- ದುಂಡನೆಯ ಅಥವಾ ಸುಕ್ಕುಗಟ್ಟಿದ ಬೀಜಗಳು ಎತ್ತರದ ಅಥವಾ ಕುಬ್ಜ ಸಸ್ಯಗಳು ಬಿಳಿ ಅಥವಾ ನೇರಳೆ ಹೂವುಗಳು ಇವು ಮೆಂಡಲ್ ಬಟಾಣಿ ಸಸ್ಯದಲ್ಲಿ ಕಂಡ ಗೋಚರ ಗುಣಗಳು
ಮೆಂಡಲ್ ತಮ್ಮ ಮೊದಲ ಪ್ರಯೋಗದಲ್ಲಿ ಬಳಕೆ ಮಾಡಿದ ಸಸ್ಯಗಳ ಗುಣಗಳು ಯಾವುವು
- ಅವರು ತಮ್ಮ ಮೊದಲ ಪ್ರಯೋಗದಲ್ಲಿ ಎತ್ತರ ಮತ್ತು ಕುಬ್ಜ ಸಸ್ಯಗಳನ್ನು ತೆಗೆದುಕೊಂಡರು
ಮೆಂಡಲ್ ರ ಮೊದಲ ಪ್ರಯೋಗ ಮತ್ತು ಅದರ ಫಲಿತಾಂಶವನ್ನು ತಿಳಿಸಿ
- ಮೆಂಡಲ್ ತಮ್ಮ ಮೊದಲ ಪ್ರಯೋಗದಲ್ಲಿ ಬಟಾಣಿಯ ಎತ್ತರದ ಮತ್ತು ಕುಬ್ಜ ಸಸ್ಯಗಳನ್ನು ಆಯ್ಕೆ ಮಾಡಿಕೊಂಡರು
- ಎತ್ತರದ ಮತ್ತು ಕುಬ್ಜ ಸಸ್ಯಗಳ ನಡುವಿನ ಸಂತಾನೋತ್ಪತ್ತಿ ಕ್ರಿಯೆಯಿಂದ ಬಂದಂತಹ ಮೊದಲ ಪೀಳಿಗೆಯಲ್ಲಿ ಯಾವುದೇ ಅರೆಬರೆ ಗುಣಗಳಿಲ್ಲ ಅಥವಾ F1 ಸಂತತಿಯಲ್ಲಿ ಯಾವುದೇ ಮಧ್ಯಮ ಎತ್ತರದ ಸಸ್ಯಗಳು ಇರಲಿಲ್ಲ
- F1 ಅಥವಾ ಮೊದಲ ಸಂತತಿಯ ಎಲ್ಲಾ ಸಸ್ಯಗಳು ಎತ್ತರವಾಗಿದ್ದವು
- ಮೆಂಡಲ್ ರ ಬಟಾಣಿ ಸಸ್ಯಗಳ ಎತ್ತರದ ಮೇಲೆ ನಡೆಸಿದ ಪ್ರಯೋಗದ ಎರಡನೆಯ ಹಂತವನ್ನು ವಿವರಿಸಿ
- ಮೊದಲ ಹಂತದ ಅಥವಾ ಮೊದಲ ಪೀಳಿಗೆಯಲ್ಲಿ ದೊರೆತ ಸಸ್ಯಗಳು ಎಲ್ಲವೂ ಎತ್ತರವಾಗಿದ್ದು
- ಈಗ ಮೊದಲ ಪೀಳಿಗೆಯ ಸಸ್ಯಗಳು ಮತ್ತು ಪೋಷಕ ಸಸ್ಯಗಳ ನಡುವೆ ಸ್ವಕೀಯ ಪರಾಗ ಸ್ಪರ್ಶದಿಂದ ಸಂತಾನೋತ್ಪತ್ತಿ ನಡೆಸಿದರು
- ಈಗ ದೊರೆತಂತಹ ಸಸ್ಯಗಳು ಎರಡನೆಯ ಪೀಳಿಗೆಯ ಅಥವಾ F2 ಸಂತತಿಯ ಸಸ್ಯಗಳಾಗಿವೆ
