1. ರಾಸಾಯನಿಕ ಕ್ರಿಯೆ ಉಂಟಾಗಿದೆ ಎಂದು ಸೂಚಿಸುವ ಅಂಶಗಳು ಯಾವುವು?
- ಸ್ಥಿತಿ ಬದಲಾವಣೆ
- ವಸ್ತು ಬದಲಾವಣೆ
- ಅನಿಲ ಬಿಡುಗಡೆ
- ತಾಪದಲ್ಲಿ ಬದಲಾವಣೆ
2. ರಾಸಾಯನಿಕ ಕ್ರಿಯೆಗಳ ವಿಧಗಳು ಯಾವುವು?
- ಸಂಯೋಗ ಕ್ರಿಯೆ
- ವಿಭಜನೆ ಕ್ರಿಯೆ
- ಸ್ಥಾನಪಲ್ಲಟ ಕ್ರಿಯೆ
- ದ್ವಿಸ್ಥಾನಪಲ್ಲಟ ಕ್ರಿಯೆ
- ಉತ್ಕರ್ಷಣ ಕ್ರಿಯೆ
- ಅಪಕರ್ಷಣ ಕ್ರಿಯೆ
ಸಂಯೋಗ ಕ್ರಿಯೆಗೆ ಉದಾಹರಣೆ ಕೊಡಿ
ಕ್ಯಾಲ್ಸಿಯಂ ಆಕ್ಸೈಡ್ ನೀರಿನೊಂದಿಗೆ ವೇಗವಾಗಿ ವರ್ತಿಸಿ ದೊಡ್ಡ ಪ್ರಮಾಣದಲ್ಲಿ ಉಷ್ಣ ಬಿಡುಗಡೆ ಮಾಡುತ್ತದೆ ಅರಳಿದ ಸುಣ್ಣ ಉತ್ಪತ್ತಿ ಆಗುತ್ತದೆ
CaO + H2O ------- > Ca(OH)2 + Heat
ಕಲ್ಲಿದ್ದಲಿನ ದಹನ
C + O2 ------- > CO2
ನೀರು ಉಂಟಾಗುವ ಕ್ರಿಯೆ
2H2 + O2 -------- > 2H2O
ಅರಳಿದ ಸುಣ್ಣ ದ ಉಪಯೋಗವೇನು
ಅರಳಿದ ಸುಣ್ಣವನ್ನು ಗೋಡೆಗೆ ಬಿಳಿ ಬಣ್ಣ ಬಳಿಯಲು ಬಳಸುತ್ತಾರೆ
ಅಮೃತಶಿಲೆಯ ರಾಸಾಯನಿಕ ಸೂತ್ರವೇನು
CaCO3
ಗೋಡೆಗೆ ಬಡಿದ ಬಿಳಿಯ ಸುಣ್ಣ ಹೇಗೆ ಹೊಳಪನ್ನು ನೀಡುತ್ತದೆ
ಉತ್ತರ : ಅರಳಿದ ಸುಣ್ಣ ಅಥವಾ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನಿಧಾನವಾಗಿ ಗಾಳಿಯಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ನೋಂದಿಗೆ ವರ್ತಿಸಿ ಗೋಡೆಯ ಮೇಲೆ ಕ್ಯಾಲ್ಸಿಯಂ ಕಾರ್ಬೊನೇಟ್ ನ ತೆಳುವಾದ ಪದರವನ್ನು ಉಂಟು ಮಾಡುತ್ತದೆ ಇದು ಗೋಡೆಗೆ ಹೊಳಪನ್ನು ನೀಡುತ್ತದೆ
Ca(OH)2 + CO2 -------- > CaCO3 + H2O
ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳು ಎಂದರೇನು
ಉತ್ತರ : ರಾಸಾಯನಿಕ ಕ್ರಿಯೆಯಲ್ಲಿ ಉತ್ಪನ್ನಗಳೊಂದಿಗೆ ಮಾಡುವ ಉಷ್ಣ ಬಿಡುಗಡೆ ಮಾಡುವ ಕ್ರಿಯೆಗಳನ್ನು ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳು ಎನ್ನುವರು
ಬಹಿರುಷ್ಣಕ ರಾಸಾಯನಿಕ ಕ್ರಿಯೆಗಳಿಗೆ ಉದಾಹರಣೆ ಕೊಡಿ
