ಉತ್ತರ: ಕಡುಬಡತನವು ಬರಲು ದ್ರೋಣನು ನಾಡು ನಾಡನು.
ಗತ ಸಹಾಯ ಬಯಸಿ ಪರಶುರಾಮರಲ್ಲಿಗೆ ಬಂದನು,
ಉತ್ತರ: ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ
ಬಂದನು.
ಉತ್ತರ: ಪರಶುರಾಮನು ದ್ರೋಣನಿಗೆ ವಾರುಣ, ವಾಯವ್ಯ,
ಆಗ್ನೆಯ, ಐಂದ್ರಾದಿ ದಿವ್ಯ ಅಸ್ತ್ರಗಳನ್ನು ಕೊಟ್ಟನು.
ಉತ್ತರ: ದ್ರುಪದನು ಬಾಗಿಲು ಕಾಯುವವನನ್ನು ಕರೆದು ನಿಮ್ಮ
ಜೊತೆಯಲ್ಲಿ ಆಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು
ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದು ಹೇಳಿ
ಕಳುಹಿಸಿದನು.
ಉತ್ತರ: ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮ
ನನ್ನು ಕರೆದುಕೊಂಡು ದೇಶ ದೇಶಗಳನ್ನೆಲ್ಲ ಸುತ್ತಿ ಪರಶುರಾಮನ
ಬಳಿಗೆ ಬಂದನು. ಆಗ ಜಟಾಧಾರಿಯಾದ ಪರಶುರಾಮನು ದ್ರವ್ಯವನ್ನು
ಬೇಡುವುದಕ್ಕಾಗಿ ಬಂದದ್ರೋಣನನ್ನು ಚಿನ್ನದ ಪಾತ್ರೆಗಳು ಇಲ್ಲದುದರಿಂದ
ಮಣ್ಣಿನ ಪಾತ್ರೆಯಲ್ಲಿಯೇ ಅರ್ತ್ಯವನ್ನು ಕೊಟ್ಟು ಪೂಜಿಸಿದನು.
ಉತ್ತರ: ದ್ರುಪದನು ದ್ರೋಣರಿಗೆ - ನಿನ್ನನ್ನು ನಾನು ತಿಳಿದಿಲ್ಲ.
(ನೀನು ನನಗೆ ಅಪರಿಚಿತನು) ನೀನು ನನ್ನನ್ನು ಅಲ್ಲಿ ಕಂಡಿದ್ದಿಯೋ.
ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ?
ಮನುಷ್ಟರಾದವರು ಇಷ್ಟು ನಾಚಿಕೆಗೆಟ್ಟವರು ಆಗುತ್ತಾರೆಯೇ? ಎಂದು
ಮರ್ಮಭೇದಕವಾಗುವಂತ ಹೀಯಾಳಿಸಿದನು.
ಉತ್ತರ: ದ್ರುಪದನಿಗೆ ದ್ರೋಣನು ಅಷ್ಟೇ ತಕ್ಕುದಾಗಿ
ಉತ್ತರಿಸುತ್ತಾ - ಅಯ್ಯಾ ರಾಜನೇ ಐಶ್ವರ್ಯವು ಬರಲು ಮದ್ಯಪಾನ
ಮಾಡಿದವರಂತೆ ಮಾತು ತೊದಲುವದು, ಮುಖದಲ್ಲಿ ವಕ್ರಚೇಷ್ಟೆ
ಉಂಟಾಗುವುದು. ಮಾತುಗಳು ನಾಚಿಕೆಯಿಲ್ಲದಾಗುವವು. ಸಂಬಂಧವನ್ನು
ಮರೆಯುವಂತೆ ಮಾಡುವದು. ಆದುದರಿಂದ ಐಶ್ವರ್ಯವು ಕಳ್ಳಿನೊಡನೆ
ಹುಟ್ಟಿತು ಎಂಬುದು ನಿಸ್ಸಂಶಯ ಎಂದನು.
