ಉತ್ತರ: ಕರ್ಣನ ಜೊತೆಗೆ ಮೈದುನತನದ ಸರಸವನ್ನು ಎಸಗಿ
ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕುಳ್ಳಿರಿಸಿಕೊಂಡನು.
ಉತ್ತರ: ಗದುಗಿನ ಶ್ರೀವೀರನಾರಾಯಣನು ಕುಮಾರವ್ಯಾಸನ
ಆರಾಧ್ಯ ದೈವ.
ಉತ್ತರ: ಅಶ್ವಿನೀ ದೇವತೆಗಳ ವರಬಲದಿಂದ ಜನಿಸಿದವರು
ನಕುಲ-ಸಹದೇವರು.
ಉತ್ತರ: "ರೂಪಕ ಸಾಮ್ರಾಜ್ಯ ಚಕ್ರವರ್ತಿ'' ಎಂದು
ಕುಮಾರವ್ಯಾಸನಿಗೆ ಬಿರುದು ಇದೆ.
ಉತ್ತರ: ಮೂಲ ಮಹಾಭಾರತವನ್ನು ಸಂಸ್ಕೃತದಲ್ಲಿ
ರಚಿಸಿದವರು ವ್ಯಾಸರು. ಅದನ್ನು ಹತ್ತು ಪರ್ವಗಳಲ್ಲಿ ಕನ್ನಡದಲ್ಲಿ
ಈತನು ರಚಿಸಿದ್ದರಿಂದ ವ್ಯಾಸಕುಮಾರ ಕುಮಾರವ್ಯಾಸನಾದನು.
ಉತ್ತರ: ಕರ್ಣಾ! ನಿನ್ನಲ್ಲಿ ಯಾದವರಲ್ಲಿ ಕೌರವರಲ್ಲಿ ತಿಳಿದು
ನೋಡಿದರೆ ಭೇದವೆಂಬುದೇ ಇಲ್ಲ. ನಿನ್ನಾಣೆಯಾಗಿಯೂ ಪಾಂಡವರ
ಸಾಮ್ರಾಜ್ಯಕ್ಕೆ ಒಡೆಯನು ನೀನೆ, ನಿನಗೆ ಅದರ ಕಲ್ಪನೆ ಇಲ್ಲ ಅಥವಾ
ತಿಳಿವಳಿಕೆ ಇಲ್ಲ ಎಂದು ರವಿಸುತನ ಕಿವಿಯಲ್ಲಿ ಕೃಷ್ಣನು ಭಯವನ್ನು
ಬಿತ್ತಿದನು.
ಉತ್ತರ: ಕುಂತಿಗೆ ದೂರ್ವಾಸ ಮುನಿಗಳು ಸಂತಾನಪ್ರದವಾದ
ಐದು ದೇವತಾ ಮಂತ್ರಗಳನ್ನು ಉಪದೇಶಿಸಿದರು. ಅದರಲ್ಲಿ ಕುಂತಿಗೆ-
ಸೂರ್ಯಮಂತ್ರದಿಂದ ಕರ್ಣ, ಯಮಮಂತ್ರದಿಂದ ಯುಧಿಷ್ಠಿರ,
ವಾಯು ಮಂತ್ರದಿಂದ ಭೀಮಸೇನ, ಇಂದ್ರ ಮಂತ್ರದಿಂದ ಅರ್ಜುನ
ಜನಿಸಿದರೆ, ಅಕ್ಕಿನೀ ದೇವತೆಗಳ ಐದನೆಯ ಮಂತ್ರದಿಂದ ಮಾದ್ರಿಯಲ್ಲಿ
ನಕುಲ-ಸಹದೇವರು ಜನಿಸಿದರು.
ಉತ್ತರ: ಕರ್ಣಾ ನಿನಗೆ ಹಸ್ತಿನಾಪುರ ಸಿಂಹಾಸನಾಧೀಶ್ವರನ
ಘನ ಪದವಿಯನ್ನು ಕೊಡಿಸುವೆ. ನಿನ್ನ ಪ್ರಭುತ್ವವನ್ನು ಕೌರವ-ಪಾಂಡವರು
ಒಪ್ಪಿಕೊಳ್ಳುವರು. ಎರಡೂ ವಂಶ ನಿನ್ನದಾಸರಾಗಿ ಇರುವಾಗ ಕೌರವನ
ಬಾಯ್ದೆಂಬುಲಕ್ಕೆ ಕೈಯೊಡ್ಡುವುದು ಉಚಿತವೆ? ನಿನ್ನ ಬಲಭಾಗದಲ್ಲಿ
ಪಾಂಡವರು, ಎಡದಲ್ಲಿ ಕೌರವರು ನಡುವೆ ಮಾದ್ರ ಮಾಗಧ
ಯಾದವಾದಿಗಳು ಎಂದಾಗ ರೊಚ್ಚಿಗೆದ್ದ ಕರ್ಣನು - ಮರಳು ಮಾಧವಾ
ಐಹಿಕ ರಾಜ್ಯದಾಸೆಗೆ ಸೋಲುವವನಲ್ಲ ಈ ಕರ್ಣ ಎಂದನು, ಕುರುಪತಿಯ
ವೈರಿಗಳೇ ನನಗೂ ವೈರಿಗಳು ಎಂದನು.