ಉತ್ತರ :
ನೈಸರ್ಗಿಕ ಅನಿಲದ ದಹನ
CH4 + 2O2 -------- > CO2 + 2H2O
ವಿಭಜನ ಕ್ರಿಯೆ ಎಂದರೇನು
ಉತ್ತರ ಒಂದು ಪ್ರತಿವರ್ತಕವು ಎರಡು ಅಥವಾ ಹೆಚ್ಚು ಉತ್ಪನ್ನಗಳ ಆಗುವ ಕ್ರಿಯೆಯನ್ನು ವಿಭಜನ ಕ್ರಿಯೆ ಎನ್ನುವರು
ವಿಭಜನ ಕ್ರಿಯೆಗೆ ಉದಾಹರಣೆ ಕೊಡಿ
ಶುಷ್ಕ ಕುದಿ ಕೊಳವೆಯಲ್ಲಿ 2 ಗ್ರಾಂ ಫೆರಸ್ ಸಲ್ಫೆಟ್ ಹರಳು ತೆಗೆದುಕೊಳ್ಳಿ
ಫೆರಸ್ ಸಲ್ಫೆಟ್ ಹರಳುಗಳ ಬಣ್ಣ ಗುರುತಿಸಿಕೊಳ್ಳಿ
ಬರ್ನರ್ ಸಹಾಯದಿಂದ ಕಾಯಿ ಕಾಯಿಸಿ
ಸಲ್ಫೇಟ್ ಫೆರಸ್ ಸಲ್ಫೇಟ್ ಹರಳುಗಳ ಬಣ್ಣ ಹಸಿರಿಗೆ ಬದಲಾಗುತ್ತದೆ
2FeSO4 --------- > Fe2O3 + SO2 + SO3
ಕ್ಯಾಲ್ಸಿಯಂ ಆಕ್ಸೈಡ್ ನ ಇನ್ನೊಂದು ಹೆಸರೇನು
ಉತ್ತರ : ಸುಣ್ಣ ಅಥವಾ ಸುಟ್ಟ ಸುಣ್ಣ
ಕ್ಯಾಲ್ಸಿಯಂ ಆಕ್ಸೈಡ್ ನ ಉಪಯೋಗವೇನು
ಉತ್ತರ : ಸಿಮೆಂಟ್ ತಯಾರಿಕೆಯಲ್ಲಿ ಬಳಸುವರು
ಉಷ್ಣ ವಿಭಜನೆ ಕ್ರಿಯೆ ಎಂದರೇನು
ಉತ್ತರ :ವಿಭಜನ ಕ್ರಿಯೆ ಕಾಸುವ ಮೂಲಕ ನಡೆದರೆ ಅದನ್ನು ಉಷ್ಣ ವಿಭಜನೆ ಕ್ರಿಯೆ ಎನ್ನುವರು
ಉಷ್ಣ ವಿಭಜನ ಕ್ರಿಯೆಗೆ ಉದಾಹರಣೆ ಕೊಡಿ
ಉತ್ತರ : ಕ್ಯಾಲ್ಸಿಯಂ ಕಾರ್ಬೋನೇಟ್ ಕಾಯಿಸಿದಾಗ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮತ್ತು ಕಾರ್ಬನ್ ಡೈಯಾಕ್ಸೈಡ್ ಆಗಿ ವಿಭಜನೆ ಗೊಳ್ಳುತ್ತದೆ
CaCO3--------- > CaO + CO2
ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ ಬಳಸುವ ಕ್ರಿಯೆಯನ್ನು ವಿವರಿಸಿ
ಉತ್ತರ :
-ಚೀನಾ ಪಾತ್ರೆಯಲ್ಲಿ ಸುಮಾರು 2 ಗ್ರಾಂ ಬೆಳ್ಳಿಯ ಕ್ಲೋರೈಡ ತೆಗೆದುಕೊಳ್ಳಿ
- ಅದರ ಬಣ್ಣ ಬಿಳಿಯದಾಗಿರುತ್ತದೆ
- ಪಾತ್ರೆಯನ್ನು ಸ್ವಲ್ಪ ಸಮಯ ಸೂರ್ಯನ ಬೆಳಕಿನಲ್ಲಿಡಿ
- ನಂತರ ಬೆಳ್ಳಿಯ ಕ್ಲೋರೈಡ್ ನ ಬಿಳಿಯ
- ಬಣ್ಣವು ಸೂರ್ಯನ ಬೆಳಕಿನಲ್ಲಿ ಬೂದು ಬಣ್ಣಕ್ಕೆ ತಿರುಗುತ್ತದೆ
- ಕಾರಣ ಬೆಳ್ಳಿಯ ಕ್ಲೋರೈಡ ಬೆಳ್ಳಿ ಮತ್ತು ಕ್ಲೋರಿನ್ ಆಗಿ ವಿಭಜನೆಯಾಗುತ್ತದೆ
