ಬೆಳಕಿನ ಕಿರಣ ಎಂದರೇನು
ಬೆಳಕಿನ ಸರಳ ರೇಖೀಯ ಪಥವನ್ನು ಸಾಮಾನ್ಯವಾಗಿ ಬೆಳಕಿನ ಕಿರಣ ಎಂದು ಕರೆಯುವರು
ಬೆಳಕಿನ ವಿವರ್ತನೆ ಎಂದರೇನು
ಬೆಳಕಿನ ಪಥದಲ್ಲಿ ಅಪಾರದರ್ಶಕ ವಸ್ತುವೊಂದು ಅತಿ ಚಿಕ್ಕದಾದರೆ ಬೆಳಕು ಸರಳ ರೇಖೆಯಲ್ಲಿ ಚಲಿಸದೇ ಅದರ ಅಂಚಿನ ಸುತ್ತಲೂ ಬಾಗುವ ಪ್ರವೃತ್ತಿ ಹೊಂದಿದೆ ಈ ವಿದ್ಯಮಾನವನ್ನು ಬೆಳಕಿನ ವಿವರ್ತನೆ ಎನ್ನುವರು
ಬೆಳಕಿನ ಪ್ರತಿಫಲನದ ನಿಯಮಗಳು ಯಾವುವು
ಪತನ ಕೋನವು ಪ್ರತಿಫಲನ ಕೋನಕ್ಕೆ ಸಮನಾಗಿರುತ್ತದೆ
ಪತನ ಕಿರಣ, ಪ್ರತಿಫಲನ ಕಿರಣ ಮತ್ತು ಪತನ ಬಿಂದುವಿನಲ್ಲಿ ಪ್ರತಿಫಲನದ ಮೇಲ್ಮೈಗೆ ಎಳೆದ ಲಂಬ ಈ ಮೂರು ಒಂದೇ ಸಮತಲದಲ್ಲಿ ಇರುತ್ತವೆ
ಸಮತಲ ದರ್ಪದಿಂದ ಉಂಟಾಗುವ ವಸ್ತುವಿನ ಬಿಂಬದ ಲಕ್ಷಣಗಳು ಯಾವುವು
ಗೋಳೀಯ ದರ್ಪಣ ಗಳೆಂದರೇನು
Ans: ಒಂದು ದರ್ಪಣದ ಪ್ರತಿಬಿಂಬಿಸುವ ಮೇಲ್ಮೈ ಗೋಳೀಯವಾಗಿದ್ದರೆ ಅದನ್ನು ಗೋಳೀಯ ದರ್ಪಣಗಳು ಎನ್ನುವರು
ಗೋಳಿಯ ದರ್ಪಣಗಳ ವಿಧಗಳು ಯಾವುವು
Ans: ಪೀನ ದರ್ಪಣ
ನಿಮ್ನ ದರ್ಪಣ
ಪೀನ ದರ್ಪಣ ಎಂದರೇನು
Ans: ಗೋಳಿಯ ದರ್ಪಣದ ಪ್ರತಿಫಲಿಸುವ ಭಾಗವು ಹೊರಮುಖವಾಗಿ ಬಾಗಿದ್ದರೆ ಅದನ್ನು ಪೀನ ದರ್ಪಣ ಎನ್ನುವರು
ನಿಮ್ನ ದರ್ಪಣ ಎಂದರೇನು
Ans: ಗೋಳೀಯ ದರ್ಪಣದ ಪ್ರತಿಫಲಿಸುವ ಭಾಗವು ಒಳಮುಖವಾಗಿ ಬಾಗಿದ್ದರೆ ಅದನ್ನು ನಿಮ್ನ ದರ್ಪಣ ಎನ್ನುವವರು
ದರ್ಪಣ ಧ್ರುವ ಎಂದರೇನು
Ans: ಗೋಲಾಕಾರದ ದರ್ಪಣದ ಪ್ರತಿಫಲಿಸುವ ಮೇಲ್ಮೈನ ಕೇಂದ್ರವನ್ನು ದರ್ಪಣ ಧ್ರುವ ಎನ್ನುವರು
