ಉತ್ತರ: ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ
ಹೆಸರು 'ವೂಲವರ್ಥ್'.
ಉತ್ತರ: ನೆಲ್ಸನ್ರವರ ಮೂರ್ತಿಯಿರುವ ಸ್ಥಳದ ಹೆಸರು
ಟ್ರಾಫಲ್ದಾರ್ ಸೈರ್,
ಉತ್ತರ: ವಸ್ಮಿನಿಸ್ಸರ್ ಅಬೆ ಇದು ಪ್ರಾರ್ಥನಾಮಂದಿರ -
ಇದು ಸಂತರು, ಸಾರ್ವಭೌಮರು, ಕವಿಪುಂಗವರುಗಳ ಸ್ಮಾರಕವಾಗಿದೆ.
ಉತ್ತರ: 'ಚೇರಿಂಗ್ ಕ್ರಾಸ್ ಎಂಬ ಓಣಿಯಲ್ಲಿ ಆಂಗ್ಲರ
ಸಾಮ್ರಾಜ್ಯ ವೈಭವವು ಕಂಡುಬರುವುದು.
ಉತ್ತರ: ವೂಲವರ್ಥ್ ಎಂಬ ಸ್ಟೇಶನರಿ ಅಂಗಡಿಯು
ನೋಡುವ ಹಾಗಿದೆ. ಇಲ್ಲಿ ಬೂಟು, ಕಾಲುಚಿಲ, ಚಣ್ಣ, ಸಾಬೂನು,
ಔಷಧ, ಪುಸ್ತಕ, ಅಡುಗೆಯ ಪಾತ್ರೆ, ಅಡವಿಯ ಹೂವು, ಯುದ್ಧ
ಸಾಮಗ್ರಿ, ಇನ್ನೂ ಅನೇಕ ವಸ್ತುಗಳು ಇಲ್ಲಿ ಸಿಗುತ್ತವೆ. ಎಲ್ಲ ತರಹದ
ಸಾಮಾನುಗಳನ್ನು ಇಲ್ಲಿ ಒಂದು ಪೆನ್ನಿಯಿಂದ ಆರು ಪೆನ್ಸಿಯವರೆಗೆ
ಮಾರುತ್ತಾರೆ. ಈ ಅಂಗಡಿಯ ವಿಧವಿಧದ ವಿಭಾಗಗಳನ್ನು ನಿರ್ಮಿಸಿದ
ಬುದ್ದಿಯ ಚಮತ್ಕಾರವು ನೋಡತಕ್ಕಂತಹುದು.
ಉತ್ತರ: ಲಂಡನ್ನಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ
- ಕೆಲಸ ಮಾಡುತ್ತಾರೆ. ಉಪಹಾರ ಗೃಹಗಳಲ್ಲಿ ಇಲ್ಲಿ ಮಾಣಿಗಳಾಗಿ,
ದೊಡ್ಡ ಅಂಗಡಿಗಳಿಗೆ ಹೋದರೆ ಅಲ್ಲಿ ಟೈಪಿಸ್ಟ್ ಕಾರಕೂನರಾಗಿ, ಸಿನಿಮಾ
ಗೃಹದಲ್ಲಿ ಜಾಗ ಹುಡುಕಿ ಕೊಡುವವರಾಗಿ, ಕಾಲೇಜಿನಲ್ಲಿ
ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರಾಗಿ ಲಂಡನ್ನಿನ
ಹೆಣ್ಣು ಮಕ್ಕಳು ಇಂತಹ ಕೆಲಸಗಳಲ್ಲಿ ನಿಯುಕ್ತರಾಗಿದ್ದಾರೆ.
ಉತ್ತರ: ಲಂಡನ್ನಿನ ಬೀದಿಯಲ್ಲಿ ಲಕ್ಷಾನುಲಕ್ಷ ಜನರು.
