ಏಕಮಾನ ಕಾಲದಲ್ಲಿ ವಾಹಕದ ಮೂಲಕ ಪ್ರವಹಿಸುವ ವಿದ್ಯುದಾವೇಶಗಳ ದರವನ್ನು ವಿದ್ಯುತ್ ಪ್ರವಾಹ ಎನ್ನುವವರು
ವಿದ್ಯುತ್ ಪ್ರವಾಹದ ಗಣಿತೀಯ ಸೂತ್ರವನ್ನು ಬರೆಯಿರಿ
I =Q/t
I - ವಿದ್ಯುತ್ ಪ್ರವಾಹ
Q - ವಿದ್ಯುದಾವೇಶ
t - ಸಮಯ
ವಿದ್ಯುದಾವೇಶ SI ಏಕಮಾನ ಬರೆಯಿರಿ
ಕೂಲಮ್
ಒಂದು ಕೂಲಮ್ ಬೆಲೆ ಎಷ್ಟು
1C = 6X1018 electrons
ವಿದ್ಯುತ್ ಪ್ರವಾಹದ SI ಏಕಮಾನ ಏನು
ಆಂಪೀರ್ (A)
ಒಂದು ಆಂಪಿಯರ್ ವಿದ್ಯುತ್ ಪ್ರವಾಹ ಎಂದರೇನು
ಒಂದು ಆಂಪಿಯರ್ ವಿದ್ಯುತ್ ಪ್ರವಾಹ ವೆಂದರೆ ಪ್ರತಿ ಸೆಕೆಂಡಿಗೆ ಒಂದು ಕೂಲಂ ಆವೇಶವೂ ಪ್ರವಾಹವಾಗಿದೆ ಎಂದರ್ಥ
ಅಲ್ಪ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಹೇಗೆ ವ್ಯಕ್ತಪಡಿಸಲಾಗುತ್ತದೆ
ಮಿಲಿ ಆಂಪಿಯರ್ ಅಥವಾ ಮೈಕ್ರೋ ಆಂಪಿಯರ್ ನಿಂದ
ವಿದ್ಯುತ್ ಪ್ರವಾಹದ ದರವನ್ನು ಅಳೆಯುವ ಉಪಕರಣ ಯಾವುದು
ಅಮ್ಮೀಟರ್
ವಿದ್ಯುತ್ ವಿಭವಾಂತರ ಎಂದರೇನು
ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಆಗುವ ಕೆಲಸವನ್ನು ವಿದ್ಯುತ್ ವಿಭವಾಂತರ ಎನ್ನುವರು
ವಿದ್ಯುತ್ ವಿಭವಾಂತರದ ಗಣಿತೀಯ ಸೂತ್ರ ಬರೆಯಿರಿ
ವಿದ್ಯುತ್ ವಿಭವಾಂತರ = ಕೆಲಸ
-----------------
ಆವೇಶ
V = W/Q
ವಿದ್ಯುತ್ ವಿಭವಾಂತರದ SI ಏಕಮಾನ ಏನು
ವೋಲ್ಟ್ (V)
ಒಂದು ವೋಲ್ಟ್ ವ್ಯಾಖ್ಯಾನಿಸಿ
ಒಂದು ಕೂಲಂ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ಒಂದು ಜೌಲ್ ಕೆಲಸ ನಡೆದರೆ ಆ ಎರಡು ಬಿಂದುಗಳ ನಡುವಿನ ವಿಭವಾಂತರವು ಒಂದು ವೋಲ್ಟ್ ಆಗಿರುತ್ತದೆ
ವಿಭವಾಂತರ ವನ್ನು ಅಳೆಯುವ ಉಪಕರಣ ಯಾವುದು
ವೋಲ್ಟ್ ಮೀಟರ್
ವಿದ್ಯುತ್ ಮಂಡಲದ ರೇಖಾಚಿತ್ರ ಎಂದರೇನು
ವಿದ್ಯುತ್ ಮಂಡಲದ ವಿವಿಧ ಘಟಕಗಳನ್ನು ಸೂಕ್ತ ಚಿಹ್ನೆಗಳ ಮುಖಾಂತರ ರೇಖೆಗಳನ್ನು ಬಳಸಿಕೊಂಡು ತೋರಿಸಲಾಗುವ ಚಿತ್ರವನ್ನು ವಿದ್ಯುತ್ ಮಂಡಲದ ರೇಖಾಚಿತ್ರ ಎನ್ನುವರು
