ಉತ್ತರ: ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ
ವೇದವ್ಯಾಸರು.
ಉತ್ತರ: ತುಂಬಾ ಹಸಿದುಕೊಂಡಿದ್ದ ಹುಲಿಗೆ, ಶಾನುಭೋಗರ
- ದುಂಡು ದುಂಡಾದ ಶರೀರವನ್ನು ನೋಡಿ ಪರಮಾನಂದವಾಯಿತು.
ಉತ್ತರ: ಹುಲಿಯಿಂದ ತಪ್ಪಿಸಿಕೊಳ್ಳಲು, ನಿಂತ ಕಡೆಯಲ್ಲೇ
ಹುಲಿಯ ವೇಗಕ್ಕೆ ಸರಿಯಾಗಿ ಚಾಚೂ ತಪ್ಪದಂತೆ ತಮ್ಮ ವೇಗವನ್ನೂ
ಹೊಂದಿಸಿಕೊಂಡು ಕುಲಾಲಚಕ್ರದಂತೆ ತಿರುಗಿದರು. ಇದರಿಂದ
ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು,
ಉತ್ತರ: ಶಾನುಭೋಗರ ಬ್ರಹ್ಮಾಸ್ತ್ರ ಅವರ ಹತ್ತಿರವಿದ್ದ
ಖಿರ್ದಿ ಪುಸ್ತಕ.
ಉತ್ತರ: ಹಸಿದು ಮಲಗಿದ್ದ ಹುಲಿಯು ವಿಧಿ ಆಹಾರಕ್ಕೆ ಏನನ್ನು
ಒದಗಿಸುವುದೋ ಎಂದು ಯೋಚಿಸಿತು.
ಉತ್ತರ: ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು
'ಕಾಡು ದಾರಿ ಆದರೂ ಬೆಳದಿಂಗಳ ದಿನ, ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ
ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು' ಎಂದು ಯೋಚಿಸಿದರು.
ಉತ್ತರ: ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನೆಂದರೆ-
ಭರತ ಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.
ಶತ್ರುವನ್ನಾದರೂ ಸರಿಯೆ ಆತ ಬೆನ್ನು ತಿರುಗಿಸಿರುವಾಗ
ಕೊಲ್ಲುವುದು ಧರ್ಮವಲ್ಲವಷ್ಟೇ ಆದ್ದರಿಂದಲೇ ಹುಲಿ ಹಿಂದಿನಿಂದ ಹಾರಿ
ಕೊಲ್ಲುವುದಿಲ್ಲ.
ಶಾನುಭೋಗರು ಮೂರ್ಛಯಲ್ಲಿದ್ದಾಗ ನಡೆದದ್ದು
ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ
ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ
ಕಳಿಗೆ ಹಿಂದಿರುಗುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು
ಹರದಾರಿಯಿದೆ ಎನ್ನುವಾಗ ಎತ್ತುಗಳು ಏನು ಮಾಡಿದರೂ ಮುಂದೆ
ಹೋಗದೆ ಕಣಿ ಹಾಕಿಕೊಂಡವು. ತಕ್ಷಣವೇ ಹುಲಿಯ ಗರ್ಜನೆಯೂ
ಕೇಳಿಸಿತು. ಎತ್ತುಗಳ ಘಂಟೆಯ ಶಬ್ದ, ರೈತರ ಮಾತುಗಳನ್ನು ಕೇಳಿದ
ಹುಲಿ ನಿರಾಶೆಯಿಂದಲೂ, ಕೋಪದಿಂದಲೂ ಗರ್ಜಿಸಿ ಪಲಾಯನ
ಮಾಡಿತು. ನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು
ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನಗರಿಯ
ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರೆದರು.
ಮೂರ್ಛಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ
ನೀರೆರಚಿ ಎಚ್ಚರಿಸಿದರು.