- F2 ಸಂತತಿಯ ಎಲ್ಲಾ ಸಸ್ಯಗಳು ಎತ್ತರವಾಗಿಲ್ಲ ಬದಲಾಗಿ ಅವುಗಳಲ್ಲಿ ನಾಲ್ಕನೇ ಒಂದು ಭಾಗ ಕುಬ್ಜವಾಗಿ ದ್ದವು
- ಅಥವಾ ಎರಡನೇ ಸಂತತಿಯ ಸಸ್ಯಗಳು ಎತ್ತರ ಮತ್ತು ಕುಬ್ಜತೆ ಗುಣಗಳ ಎರಡನ್ನೂ ಹೊಂದಿದ್ದವು
- ಇದರಿಂದಾಗಿ ಮೆಂಡಲ್ ಕಂಡುಕೊಂಡ ಅಂಶವೆಂದರೆ ಒಂದು ಗುಣದ ಎರಡು ಪ್ರತಿಗಳನ್ನು ಪ್ರತಿ ಜೀವಿ ಲೈಂಗಿಕ ಪುನರುತ್ಪಾದನೆಯ ಮೂಲಕ ಅನುವಂಶಿಯವಾಗಿ ಪಡೆಯುತ್ತದೆ
- ಈ ಎರಡೂ ಒಂದೇ ಆಗಿರಬಹುದು ಅಥವಾ ಪೋಷಕ ಜೀವಿಯನ್ನು ಅವಲಂಬಿಸಿ ವಿಭಿನ್ನವಾಗಿರಬಹುದು
- ಆದರೆ ಎರಡು ಗುಣಗಳಲ್ಲಿ ಕೇವಲ ಒಂದು ಗುಣವನ್ನು ಮಾತ್ರ ಅದು ಗೋಚರಿಸುತ್ತದೆ
- ಗೋಚರವಾಗುವ ಗುಣಗಳನ್ನು ಪ್ರಬಲ ಗುಣಗಳೆಂದು
- ಹಾಗೂ ಗೋಚರವಾಗದೇ ಇರುವ ಗುಣಗಳನ್ನು ದುರ್ಬಲ ಗುಣಗಳೆಂದು ಕರೆದರು
ಮೆಂಡಲ್ ಪ್ರಯೋಗವನ್ನು ವಿವರಿಸಿ
Tt chart
ಬಟಾಣಿಯ ಒಂದು ಎತ್ತರದ ಮತ್ತು ಒಂದು ಕುಬ್ಜ ಸಸ್ಯಗಳನ್ನು ಆಯ್ಕೆ ಮಾಡಿಕೊಂಡಾಗ
ಎತ್ತರದ ಗುಣ - T
ಕುಬ್ಜ ಗುಣ - t
T - ಪ್ರಬಲ ಗುಣ
t - ದುರ್ಬಲ ಗುಣ
TT - ಎತ್ತರದ ಸಸ್ಯ
Tt - ಎತ್ತರದ ಸಸ್ಯ
tt - ಕುಬ್ಜ ಸಸ್ಯ
ಇದರ ಪ್ರಕಾರ ಜೀವಿಗಳು ಪ್ರಬಲ ಗುಣಗಳನ್ನು ಮಾತ್ರ ಗೋಚರಿಸುತ್ತದೆ
ದುಂಡಾದ ಬೀಜದಎತ್ತರದ ಸಸ್ಯ ಹಾಗೂ ಸುಕ್ಕುಗಟ್ಟಿದ ಬೀಜವುಳ್ಳ ಕುಬ್ಜ ಸಸ್ಯಗಳಿಂದ ಪಡೆದ ಸಂತತಿಯ ಲಕ್ಷಣಗಳೇನು
ಜೀವಕೋಶದಲ್ಲಿ ಪ್ರೋಟೀನ್ ಗಳನ್ನು ತಯಾರಿಸಲು ಕೋಶಿಯಾ ಮೂಲ ಯಾವುದು
ಡಿಎನ್ಎ