ಉತ್ತರ: ಪರಶುರಾಮರಿಂದ ದ್ರೋಣನು ದಿವ್ಯಾಸ್ತಗಳನ್ನು
ವರದಾನವಾಗಿ ಪಡೆದು ನಂತರ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ
ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದು ದ್ರುಪದನ ಅರಮನೆಯ
ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮ
ಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು
ಬಂದಿದ್ದಾನೆಂದು ತಿಳಿದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದನು.
ಅವನು ಆ ರೀತಿಯಲ್ಲಿಯೇ ಬಂದು ತಿಳಿಸಲಾಗಿ ದ್ರುಪದನು
ರಾಜ್ಯವೆಂಬ ಮದದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ
ಪೀಡಿತವಾದ ಮನಸ್ಸುಳ್ಳವನೂ ಆಗಿ ಒಳ್ಳೆಯ ನಡತೆಯಿಲ್ಲದೆ -
ಹಾಗನ್ನುವವನು ಯಾರ ಸಂಬಂಧಿ? ಇದು ವಿಶೇಷ ಭ್ರಮೆಯಲ್ಲವೇ?
ದ್ರೋಣನೆಂಬವನು ಬ್ರಾಹ್ಮಣ ಹೇಗೆ? ನನಗೆ ಅವನು ಹೇಗೆ
ಸ್ನೇಹಿತನಾಗುತ್ತಾನೆ. ಅಂತಹನನ್ನು ನಾನು ತಿಳಿದಿಲ್ಲ. ಅವನನ್ನು ಹೊರಕ್ಕೆ
ತಳ್ಳು ಎಂದು ಸಭಾ ಮಧ್ಯದಲ್ಲಿ ಕೆಟ್ಟ ಮಾತನ್ನಾಡಿದನು.
ಉತ್ತರ: ದ್ರೋಣನು ದ್ರುಪದನಿಗೆ - ಐಶ್ವರ್ಯ ಬರಲು
- ಮದ್ಯಪಾನ ಮಾಡಿದವರಂತೆ ಮಾತು ತೊದಲು ತೊದಲಾಗುತ್ತದೆ.
ಮುಖದಲ್ಲಿ ವಕ್ರಚೇಷ್ಟೆಯುಂಟಾಗುತ್ತದೆ. ಮಾತುಗಳು ನಾಚಿಕೆ
ಇಲ್ಲವಾಗುತ್ತವೆ. ಸಂಬಂಧವನ್ನು ಮರೆಯುವಂತೆ ಮಾಡುವದು.
ಆದುದರಿಂದ ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದನ್ನು
ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆನು. ಎಲವೋ ದುರುಳ
ನಾದಂತಹ ದ್ರುಪದನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ಎನ್ನುವ
ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ? ಜೊತೆಯಲ್ಲಿ
ವಿದ್ಯಾಭ್ಯಾಸ ಮಾಡಿದ ಸಹಪಾಠಿಯೆಂಬ ಕಾರಣದಿಂದ ನಿನ್ನನ್ನು ಕೊಲ್ಲದೇ
ಬಿಟ್ಟಿದ್ದೇನೆ. ಈ ಸಭಾಮಂಡಲದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು
ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿ ಪಡುವಂತೆ ಕಟ್ಟಿಸದೆ
ಬಿಟ್ಟರೆ ನಾನು ಮೀಸೆ ಹೊತ್ತಿರುವುದು ವ್ಯರ್ಥವಲ್ಲವೇ? ಎಂದನು.
ಪಾಠ : ಕೆಮ್ಮನೆ ಮೀಸೆವೊತ್ತನೇ?