ತಿರುಗಾಡುತ್ತಾರೆ. ಅವಸರದಿಂದ ಓಡಾಡುತ್ತಾರೆ. ಇದು ಅಕ್ಷರಶಃ
ವಿಲಾಯತಿಯಲ್ಲಿ ನಿಜವಾಗಿದೆ. ಲೇಖಕರು ಅಲ್ಲಿನ ಹೆಣ್ಣುಮಕ್ಕಳ
ಟೋಪಿಯನ್ನು ಕುತೂಹಲದಿಂದ ನೋಡಿದರು. ಒಂದು
ಟೊಪ್ಪಿಗೆಯಂತೆ ಇನ್ನೊಂದು ಇರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ
ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ. ಕೋಟ್ಯಾವಧಿ ಟೊಪ್ಪಿಗೆಗಳನ್ನು
ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು.
ಉತ್ತರ: ಪೋಯೆಟ್ ಕಾರ್ನ್ರನಲ್ಲಿ ಕಿಪ್ಲಿಂಗ್ ಕವಿಯ
ಸಮಾಧಿ, ಅದಕ್ಕೆ ತುಸು ದೂರದಲ್ಲಿಯೇ ಹಾರ್ಡಿಯ ಸಮಾಧಿ,
ಮಾಕಾಲೆ, ಜಾನ್ಸನ್, ಗೋಲ್ಸಿತ್, ಡ್ರಾಯಡನ್ ಮುಂತಾದ
ಕವಿಗಳ ಸಮಾಧಿಗಳಿವೆ.
ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ
ಒಂಹಾಸನದ ಮೇಲೆ ಒಂದು ಕಲ್ಲುಪಾಟಿಯನ್ನು ಹಾಕುತ್ತಾರೆ.
ತಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ
ಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು
ಮಿನಿಸ್ಟರ್ ಮಂದಿರದಲ್ಲಿಯ ಒಂದು ಭಾಗವಾಗಿದೆ.
ಉತ್ತರ: ಲೇಖಕರು ಲಂಡನ್ ನಗರ ವೀಕ್ಷಣೆ ಮಾಡಿದಾಗ ಆ
ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತಾಗಿ ಅವರಿಗೆ ಕಂಡುಬಂದಿತು.
ಇಲ್ಲಿನ ರಸ್ತೆಗಳಲ್ಲಿ ವ್ಯಾಪಾರವು ತುಂಬಿ ಟ್ರಾಮ್, ಬಸ್ಸುಗಳಿಗೆ ಸಕಾಲದಲ್ಲಿ
ಹೋಗಲಿಕ್ಕೆ ಆಗುವುದಿಲ್ಲ. ಬಹಳ ಹೊತ್ತು ನಡುವೆ ನಿಲ್ಲಬೇಕಾಗುತ್ತದೆ.
ಇದನ್ನು ತಪ್ಪಿಸುವುದಕ್ಕಾಗಿ ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ.
ಹಳಿ ಇಲೆಕ್ಟಿಕ್ ನಿಲ್ಯನೆ ಎಲ್ಲವೂ ಒಳಗೇ ಇದೆ, ಲೇಖಕರು ಲಂಡನ್
ನಗರದ ಪೇಟೆಯಲ್ಲಿ ತಿರುಗಾಡಿದಾಗ ವೂಲವರ್ಥ್ ಎಂಬ ಸ್ಟೇಶನರಿ
ಅಂಗಡಿಯನ್ನು ನೋಡಿದರು. ಇದು ಪ್ರೇಕ್ಷಣೀಯ ಸ್ಥಳವಾಗಿದೆ. ಈ
ಅಂಗಡಿಯ ವಿಧವಿಧದ ವಿಭಾಗಗಳನ್ನು ನಿರಿಸಿದ ಬುದ್ದಿಯ
ಚಮತ್ಕಾರವು ನೋಡತಕ್ಕಂತಹುದು. ಪ್ರಾಚೀನ ಮಹಾಕಾವ್ಯದಂತೆ
ಇದೊಂದು ಮಹಾಕೋಶವಾಗಿದೆ. ಸ್ವಾಂಡ್ದಲ್ಲಿಯ ಸ್ಕಾಮ್
ಸಿಂಪಿಗಳು ಇಲ್ಲಿ ಪ್ರಸಿದ್ದಿಯನ್ನು ಹೊಂದಿದ್ದಾರೆ.