ವಂಶವಾಹಿ ಎಂದರೇನು
ಪ್ರೊಟೀನ್ ತಯಾರಿಕೆಗೆ ಬೇಕಾದ ಮಾಹಿತಿಯನ್ನು ಒದಗಿಸುವ ಡಿಎನ್ಎ ಘಟಕವನ್ನು ವಂಶವಾಹಿ ಎಂದು ಕರೆಯುವರು
ಅಥವಾ
ಮಾಹಿತಿಯನ್ನು ಒದಗಿಸುವ ಡಿಎನ್ಎಯ ಘಟಕವನ್ನು ವಂಶವಾಹಿ ಎನ್ನುವರು
ವಂಶವಾಹಿಗಳು ಗುಣ ಮತ್ತು ಲಕ್ಷಣಗಳನ್ನು ಹೇಗೆ ನಿಯಂತ್ರಿಸುತ್ತವೆ
- ಸಸ್ಯಗಳನ್ನು ಉದಾಹರಣೆಗೆ ತೆಗೆದುಕೊಂಡಾಗ
- ಸಸ್ಯದ ಎತ್ತರ ಒಂದು ನಿರ್ದಿಷ್ಟ ಸಸ್ಯ ಹಾರ್ಮೋನ್ ಪ್ರಮಾಣವನ್ನು ಅವಲಂಬಿಸಿರುತ್ತದೆ
- ಸಸ್ಯವು ಉತ್ಪತ್ತಿ ಮಾಡುವ ಹಾರ್ಮೋನ್ ಪ್ರಮಾಣವು ಉತ್ಪಾದನಾ ಪ್ರಕ್ರಿಯೆಯ ದಕ್ಷತೆಯನ್ನು ಅವಲಂಬಿಸಿರುತ್ತದೆ
- ಹಾರ್ಮೋನ್ ಗಳ ಉತ್ಪಾದನೆಗೆ ಕಿಣ್ವಗಳ ಅಗತ್ಯವಿದೆ
- ಆದ ಕಾರಣ ಕಿಣ್ವವು ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ ಸಸ್ಯವು ಅಧಿಕ ಪ್ರಮಾಣದ ಹಾರ್ಮೋನನ್ನು ತಯಾರಿಸುತ್ತದೆ
- ಇದರ ಪರಿಣಾಮವಾಗಿ ಸಸ್ಯವು ಎತ್ತರವಾಗಿ ಬೆಳೆಯುತ್ತದೆ
- ಹೀಗಿರುವಾಗ ಒಂದು ವೇಳೆ ಕಿಣ್ವದ ಜೀನ್ ನಲ್ಲಿ ಅಥವಾ ವಂಶವಾಹಿಯಲ್ಲಿ ಬದಲಾವಣೆಯಾದರೆ ಅದರ ಹಾರ್ಮೋನ್ ಉತ್ಪತ್ತಿ ಮಾಡುವ ಪ್ರಮಾಣವೂ ಬದಲಾಗುತ್ತದೆ
- ಇದರಿಂದ ಸಸ್ಯದ ಎತ್ತರದ ಪ್ರಮಾಣದಲ್ಲಿಯೂ ಕೂಡ ಬದಲಾವಣೆ ತೋರುತ್ತದೆ
- ಹೀಗಾಗಿ ವಂಶವಾಹಿಗಳು ಸಸ್ಯದ ಅಥವಾ ಜೀವಿಗಳ ಗುಣ ಲಕ್ಷಣಗಳನ್ನು ನಿಯಂತ್ರಿಸುತ್ತವೆ
ವಿವಿಧ ಪ್ರಾಣಿಗಳಲ್ಲಿ ಲಿಂಗ ನಿರ್ಧರಣೆ ಬಗ್ಗೆ ತಿಳಿಸಿ