ಉತ್ತರ: ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆ
ಮಾಡುವ ಬಗೆ ಹೀಗಿದೆ: ಯಾರನ್ನೇ ಆಗಲಿ, ಭರತ ಖಂಡದ ಹುಲಿಗಳು
ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೇ, ಆತ
ಬೆನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲವಷ್ಟೆ, ಆದ್ದರಿಂದ
ಹುಲಿ ತನ್ನ ಬೇಟೆಯ ಅಭಿಮುಖವಾಗಿಯೇ ಬರುತ್ತದೆ. ಬೇಟೆಯನ್ನು
ಹಾದು ಮುಂದೆ ಹೋಗುವುದು ಕಷ್ಟವಾದಾಗ, ಅವನ ಹಿಂದೆ ನಿಶ್ಯಬ್ದ
ವಾಗಿ ನಡೆದು, ಅನಂತರ ಅವನ ಮುಂಭಾಗಕ್ಕೆ ನೆಗೆದು ಕೂಡಲೇ ತಿರುಗಿ
ಅವನ ಮೇಲೆ ಬೀಳುತ್ತದೆ. ಮತ್ತೆ ಮತ್ತೆ ತನಗೆ ಬೆನ್ನು ತಿರುಗಿಸಿ ನಡೆಯು
ವಂಥ ಶಾನುಭೋಗರಂತಹ ಬೇಟೆ ಸಿಕ್ಕರಂತೂ ಅವರ ವಿಷಯದಲ್ಲಿ
ಮೆಚ್ಚುಗೆಯನ್ನೂ ಸೂಚಿಸುತ್ತದೆ. ತನಗೆ ಒಳ್ಳೆಯ ಎದುರಾಳಿಯೇ
ಸಿಕ್ಕಿದ್ದಾನೆ, ತಿಂದರೆ ಇಂಥವನನ್ನೇ ತಿನ್ನಬೇಕು ಎಂದುಕೊಳ್ಳುತ್ತದೆ.
ಇನ್ನು ಸಂಶದಲ್ಲಿ ಜನಿಸಿದ ಹುಲಿಯಂತೂ, ಸತ್ಯವ್ರತೆಯಾದ
ತನ್ನ ಅಜ್ಜನಾದ ಪುಣ್ಯಕೋಟಿಯನ್ನು ನೆನಪಿಸಿಕೊಂಡು, ಅನ್ಯಾಯ
ಮಾಡದಂತೆ ಬೇಟೆಯಾಡುತ್ತದೆ. ಇಂಥ ಹುಲಿಗೆ ಬೇಟೆಯಾಡುವಾಗ
ಭಗವದ್ಗೀತೆಯ 'ಸ್ವರ್ಧಮೆ್ರ ನಿಧನಂ ಶ್ರೇಯಃ' ಎಂಬ ವಾಣಿಯು,
ಬೈಬಲ್ನ 'ಸೈತಾನ್ ಹಿಂದಿರುಗು' ಎನ್ನುವುದೂ, ನೆನಪಾಗಿ ತಾನು
ಅಧರ್ಮಕ್ಕೆ ಕೈಹಾಕುವುದು ಸರಿಯಲ್ಲವೆಂಬ ವಿಚಾರ ಮೂಡುತ್ತದೆ. ಬೆನ್ನು
ಮೇಲಾಗಿ ಬಿದ್ದ ಅಥವಾ ಬೆನ್ನು ಮೇಲಾಗಿ ಪ್ರಜ್ಞೆ ತಪ್ಪಿದ, ಬೇಟೆಯನ್ನು
ಇದು ಎಂದಿಗೂ ಕೊಲ್ಲುವುದಿಲ್ಲ, ತಿನ್ನುವುದಿಲ್ಲ. ಹೀಗೆ ಕೊನೆಯವರೆಗೂ
ಈ ಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೇ ಬರುತ್ತದೆ.