ದರ್ಪಣ ಧ್ರುವವನ್ನು ಏನೆಂದು ಸೂಚಿಸುವರು
Ans: P ಅಕ್ಷರದಿಂದ ಸೂಚಿಸುವರು
ವಕ್ರತಾ ಕೇಂದ್ರ ಎಂದರೇನು
Ans: ಗೋಲಿಯ ದರ್ಪಣದ ಪ್ರತಿಫಲಿಸುವ ಮೇಲ್ಮೈ ಗೋಳದ ಒಂದು ಭಾಗವಾಗಿದೆ ಈ ಗೋಳದ ಕೇಂದ್ರವನ್ನು ವಕ್ರತಾ ಕೇಂದ್ರ ಎನ್ನುವವರು
ವಕ್ರತಾ ಕೇಂದ್ರವನ್ನು ಹೇಗೆ ಸೂಚಿಸುವರು
Ans: C ಅಕ್ಷರದಿಂದ ಸೂಚಿಸುವರು
ಪೀನ ದರ್ಪಣದಲ್ಲಿ ವ್ರತಾ ಕೇಂದ್ರ ಎಲ್ಲಿರುತ್ತದೆ
Ans: ದರ್ಪಣದ ಹಿಂಭಾಗದಲ್ಲಿ
ನಿಮ್ನ ದರ್ಪಣದಲ್ಲಿ ವ್ರತಾ ಕೇಂದ್ರ ಎಲ್ಲಿರುತ್ತದೆ
Ans: ದರ್ಪಣದ ಮುಂಭಾಗದಲ್ಲಿ
ವಕ್ರತಾ ತ್ರಿಜ್ಯ ಎಂದರೇನು
Ans: ಗೋಳೀಯ ದರ್ಪಣದ ಪ್ರತಿಫಲಿಸುವ ಭಾಗವನ್ನು ಹೊಂದಿರುವ ಗೋಳದ ತ್ರಿಜ್ಯವನ್ನು ದರ್ಪಣದ ವಕ್ರತಾ ತ್ರಿಜ್ಯ ಎನ್ನುವವರು
ಪ್ರಧಾನಾಕ್ಷ ಎಂದರೇನು
Ans: ಗೋಳೀಯ ದರ್ಪಣದ ವಕ್ರತಾ ಕೇಂದ್ರ ಮತ್ತು ದರ್ಪಣ ಧ್ರುವದ ಮೂಲಕ ಹಾದು ಹೋಗುವ ಸರಳ ರೇಖೆಯನ್ನು ಪ್ರಧಾನಾಕ್ಷ ಎನ್ನುವರು
ಸಂಗಮ ಬಿಂದು ಎಂದರೇನು
Ans: ಪ್ರಧಾನಾಕ್ಷಕ್ಕೆ ಸಮಾಂತರವಾಗಿರುವ ಕಿರಣಗಳು ದರ್ಪದಿಂದ ಪ್ರತಿಫಲಿಸಿ ಪ್ರಧಾನಾಕ್ಷದ ಒಂದು ಬಿಂದುವಿನಲ್ಲಿ ಸೇರುತ್ತವೆ ಈ ಬಿಂದುವನ್ನು ಸಂಗಮ ಬಿಂದು ಎಂದು ಕರೆಯುವ
ಸಂಗಮದೂರ ಎಂದರೇನು
Ans: ಸಂಗಮ ಬಿಂದು ಮತ್ತು ದರ್ಪಣ ಧ್ರುವದ ನಡುವಿನ ದೂರವನ್ನು ಸಂಗಮ ದೂರ ಎನ್ನುವವರು
ದ್ಯುತಿ ರಂಧ್ರ ಎಂದರೇನು
Ans: ಗೋಳಿಯ ದರ್ಪಣದ ಪ್ರತಿಫಲಿಸುವ ಮೇಲ್ಮೈಯ ವ್ಯಾಸವನ್ನು ದ್ಯುತಿ ರಂಧ್ರ ಎನ್ನುವವರು