- ವಿವಿಧ ಪ್ರಭೇದದ ಜೀವಿಗಳು ಲಿಂಗ ನಿರ್ಧರಣೆಯಲ್ಲಿ ವಿವಿಧ ತಂತ್ರಗಳನ್ನು ಅನುಸರಿಸುತ್ತವೆ
- ಕೆಲವು ಸಂಪೂರ್ಣವಾಗಿ ಪರಿಸರದ ಸೂಚನೆಗಳನ್ನು ಅವಲಂಬಿಸಿರುತ್ತವೆ
- ಪ್ರಾಣಿಗಳಲ್ಲಿ ನಿಷೇಧ ಹೊಂದಿದ್ದ ಮೊಟ್ಟೆಗಳನ್ನು ಯಾವ ತಾಪಮಾನದಲ್ಲಿ ಇಡಲಾಗಿದೆ ಎಂಬ ಅಂಶವೂ ಮೊಟ್ಟೆಗಳ ಲಿಂಗ ನಿರ್ಧರಣೆ ಮಾಡುತ್ತದೆ
- ಬಸವನ ಹುಳುವಿನಲ್ಲಿ ಜೀವಿಗಳು ಲಿಂಗವನ್ನು ಬದಲಿಸಬಹುದು
ಮಾನವನಲ್ಲಿ ಲಿಂಗ ನಿರ್ಧರಣೆ ಬಗ್ಗೆ ತಿಳಿಸಿ ಅಥವಾ ಮಾನವರಲ್ಲಿ ಲಿಂಗವು ಹೆಚ್ಚಾಗಿ ತಳೀಯವಾಗಿಯೇ ನಿರ್ಧರಿಸಲ್ಪಡುತ್ತದೆ ವಿವರಿಸಿ
- ಮಾನವರ ಬಹುತೇಕ ವರ್ಣತಂತುಗಳು ತಂದೆಯ ಮತ್ತು ತಾಯಿಯ ಪ್ರತಿಗಳನ್ನು ಹೊಂದಿರುತ್ತವೆ
- ನಮ್ಮಲ್ಲಿ ಇಂತಹ 22 ಜೋಡಿಗಳಿವೆ ಆದರೆ ಲಿಂಗ ವರ್ಣ ತಂತು ಗಳೆಂದು ಕರೆಯಲ್ಪಡುವ ಒಂದು ಜೋಡಿ ಬೆಸ ಆಗಿದ್ದು ಅದು ಪರಿಪೂರ್ಣ ಜೋಡಿ ಯಾಗಿಲ್ಲ
- ಮಹಿಳೆಯರು ಲಿಂಗ ವರ್ಣತಂತುಗಳು ಪರಿಪೂರ್ಣ ಜೋಡಿಯನ್ನು ಹೊಂದಿದ್ದು ಎರಡನ್ನೂ X ವರ್ಣತಂತು ಗಳೆಂದು ಕರೆಯಲಾಗುತ್ತದೆ
- ಪುರುಷರಲ್ಲಿ ಹೊಂದಿಕೆಯಾಗದ ಜೋಡಿ ಇದ್ದು ಒಂದು ಸಾಮಾನ್ಯ ಗಾತ್ರದ X ಮತ್ತು ಇನ್ನೊಂದು ಚಿಕ್ಕದು ಚಿಕ್ಕದಾಗಿರುವ Y
- ಮಹಿಳೆಯರ ವರ್ಣತಂತುಗಳು XX
- ಪುರುಷರ ವರ್ಣತಂತುಗಳು XY
- ಇಲ್ಲಿ ಎಲ್ಲ ಮಕ್ಕಳು ತಮ್ಮ ತಾಯಿಯಿಂದ ಅವರು ಹುಡುಗ ಅಥವಾ ಹುಡುಗಿ ಆಗಿದ್ದರೂ ಕೂಡ X ವರ್ಣತಂತು ವನ್ನೇ ಪಡೆದುಕೊಳ್ಳುತ್ತಾರೆ