2AgCl ----------- > 2Ag + Cl2
ಅಂತರುಷ್ಣಕ ಕ್ರಿಯೆಗಳು ಎಂದರೇನು
ಉತ್ತರ : ಉಷ್ಣ ಶಕ್ತಿಯು ಹೀರಿಕೆ ಯಾಗುವ ಕ್ರಿಯೆಯನ್ನು ಅಂತರುಷ್ಣಕ ಕ್ರಿಯೆಗಳು ಎನ್ನುವರು
ಸ್ಥಾನ ಪಲ್ಲಟ ಕ್ರಿಯೆ ಎಂದರೇನು
ಉತ್ತರ : ರಾಸಾಯನಿಕ ಕ್ರಿಯೆಯಲ್ಲಿ ಹೆಚ್ಚು ಕ್ರಿಯಾಪಟು ಧಾತು ಕಡಿಮೆ ಕ್ರಿಯಾಪಟು ಧಾತುವನ್ನು ತೆಗೆದುಹಾಕುತ್ತದೆ ಇಂತಹ ಕ್ರಿಯೆಯನ್ನು ಸ್ಥಾನ ಪಲ್ಲಟ ಕ್ರಿಯೆ ಎನ್ನುವರು
ಸ್ಥಾನ ಪಲ್ಲಟ ಕ್ರಿಯೆಗೆ ಉದಾಹರಣೆ ಕೊಡಿ
Fe + CuSO4 ---------- > FeSO4 + Cu
Zn + CuSO4 --------- > ZnSO4 + Cu
Pb + CuCl2 ------- > PbCl2 + Cu
ದ್ವಿ ಸ್ಥಾನ ಪಲ್ಲಟ ಕ್ರಿಯೆ ಎಂದರೇನು
ಉತ್ತರ : ಯಾವ ರಾಸಾಯನಿಕ ಕ್ರಿಯೆಯಲ್ಲಿ ಪ್ರತಿವರ್ತಕಗಳು ಮತ್ತು ಉತ್ಪನ್ನಗಳ ನಡುವೆ ಅಯಾನುಗಳ ವಿನಿಮಯ ನಡೆಯುತ್ತದೆಯೋ ಅಂತಹ ಕ್ರಿಯೆಯನ್ನು ದ್ವಿ ಸ್ಥಾನ ಪಲ್ಲಟ ಕ್ರಿಯೆ ಎನ್ನುವರು
ದ್ವಿಸ್ಥಾನಪಲ್ಲಟ ಹೇಗೆ ಕ್ರಿಯೆಗೆ ಉದಾಹರಣೆ ಕೊಡಿ
ಉತ್ತರ :
- ಒಂದು ಪ್ರನಾಳದಲ್ಲಿ 3 ಮಿಲಿ ಸೋಡಿಯಂ ಸಲ್ಫೇಟ್ ದ್ರಾವಣವನ್ನು ತೆಗೆದುಕೊಳ್ಳಿ
- ಇನ್ನೊಂದು ನಾಳದಲ್ಲಿ ಬೇರಿಯಂ ಕ್ಲೋರೈಡ್ ತೆಗೆದುಕೊಳ್ಳಿ
- 2 ದ್ರಾವಣವನ್ನು ಮಿಶ್ರಣ ಮಾಡಿ
- ಇಲ್ಲಿ ವಿಲೀನ ಗೊಳ್ಳದ ಬಿಳಿಯ ವಸ್ತು ಉಂಟಾಗುತ್ತದೆ ಇದನ್ನು ಪ್ರಕ್ಷೇಪ ಎನ್ನುವರು
Na2SO4 + BaCl2 --------- > BaSO4 + 2NaCl
ಪ್ರಕ್ಷೇಪ ಎಂದರೇನು
ಉತ್ತರ : ಜಲ ವಿಲೀನಗೊಳ್ಳದ ವಸ್ತುವನ್ನು ಪ್ರಕ್ಷೇಪ ಎನ್ನುವರು
ಪ್ರಕ್ಷೇಪ ಕ್ರಿಯೆ ಎಂದರೇನು
ಉತ್ತರ : ಪ್ರಕ್ಷೇಪ ವನ್ನು ಉಂಟುಮಾಡುವ ಕ್ರಿಯೆಯನ್ನು ಪ್ರಕ್ಷೇಪ ಕ್ರಿಯೆ ಎನ್ನುವರು
ಪ್ರಕ್ಷೇಪ ಕ್ರಿಯೆಗೆ ಉದಾಹರಣೆ ಕೊಡಿ
Na2SO4 + BaCl2 --------- > BaSO4 + 2NaCl
ಉತ್ಕರ್ಷಣ ಎಂದರೇನು
ಉತ್ತರ : ಉತ್ತರ ರಾಸಾಯನಿಕ ಕ್ರಿಯೆಯಲ್ಲಿ ವಸ್ತುವು ಆಕ್ಸಿಜನ್ ಪಡೆದುಕೊಂಡರೆ ಅದನ್ನು ಉತ್ಕರ್ಷಣ ಎನ್ನುವರು