ಓಮ್ ನ ನಿಯಮವು ಏನನ್ನು ತಿಳಿಸುತ್ತದೆ
ಒಂದು ಲೋಹದ ತಂತಿಯ ಮೂಲಕ ಹರಿಯುವ ವಿದ್ಯುತ್ ಪ್ರವಾಹ ಮತ್ತು ಅದರ ತುದಿಗಳ ನಡುವಿನ ವಿಭವಾಂತರ ಗಳಿಗಿರುವ ಪರಸ್ಪರ ಸಂಬಂಧವನ್ನು ತಿಳಿಸುತ್ತದೆ
ಓಮ್ ನ ನಿಯಮವನ್ನು ವ್ಯಾಖ್ಯಾನಿಸಿ
ಸ್ಥಿರವಾದ ತಾಪಮಾನದಲ್ಲಿ ವಿದ್ಯುತ್ ಮಂಡಲದಲ್ಲಿನ ಲೋಹದ ತಂತಿಯ ನಡುವಿನ ವಿಭವಾಂತರವು ಅದರ ಮೂಲಕ ಹರಿಯುವ ವಿದ್ಯುತ್ ಪ್ರವಾಹಕ್ಕೆ ನೇರ ಅನುಪಾತದಲ್ಲಿ ಇರುತ್ತದೆ
ಓಮ್ ನ ನಿಯಮದ ಗಣಿತೀಯ ಸೂತ್ರ ಬರೆಯಿರಿ
ವಿಭವಾಂತರ ವಿದ್ಯುತ್ ಪ್ರವಾಹ
V I
V = IR
ಓಮ್ ನ ನಿಯಮದ ಪ್ರಕಾರ R ಎಂದರೇನು
ವಿದ್ಯುತ್ ರೋಧ
ವಿದ್ಯುತ್ ರೋಧ ಎಂದರೇನು
ನಿರ್ದಿಷ್ಟ ತಾಪಮಾನದಲ್ಲಿ ಲೋಹದ ತಂತಿಯಲ್ಲಿ ಪ್ರವಹಿಸುವ ಆವೇಶಗಳ ಪ್ರವಾಹವನ್ನು ವಿರೋಧಿಸುವ ಗುಣವನ್ನು ವಿದ್ಯುತ್ ವಿರೋಧ ಎನ್ನುವವರು
ವಿದ್ಯುತ್ ರೋಧದ SI ಏಕಮಾನ ಏನು
ಓಮ್
ಒಂದು ಓಮ್ ವ್ಯಾಖ್ಯಾನಿಸಿ
ಯಾವುದೇ ವಾಹಕದ ಎರಡು ತುದಿಗಳ ನಡುವಿನ ವಿವಾಂತ ಒಂದು ವೋಲ್ಟ್ ಆಗಿದ್ದು ಮತ್ತು ಅದರ ಮೂಲಕ ಒಂದು ಆಂಪಿಯರ್ ವಿದ್ಯುತ್ ಪ್ರವಾಹ ಪ್ರವಹಿಸಿದಾಗ ಈ ವಾಹಕದ ರೋಧ ಒಂದು ಓಮ್ ಆಗಿರುತ್ತದೆ
ಪರಿವರ್ತಿತ ರೋಧ ಎಂದರೇನು
ವಿದ್ಯುತ್ ವಿಭವಾಂತರದ ಮೂಲವನ್ನು ಬದಲಾಯಿಸದೇ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸಲು ಉಪಯೋಗಿಸುವ ಉಪಕರಣವನ್ನು ಪರಿವರ್ತಿತ ರೋಧ ಎನ್ನುತ್ತಾರೆ
ರಿಯೋ ಸ್ಟಾಟ್ ಎಂದರೇನು
ವಿದ್ಯುತ್ ಮಂಡಲದಲ್ಲಿ ವಿದ್ಯುತ್ ರೋಧವನ್ನು ಬದಲಾಯಿಸಲು ಬಳಸುವ ಸಾಧನವನ್ನು ರಿಯೊ ಸ್ಟಾಟ್ ಎನ್ನುತ್ತಾರೆ
ವಾಹಕದ ವಿದ್ಯುತ್ ವಿರೋಧವು ಅವಲಂಬಿಸಿರುವ ಅಂಶಗಳು ಯಾವುವು
ವಾಹಕದ ವಿಸ್ತೀರ್ಣ
ವಾಹಕದ ಗುಣ
ವಾಹಕದ ಉದ್ದ