- ಆದರೆ ತಂದೆಯಿಂದ ಪಡೆದ ವರ್ಣತಂತುಗಳು ಮಕ್ಕಳ ಲಿಂಗವನ್ನು ನಿರ್ಧರಿಸುತ್ತದೆ
- ಒಂದು ವೇಳೆ ಮಕ್ಕಳು ತಂದೆಯಿಂದ X ವರ್ಣತಂತು ಗಳನ್ನು ಪಡೆದುಕೊಂಡರೆ ಹುಡುಗಿಯರಾಗುತ್ತಾರೆ
- ಮಕ್ಕಳು ತಂದೆಯಿಂದ Y ವರ್ಣತಂತುಗಳನ್ನು ಪಡೆದುಕೊಂಡರೆ ಹುಡುಗರಾಗುತ್ತಾರೆ
- ಹೀಗಾಗಿ ಮಾನವರಲ್ಲಿ ಲಿಂಗವು ಹೆಚ್ಚಾಗಿ ತಳೀಯವಾಗಿ ನಿರ್ಧರಿಸಲ್ಪಡುತ್ತದೆ
ಡಿಎನ್ಎ ಸ್ವ ಪ್ರತೀಕರಣವು ಅಂತರ್ಗತ ಪ್ರವೃತ್ತಿ ಎಂದು ಹೇಗೆ ಹೇಳಬಹುದು
- ಹನ್ನೆರಡು ಕೆಂಪು ಜೀರುಂಡೆಗಳ ಒಂದು ಗುಂಪನ್ನು ಪರಿಗಣಿಸೋಣ
- ಅವು ಹಸಿರು ಎಲೆಗಳ ಪೊದೆಗಳಲ್ಲಿ ವಾಸಿಸುತ್ತವೆ
- ಅವು ಲೈಂಗಿಕ ಸಂತಾನೋತ್ಪತ್ತಿಯ ಮೂಲಕ ಬೆಳೆಯುತ್ತದೆ ಅದರಿಂದ ಭಿನ್ನತೆಗಳು ಸೃಷ್ಟಿಯಾಗಬಹುದು
- ಕಾಗೆಗಳು ಕೆಂಪು ಜೀರುಂಡೆ ಗಳನ್ನು ತಿನ್ನುತ್ತವೆ
- ಕಾಗೆಗಳು ಕೆಂಪು ಜೀರುಂಡೆ ಗಳನ್ನು ತಿನ್ನುವುದರಿಂದ ಅವುಗಳ ಲಭ್ಯತೆ ಕಡಿಮೆಯಾಗಿ ಸಂತಾನೋತ್ಪತ್ತಿಯ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ಭಾವಿಸೋಣ
ಮೊದಲ ಸನ್ನಿವೇಶ
- ಜೀರುಂಡೆಗಳು ತಮ್ಮ ಪೀಳಿಗೆಯನ್ನು ಮುಂದುವರಿಸಬೇಕಾದರೆ ಕಾಗೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು
- ಕಾಗೆಗಳಿಂದ ರಕ್ಷಿಸಿಕೊಳ್ಳಲು ಕೆಂಪು ಬಣ್ಣಕ್ಕೆ ಬದಲಾಗಿ ಹಸಿರು ಬಣ್ಣಕ್ಕೆ ಬದಲಾಗಬೇಕು
- ಏಕೆಂದರೆ ಹಸಿರು ಬಣ್ಣದ ಪೊದೆಗಳ ಮೇಲೆ ಕೆಂಪು ಬಣ್ಣದ ಜೀರುಂಡೆಗಳು ಕಾಗೆಗಳಿಗೆ ಬಹಳ ಸುಲಭವಾಗಿ ಕಾಣುತ್ತವೆ
