ಉತ್ತರ: ರಾಹಿಲನು ಒಬ್ಬ ಮಿಲಿಟರಿ ಡಾಕ್ಟರ್.
ಉತ್ತರ: ತುರ್ತು ಪರಿಸ್ಥಿತಿಯ ನಿರ್ವಹಣೆಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ರಾಹುಲ್ ಇನ್ನಷ್ಟು ಭದ್ರವಾಗಿ ಹಿಡಿದುಕೊಂಡನು.
ಉತ್ತರ: ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿ
- ಕೊಳ್ಳಲು ಬ್ಲಾಕ್ ಔಟ್ ನಿಯಮ ಪಾಲಿಸಲಾಗುತ್ತಿದೆ.
ಉತ್ತರ: ರಾಹಿಲನು ಮುದುಕಿಯ ದೀಪದೆಡೆಗೆ ದೃಷ್ಟಿ ಹೊರಳಿಸಿ
'ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ, ಸಂಕಷ್ಟಕ್ಕೀಡಾದ
ಮನುಷ್ಕರ ಕಡೆಯುವನು' ಎಂದು ಗಂಭೀರವಾಗಿ ನುಡಿದನು.
ಉತ್ತರ: ಈ ಯುದ್ದ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ
ಯಾರಿಗಾಗಿ ಯಾತಕ್ಕಾಗಿ ಈ ಯುದ್ದ. ಅದನ್ನಾದರೂ ಹೇಳಿರಲ್ಲ ಎಂಬುದು ,
ಮುದುಕಿಯ ಅಭಿಪ್ರಾಯವಾಗಿದೆ. .
ಉತ್ತರ: ಡಾಕ್ಟರ್, ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತಿಲ.
ಗೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ
ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ
ಇಲ್ಲವಲ್ಲ ಎಂದು ವಿಮಾನದ ಪೈಲಟ್ ನುಡಿದನು.
ಉತ್ತರ: ಮಹಿಳೆಯೊಬ್ಬಳ ಆರ್ತನಾದವು ಆ ಮಳೆಯ ಶಬ್ದವನ್ನೂ
ಭೇದಿಸಿ ರಾಹಿಲನ ಕಿವಿಯೊಳಗೆ ನುಗ್ಗಿತು. ಆತನು ಬೆಚ್ಚಿದನು. ಆ
ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ? ಆ
ಮನೆಯೊಳಗೆ ಏನು ಸಂಭವಿಸುತ್ತಿದೆ? ತಾನೀಗ ಕದವನ್ನು ತಟ್ಟಿದರೆ
ಪರಿಣಾಮವೇನಾಗಬಹುದು? ಎಂಬ ಪ್ರಶ್ನೆಗಳು ಮೂಡಿದವು.
ಉತ್ತರ: ಮುದುಕಿಯು ರಾಹುಲನ ಬಳಿ - ನೋಡಪ್ಪಾ ನಾನು
ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು.
| ಮದುವೆಯಾಗಿ ನವವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು
ಕಾಲ ನೆಮ್ಮದಿಯಿಂದ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟು
ಇತ್ತು. ಈಗಲೂ ಇದೆಯೆನ್ನು, ಆದರೆ ನೆಮ್ಮದಿಯಂದ ಬದುಕಲು ಈ
ಜನ ಬಿಡಬೇಕಲ್ಲ ಯುದ್ದದಂತೆ ಯುದ್ದ. ಮನೆಯ ಮಕ್ಕಳನ್ನು ಯುದ್ಧಕ್ಕೆ
ಕರೆದೊಯ್ಯುತ್ತಾರಲ್ಲ ಇವರ ಮನೆ ಹಾಳಾಗ ಎಂದು ತಿರಸ್ಕಾರದಿಂದ
ನುಡಿದಳು.
ಉತ್ತರ: ಆ ಘನಘೋರವಾದ ನಡುರಾತ್ರಿಯಲ್ಲಿ ಯಾರೋ
ಮುದುಕಿಯ ಮನೆಯ ಕದವನ್ನು ತಟ್ಟಿದರು. ಹೆದರಿದ ಮುದುಕಿ
ಬಾಗಿಲು ತೆಗೆದಳು. ಹೂಂ ನೋಡಿ..... ನನ್ನ ಮೊಮ್ಮಗುವಿನ ಹೆಣವಿದೆ.