ವಿದ್ಯುತ್ ರೋಧ ವಾಹಕದ ಉದ್ದ ಮತ್ತು ವಾಹಕದ ವಿಸ್ತೀರ್ಣಕ್ಕೆ ಇರುವ ಸಂಬಂಧವನ್ನು ವ್ಯಾಖ್ಯಾನಿಸಿ
ಯಾವುದೇ ಏಕರೂಪ ಲೋಹಿಯಾ ವಾಹಕದ
ರೋಧವು ಅದರ ಉದ್ದಕ್ಕೆ ನೇರ ಅನುಪಾತದಲ್ಲಿರುತ್ತದೆ ಮತ್ತು ಅದರ ವಿಸ್ತೀರ್ಣಕ್ಕೆ ವಿಲೋಮಾನುಪಾತದಲ್ಲಿ ಇರುತ್ತದೆ
ವಿದ್ಯುತ್ ರೋಧ ಶೀಲತೆಯ SI ಏಕಮಾನ ಏನು
ಓಮ್ ಮೀಟರ್
ಲೋಹಗಳ ವಿದ್ಯುತ್ ರೋಧ ಶೀಲತೆಯ ಬೆಲೆ ಎಷ್ಟು
10-8 - 10-6 ohm m
ವಿದ್ಯುತ್ ಅವಾಹಕಗಳ ರೋಧ ಶೀಲತೆಯ ಬೆಲೆ ಎಷ್ಟು
1012 – 1017 ohm m
ವಿದ್ಯುತ್ ರೋಧಗಳ ಜೋಡಣೆಯ ವ್ಯವಸ್ಥೆಯ ವಿಧಗಳು ಎಷ್ಟು
ಸರಣಿ ಕ್ರಮ ಜೋಡಣೆ
ಸಮಾಂತರ ಜೋಡಣೆ
ಸರಣಿ ಕ್ರಮ ಜೋಡಣೆಯ ಚಿತ್ರ ಬಿಡಿಸಿ
ಸಮಾಂತರ ಜೋಡಣೆಯ ಚಿತ್ರ ಬಿಡಿಸಿ
ಸರಣಿ ಕ್ರಮ ಜೋಡಣೆ ಯ ಸೂತ್ರ ಬರೆಯಿರಿ
Rs = R1 + R2 + R3 + Rn
ಸಮಾಂತರ ಜೋಡಣೆಯ ಸೂತ್ರ ಬರೆಯಿರಿ
1 1 1 1 1
-- = ---- + ---- + ----- + ----
Rp R1 R2 R3 Rn
ವಿದ್ಯುತ್ ಬಲ್ಬ್ ಮತ್ತು ವಿದ್ಯುತ್ ಹೀಟರ್ನ್ನು ಸರಣಿ ಕ್ರಮದಲ್ಲಿ ಜೋಡಿಸುವುದು ಅಪ್ರಾಯೋಗಿಕ ಏಕೆ
ಏಕೆಂದರೆ ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ವಿಭಿನ್ನ ಮೌಲ್ಯಗಳ ವಿದ್ಯುತ್ ಪ್ರವಾಹದ ಅಗತ್ಯವಿದೆ
ಸರಣಿ ಕ್ರಮದ ಜೋಡಣೆಯ ಅನಾನುಕೂಲವೇನು
ಸರಣಿ ಕ್ರಮ ಜೋಡಣೆಯಲ್ಲಿ ಯಾವುದಾದರೂ ಒಂದು ಘಟಕ ವಿಫಲವಾದರೆ ಮಂಡಲವು ಮುರಿದು ಹೋಗುತ್ತದೆ ಮತ್ತು ಉಳಿದ ಯಾವುದೇ ಘಟಕಗಳು ಕಾರ್ಯ ನಿರ್ವಹಿಸುವುದಿಲ್ಲ
ವಿದ್ಯುತ್ ಪ್ರವಾಹದ ಉಷ್ಣೋ ತ್ಪಾದನಾ ಪರಿಣಾಮ ಎಂದರೇನು
ವಿದ್ಯುತ್ ಮಂಡಲಕ್ಕೆ ಜೋಡಣೆಯಾದ ರೋಧದಿಂದ ಶಕ್ತಿಯು ನಿರಂತರವಾಗಿ ಉಷ್ಣದ ರೂಪದಲ್ಲಿ ಸಂಪೂರ್ಣವಾಗಿ ವ್ಯಯವಾಗುತ್ತಿರುತ್ತದೆ ಈ ವಿದ್ಯಮಾನವನ್ನು ವಿದ್ಯುತ್ ಪ್ರವಾಹದ ಉಷ್ಣೋ ತ್ಪಾದನಾ ಪರಿಣಾಮ ಎನ್ನುವರು
ವಿದ್ಯುತ್ ಪ್ರವಾಹದ ಉಷ್ಣೋ ತ್ಪಾದನಾ ಪರಿಣಾಮವನ್ನು ಆಧರಿಸಿ ತಯಾರಿಸಿದ ಸಾಧನಗಳು ಯಾವುವು