ಉತ್ತರ: ಪಾಂಡವರ ಪರವಾಗಿ ಶ್ರೀಕೃಷ್ಣನು ಸಂಧಾನ ಮಾಡುವ
ರಾಯಭಾರಿಯಾಗಿ ಹಸ್ತಿನಾವತಿಗೆ ಕೌರವನ ಆಸ್ಥಾನಕ್ಕೆ ಬಂದನು.
ಸಂಧಾನವು ಮುರಿದು ಬೀಳಲು ಮರಳುವಾಗ ಕರ್ಣನ ಮನೆಯ
ಮುಂದೆ ರಥವನ್ನು ತರುಬಿ ಮೈದುನತನದ ಸರಸದಿಂದ ಆತನನ್ನು
ರಥದಲ್ಲಿ ಸ್ವಲ್ಪ ದೂರ ಕರೆದೊಯ್ದು ಆತನ ಜನ್ಮ ರಹಸ್ಯವನ್ನು ತಿಳಿಸಲು
ನೊಂದುಕೊಂಡಂತಹ ಕರ್ಣನು ಕೃಷ್ಣನು, ಕೌರವೇಂದ್ರನನ್ನು ಕೊಂದನು
ಎಂದನು.
ಉತ್ತರ: ಕರ್ಣನು ಕೃಷ್ಣನೊಡ್ಡಿದ ಯಾವುದೇ ಪ್ರಲೋಭನೆ
ಗಳಿಗೆ ಒಳಗಾಗದೇ ಮರಳು ಮಾಧವನೇ ರಾಜ್ಯದ ಸಿರಿಯ
ಐಭೋಗಕ್ಕೆ ಮನ ಸೋಲುವವನಲ್ಲ ಈ ಕರ್ಣ, ಕೌರವನ ವೈರಿಗಳೇ
ನನಗೂ ವೈರಿಗಳು. ನಾಳಿನ ಮಹಾಭಾರತ ಯುದ್ದವು ಮಾರಿಗೆ
ಔತಣವಾಯಿತು. ಕೋಟಿ ಕೋಟಿ ಸುಭಟರನ್ನು ದಿನ ದಿನವೂ ಕೊಂದು
ಬಳಿಕ ಸ್ವಾಮಿ ಕಾರ್ಯಕ್ಕಾಗಿ ಈ ಶರೀರವನ್ನು ನೂಕುವೆನು ಎಂದು
ಕರ್ಣನು ಖಡಾಖಂಡಿತವಾಗಿ ಹೇಳಿದನು.
ಉತ್ತರ: ಕರ್ಣನಿಗೆ ಕೃಷ್ಣನು - ನಿನಗೆ ಹಸ್ತಿನಾಪುರದ ರಾಜ್ಯದ
ಘನತೆಯನ್ನು ಮಾಡುವೆ. ಆಗ ಕೌರವ-ಪಾಂಡವರು ನಿನ್ನ ಚಕ್ರಾಧಿಪತ್ಯಕ್ಕೆ
ದಾಸಾನುದಾಸರಾಗುತ್ತಾರೆ. ಎರಡೂ ವಂಶಗಳು ನಿನ್ನ ಚರಣದಾಸರು.
ನೀನು ಸಿಂಹಾಸನದ ಮೇಲೆ ವಿರಾಜಮಾನರಾಗಿರುವಾಗ ಎಡಭಾಗ
ದಲ್ಲಿ ಕೌರವೇಂದ್ರರು, ಬಲಭಾಗದಲ್ಲಿ ಪಾಂಡುತನಯರು, ಎದುರಿನಲ್ಲಿ
ಮಾದ್ರಿ ಮಾಗಧ ಯಾದವರು ಇಷ್ಟೆಲ್ಲಾ ಇರುವಾಗ ಆ ಕೌರವೇಂದ್ರನ
ಬಾಯ್ದೆಂಬುಲಕ್ಕೆ ಕೈಯೊಡ್ಡುವುದು ನಿನಗೆ ನಾಚಿಕೆಯಲ್ಲವೇ?