- ಲಂಡನ್ ನಗರದ ವ್ಯವಹಾರ ಮುಂಗಟ್ಟುಗಳಲ್ಲಿ ಗಂಡಿಗಿಂತ
ಹೆಣ್ಣು ಹೆಚ್ಚಿದ್ದ ಹಾಗೆ ಕಾಣುತ್ತದೆ. ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ
ಸ್ತ್ರೀಯರೇ ಕೆಲಸ ಮಾಡುತ್ತಾರೆ. ಲಂಡನ್ನಲ್ಲಿನ ಇಂಡಿಯಾ ಆಫೀಸು
ನೋಡುವ ಹಾಗಿದೆ. ವಚನಾಲಯದಲ್ಲಿ ಅನೇಕ ಮಹತ್ವದ ಪುಸ್ತಕಗಳಿವೆ.
ನಗರದ ಪ್ರತಿಯೊಂದು ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ
ಇರುತ್ತದೆ. ಹೊತ್ತು ! ಹೊತ್ತು ! ಹೊತ್ತೇ ಹಣ ಇದು ಅಕ್ಷರಶಃ
ವಿಲಾಯತಿಯಲ್ಲಿ ನಿಜವಾಗಿದೆ. ವೆಸ್ಟ್ಮಿನಿಸ್ಟರ್ ಅಬೆ ಎಂಬ
ಪ್ರಾರ್ಥನಾ ಮಂದಿರ. ಇಲ್ಲಿ ಸಂತ ಸಾರ್ವಭೌಮರು ಮಲಗಿರುವರು.
ಕವಿಪುಂಗವರು ಒರಗಿರುವರು. ಸತ್ತವರ ಸ್ಮಾರಕವೆಂದು ಇದಕ್ಕಿಂತ
ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು.
ಪೋಯೆಟ್ ಕಾರ್ನರ್ (ಕವಿಗಳ ಮೂಲೆ) ನೋಡುವಂಥದಿದೆ. ಇದಕ್ಕೆ
ಸಮೀಪವಾಗಿ ವೈಜ್ಞಾನಿಕರ ಮೂಲೆಯಿದೆ.
ಆ ನಂತರ ಲೇಖಕರು ಅರಸರ ಅರಮನೆಗೆ ಹೋದರು.
ರಾಜದಂಡವೂ ಕಿರೀಟವೂ ನೆಲಕ್ಕುರಳಲೇ ಬೇಕು ಎಂಬುದು ನಿಜವಾಗಿ
ದ್ದರೂ ಸತ್ತ ಮೇಲೆ ಅವರಿಗೊಂದು ವಿಶಿಷ್ಟ ಸ್ಥಾನವನ್ನು ಕಲ್ಪಿಸಿದ್ದಾರೆ.
ಸಿಂಹಾಸನದ ಮೇಲಿರುವ ಕಲ್ಲುಪಾಟಿಯೂ ನೋಡುವಂತಹುದಿದೆ.
ಉತ್ತರ: ವೆಸ್ಟ್ ಮಿನ್ಸ್ಟರ್ ಅಬೆ ಎಂಬ ಪ್ರಾರ್ಥನಾ
ಮಂದಿರವು ಕನಿಷ್ಠ ಒಂದು ಸಾವಿರ ವರ್ಷದಷ್ಟು ಪುರಾತನವಾದ
ಮಂದಿರ, ಕೆಲವೊದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ
ಅಚ್ಚಳಿಯದೇ ಉಳಿದಿದೆ. ಇಲ್ಲಿ ಸಂತ ಸಾರ್ವಭೌಮರು ಮಲಗಿರುವರು,
ಕವಿಪುಂಗವರು ಒರಗಿರುವರು. ಸತ್ತವರ ಸ್ಮಾರಕವೆಂದು ಇದಕ್ಕಿಂತ
ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು.