ಉತ್ತರ: ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೂ
ಹೌದು, ಹುಲಿಯ ಧರ್ಮವೂ ಹೌದು. ಹೇಗೆಂದರೆ, ಶಾನುಭೋಗರ
ಪ್ರಕಾರ ಖಿರ್ದಿ ಪುಸ್ತಕ ವಿವರವಾಗಿಯೆಂದರೆ, ತಮ್ಮವಿಪತ್ತಿನ ಸನ್ನಿವೇಶದಲ್ಲಿ
ಅವರಿಗೆ ತಮ್ಮ ಖಿರ್ದಿ ಪುಸ್ತಕದ ಯೋಚನೆ ಬಂತು. ಅವರಲ್ಲಿ
ಆಯುಧವಿರದ ಕಾರಣ, ಖಿರ್ದಿ ಪುಸ್ತಕವನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡು
ಹುಲಿಯ ಮುಖಕ್ಕೆ ಬಂದು ಬಡಿದಾಗ ಹುಲಿಗೆ ಪೆಟೇನೂ ಆಗದೆ
ಆಶ್ಚರ್ಯವಾಯಿತು. ಬಳಲಿಕೆಯಿಂದ ಜಡವಾಗಿದ್ದ ಮನಸ್ಸಿಗೆ ಪರಿಸ್ಥಿತಿಯ
ಅರಿವಾಗಲು ಅರೆನಿಮಿಷ ಹಿಡಿಯಿತು. ಆ ಅರೆ ನಿಮಿಷದಲ್ಲಿ
ಶಾನುಭೋಗರು ಒಂದೇ ಉಸಿರಿನಲ್ಲಿ ಧಾವಿಸುತ್ತಾ ಮರ ಹತ್ತಲು
ಪ್ರಯತ್ನಿಸಿದಾಗ, ಕಲ್ಲನ್ನು ಎಡವಿ ಬಿದ್ದು ಪ್ರಜ್ಞೆ ಕಳೆದುಕೊಂಡರು. ಕೆಲ
ನಿಮಿಷಗಳಾದ ಮೇಲೆ ಪ್ರಜ್ಞೆ ಬಂದಾಗ ಯಾರೋ ಅವರಿಗೆ ನೀರು
ಚಿಮುಕಿಸುತ್ತಿದ್ದರು. ಗಟ್ಟಿ ಮನಸ್ಸಿನ ಅವರು ಬೇಗ ಚೇತರಿಸಿಕೊಂಡದ್ದು
ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಂಡರು. ಮತ್ತೆ ಖಿರ್ದಿ ಪುಸ್ತಕವನ್ನು
ಭದ್ರ ಮಾಡಿಕೊಂಡರು. ಇದರಿಂದಲೇ ತಮ್ಮ ಜೀವ ಉಳಿಯಿತೆಂದು
ಅದನ್ನು ಪೂಜಿಸುತ್ತ ಬಂದರು.
ಪ್ರಸ್ತುತ ಲೇಖಕರ ಪ್ರಕಾರ ಶಾನುಭೋಗರನ್ನು ರಕ್ಷಿಸಿದ್ದು
ಹುಲಿಯ ಧರ್ಮಶ್ರದ್ದೆಯಿಂದ. ಏಕೆಂದರೆ ಕಲ್ಲನ್ನು ಎಡವಿ, ಬೆನ್ನು
ಮೇಲಾಗಿ ಬಿದ್ದ ಶಾನುಭೋಗರನ್ನು ಕೊಲ್ಲದ ಕೊನೆಯವರೆಗೂ ಆ ಪ್ರಾಣಿ
ತನ್ನ ಕುಲಧರ್ಮವನ್ನು ಪಾಲಿಸಿಕೊಂಡು ಬಂದಿತ್ತು. ಇದರಿಂದ ಉದಾರ
ಹೃದಯರಾದ ಶಾನುಭೋಗರ ಬಾಯಿಂದ 'ಭಲೆ' ಎಂಬ ಮೆಚ್ಚಿಕೆಯನ್ನು
ಪಡೆದುಕೊಂಡಿತು. ಅಲ್ಲದೆ ಲೇಖಕರಿಂದ ಹಾಡಿ ಹೊಗಳಿಸಿಕೊಂಡಿತು.
ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ
'ವ್ಯಾಘ್ರಗೀತೆ' ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ.
ಮತ್ತೆ ಮತ್ತೆ ಶಾನುಭೋಗರ ಬೆನ್ನು ಕಂಡು ಗೊಂದಲಕ್ಕೆ ಈಡಾದ
ಸಂದರ್ಭದಲ್ಲಿ ಹುಲಿ ಈ ಮೇಲಿನ ಸಾಲನ್ನು ನೆನಪಿಸಿಕೊಂಡಿತು.