ಕೌರವನೆದುರು ಜೀಯಾ ಹಸಾದ ಎಂಬುದು ಉಚಿತವೇ? ಕುಂತೀ
ಮಾತೆಯ ಹಿರಿಯ ಮಗನಾದ ನೀನು ಪಾಂಡವರ ಹಿರಿಯಣ್ಣನು ಎಂದು
ಆಮಿಷ ಒಡ್ಡಿದನು.
ಉತ್ತರ: ಶ್ರೀಕೃಷ್ಣನು ರವಿಸುತನ ಕಿವಿಯಲ್ಲಿ ಭಯವನ್ನು
ಬಿತ್ತುತ್ತಾ- ಕರ್ಣಾ ನೀನು ನಿನ್ನ ಜನ್ಮ ರಹಸ್ಯವನ್ನು ತಿಳಿದಿರುವಿಯೇನು?
ದೂರ್ವಾಸರು ಕುಂತಿಗೆ ಆಶೀರ್ವಾದ ಮಾಡಿದ ಅರಿವು ಐದು
ಮಂತ್ರಗಳಲ್ಲಿ ಮೊದಲನೆಯ ಮಂತ್ರ ಸೂರ್ಯಮಂತ್ರದಿಂದ ನೀನು
ನಂತರ ಯಮಮಂತ್ರದಿಂದ ಯುಧಿಷ್ಠಿರನು, ವಾಯು ಮಂತ್ರದಿಂದ
ಭೀಮಸೇನನು, ಇಂದ್ರ ಮಂತ್ರದಿಂದ ಅರ್ಜುನನು, ಅಶ್ವಿನೀ ದೇವತೆಗಳ
ಮಂತ್ರದಿಂದ ನಕುಲ-ಸಹದೇವರು. ಪಾಂಡವರ ಹಿರಿಯಣ್ಣನು
ನೀನಾದ್ದರಿಂದ ಅವರ ರಾಜ್ಯಕ್ಕೆಲ್ಲಾ ಅಧಿಪತಿಯಾದೆ ಎಂದು ಶ್ರೀಕೃಷ್ಣನು
ಹೇಳುತ್ತಿರುವಂತೆಯೇ ಕರ್ಣನ ಕುತ್ತಿಗೆಯ ನರಗಳು ಉಬ್ಬಿದವು. ದುಃಖದ
ಕಟ್ಟೆ ಒಡೆಯಿತು. ಯುದ್ದಕ್ಕೆ ಮುನ್ನವೇ ನಿನ್ನ ಜನ್ಮರಹಸ್ಯವನ್ನು ತಿಳಿಸಿ
ಶ್ರೀಕೃಷ್ಣನು ತನ್ನನ್ನು ಕೊಂದನು ಎಂದನು.
ಉತ್ತರ: ತನ್ನ ಜನ್ಮ ರಹಸ್ಯವು ತಿಳಿದಾಗಲೂ, ಕೃಷ್ಣನು ಪಾಂಡವ
ರಾಜ್ಯದ ಆಮಿಷವನ್ನು ಹಲವಾರು ರೀತಿಯಿಂದ ಒಡಿದಾಗಲೂ ಆ
ವೀರನು ಯುದ್ಧದ ನಿರ್ಣಯವನ್ನೇ ತೆಗೆದುಕೊಂಡಿದ್ದು ನಿಜಕ್ಕೂ ಮೆಚ್ಚು
ವಂತಹ ಮಾತು. ಕೌರವನ ಹಗೆಗಳೇ ನನ್ನ ಹಗೆಗಳು, ನಾಳಿನ ಭಾರತವು
ಮಾರಿಗೌತಣವಾಯ್ತು. ಯುದ್ಧಭೂಮಿಯಲ್ಲಿ ಪ್ರತಿ ದಿನವೂ ಕೋಟಿ
ಕೋಟಿ ವೀರರನ್ನು ಕೊಂದು ಒಡೆಯನ ಋಣವನ್ನು ಕಳೆದುಕೊಳ್ಳುತ್ತೇನೆ,
ಎಲವೋ ಮರುಳು ಮಾಧವನೇ ಆಮಿಷಗಳಿಗೆಲ್ಲಾ ಮನ ಸೋಲುವವನಲ್ಲ
ಈ ಕರ್ಣ ಎಂಬುದು ಎಂತಹ ದಿಟ್ಟವಾದ ನಿಲುವು?