ಅಲ್ಲ ಅದನ್ನೂ ನೋಡಿ ಈ ಯುದ್ಧ ನನ್ನ ಮೊಮ್ಮಗುವನ್ನೂ
ಉಳಿಸಲಿಲ್ಲವಲ್ಲ ಯಾರಿಗಾಗಿ ಯಾತಕ್ಕಾಗಿ ಈ ಯುದ್ದ. ಅದನ್ನಾದರೂ
ಹೇಳಿರಲ್ಲ ಎನ್ನುತ್ತಾ ಆ ನಿರ್ಜಿವ ಶಿಶುವಿನ ಬಳಿ ಕುಳಿತು ಮತ್ತೊಮ್ಮೆ
ಎದೆ ಬಡಿದುಕೊಂಡು ಅಳತೊಡಗಿದಳು.
ಉತ್ತರ: ಈಗ ನಿನ್ನ ಮಗನು ಎಲ್ಲಿದ್ದಾನಮ್ಮ ಎಂದು ರಾಹಿಲ್
ಆ ಮುದುಕಿಯನ್ನು ಕೇಳಿದಾಗ - ಯುದ್ಧಕ್ಕೆ ಹೋಗಿದ್ದಾನೆ.
ಎಳೆದುಕೊಂಡು ಹೋಗುವಾಗ ಹುಗದಿರಲು ಆಗುತ್ತದೆಯೇ.
ಮಾತೃಭೂಮಿಯ ರಕ್ಷಣೆ ಎಂದರು. ಮಾತೃಭೂಮಿ ಯಾವುದು?
ಪಿತೃಭೂಮಿ ಯಾವುದು? ನನ್ನ ಮಗನಿನ್ನೂ ಚಿಕ್ಕ ಹುಡುಗನಾಗಿದ್ದಾಗ
- ಯುದ್ಧಕ್ಕೆ ಹೋದ ಅವನ ತಂದೆ ಹಿಂತಿರುಗಲಿಲ್ಲ. ಎದೆ ತುಂಬ ಬೂದಿ
ಮುಚ್ಚಿದ ಕೆಂಡ. ಎದೆಯ ಗಾಯವು ಇಂದಿಗೂ ಇದೆ ನೋಡು. ಎಲ್ಲ
ದುಃಖ ನುಂಗಿ ಮಗನನ್ನು ಸಾಕಿ ಸಲುಹಿದೆ. ಮದುವೆಯನ್ನೂ
ಮಾಡಿದೆ. ಈಗ ಐದಾರು ವರ್ಷಗಳ ಬಳಿಕ ಸೊಸೆಯು ಗರ್ಭಿಣಿ
ಯಾದಳು. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ
ಮಗನು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದನು. ಅಷ್ಟರಲ್ಲಿ ಬಂತು
ಯುದ್ಧ. ಅವನೊಬ್ಬ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ
ತಿಳಿದು ಅವನೆಷ್ಟು ಸಂಕಟ ಪಡುತ್ತಾನೋ? ಕೊನೆಯ ಮಾತನ್ನು
ಹೇಳುವಾಗ ಮುದುಕಿಯ ಕಂಠ ಗದ್ದದವಾಗಿ ಮುಂದೆ ಮಾತೇ
ಹೊರಡಲಿಲ್ಲ.