ವಕ್ರತಾ ತ್ರಿಜ್ಯ ಹಾಗೂ ಸಂಗಮದೂರಕ್ಕಿರುವ ಸಂಬಂಧವೇನು
Ans: R = 2f
ವಕ್ರತಾ ತ್ರಿಜ್ಯವು ಸಂಗಮದೂರದ ಎರಡರಷ್ಟಿರುತ್ತದೆ
ಪೀನ ದರ್ಪಣದಲ್ಲಿ ಪ್ರಧಾನ ಕ್ಷಕ್ಕೆ ಸಮಾಂತರ ವಾದ ಕಿರಣ ಉಂಟು ಮಾಡುವ ಬಿಂಬದ ಚಿತ್ರಣ ಬಿಡಿಸಿ
ನಿಮ್ನ ದರ್ಪಣದಲ್ಲಿ ಪ್ರಧಾನ ಕ್ಷಕ್ಕೆ ಸಮಾಂತರ ವಾದ ಕಿರಣ ಉಂಟು ಮಾಡುವ ಬಿಂಬದ ಚಿತ್ರಣ ಬಿಡಿಸಿ
ಪ್ರಧಾನ ಅಕ್ಷರದ ಮುಖಾಂತರ ಹಾದು ಹೋಗುವ ಕಿರಣಗಳು ಉಂಟು ಮಾಡುವ ಪ್ರತಿಬಿಂಬದ ಚಿತ್ರಣವನ್ನು ಚಿತ್ರಿಸಿ
ಪ್ರಧಾನ ಅಕ್ಷರದ ಮುಖಾಂತರ ಹಾದು ಹೋಗುವ ಕಿರಣಗಳು ಉಂಟು ಮಾಡುವ ಪ್ರತಿಬಿಂಬದ ಚಿತ್ರಣವನ್ನು ಚಿತ್ರಿಸಿ
ವಕ್ರತಾ ಕೇಂದ್ರದ ಮೂಲಕ ಹಾದು ಹೋಗುವ ಕಿರಣಗಳ ಬಿಂಬವನ್ನು ಚಿತ್ರಿಸಿ
ವಕ್ರತಾ ಕೇಂದ್ರದ ಮೂಲಕ ಹಾದು ಹೋಗುವ ಕಿರಣಗಳ ಬಿಂಬವನ್ನು ಚಿತ್ರಿಸಿ
ದರ್ಪಣಾ ಧ್ರುವದ ಮೇಲೆ ಬೀಳುವ ಕಿರಣಗಳ ಪ್ರತಿಫಲನದ ಚಿತ್ರಣವನ್ನು ಚಿತ್ರಿಸಿ
ದರ್ಪಣಾ ಧ್ರುವದ ಮೇಲೆ ಬೀಳುವ ಕಿರಣಗಳ ಪ್ರತಿಫಲನದ ಚಿತ್ರಣವನ್ನು ಚಿತ್ರಿಸ
ನಿಮ್ನ ದರ್ಪಣ ಉಪಯೋಗಗಳೇನು
Ans:- ನಿಮ್ಮ ದರ್ಪಣಗಳನ್ನು ಸಾಮಾನ್ಯವಾಗಿ ಟಾರ್ಚ್ ಗಳಲ್ಲಿ ತಪಾಸಣಾ ದೀಪ ಮತ್ತು ವಾಹನಗಳ ಮುಂಭಾಗದ ದೀಪಗಳಲ್ಲಿ ಬಳಸುವರು
- ಮುಖದ ದೊಡ್ಡ ಪ್ರತಿಬಿಂಬ ಪಡೆಯಲು ಕ್ಷೌರ ದರ್ಪಣದಲ್ಲಿ ಬಳಸುವವರು
- ವೈದ್ಯರು ರೋಗಿಗಳ ಹಲ್ಲುಗಳ ದೊಡ್ಡ ಪ್ರತಿಬಿಂಬವನ್ನು ಪಡೆಯಲು
- ಸೌರ ಕುಲುಮೆಗಳಲ್ಲಿ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಲು ದೊಡ್ಡ ನಿಮ್ನ ತರ್ಪಣಗಳನ್ನು ಬಳಸುವರು