ಸ್ವಾರಸ್ಯ: ಪ್ರತಿ ಬಾರಿ ಹುಲಿ, ಶಾನುಭೋಗರ ಮೇಲೆ ಎಗರ
ಬೇಕೆಂದಾಗ ಕೇವಲ ಅವರ ಬೆನ್ನೇ ಕಾಣುತ್ತಿತ್ತು. ಒಳ್ಳೆಯ ಎದುರಾಳಿ
ಸಿಕ್ಕಿದನೆಂದು ಮೆಚ್ಚಿಕೆಯಾಯಿತು. ಅದಕ್ಕೆ ಒಂದು ಕಡೆ ಹಸಿವು,
ಮತ್ತೊಂದು ಕಡೆ ತನ್ನ ಸ್ವಾಭಿಮಾನಕ್ಕೆ ಇಂಥ ಧಕ್ಕೆ ಬಂತಲ್ಲಾ ಎಂಬ
ಯೋಚನ. ನಾಳೆ ಇತರ ವ್ಯಾಘ್ರಗಳದುರಿಗೆ ತನ್ನ ಗೌರವ ಎಷ್ಟಕ್ಕೆ
ನಿಂತಿತು. ಮೇಲೆ ಬಿದ್ದೇಬಿಡಲೆ ಎಂಬ ಯೋಚನೆಯಾಗಿ ಗೊಂದಲ
ಉಂಟಾಯಿತು. ಈ ಸಮಯದಲ್ಲಿಯೇ ಮೇಲಿನ ಸಾಲನ್ನು
ನೆನಪಿಸಿಕೊಂಡು, ಪುಣ್ಯಕೋಟಿಯನ್ನು ತಿನ್ನದೇ ಬಿಟ್ಟ ತನ್ನ ಅಜ್ಜನನ್ನು
ನೆನಪಿಸಿಕೊಂಡಿತು.
ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ
'ವ್ಯಾಘ್ರಗೀತೆ' ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ.
ಪುಣ್ಯಕೋಟಿಯನ್ನು ತಿನ್ನದೇ ಪ್ರಾಣಬಿಟ್ಟ ತನ್ನ ಅಜ್ಜನನ್ನು
ನನಪಿಸಿಕೊಂಡಾಗ ಹುಲಿಗೆ ಮೇಲಿನ ಸಾಲು ನೆನಪಾಯಿತು.
ಸ್ವಾರಸ್ಯ; ಪುಣ್ಯಕೋಟಿ ತಿನ್ನಲು ಆಹ್ವಾನ ಕೊಟ್ಟರೂ ತಿನ್ನದೆ
ಪ್ರಾಣ ಬಿಟ್ಟ ತನ್ನ ಅಜ್ಜನ ಆದರ್ಶ ಕಣ್ಣು ತುಂಬಿ ನಿಂತಾಗ ಹುಲಿಗೆ
ಭಗವದ್ಗೀತೆಯ ಮೇಲಿನ ಸಾಲುಗಳು ನೆನಪಾದವು. ಜೊತೆಗೆ ಬೈಬಲ್
ನನಪಿಗೆ ಬಂದು 'ಸೈತಾನ ಹಿಂದಿರುಗು' ಎಂದುಕೊಂಡಿತು.
ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ
'ವ್ಯಾಘ್ರಗೀತೆ ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ.
ಶಾನುಭೋಗರು ತಮ್ಮಖಿರ್ದಿ ಪುಸ್ತಕದಿಂದ ಹುಲಿಯ ಮುಖಕ್ಕೆ
ಬಂದು ಬಡಿದಾಗ ಈ ಮೇಲಿನಂತೆ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ.
ಸ್ವಾರಸ್ಯ ನಿಂತ ಕಡೆಯಲ್ಲೇ ಕುಲಾಲ ಚಕ್ರದಂತೆ ತಿರುಗಿದ
ಹುಲಿಗೆ ಮತ್ತು ಶಾನುಭೋಗರಿಗೆ ವಿಪರೀತವಾದ ಆಯಾಸವಾಯಿತು.