- ಹೀಗಾಗಿ ಜೀರುಂಡೆಗಳು ಬದುಕುಳಿಯಲು ಹಸಿರು ಬಣ್ಣಕ್ಕೆ ಬದಲಾವಣೆ ಹೊಂದುತ್ತದೆ ಇದು ಅಂತರ್ಗತ ಪ್ರವೃತ್ತಿ
- ಈಗ ಕೆಂಪು ಬಣ್ಣದ ಜೀರುಂಡೆ ಗಳಿಗಿಂತ ಹಸಿರು ಬಣ್ಣದ ಜೀರುಂಡೆಗಳು ಹೆಚ್ಚಾಗಿ ಕಂಡು ಬರುತ್ತವೆ
- ಇಲ್ಲಿ ವಂಶವಾಹಿಗಳು ಗುಣಗಳನ್ನು ನಿಯಂತ್ರಿಸುವುದರಿಂದ ಪೀಳಿಗೆಯಿಂದ ಪೀಳಿಗೆಗೆ ನಿರ್ದಿಷ್ಟ ವಂಶವಾಹಿಯ ಗುಣವನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸಿದೆ
- ಇನ್ನೊಂದು ಸನ್ನಿವೇಶವನ್ನು ತೆಗೆದುಕೊಂಡಾಗ ಹಸಿರು ಜೀರುಂಡೆಗಳ ಸಂಖ್ಯೆ ಹೆಚ್ಚಾಗಿದೆ ಹೀಗಾಗುವುದರಿಂದ ಹೆಚ್ಚು ಜೀರುಂಡೆಗಳು ಪೊದೆಗಳನ್ನು ತಿನ್ನಲು ಆರಂಭಿಸುತ್ತವೆ
- ಇದರಿಂದ ಸಸ್ಯಗಳು ರೋಗದಿಂದ ಬಳಲುತ್ತವೆ
- ಇದರಿಂದ ಜೀರುಂಡೆಗಳ ಪೋಷಣೆಗೆ ಬೇಕಾದ ಎಲೆಗಳ ಪ್ರಮಾಣ ಕಡಿಮೆಯಾಗುತ್ತದೆ
- ಇದರ ಪರಿಣಾಮವಾಗಿ ಜೀರುಂಡೆಗಳು ಸರಿಯಾಗಿ ಪೊಷಿಸಲ್ಪಡುವುದಿಲ್ಲ ನಂತರ ಜೀರುಂಡೆಗಳ ಸರಾಸರಿ ತೂಕವೂ ಕಡಿಮೆಯಾಗುತ್ತದೆ
- ಆದರೆ ಇದು ಯಾವುದೇ ರೀತಿಯಾದ ಅನುವಂಶೀಯ ಭಿನ್ನತೆಗೆ ಕಾರಣ ಆಗುವುದಿಲ್ಲ
ಪಳೆಯುಳಿಕೆ ಎಂದರೇನು
- ಸಾಮಾನ್ಯವಾಗಿ ಜೀವಿಗಳು ಸತ್ತಾಗ ಅವುಗಳ ದೇಹ ಕೊಳೆತು ನಾಶವಾಗುತ್ತದೆ ಆದರೆ ಕೆಲವೊಮ್ಮೆ ಇಡೀ ದೇಹ ಅಥವಾ ಕೆಲವು ಭಾಗಗಳು ಸಂಪೂರ್ಣ ಕೊಳೆಯದಂತಹ ಪರಿಸರದಲ್ಲಿ ಇರಬಹುದು ಹೀಗೆ ಸಂರಕ್ಷಿಸಲ್ಪಟ್ಟ ಅವಶೇಷಗಳನ್ನು ಪಳೆಯುಳಿಕೆಗಳು ಎನ್ನುವವರು