ಕವಿ : ಆದಿಕವಿ ಪಂಪ
ಆಕರ : ವಿಕ್ರಮಾರ್ಜುನ ವಿಜಯ (ದ್ವಿತೀಯಾಶ್ವಾಸ)
ಸಂದರ್ಭ ಸ್ವಾರಸ್ಯ: ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ
ಕೊಟ್ಟೆನು. ಇಡೀ ಭೂಮಂಡಲವನ್ನೇ ಜಯಿಸಿ ಗುರುಗಳಿಗೆ ಕೊಟ್ಟೆನು.
ಈಗ ನನ್ನಲ್ಲಿ ಒಂದಡಕೆಯೂ ಇಲ್ಲ. ಬೇಡುವವನಾದರೂ
ವೇದಪಾರಂಗತ. ಅವನನ್ನು ಹೇಗೆ ಸಂತೋಷಪಡಿಸಲಿ? ಎಲೆ
ಇದೊಂದು ಬಿಲ್ಲು ಇದೊಂದು ದಿವ್ಯಾಸ್ತಗಳ ಸಮೂಹವಿದೆ. ನನಗೆ
ಇವನ್ನು ಬಿಟ್ಟು ಬೇರೆ ಆಸ್ತಿಯಿಲ್ಲ. ಇವುಗಳಲ್ಲಿ ನಿನಗೆ ಯಾವುದನ್ನು
ಕೊಡಲಿ? ಚೆನ್ನಾಗಿ ಯೋಚಿಸು ಎಂದು ಪರಶುರಾಮನು ದ್ರೋಣನಿಗೆ
ಹೇಳಿದನು.
ಪಾಠ : ಕೆಮ್ಮನೆ ಮೀಸೆವೊತ್ತನೇ?
ಕವಿ : ಆದಿಕವಿ ಪಂಪ
ಆಕರ : ವಿಕ್ರಮಾರ್ಜುನ ವಿಜಯ (ದ್ವಿತೀಯಾಶ್ವಾಸ)
ಸಂದರ್ಭ ಸ್ವಾರಸ್ಯ: ಪರಶುರಾಮನಿಗೆ ಆಚಾರ್ಯ ದ್ರೋಣರು
ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತಗಳನ್ನು
ದಯಪಾಲಿಸಬೇಕು, ಎನ್ನಲು ವಾರುಣ, ವಾಯವ್ಯ, ಆಗ್ನೆಯ, ಐಂದ್ರಾದಿ
ಅಸ್ತಗಳನ್ನು ಕೊಡಲು ಅದನ್ನು ತೆಗೆದುಕೊಂಡು ಪರಶುರಾಮನಿಂದ ಅಪ್ಪಣೆ
ಪಡೆದು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ಛಾತ್ರಾವತಿ
ಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದನು.
ಪಾಠ : ಕೆಮ್ಮನೆ ಮೀಸೆವೊತ್ತೆನೇ?
- ಕವಿ : ಆದಿಕವಿ ಪಂಪ
ಆಕರ : ವಿಕ್ರಮಾರ್ಜುನ ವಿಜಯ (ದ್ವಿತೀಯಾಶ್ವಾಸ)
ಸಂದರ್ಭ ಸ್ವಾರಸ್ಯ: ದ್ರೋಣನು ಬಲಾತ್ಕಾರದಿಂದ ಒಳಕ್ಕೆ
ಪ್ರವೇಶಿಸಿ ದ್ರುಪದನನ್ನು ನೋಡಿ - ಅಣ್ಣಾ ನಾನೂ ನೀನೂ
ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ? ಎನ್ನಲು
ದ್ರುಪದನು - ನಿನ್ನನ್ನು ನಾನು ತಿಳಿದಿಲ್ಲ. ಮೇಲಾಗಿ ನೀನು ನನಗೆ
ತುಂಬಾ ಅಪರಿಚಿತನು ನೀನು ನನ್ನನ್ನು ಅಲ್ಲಿ ಕಂಡಿದ್ದಿಯೋ
ಏನೊ? ಮೇಲಾಗಿ ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ
ಸ್ನೇಹ? ಮನುಷ್ಕರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ?