ಉತ್ತರ: ರಾಹಿಲನು ಒಬ್ಬ ಮಿಲಿಟರಿ ಡಾಕ್ಟರ್, ಯುದ್ದ
ವಿಮಾನದಲ್ಲಿ ಸಾಗುತ್ತಿರುವಾಗ ವಿಮಾನದ ರೇಡಿಯೋ ಸರಿಯಾಗಿ
ಕಾರ್ಯ ನಿರ್ವಹಿಸದಿದ್ದುದರಿಂದ ಕತ್ತಲೆಯಲ್ಲಿ ಎಲ್ಲಿಯೋ ಒಂದು
ಜಾಗೆಯಲ್ಲಿ ಇಳಿಯಬೇಕಾಗಿತ್ತು. ತನ್ನ ಕೈಯ್ಯಲ್ಲಿದ್ದ ಔಷಧ ಮತ್ತು
ತುರ್ತು ಪರಿಸ್ಥಿತಿಗೆ ಬೇಕಾಗುವ ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು
ಭದ್ರವಾಗಿ ಹಿಡಿದುಕೊಂಡಿದ್ದನು. ಅಷ್ಟರಲ್ಲಿ ವಿಮಾನ ಭಯಂಕರ
ಶಬ್ದದೊಡನೆ ಸ್ಫೋಟಿಸಿ ನೂರಾರು ಹೋಳುಗಳಾಗಿ ಚೆದುರಿಬಿದ್ದಿತು.
ನೀರಿನಾಳದಲ್ಲಿ ಎಚ್ಚರಗೊಂಡ ಡಾಕ್ಟರ್ ರಾಹಿಲ್ ಕಷ್ಟಪಟ್ಟು ಮೇಲೆ
ಬಂದನು. ಒಂದು ಕಾಲನ್ನು ಅಲುಗಾಡಿಸಲಾಗದಿದ್ದರೂ ಹೇಗೋ
ಈಜತೊಡಗಿದನು. ಸೈನಿಕ ಉಡುಪಿನಲ್ಲಿ ಈಜಲು ಬಹಳ ತೊಂದರೆ
ಯಾಗುತ್ತಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಈ ಮಳೆಯಿಂದ
ಮೊದಲು ರಕ್ಷಣೆ ಪಡೆಯಬೇಕು. ಮುರಿದು ಹೋ "ದ ಕಾಲಿನ
ಆರೈಕೆಯಾಗಬೇಕು. ಆತನು ಕತ್ತಲಲ್ಲಿ , ತೆವಳತೊಡಗಿ ಒಂದಿಷ್ಟು
ದೂರ ಚಲಿಸಿದ್ದನೋ ಇಲ್ಲವೋ ಮಹಿಳೆಯೊಬ್ಬಳ ಆರ್ತನಾದ ಅವನ
ಕಿವಿಗೆ ಬಿದ್ದಿತು. ಹೇಗೋ ಕಷ್ಟಪಟ್ಟು ಆ ಮನೆಯೊಳಗೆ ಪ್ರವೇಶ ಪಡೆದನು.
ಆ ಮುದುಕಿಯ ಮಗಳು ಹೆರಿಗೆಯ ಬೇನೆಯಿಂದ ಬಳಲುತ್ತಿರುವುದು
ಕಂಡುಬಂದಿತು. ಕಷ್ಟಪಟ್ಟು ಹೆರಿಗೆ ಮಾಡಿಸಿದನು. ಆದರೆ ಆ ಮಗು
ಉಳಿಯಲಿಲ್ಲ. ಆ ಮುದುಕಿಯಾದರೂ ಅವನಿಗೆ ಸುರಕ್ಷೆಯನ್ನು
ಒದಗಿಸಿದಳು. ಹೀಗೆ ಪರಸ್ಪರ ಸಹಾಯಕರಾದುದರ ಜೊತೆಗೆ
ಮಾನವೀಯತೆಯನ್ನು ಮೆರೆದರು.
ಉತ್ತರ: ಯುದ್ದವು ಯಾವ ಕಾಲಕ್ಕೂ ವಿನಾಶಕಾರಿಯೇ ಆಗಿದೆ.