- ಕಾವ್ಯಭಾಗ : ಕೌರವೇಂದ್ರನ ಕೊಂದೆ ನೀನು
ಕವಿ : ಕುಮಾರವ್ಯಾಸ
ಆಕರ : ಕರ್ಣಾಟಭಾರತ ಕಥಾಮಂಜರಿ.
ವಿವರಣೆ: ಸಂಧಾನವನ್ನು ಮುರಿದುಕೊಂಡು ಕೌರವೇಂದ್ರನ
ಆಸ್ಥಾನದಿಂದ ಮರಳುವಾಗ ಶ್ರೀಕೃಷ್ಣನು ತನ್ನ ರಥವನ್ನು ಕರ್ಣನ
ಮನೆಯತ್ತ ನಡಯಿಸಿ ಆತನನ್ನು ಮೈದುನತನದ ಸರಸದಿಂದ ಬರಸೆಳೆದು
ಅಪ್ಪಿ ತೊಡೆಗೆ ತೊಡೆ ಸೋಂಕುವಂತೆ ರಥದಲ್ಲಿ ಕುಳ್ಳಿರಿಸಿಕೊಂಡು ಮುಂದೆ
ಹೋಗಿ ಕರ್ಣಾ ನಿನಗೂ ಯಾದವರಿಗೂ ಪಾಂಡವರಿಗೂ
ಭೇದವೆಂಬುದಿಲ್ಲ. ನನ್ನಾಣೆಯಾಗಿಯೂ ಪಾಂಡವರ ಹಿರಿಯಣ್ಣನಾದ
ನೀನು ಆ ಸಾಮ್ರಾಜ್ಯಕ್ಕೆ ಅಧಿಪತಿಯು ಎಂದು ಕಿವಿಯಲ್ಲಿ ಭಯವನ್ನು
ಬಿತ್ತಿದನು. ಇಲ್ಲಿ ಶ್ರೀಕೃಷ್ಣನ ಚತುರ ರಾಜಕಾರಣವನ್ನು ನಾವು ಕಾಣುತ್ತೇವೆ.
ಕಾವ್ಯಭಾಗ : ಕೌರವೇಂದ್ರನ ಕೊಂದೆ ನೀನು
ಕವಿ : ಕುಮಾರವ್ಯಾಸ
ಆಕರ : ಕರ್ಣಾಟಭಾರತ ಕಥಾಮಂಜರಿ.
ವಿವರಣೆ: ಕರ್ಣಾ! ನಿಜವಾದ ಅರ್ಥದಲ್ಲಿ ತಿಳಿದು ನೋಡಿದರೆ
ನೀನು ಪಾಂಡವರ ಹಿರಿಯಣ್ಣನು. ನಿನಗೆ ಹಸ್ತಿನಾಪುರ ರಾಜ್ಯದ ಘನ
ಪದವಿಯನ್ನು ಕೊಡಿಸುತ್ತೇನೆ. ಪಾಂಡವ-ಕೌರವ ಎರಡೂ ವಂಶಗಳು
ನಿನ್ನ ಚರಣದಾಸರಾಗುತ್ತಾರೆ. ಅಂತಹ ಘನ ಅಧಿಕಾರವನ್ನು ಬಿಟ್ಟು
ಕೌರವನ ಬಾಯ್ ತಂಬುಲಕ್ಕೆ (ಎಂಜಲಕ್ಕೆ) ಕೈಯೊಡ್ಡುವದುಚಿತವೇ
ಎಂದು ಶ್ರೀಕೃಷ್ಣನು ಮಾರ್ಮಿಕವಾಗಿ ನುಡಿದನು.
ಕಾವ್ಯಭಾಗ : ಕೌರವೇಂದ್ರನ ಕೊಂದೆ ನೀನು
ಕವಿ : ಕುಮಾರವ್ಯಾಸ
ಆಕರ : ಕರ್ಣಾಟಭಾರತ ಕಥಾಮಂಜರಿ.