ಪಳೆಯುಳಿಕೆಗಳ ಕಾಲವನ್ನು ತಿಳಿಯುವ ವಿಧಾನಗಳು ಯಾವುವು
- ಮೊದಲ ವಿಧಾನ ಸಾಪೇಕ್ಷ ವಿಧಾನ ನಾವು ಭೂಮಿಯನ್ನು ಅಗೆಯುತ್ತಾ ಹೋದರೆ ಪಳೆಯುಳಿಕೆಗಳು ಸಿಗಲಾರಂಭಿಸುತ್ತದೆ
- ಮೇಲ್ಪದರಲ್ಲಿ ಸಿಗುವ ಪಳೆಯುಳಿಕೆಗಳು ಇತ್ತೀಚಿನವು
- ಆಳ ಪದರದಲ್ಲಿ ದೊರೆಯುವ ಪಳೆಯುಳಿಕೆಗಳು ಹಳೆಯವು ಎಂಬ ನಿರ್ಧಾರಕ್ಕೆ ಬರಬಹುದು
- ಎರಡನೆಯ ವಿಧಾನದಲ್ಲಿ ಪಳೆಯುಳಿಕೆಯಲ್ಲಿ ಧಾತುವಿನ ಆಧಾರದ ಮೇಲೆ ನಾವು ಕಂಡು ಹಿಡಿಯಬಹುದು
ಕಾಡು ಎಲೆ ಕೆಸುವಿನ ವಿವಿಧ ವಿಕಾಸದ ತಳಿಗಳನ್ನು ಹೆಸರಿಸಿ
- ಗೆಡ್ಡೆಕೋಸು
- ಕೇಲ್
- ಹೂಕೋಸು
- ಬ್ರಾಕೊಲಿ
- ಎಲೆಕೋಸು
- ಕೆಂಪು ಕೋಸು
ಮಾನವನ ವಿಕಾಸದ ಬಗ್ಗೆ ತಿಳಿಸಿ
- ಮಾನವರು ಒಂದೇ ಪ್ರಬೇಧಕ್ಕೆ ಸೇರಿದವರು ಮಾನವರು ಹೋಮೋ ಸೇಪಿಯನ್ಸ್ ಎಂಬ ಪ್ರಭೇದಕ್ಕೆ ಸೇರಿದ್ದೇವೆ
- ಮೂಲವಾಗಿ ಹೋಮೋ ಸೇಪಿಯನ್ಸ್ ಮೂಲ ಪತ್ತೆಯಾಗಿದ್ದು ಆಫ್ರಿಕಾದಲ್ಲಿ
- ಈ ಪ್ರಕಾರ ನಮ್ಮೆಲ್ಲರ ಪೂರ್ವಜರು ಆಫ್ರಿಕಾದವರು ಎಂಬ ನಿಲುವಿಗೆ ಬರಬಹುದು
- ನಮ್ಮ ಕೆಲವು ಪೂರ್ವಜರು ಆಫ್ರಿಕಾ ತೊರೆದರೆ ಇನ್ನೂ ಕೆಲವರು ಅಲ್ಲೇ ಉಳಿದರು ಮೂಲವಾಸಿಗಳು ಆಫ್ರಿಕಾ ದೆಲ್ಲೆಡೆ ಹರಡಿದರು
- ನಂತರ ವಲಸಿಗರು ಭೂಗ್ರಹ ದೆಲ್ಲೆಡೆ ಆವರಿಸಿಕೊಂಡರು ಉದಾಹರಣೆಗೆ ಆಫ್ರಿಕಾದಿಂದ ಪಶ್ಚಿಮ ಏಷ್ಯಾ ನಂತರ ಮಧ್ಯ ಏಷ್ಯಾ ಯುರೇಷಿಯಾ ದಕ್ಷಿಣ ಏಷ್ಯಾ ಪೂರ್ವ ಪೂರ್ವ ಏಷ್ಯಾದ ವರೆಗೂ ಹರಡಿದರು