ರಾಜ ರಾಜರುಗಳಲ್ಲಿ ಹಾಗೂ ದೇಶ-ದೇಶಗಳ ನಡುವೆ ಜರುಗುವಂತಹ
ಈ ಅಮಾನವೀಯ ಕೃತ್ಯವು ಮನುಕುಲಕ್ಕೆ ಕಲಂಕವನ್ನು ತರುವಂಥ
ಧಾಗುತ್ತದೆ. ರಾಘವಾಂಕ ಕವಿಯು ಹೇಳುವ ಹಾಗೆ ಎರಡು ಕೋಣಗಳು
ಕಾಳಗಕ್ಕೆ ಇಳಿದರೆ ನಡುವಿದ್ದ ಗಿಡಮರಾದಿ ನಾಶವಾಗುವ ಹಾಗೆ
ಇಬ್ಬರು ರಾಜರು ಕಾದಾಡುವುದಿರಲಿ ಅನೇಕ ಜನ ಸೈನಿಕರು ಪ್ರಾಣ
ಕಳೆದುಕೊಂಡು ಅವರ ಮಡದಿಯರಿಗೆ ವೈಧವ್ಯವು ಪ್ರಾಪ್ತವಾಗುತ್ತದೆ.
ಎಷ್ಟೋ ಜನ ಅಮಾಯಕರು ಅಂಗವಿಕಲರಾಗಿ ಜೀವನ ಪರ್ಯಂತವೂ
ನರಳಬೇಕಾಗುತ್ತದೆ. ಮನೆಯ ಯಜಮಾನನನ್ನು ಕಳೆದುಕೊಂಡು
- ಆತನ ಹೆಂಡತಿ ಮಕ್ಕಳು ಅನಾಥರಾಗುತ್ತಾರೆ. ಜಯಶಾಲಿಗಳಾದರೇನು .
ತಮ್ಮ ರಾಜ್ಯದಲ್ಲಿನ ಕೆಲ ಪಾಲನ್ನು ಸೈನಿಕರಲ್ಲಿ ಹಂಚುವುದಿಲ್ಲ. ಯುದ್ಧದ
ಪರಿಣಾಮವು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೂ ಆಗುತ್ತದೆ. ಈ
ಕಾರಣದಿಂದಲೇ ಮಹಾಭಾರತದಲ್ಲಿ ಧರ್ಮರಾಜನು ಯುದ್ದವು
ನಿಂದ್ಯವೆನ್ನುತ್ತಾನೆ.
ಕತೆ : ಯುದ್ಧ
ಲೇಖಕಿ : ಸಾರಾ ಅಬೂಬಕ್ಕರ್
ಆಕರ : ಚಪ್ಪಲಿಗಳು - ಕಥಾಸಂಕಲನ.
ಸಂದರ್ಭ ಸ್ವಾರಸ್ಯ: ಯುದ್ಧವಿಮಾನದ ಪೈಲಟ್ ರಾಹಿಲ್
- ಡಾಕ್ಟರ್ರಿಗೆ ರೇಡಿಯೋ ಸಮವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
- ಗೌಂಡಿನೊಡನೆ ಸರಿಯಾಗಿ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ.
- ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ
ಏನೂ ಕಾಣಿಸುತ್ತಿಲ್ಲ. ಅಷ್ಟರಲ್ಲಿ ವಿಮಾನವು ಭಯಂಕರ ಶಬ್ದದೊಡನೆ
ಸ್ಫೋಟಿಸಿ ನೂರಾರು ಹೋಳುಗಳಾಗಿ ಚೆದುರಿಬಿತ್ತು. ನೀರಿನ ಆಳದಲ್ಲಿ
ಎಚ್ಚರಗೊಂಡ ಡಾಕ್ಟರ್ ರಾಹಿಲ್ ತುಂಬಾ ಕಷ್ಟಪಟ್ಟು ಮೇಲೆ ಬಂದನು.
ಒಂದು ಕಾಲನ್ನು ಅಲುಗಿಸಲಾಗದಿದ್ದರೂ ಹೇಗೋ ಈಜತೊಡಗಿದನು.
ಸ್ವಲ್ಪ ದೂರ ತೆವಳುತ್ತಿರುವಷ್ಟರಲ್ಲಿ ಮಹಿಳೆಯೊಬ್ಬಳ ಆರ್ತನಾದದ ಶಬ್ದವು
ಆತನ ಕಿವಿಯೊಳಗೆ ನುಗ್ಗಿತು. ಆ ಮನೆಯ ಕದವನ್ನು ತಟ್ಟಿ -'ದಯವಿಟ್ಟು
ಬಾಗಿಲು ತೆರೆಯಿರಿ. ನಾನು ಗಾಯಗೊಂಡಿದ್ದೇನೆ ಎಂದ.