ವಿವರಣೆ: ಕರ್ಣಾ ನಿನ್ನ ರಾಜ್ಯಸಿಂಹಾಸನ ವೈಭೋಗದ ಕಲ್ಪನೆ
ಯನ್ನು ಒಮ್ಮೆ ಸ್ಮರಿಸಿಕೋ, ನಿನ್ನ ಸಿಂಹಾಸನದ ಎಡಭಾಗದಲ್ಲಿ
ಕೌರವೇಂದ್ರರು, ಬಲಭಾಗದಲ್ಲಿ ನಿನ್ನನುಜರಾದ ಪಾಂಡವರು, ನಡುವೆ
ಅಂದರೆ ಎದುರಿನಲ್ಲಿ ಮಾದ್ರ ಮಾಗಧ ಯಾದವಾದಿಗಳು. ಅಂತಹ
ಶ್ರೇಷ್ಠವಾದ ವೈಭವದಲ್ಲಿರುವುದು ಬಿಟ್ಟು ಕೌರವನು ಮಾತನಾಡಿಸಲು
ಜೀಯಾ ಹಸಾದ ಎಂಬುದು ನಿನಗೆಂದೂ ಕಷ್ಟಕರವಲ್ಲವೇ ಎಂದನು
ಕಾವ್ಯಭಾಗ : ಕೌರವೇಂದ್ರನ ಕೊಂದೆ ನೀನು
ಕವಿ : ಕುಮಾರವ್ಯಾಸ
ಆಕರ : ಕರ್ಣಾಟಭಾರತ ಕಥಾಮಂಜರಿ.
ವಿವರಣೆ: ತನ್ನ ಜನ್ಮರಹಸ್ಯವನ್ನು ಕೃಷ್ಣನು ಹೇಳುತ್ತಾ ಹೋದಂತೆ
ಆ ಕಲಿಕರ್ಣನಿಗೆ ದುಃಖವು ಉಕ್ಕಿ ಬಂದಿತು. ಜನ್ಮರಹಸ್ಯವನ್ನರು
ಕೌರವೇಂದ್ರನ ಕೊಂದನು ಈ ಕೃಷ್ಣ ಎಂದನು. ಸುಮ್ಮನೆ ಮೌನವಾಗಿದ
ಕರ್ಣನಿಗೆ ಮತ್ತೆ ಕೃಷ್ಣನು - ಏನು ಹೇಳಯ್ಯ ಕರ್ಣ ಮನಸ್ಸಿಗೆ ದುಃಖವೇಕೆ?
ಪಾಂಡವರೊಡನೆ ಬಾಳಿ ರಾಜ್ಯಸುಖವ ಅನುಭವಿಸಲು ನಿನಗೆ ಮನಸ್ಸು.
ಇಲ್ಲವೇ? ನಿನ್ನಾಣೆಯಾಗಿಯೂ ನಾನು ನಿನ್ನ ಅಪದೆಸೆಯ ಬಯಸು
ವವನಲ್ಲ ಎಂದನು.
ಕಾವ್ಯಭಾಗ : ಕೌರವೇಂದ್ರನ ಕೊಂದೆ ನೀನು
ಕವಿ : ಕುಮಾರವ್ಯಾಸ
ಆಕರ : ಕರ್ಣಾಟಭಾರತ ಕಥಾಮಂಜರಿ.
ವಿವರಣೆ: ಕೃಷ್ಣ ಮಾಡಿದಂತಹ ಯಾವುದೇ ಷಡ್ಯಂತ್ರದ
ಬಲೆಗೂ ಬೀಳದಂತಹ ಕರ್ಣನು ತನ್ನ ಅಂತಿಮ ನಿರ್ಧಾರವನ್ನು
ಹೇಳುತ್ತಾ - ನಾಳಿನ ಭಾರತವು ಮಾರಿಗೆ ಔತಣವಾಯಿತು. ಕೌರವನ
ಋಣ ತೀರಿಸಲು ರಣರಂಗದಲ್ಲಿ ಶೂರಾದಿಶೂರರಾದ ಕೋಟಿ
ಕೋಟಿ ಜನರನ್ನು ಕೊಂದು ಸ್ವಾಮಿ ಕಾರ್ಯಕ್ಕೆ ಶರೀರವನ್ನು ನೂಕುವನು
ಎಂದನು.
1. 'ರಾಜೀವಸಖ' ಎಂದರೆ ಸೂರ್ಯ ಎಂದು ಅರ್ಥ.
- 2, ಗದುಗಿನ ಭಾರತವು ಭಾಮಿನೀ ಷಟ್ನದಿಯಲ್ಲಿ ರಚಿತವಾಗಿದೆ.
3. ಅಶ್ವಿನಿ ದೇವತೆಗಳ ವರಬಲದಿಂದ ನಕುಲ ಸಹದೇವರು
ಜನಿಸಿದರು.
4. ಕರ್ಣನು ಸೂರ್ಯಮಂತ್ರದ ಅನುಗ್ರಹದಿಂದ ಜನಿಸಿದನು.
[ ಕರುಗಿನ ಸಮೀಪದ ಕೋಳಿವಾಡ ಕುಮಾರವಾಸನು
ಹುಟ್ಟಿದ ಸ್ಥಳ.