ಉತ್ಕರ್ಷಣ ಕ್ರಿಯೆಗೆ ಉದಾಹರಣೆ ಕೊಡಿ
2Cu + O2 -------- > 2CuO
ಅಪಕರ್ಷಣ ಕ್ರಿಯೆ ಎಂದರೇನು
ಉತ್ತರ : ರಾಸಾಯನಿಕ ಕ್ರಿಯೆಯಲ್ಲಿ ವಸ್ತುವು ಆಕ್ಸಿಜನ್ ಕಳೆದುಕೊಂಡರೆ ಅದನ್ನು ಅಪಕರ್ಷಣ ಎನ್ನುವರು
ಅಪಕರ್ಷಣ ಕ್ರಿಯೆಗೆ ಉದಾಹರಣೆ ಕೊಡಿ
CuO + H2 -------- > Cu + H2O
ರೆಡಾಕ್ಸ್ ಕ್ರಿಯೆ ಎಂದರೇನು
ಉತ್ತರ : ಒಂದು ಕ್ರಿಯೆಯಲ್ಲಿ ಒಂದು ಪ್ರತಿವರ್ತಕವು ಉತ್ಕರ್ಷಣೆ ಗೊಂಡು ಮತ್ತೊಂದು ಪ್ರತಿ ವರ್ತಕವೂ ಅಪಕರ್ಷಣ ಗೊಳ್ಳುವ ಕ್ರಿಯೆಗೆ ರೆಡಾಕ್ಸ್ ಕ್ರಿಯೆ ಎನ್ನುವರು
ರೆಡಾಕ್ಸ್ ಕ್ರಿಯೆಗೆ ಉದಾಹರಣೆ ಕೊಡಿ
CuO + H2 ---------- > Cu + H2O
ZnO + C -------- > Zn + CO
MnO4 + 4HCl --------- > MnCl4 + 2H2O + Cl2
ಉತ್ಕರ್ಷಣ ಕ್ರಿಯೆಯ ಪರಿಣಾಮಗಳಾವುವು
ನಶಿಸುವಿಕೆ
ಕಮಟುವಿಕೆ
ನಶಿಸುವಿಕೆ ಎಂದರೇನು
ಉತ್ತರ : ಲೋಹವು ತನ್ನ ಸುತ್ತಲಿನ ವಸ್ತುಗಳಾದ ತೇವಾಂಶ ಆಮ್ಲಗಳು ಇತ್ಯಾದಿಗಳಿಂದ ಆಕ್ರಮಿಸಿದಾಗ ಹಾಳಾಗುತ್ತವೆ ಇದನ್ನು ನಶಿಸುವಿಕೆ ಎನ್ನುವರು
ನಶಿಸುವಿಕೆ ಗೆ ಉದಾಹರಣೆ ಕೊಡಿ
ಉತ್ತರ :
ಬೆಳ್ಳಿಯ ಮೇಲಿನ ಕಪ್ಪು ಲೇಪನ
ತಾಮ್ರದ ಮೇಲಿನ ಹಸಿರು ಲೇಪನ
ನಶಿಸುವಿಕೆ ಯ ಪರಿಣಾಮವೇನು
ಉತ್ತರ : ನಶಿಸುವಿಕೆ ಯು ಕಾರಿನ ಕವಚ ಸೇತುವೆ ಕಬ್ಬಿಣದ ಹಡಗುಗಳನ್ನು ಮತ್ತು ಲೋಹಗಳಿಂದ ಮಾಡಲ್ಪಟ್ಟ ವಸ್ತುಗಳಿಗೆ ಹಾನಿಯನ್ನುಂಟು ಮಾಡುತ್ತದೆ
ಕಮಟುವಿಕೆ ಎಂದರೇನು
ಉತ್ತರ : ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆ ಗೊಂಡಾಗ ಅವುಗಳ ವಾಸನೆ ಮತ್ತು ರುಚಿ ಬದಲಾಗುತ್ತದೆ ಇದನ್ನು ಕಮಟುವಿಕೆ ಎನ್ನುವರು
ಕಮಟುವಿಕೆ ಯನ್ನು ಹೇಗೆ ನಿಧಾನಗೊಳಿಸಬಹುದು
ಉತ್ತರ : ಆಹಾರ ಪದಾರ್ಥಗಳನ್ನು ಗಾಳಿ ಪ್ರವೇಶಿಸದಂತೆ ಸಂಗ್ರಹಗಳಲ್ಲಿ ಶೇಖರಿಸುವುದರಿಂದ ಹಾಗೂ ನೈಟ್ರೋಜನ್ ಗಾಳಿ ಹಾಯಿಸುವುದರಿಂದ ನಿಧಾನ ಗೊಳಿಸಬಹುದು