ಕತೆ : ಯುದ್ದ
ಲೇಖಕಿ : ಸಾರಾ ಅಬೂಬಕ್ಕರ್
ಆಕರ: ಚಪ್ಪಲಿಗಳು - ಕಥಾಸಂಕಲನ.
ಸಂದರ್ಭ ಸ್ವಾರಸ್ಯ; ಕಾಲು ಮುರಿದುಕೊಂಡು ಮಳೆಯಲ್ಲಿ
ನೆನೆದು ಬಂದಿದ್ದ ಡಾಕ್ಟರ್ನಿಗೆ ತನ್ನ ಮಗನ ಬಟ್ಟೆಯನ್ನು ತಂದುಕೊಟ್ಟಳು
ಮುದುಕಿ. ಎದ್ದು ನಿಂತು ಬಟ್ಟೆ ಧರಿಸಲು ಆಗದೇ ಕುಳಿತೇ ಅವನು ಬಟ್ಟೆ
ಧರಿಸಿದುದನ್ನು ಕಂಡು ಯಾಕೆ ಎದ್ದು ನಿಲ್ಲಲಾಗುತ್ತಿಲ್ಲವೇ? ಎಂದು
ಕೇಳಿದಳು. ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಅದನ್ನು ಆಮೇಲೆ ನೋಡುವ.
ಈಗ ನಿಮ್ಮ ಸೊಸೆಯನ್ನು ತೋರಿಸಿ ಎಂದನು. ಮುದುಕಿಯು ದೀಪ
ಹಿಡಿದುಕೊಂಡು ಒಳಗಿನ ಮಲಗುವ ಕೋಣೆಗೆ ಹೋದಳು. ಆತನು
ತೆವಳುತ್ತ ಕಾಲೆಳೆಯುತ್ತಾ ಮುದುಕಿಯನ್ನು ಹಿಂಬಾಲಿಸಿದನು. ಅಲ್ಲಿನ
ಮಂದ ಬೆಳಕಿನಲ್ಲಿ ನರಳುತ್ತಿದ್ದಾಕೆಯನ್ನು ದಿಟ್ಟಿಸಿ ನಾ *”ಯನ್ನು
ಪರೀಕ್ಷಿಸುವೆ. ನೀವು ಬಿಸಿನೀರು ಸಿದ್ದಪಡಿಸಿ ಎಂದನು.
ಕತೆ : ಯುದ್ದ
ಲೇಖಕಿ : ಸಾರಾ ಅಬೂಬಕ್ಕರ್
ಆಕರ: ಚಪ್ಪಲಿಗಳು - ಕಥಾಸಂಕಲನ.
ಸಂದರ್ಭ ಸ್ವಾರಸ್ಯ: ಅಮ್ಮಾ ನಾನು ಬರುವುದು ಕೊಂಚ
ತಡವಾಗಿದ್ದರೂ ನಿಮ್ಮ ಸೊಸೆಯು ಉಳಿಯುತ್ತಿರಲಿಲ್ಲ. ಹೇಗೋ
ಸೊಸೆಯನ್ನು ಬದುಕಿಸಿದೆ. ಈಗ ನನಗೆ ತುಂಬಾ ಸುಸ್ತು, ಮಲಗಲು
ಒಂದಿಷ್ಟು ಜಾಗ ಕೊಡಿ ಎಂದನು. ಮುದುಕಿ ಈಗಲೂ ಆತನನ್ನು
ಸಂದೇಹದಿಂದಲೇ ದೃಷ್ಟಿಸಿದಳು. ಯಾರೀತ? ತಮ್ಮವನೇ ಅಥವಾ ವೈರಿ
ದೇಶದವನೇ, ಮುದುಕಿಯ ಸಂದೇಹ ನಿಜವಾಗಿತ್ತು. ಬಂದಿದ್ದಾತ
ತಮ್ಮವನಲ್ಲ. ತಮಗೆ ತಮ್ಮ ದೇಶಕ್ಕೆ ದ್ರೋಹ ಬಗೆಯುವವನು.