ಎಂದು ದ್ರೋಣನಿಗೆ ದ್ರುಪದನು ಚಾರಿತ್ರ್ಯವಧೆಯಾಗುವಂತಹ
ಮಾತನ್ನಾಡಿದನು.
ಪಾಠ : ಕೆಮ್ಮನೆ ಮೀಸೆವೊತ್ತೆನೇ?
ಕವಿ : ಆದಿಕವಿ ಪಂಪ
ಆಕರ : ವಿಕ್ರಮಾರ್ಜುನ ವಿಜಯ (ದ್ವಿತೀಯಾಶ್ವಾಸ)
ಸಂದರ್ಭ ಸ್ವಾರಸ್ಯ: ದ್ರುಪದನು ಆಚಾರ್ಯ ದ್ರೋಣರಿಗೆ.
ಹೀನಾಯವಾದ ಮಾತುಗಳನ್ನಾಡಿ ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು
ನೂಕು ಎನ್ನಲು ದ್ರೋಣನು ಹೀಗೆಂದನು - ದ್ರುಪದನೇ ನಿನಗೆ
ಐಶ್ವರ್ಯದ ಮದ ಬಂದಿದೆ. ಎಲ್ಲಾ ಮದಗಳಲ್ಲಿ ದುಡ್ಡಿನ ಮದ
ಬಲು ಕೆಟ್ಟದು. ಆ ಮದವು ಬಂದಾಗ ಮದ್ಯಪಾನ ಮಾಡಿದವರಂತೆ
ಮಾತುಗಳು ತೊದಲುವವು. ಮುಖದಲ್ಲಿ ಭೂತಚೇಷ್ಟೆಯ ಕಳೆಯು
ಸುರಿಯುವುದು. ನಾಚಿಕೆಯಿಲ್ಲದಂತಹ ಮಾತುಗಳು ಬರುವವು.
ಸಂಬಂಧವನ್ನು ಮರೆಯುವಂತೆ ಮಾಡುವದು. ಆದಕಾರಣ ಐಶ್ವರ್ಯವು
ಕಳ್ಳಿನೊಡನೆ ಹುಟ್ಟಿದು ಎಂಬ ಅರಿವು ನನಗೆ ಈಗ ಆಯಿತು ಎಂದನು,
ಪಾಠ : ಕೆಮ್ಮನೆ ಮೀಸೆವೊತ್ತೆನೇ?
ಕವಿ : ಆದಿಕವಿ ಪಂಪ
ಆಕರ : ವಿಕ್ರಮಾರ್ಜುನ ವಿಜಯ (ದ್ವಿತೀಯಾಶ್ವಾಸ)
ಸಂದರ್ಭ ಸ್ವಾರಸ್ಯ: ಎಲವೋ ದ್ರುಪದಾ. ಶ್ರೀಮಂತಿಕೆ
ಬಂದಿದೆಯೆಂದು ಮನಬಂದಂತೆ ಮಾತನಾಡುತ್ತಿರುವಿಯಲ್ಲವೇ?
ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ಎನ್ನುವ ಗಾದೆಯ
ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ? ಜೊತೆಯಲ್ಲಿ ವಿದ್ಯಾಭ್ಯಾಸ
ಮಾಡಿದವರೆಂಬ ಕಾರಣದಿಂದ ನಿನ್ನನ್ನು ಕೊಲ್ಲದೇ ಬಿಟ್ಟಿದ್ದೇನೆ. ತುಂಬಿದ
ಈ ಸಭೆಯಲ್ಲಿ ನನಗೆ ಅಪಮಾನ ಮಾಡಿದೆಯಲ್ಲವೆ? ನಿನ್ನನ್ನು
ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿ ಪಡುವಂತೆ ಕಟ್ಟಿಸದೆ
ಬಿಟ್ಟರೆ ನಾನು ಮೀಸೆ ಹೊತ್ತು ಉಪಯೋಗವೇನು?