ವಿದ್ಯುತ್ ಇಸ್ತ್ರಿ ಪೆಟ್ಟಿಗೆ
ವಿದ್ಯುತ್ ಹೀಟರ್
ವಿದ್ಯುತ್ ಸಾಮರ್ಥ್ಯದ ಸೂತ್ರ ಬರೆಯಿರಿ
P = VI
ವಿದ್ಯುತ್ ಪ್ರವಾಹದಿಂದ ಉತ್ಪತ್ತಿಯಾದ ಉಷ್ಣದ ಪ್ರಮಾಣವನ್ನು ಕಂಡು ಹಿಡಿಯುವ ಸೂತ್ರ ಬರೆಯಿರಿ
H=VIT
H=Pt
H=I^2RT
ಜೌಲನಉಷ್ಣೋತ್ಪಾದನಾ ನಿಯಮವನ್ನು ವ್ಯಾಖ್ಯಾನಿಸಿ
ಈ ನಿಯಮದ ಪ್ರಕಾರ ರೋಧದಲ್ಲಿ ಉತ್ಪತ್ತಿಯಾದ ಉಷ್ಣವು ಕೊಟ್ಟಿರುವ ರೋಧದಲ್ಲಿ ಪ್ರವಹಿಸುತ್ತಿರುವ ವಿದ್ಯುತ್ ಪ್ರವಾಹದ ವರ್ಗಕ್ಕೆ ನೇರ ಅನುಪಾತ ದಲ್ಲಿ ರುತ್ತದೆ
ಕೊಟ್ಟಿರುವ ವಿದ್ಯುತ್ ಪ್ರವಾಹಕ್ಕೆ ರೋಧವು ನೇರ ಅನುಪಾತ ದಲ್ಲಿರುತ್ತದೆ
ರೋಧಗಳ ಮೂಲಕ ಹರಿಯುವ ವಿದ್ಯುತ್ ಪ್ರವಾಹದ ಕಾಲಕ್ಕೆ ನೇರ ಅನುಪಾತ ದಲ್ಲಿರುತ್ತದೆ
ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ಪರಿಣಾಮದ ಪ್ರಾಯೋಗಿಕ ಅನ್ವಯಗಳನ್ನು ಬರೆಯಿರಿ
ವಿದ್ಯುತ್ ಇಸ್ತ್ರಿ ಪೆಟ್ಟಿಗೆ
ವಿದ್ಯುತ್ ಒಲೆ
ವಿದ್ಯುತ್ ಹೀಟರ್
ವಿದ್ಯುತ್ ಕೆಟಲ್ ಗಳು
ಫ್ಯೂಸ್ ನ ಕಾರ್ಯ ವಿಧಾನವನ್ನು ತಿಳಿಸಿ
- ಫ್ಯೂಸ್ ಯಾವುದೇ ಅನುಚಿತವಾದ ಹೆಚ್ಚಿನ ವಿದ್ಯುತ್ ಪ್ರವಾಹವು ಮಂಡಲದಲ್ಲಿ ಉಪಕರಣಗಳ ಮೂಲಕ ಪ್ರವಹಿಸಿದ ಹಾಗೆ ಮಾಡಿ ಅವುಗಳನ್ನು ರಕ್ಷಿಸುತ್ತದೆ
- ಫ್ಯೂಸ್ ಅನ್ನು ವಿದ್ಯುತ್ ಸಾಧನಗಳೊಂದಿಗೆ ಸರಣಿ ಕ್ರಮದಲ್ಲಿ ಜೋಡಿಸಿರುತ್ತಾರೆ
- ಇದು ಸೂಕ್ತ ದ್ರವನ ಬಿಂದು ಹೊಂದಿರುವ ಲೋಹ ಅಥವಾ ಮಿಶ್ರ ಲೋಹದ ತಂತಿಯನ್ನು ಹೊಂದಿರುತ್ತದೆ
- ಉದಾಹರಣೆಗೆ ತಾಮ್ರ ಕಬ್ಬಿಣ ಸೀಸ
- ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಾಹವು ಮಂಡಲದ ಮೂಲಕ ಪ್ರವಹಿಸಿದಾಗ ಫ್ಯೂಸ್ ತಂತಿಯ ತಾಪ ಹೆಚ್ಚಾಗುತ್ತದೆ
- ಇದರಿಂದಾಗಿ ಫ್ಯೂಸ್ ನ ತಂತಿಯೂ ಕರಗಿ ಹೋಗುತ್ತದೆ ಮತ್ತು ಮಂಡಲವನ್ನು ಕಡಿತಗೊಳಿಸುತ್ತದೆ