ್ತಗಳು ಧನ ಮತ್ತು ಋಣ ಅಣುಗಳ ನಡುವೆ ಇರುವ ಪ್ರಬಲ ಆಕರ್ಷಣ ಬಲದಿಂದಾಗಿ ಕಠಿಣವಾಗಿರುತ್ತದೆ
ಅಯಾನಿಕ್ ಸಂಯುಕ್ತಗಳು ಹೆಚ್ಚಿನ ಕುದಿಯುವ ಬಿಂದು ಮತ್ತು ಕರಗುವ ಬಿಂದು ಒಂದು ಇರಲು ಕಾರಣವೇನು
ಅಯಾನಿಕ್ ಸಂಯುಕ್ತಗಳ ಅಣುಗಳ ನಡುವಿನ ಪ್ರಬಲ ಅಯಾನಿಕ್ ಬಂಧ
ಅಯಾನಿಕ್ ಸಂಯುಕ್ತಗಳು ಘಣ ಸ್ಥಿತಿಯಲ್ಲಿ ವಿದ್ಯುತ್ ಅನ್ನು ಹರಿ ಬಿಡುವುದಿಲ್ಲ ಏಕೆ
ಅಯಾನಿಕ್ ವಸ್ತುಗಳು ಘಣ ಸ್ಥಿತಿಯಲ್ಲಿ ಕಠಿಣ ರಚನೆಯಿಂದಾಗಿ ಅಯಾನುಗಳ ನಡುವೆ ಚಲನೆ ಸಾಧ್ಯವಿಲ್ಲ ಆದ್ದರಿಂದ ಬಿಡುವುದಿಲ್ಲ
ಖನಿಜಗಳು ಎಂದರೇನು
ಭೂ ತೊಗಟೆಯಲ್ಲಿ ನೈಸರ್ಗಿಕವಾಗಿ ದೊರೆಯುವ ಧಾತು ಅಥವಾ ಸಂಯುಕ್ತಗಳನ್ನು ಖನಿಜಗಳು ಎನ್ನುವರು