ಪೀನ ದರ್ಪಣ ಉಪಯೋಗಗಳೇನು
Ans: ಪೀನ ದರ್ಪಣ ವನ್ನು ಸಾಮಾನ್ಯವಾಗಿ ವಾಹನಗಳಲ್ಲಿ ಹಿನ್ನೋಟ ದರ್ಪಣವಾಗಿ ಬಳಸುವರು
ಪೀನ ದರ್ಪವನ್ನು ವಾಹನದ ಹಿನ್ನೋಟ ದರ್ಪಣವಾಗಿ ಏಕೆ ಬಳಸುವವರು
Ans: ಏಕೆಂದರೆ ಪೀನ ದರ್ಪಣಗಳ ಹೊರ ಅಂಚಿನ ಕಡೆಗೆ ವಕ್ರತೆಯನ್ನು ಹೊಂದಿರುವುದರಿಂದ ಇವುಗಳ ದೃಷ್ಟಿ ಕ್ಷೇತ್ರವು ಬಹಳ ಅಧಿಕವಾಗಿರುತ್ತದೆ
ಕಾರ್ಟಿಸೀಯನ್ ಸಾಂಪ್ರದಾಯಿಕ ಸಂಕೇತಗಳೆಂದರೇನು
Ans: ಗೋಳೀಯ ದರ್ಪಣದಲ್ಲಿ ಬೆಳಕಿನ ಪ್ರತಿಫಲನದ ಕುರಿತು ಅಭ್ಯಾಸ ಮಾಡುವಾಗ ನಾವು ಕೆಲವು ನಿರ್ದಿಷ್ಟ ಸಾಂಪ್ರದಾಯಿಕ ಸಂಕೇತಗಳನ್ನು ಅನುಸರಿಸಬೇಕು ಇವುಗಳನ್ನು ಕಾರ್ಟಿಸೀಯನ್ ಸಾಂಪ್ರದಾಯಿಕ ಸಂಕೇತಗಳು ಎನ್ನುವರು
ಕಾರ್ಟಿಸೀಯನ್ ಸಾಂಪ್ರದಾಯಿಕ ಸಂಕೇತಗಳ ಪ್ರಕಾರ ದರ್ಪಣ ಧ್ರುವ ಹಾಗೂ ಪ್ರಧಾನ ಕ್ಷಣವನ್ನು ಏನೆಂದು ಪರಿಗಣಿಸುವರು
Ans:- ದರ್ಪಣ ಧ್ರುವವನ್ನು ಮೂಲ ಬಿಂಬವಾಗಿ ತೆಗೆದುಕೊಳ್ಳುವರು
- ಪ್ರಧಾನ ಕ್ಷಣವನ್ನು X ಅಕ್ಷವಾಗಿ ತೆಗೆದುಕೊಳ್ಳುವರು
ಬೆಳಕಿನ ಪ್ರತಿಫಲನದ ಸಾಂಪ್ರದಾಯಿಕ ಸಂಕೇತಗಳನ್ನು ತಿಳಿಸಿ
Ans:- ವಸ್ತುವನ್ನು ಯಾವಾಗಲೂ ದರ್ಪಣದ ಎಡಭಾಗದಲ್ಲಿ ಇಡಲಾಗುತ್ತದೆ
- ವಸ್ತುವಿನಿಂದ ದರ್ಪಣದ ಮೇಲೆ ಬೀಳುವ ಬೆಳಕು ಎಡಗಡೆಯಿಂದ ಬೀಳುತ್ತದೆ
- ಪ್ರಧಾನ ಕ್ಷಕ್ಕೆ ಸಮಾಂತರವಾಗಿರುವ ಎಲ್ಲ ದೂರಗಳನ್ನು ದರ್ಪಣದ ಧ್ರುವದಿಂದ ಅಳೆಯಲಾಗುತ್ತದೆ