ಮರ್ತ್ಯತ್ವವೇ ಎಷ್ಟು ಗೋರಿಗಳ ಗುಂಪುಗಳು ಇಲ್ಲಿವೆ ನೋಡಿ ಅಂಜು
ಎಂದು 200 ವರ್ಷಗಳ ಹಿಂದೆಯೇ ಬೂಮಾಂಟ್ ಎಂಬ ಕವಿಯು
ಹಾಡಿದನು. ಗೋಲ್ಸ್ಕಿತ್ ಹಾಗೂ ಎಡಿಸನ್ ಎಂಬ ಪ್ರಖ್ಯಾತ
ಸಾಹಿತಿಗಳು ವೆಸ್ಟ್ ಮಿನ್ಸ್ಟರ್ ಅಬೆಯ ಸಂದರ್ಶನ ಎಂಬ ವಿಷಯದ
ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ. ಇಂದಿಗೂ ಇದು
ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿದೆ. ಹೊರಗಿನಿಂದ
- ಉತ್ತಮವಾಗಿ ಶೃಂಗರಿಸಿದ ಬಾಗಿಲೊಂದು ಕಾಣುತ್ತಿದೆ.
ಲೇಖನ : ಲಂಡನ್ ನಗರ
ಲೇಖಕರು : ವಿ. ಕೃ ಗೋಕಾಕ್
ಆಕರ: ಸಮುದ್ರದಾಚೆಯಿಂದ - ಪ್ರವಾಸ ಕಥನ
ಸಂದರ್ಭ ಸ್ವಾರಸ್ಯ: ಲಂಡನ್ ನಗರದ ಪ್ರತಿಯೊಂದು
ಕೂಟಕ್ಕೆ ಒಂದು ಹೆಸರೇನಾದರೂ ಇದ್ದೇ ಇರುತ್ತದೆ. ಟ್ರಾಫಲ್ದಾರ್
ಸ್ಮರ್ ಎಂಬಲ್ಲಿ ನೆಲ್ಸನ್ನ ಮೂರ್ತಿ ಇದೆ. ಈ ಶಿಲಾಮೂರ್ತಿಯ
ಕೆಳಬದಿಗೆ ಅವನ ಜೀವನದಲ್ಲಿಯ ಮಹತ್ವದ ಸನ್ನಿವೇಶಗಳನ್ನು ಕಲ್ಲಿನಲ್ಲಿ
ಅರಳಿಸಿದ್ದಾರೆ. ತಮ್ಮದೇಶಕ್ಕಾಗಿ ಜೀವನವನ್ನು ಲೆಕ್ಕಿಸದೇ ದುಡಿದವರು
ನಿಂತು ಕೈಯೆತ್ತಿ ನಿಮ್ಮ ದೇಶದ ಗೌರವವನ್ನು ಕಾಯಿರಿ. ಇದು ದೊಡ್ಡ
ರಾಷ್ಟ್ರ ಎಂದು ಹೇಳುತ್ತಿರುವಂತೆ ತೋರುತ್ತದೆ. ಹೆಜ್ಜೆ ಹೆಜ್ಜೆಗೆ ಇತಿಹಾಸದ
ಅಡಿಗಲ್ಲುಗಳು ದೊರೆಯುತ್ತವೆ.
2. “ಹೊತ್ತು! ಹೊತ್ತು! ಹೊತ್ತೇ ಹಣ.”
ಲೇಖನ : ಲಂಡನ್ ನಗರ
ಲೇಖಕರು : ವಿ. ಕೃ ಗೋಕಾಕ್
ಆಕರ : ಸಮುದ್ರದಾಚೆಯಿಂದ - ಪ್ರವಾಸ ಕಥನ
ಈ ಸಂದರ್ಭ ಸ್ವಾರಸ್ಯ: ಲಂಡನ್ ನಗರದ ಬೀದಿಯಲ್ಲಿ
ಲಕ್ಷಾನುಲಕ್ಷ ಜನರು ತಿರುಗಾಡುತ್ತಾರೆ. ಅವಸರದಿಂದ ಓಡುತ್ತಾರೆ.
time! time! trime is money (ಹೊತ್ತು ! ಹೊತ್ತು ! ಹೊತ್ತೇ
ಹಣ), ಇದು ಅಕ್ಷರಶಃ ವಿಲಾಯಿತಿಯಲ್ಲಿ ನಿಜವಾಗಿದೆ. ಯಾಂತ್ರಿಕ
ಯುಗದಲ್ಲಿ ಬದುಕುತ್ತಿರುವ ಈ ಜನರಿಗೆ ದೇವರು ಎಲ್ಲವನ್ನೂ
ಕೊಟ್ಟಿದ್ದಾನೆ. ಆದರೆ ವೇಳೆಯನ್ನು ಕರುಣಿಸಿಲ್ಲ. ಬೆಳಗಿನಿಂದ ಹಿಡಿದು
ಸಂಜೆಯವರೆಗೆ ಸಮಯ ಸಮಯ ಎಂದು ಪರದಾಡಿದ್ದೇ ಪರದಾಡಿದ್ದು.