ಕ್ಷಣಕಾಲ ಆಕೆಯ ಕಣ್ಣುಗಳು ರೋಷದಿಂದ ಕೆರಳಿದವು. ಬಾಗಿಲ ಬಳಿ
ಸಮೀಪಿಸುತ್ತ ಆಕೆ ಆತನ ಮುಖ ನೋಡಿದಳು. ಓ! ಈ ಕಣ್ಣುಗಳು
ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ ಎಂದಳು.
ಕತೆ : ಯುದ್ಧ
ಲೇಖಕಿ : ಸಾರಾ ಅಬೂಬಕ್ಕರ್'
ಆಕರ : ಚಪ್ಪಲಿಗಳು - ಕಥಾಸಂಕಲನ.
ಸಂದರ್ಭ ಸ್ವಾರಸ್ಯ: ಆ ನಡುರಾತ್ರಿಯಲ್ಲಿ ಮುದುಕಿಯ ಮನೆಯ
ಬಾಗಿಲವನ್ನು ಯಾರೋ ಟಕ್ ಟಕ್ ಎಂದು ಬಡಿದ ಸದ್ದಾಯಿತು.
ಹೆದರುತ್ತಲೇ ಬಾಗಿಲು ತೆರೆದಳು. ಒಳಗೆ ನುಗ್ಗಿದ ಆಗಂತುಕರು
ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆಗೆ ಬಂದಿದ್ದಾರೆಯೇ
ಎಂದು ಕೇಳುತ್ತಾ ಒಳನುಗ್ಗಿದರು. ಯಾರೂ ಬಂದಿಲ್ಲ. ಬೇಕಾದರೆ
ನೀವೇ ನೋಡಿ. ನನ್ನ ಮೊಮ್ಮಗುವಿನ ಹೆಣವಿದೆ. ಅದನ್ನೂ ನೋಡಿ!
ಈ ಯುದ್ದ ನನ್ನ ಮೊಮ್ಮಗುವನ್ನೂ ಉಳಿಸಲಿಲ್ಲವಲ್ಲ! ಯಾರಿಗಾಗಿ
ಯಾತಕ್ಕಾಗಿ ಈ ಯುದ್ಧ! ಅದನ್ನಾದರೂ ಹೇಳಿರಲ್ಲ ಎನ್ನುತ್ತಾ ಆ
ನಿರ್ಜಿವ ಶಿಶುವಿನ ಬಳಿ ಕುಳಿತು ಮತ್ತೊಮ್ಮೆ ಎದೆ ಬಡಿದುಕೊಂಡು
ಆಳತೊಡಗಿದಳು.
1. ರಾಹಿಲನ ದೇಹದಲ್ಲಿ ........ ಸಂಚಾರವಾದಂತಾಯಿತು.
ಅ) ಶಕ್ತಿ
ಆ) ವಿದ್ಯುತ್
ಇ) ಹೊಸರಕ್ಕೆ ಈ) ಮಿಂಚು
ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ........ ಕೇಳಿ
ಬಂತು.
ಅ) ಆರ್ತನಾದ ಆ) ಅಳು
ಇ) ಚೀರಾಟ ಈ) ಸಾಂತ್ವನ
3, ಮುದುಕಿ ಮತ್ತು ಸೊಸೆಯ .......... ಮನೆಯ ಮೂಲೆ
ಮೂಲೆಯಲ್ಲಿ ಪ್ರತಿಧ್ವನಿಸಿತು.
ಅ) ಸಂತಸ ಆ) ಜಗಳ
ಇ) ರೋದನ ಈ) ಸಂಗೀತ
4, ಯಾರಾದರೂ ಗಾಯಗೊಂಡ .......... ಈ ಕಡೆ
ಬಂದಿದ್ದಾರೆಯೇ?
ಅ) ಜನರು ಆ) ಸೈನಿಕರು
ಇ) ಗಂಡಸರು ಈ) ಹೆಂಗಸರು
ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ...
ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು.
ಅ) ತಂದೆಯು - ಆ) ತಾಯಿಯು
ಇ) ಮಗಳು.
ಈ) ಮಗನು