- ಮೂಲ ಬಿಂದುವಿನ ಬಲಭಾಗದಲ್ಲಿ ಎಳೆಯಲಾದ ಎಲ್ಲ ದೂರಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಲಾಗುತ್ತದೆ
- ಮೂಲ ಬಿಂದುವಿನ ಎಡಭಾಗದಲ್ಲಿ ಎಳೆಯಲಾದ ದೂರವನ್ನು ಋುಣಾತ್ಮಕವಾಗಿ ತೆಗೆದುಕೊಳ್ಳಲಾಗುತ್ತದೆ
- ಪ್ರಧಾನ ಪಕ್ಷಕ್ಕೆ ಲಂಬವಾಗಿ ಮೇಲಿನ ಕಡೆಗೆ ಅಳೆಯಲಾಗುವ ದೂರಗಳನ್ನು ಧನಾತ್ಮಕ ತೆಗೆದುಕೊಳ್ಳಲಾಗುತ್ತದೆ
- ಪ್ರಧಾನ ಪಕ್ಷಕ್ಕೆ ಲಂಬವಾಗಿ ಕೆಳಗಿನ ಬದಿಯ ಕಡೆಗೆ ಅಳೆಯಲಾಗುವುದು ಋಣಾತ್ಮಕವಾಗಿ ತೆಗೆದುಕೊಳ್ಳಲಾಗುತ್ತದೆ
ವಸ್ತು ದೂರ ಎಂದರೇನು
Ans:ದರ್ಪಣದ ಧ್ರುವದಿಂದ ವಸ್ತುವಿಗೆ ಇರುವ ದೂರವನ್ನು ವಸ್ತು ದೂರ ಎನ್ನುವವರು
ಪ್ರತಿಬಿಂಬ ದೂರ ಎಂದರೇನು
Ans:ದರ್ಪಣ ಧ್ರುವದಿಂದ ಪ್ರತಿಬಿಂಬಕ್ಕೆ ಇರುವ ದೂರವನ್ನು ಪ್ರತಿಬಿಂಬ ದೂರ ಎನ್ನುವವರು
ವಸ್ತು ದೂರ ಪ್ರತಿಬಿಂಬ ದೂರ ಹಾಗೂ ಸಂಗಮದೂರಕ್ಕಿರುವ ಸಂಬಂಧವನ್ನು ತಿಳಿಸಿ
Ans: 1/f = 1/u + 1/v
ಕಾರ್ಟಿಸೀಯನ್ ಸಂಕೇತಗಳನ್ನು ಸೂಚಿಸುವ ಗೋಲಿಯ ಚಿತ್ರಣವನ್ನು ಬಿಡಿಸಿ
ವರ್ಧನೆ ಎಂದರೇನು
Ans:ಪ್ರತಿಬಿಂಬದ ಎತ್ತರ ಮತ್ತು ವಸ್ತುವಿನ ಎತ್ತರದ ಅನುಪಾತವನ್ನು ವರ್ಧನೆ ಎನ್ನುವರು
ವರ್ಧನೆಯನ್ನು ಏನೆಂದು ಸೂಚಿಸುವರು
Ans: m
ವರ್ಧನೆಯನ್ನು ಕಂಡುಹಿಡಿಯುವ ಸೂತ್ರ ಬರೆಯಿರಿ
Ans: ವರ್ಧನೆ (m) = ಪ್ರತಿಬಿಂಬದ ಎತ್ತರ (h')
------------------------------
ವಸ್ತುವಿನ ಎತ್ತರ (h)
ವರ್ಧನೆಯಲ್ಲಿ ಧನಾತ್ಮಕ ಚಿಹ್ನೆಯೂ ಏನನ್ನು ಸೂಚಿಸುತ್ತದೆ