- ಎಲ್ಲ ೩ ಅಷ್ಟೇ ! ಮಣ್ಣು ! ಮಣ್ಣು!!”
ಲೇಖನ : ಲಂಡನ್ ನಗರ
ಲೇಖಕರು : ವಿ. ಕೃ ಗೋಕಾಕ್
ಆಕರ : ಸಮುದ್ರದಾಚೆಯಿಂದ - ಪ್ರವಾಸ ಕಥನ
ಈ ಸಂದರ್ಭ ಸ್ವಾರಸ್ಯ: ಲಂಡನ್ ನಗರದ Poets' Corner
(ಕವಿಗಳ ಮೂಲೆಗೆ ಲೇಖಕರು ಭೇಟಿಯಿತ್ತರು. ಇಲ್ಲಿ ಕವಿಗಳ ಸ್ಮಾರಕದ
ಕಲ್ಲುಗಳಿವೆ. ಈ ಕಲ್ಲುಗಳ ಮೇಲೆ ಹಾಯ್ದಾಡುತ್ತ ನಾವು ಹೋಗುತ್ತೇವೆ.
ಹೀಗೆ ಹಾಯ್ದು ಹೋಗುವಾಗ ಒಂದು ಸಣ್ಣ ಕಲ್ಲುಪಾಟಿಯ ಮೇಲೆ
ಸಣ್ಣದಾದ ಅಕ್ಷರಗಳಿದ್ದವು. ತುಳಿಯುವಷ್ಟರಲ್ಲಿಯೇ ಅವು ಲೇಖಕರ
ಕಣ್ಣಿಗೆ ಬಿದ್ದವು. ಓದಿದರು. ಓ ಅಪರೂಪ, ಬೆನ್ಜಾನ್ಸನ್ ಎಂದು
ಅದು ಇತ್ತು. ಕವಿಗಳ ಮೂಲೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಹೆಜ್ಜೆ
ಹಾಕಿದರೂ ಒಂದು ಕಲ್ಲನ್ನು ತುಳಿದೇ ತುಳಿಯುತ್ತೇವೆ. ಯಾರನ್ನು
ತುಳಿದರೇನು? ಎಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೇ ಮಣ್ಣು
ಮಣ್ಣು ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯ ಹತ್ತುತ್ತಾನೆ.
ಲೇಖನ : ಲಂಡನ್ ನಗರ
ಲೇಖಕರು : ವಿ. ಕೃ ಗೋಕಾಕ್
ಆಕರ: ಸಮುದ್ರದಾಚೆಯಿಂದ - ಪ್ರವಾಸ ಕಥನ
ಸಂದರ್ಭ ಸ್ವಾರಸ್ಯ: ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ
ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ.
ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ
ಕೂಡ್ರಬೇಕಾಗುತ್ತದೆ. ಈ ಶಿಲೆಯನ್ನು ಒಳಗೊಂಡ ಸಿಂಹಾಸನವು
ವೆಸ್ಟ್ಮಿನ್ಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. ಇಲ್ಲಿಗೆ
ಲೇಖಕರ ಪ್ರವಾಸದ ವರ್ಣನೆ ಮುಗಿಯಿತು. ಇಷ್ಟು ದಿವಸಗಳಲ್ಲಿ
ಲೇಖಕರ ಮನಸ್ಸು ಎಷ್ಟು ವಿಕಾಸ ಹೊಂದಿದೆ? ದೃಷ್ಟಿ ಎಷ್ಟು
ವಿಶಾಲವಾಗಿದೆ ? 'ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ' ಎಂದು
ಬೇಕನ್ನು ಹೇಳಿದ ಮಾತು ಲೇಖಕರ ನೆನಪಿಗೆ ಬಂದಿತು.