Ans:ಮಿಥ್ಯ ಪ್ರತಿಬಿಂಬದ ಎತ್ತರವನ್ನು ಸೂಚಿಸುತ್ತದೆ
ವರ್ಧನೆಯಲ್ಲಿ ಋಣಾತ್ಮಕ ಚಿಹ್ನೆಯೂ ಏನನ್ನು ಸೂಚಿಸುತ್ತದೆ
Ans:ಸತ್ಯ ಪ್ರತಿಬಿಂಬದ ಎತ್ತರವನ್ನು ಸೂಚಿಸುತ್ತದೆ
ಬೆಳಕಿನ ವಕ್ರೀಭವನ ಎಂದರೇನು
Ans: ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಚಲಿಸುವಾಗ ತನ್ನ ಪ್ರಸರಣದ ದಿಕ್ಕನ್ನು ಬದಲಿಸುತ್ತದೆ ಈ ವಿದ್ಯಮಾನವನ್ನು ಬೆಳಕಿನ ವಕ್ರೀಭವನ ಎನ್ನುವರು
ಬೆಳಕಿನ ವಕ್ರೀಭವನದ ನಿಯಮಗಳನ್ನು ಬರೆಯಿರಿ
Ans: ಪತನ ಕಿರಣ ವಕ್ರೀಮ ಕಿರಣ ಮತ್ತು ಎರಡು ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಒಂದೇ ಸಮತಲದಲ್ಲಿರುತ್ತದೆ
ಪತನ ಕೋನದ ಸೈನು ಮತ್ತು ವಕ್ರೀಮ ಕೋನದ ಸೈನುಗಳ ನಿಷ್ಪತ್ತಿಯ ಸ್ಥಿರವಾಗಿರುತ್ತದೆ ಇದು ಸ್ನೇಲ್ ನಿಯಮ
ಸ್ನೇಲ್ ನಿಯಮವನ್ನು ಬರೆಯಿರಿ
Ans: ಪತನ ಕೋನದ ಸೈನು ಮತ್ತು ವಕ್ರೀಮ ಕೋನದ ಸೇನುಗಳ ಅನುಪಾತವು ಸ್ಥಿರವಾಗಿರುತ್ತದೆ
ಸ್ನೇಲ್ ನಿಯಮದ ಗಣತಿಯ ತೋರಿಕೆಯನ್ನು ಬರೆಯಿರಿ
Ans: n = sin i
--------
sin r
ವಕ್ರೀಭವನ ಸೂಚ್ಯಂಕ ಎಂದರೇನು
Ans: ಎರಡು ಬೇರೆ ಬೇರೆ ಮಾಧ್ಯಮಗಳಲ್ಲಿ ನಡೆಯುವ ಬೆಳಕಿನ ದಿಕ್ಕಿನ ಬದಲಾವಣೆಯ ಪ್ರಮಾಣವನ್ನು ಸೂಚಿಸುವ ಸ್ಥಿರಾಂಕವನ್ನು ವಕ್ರೀಭವನ ಸೂಚ್ಯಂಕ ಎನ್ನುತ್ತಾರೆ
ನೀರಿನ ವಕ್ರೀಭವನ ಸೂಚ್ಯಂಕ ಎಷ್ಟು
Ans: 1.33
ಗಾಜಿನ ವಕ್ರೀಭವನ ಸೂಚ್ಯಂಕ ಎಷ್ಟು
Ans: 1.52
ದ್ವೀಪೀನ ಅಥವಾ ಪೀನ ಮಸೂರ ಎಂದರೇನು
Ans:ಒಂದು ಮಸೂರದ ಎರಡು ಮೇಲ್ಮೈಗಳ ಹೊರಗಡೆ ಬಾಗಿದ್ದರೆ ಅಥವಾ ಹೊರ ವಕ್ರವಾಗಿ ದ್ದರೆ ಅದನ್ನು ದ್ವಿಪೀನ ಅಥವಾ ಪೀನ ಮಸೂರ ಎನ್ನುವರು
ದ್ವಿ ನಿಮ್ನ ಅಥವಾ ನಿಮ್ನ ಮಸೂರ ಎಂದರೇನು
Ans:ಒಂದು ಗೋಳೀಯ ಮಸೂರದ ಎರಡು ಮೇಲ್ಮೈಗಳ ಒಳಮುಖವಾಗಿ ಅಥವಾ ಒಳ ವಕ್ರವಾಗಿ ಬಾಗಿದ್ದರೆ ಅಂತಹ ಮಸೂರಗಳನ್ನು ದ್ವಿ ನಿಮ್ನ ಅಥವಾ ನಿಮ್ನ ಮಸೂರ ಎನ್ನುವರು
ಕೇಂದ್ರೀಕರಿಸುವ ಮಸೂರ ಯಾವುದು
Ans: ಪೀನ ಮಸೂರ
ವಿಕೇಂದ್ರೀಕರಿಸಿ ಮಸೂರ ಯಾವುದು
Ans: ನಿಮ್ನ ಮಸೂರ
ದೃಕ್ ಕೇಂದ್ರ ಎಂದರೇನು
Ans: ಮಸೂರದ ಕೇಂದ್ರವನ್ನು ದೃಕ್ ಕೇಂದ್ರ ಎನ್ನುವವರು
ದ್ಯುತೀ ರಂಧ್ರ ಎಂದರೇನು
Ans: ಗೋಲಿಯ ಮಸೂರದ ವೃತ್ತಾಕಾರದ ಸೀಮಾರೇಖೆಯ ವ್ಯಾಸವನ್ನು ದ್ಯುತೀ ರಂಧ್ರ ಎನ್ನುವರು
ಮಸೂರದ ಸೂತ್ರ ಬರೆಯಿರಿ
Ans: 1/f = 1/v - 1/u
ಮಸೂರದ ವರ್ಧನಾ ಸೂತ್ರ ಬರೆಯಿರಿ
Ans: ವರ್ಧನೆ (m) = ಪ್ರತಿಬಿಂಬದ ಎತ್ತರ (h')
------------------------------
ವಸ್ತುವಿನ ಎತ್ತರ (h)
ಮಸೂರದ ಸಾಮರ್ಥ್ಯ ಎಂದರೇನು
Ans:ಬೆಳಕಿನ ಕಿರಣಗಳ ಕೇಂದ್ರೀಕರಿಸುವ ಅಥವಾ ವಿಕೇಂದ್ರೀಕರಿಸುವ ಸಾಮರ್ಥ್ಯವನ್ನು ಮಸೂರದ ಸಾಮರ್ಥ್ಯ ಎನ್ನುವರು
ಮಸೂರದ ಸಾಮರ್ಥ್ಯ ಹಾಗೂ ಸಂಗಮ ದೂರದ ನಡುವಿನ ಸಂಬಂಧವೇನು
Ans: ಮಸೂರದ ಸಾಮರ್ಥ್ಯವೂ ಅದರ ಸಂಗಮ ದೂರಕ್ಕೆ ವಿಲೋಮಾನುಪಾತದಲ್ಲಿ ಇರುತ್ತದೆ
ಮಸೂರ ಸಾಮರ್ಥ್ಯದ ಏಕ ಮಾನ ಯಾವುದು
Ans: ಡಯಾಪ್ಟರ್
ಒಂದು ಡಯಾಪ್ಟರ್ ನ ಬೆಲೆ ಎಷ್ಟು
Ans: 1D = 1m-1