ಶಾನುಭೋಗರು ಖಿರ್ದಿ ಪುಸ್ತಕದಿಂದ ಹುಲಿಯ ಮುಖಕ್ಕೆ ಬಂದು
ಬಡಿದಾಗ ಅದಕ್ಕೆ ಹೆಚ್ಚೇನೂ ಆಗದೆ, ಆಶ್ಚರ್ಯವಾಯಿತು. ಬಳಲಿಕೆ
ಯಿಂದ ಜಡವಾಗಿದ್ದ ಮನಸ್ಸಿಗೆ ಪರಿಸ್ಥಿತಿಯ ಅರಿವಾಗಲು ಅರೆನಿಮಿಷ
ಹಿಡಿಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು ಮೇಲಿನ
ವಾಕ್ಯದಂತೆ ಅಂದಕೊಳ್ಳುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ
ಧಾವಿಸಿದರು. ಆದರೆ ದೇವರ ರಕ್ಷಣಾ ವ್ಯವಸ್ಥೆ ಬೇರೆ ಇದ್ದುದರಿಂದಾಗಿ,
ಕಲ್ಲೊಂದನ್ನು ಎಡವಿ ಬಿದ್ದು ಶಾನುಭೋಗರು ಪ್ರಜ್ಞೆ ಕಳೆದುಕೊಂಡರು.
ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು
ರಚಿಸಿದ 'ವ್ಯಾಘ್ರಗೀತೆ' ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ.
ಪ್ರಜ್ಞೆ ಬಂದ ಮೇಲೆ ಮೇಲಿನಂತೆ ಶಾನುಭೋಗರು
ಗಾಡಿಯವರನ್ನು ಕೇಳಿದರು.
ಸ್ವಾರಸ್ಯ: ಪ್ರಜ್ಞೆ ಬಂದ ಶಾನುಭೋಗರು ಮನಸ್ಸನ್ನೆಲ್ಲಾ
ವಿಸಯ ಆವರಿಸಿತ್ತು. ತಾವು ಉಳಿದದ್ದು ಹೇಗೆ? ನಿಸ್ಸಹಾಯರಾಗಿ
ಪ್ರಜ್ಞೆಯಿಲ್ಲದೆ ಬಿದ್ದಿದ್ದಾಗ ಹುಲಿ ತಮ್ಮನ್ನು ಎಳೆದುಕೊಂಡು
ಹೋಗಲಿಲ್ಲವೇಕೆ? ಸ್ವಲ್ಪ ಹೊತ್ತು ಯೋಚಿಸಿ ಗಾಡಿಯವರನ್ನು ಮೇಲಿನಂತೆ
ಕೇಳಿದರು. ಅವರು ಇಲ್ಲ ಬಿದ್ದದ್ದು ಬೆನ್ನು ಮೇಲಾಗಿ ಎಂದಾಗ,
ಶಾನುಭೋಗರ ಸಮಸ್ಯೆಗೆ ಉತ್ತರ ದೊರಂತಂತಾಯಿತು.
ಪ್ರಸ್ತುತ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರು ರಚಿಸಿದ
'ವ್ಯಾಘ್ರಗೀತೆ ಎಂಬ ಗದ್ಯಭಾಗದಿಂದ ತೆಗೆದುಕೊಂಡಿದೆ. ಶಾನುಭೋಗರು
ಊಟಕ್ಕೆ ಕುಳಿತಾಗ, ಮೇಲಿನಂತೆ ಯೋಚಿಸಿದರು.
ಸ್ವಾರಸ್ಯ: ಶಾನುಭೋಗರು ಕುಡಿದ ನೀರು ಅಲಗದ ಹಾಗೆ
ಎನ್ನಲಾಗದಿದ್ದರೂ ಜೀವಸಹಿತ ಮನೆ ಸೇರಿಕೊಂಡರು. ರಸದೂಟ
ವನ್ನು ಮಾಡಿದರು. ಈ ಮೇಲಿನ ಯೋಚನೆ ಬಂದಾಗ ಅವರ
ವದನಾರವಿಂದ ದಲ್ಲಿ ಮುಗುಳುನಗೆ ಮೂಡಿತು. ಊಟದ ರುಚಿ
ಇಮ್ಮಡಿಯಾಯಿತು. .
1. ಮಂತ್ರಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು.
2. ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಾಸ್ತ್ರ.
3. ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿ
ಶಾನುಭೋಗರು ಬಿದ್ದರು.
4. ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು.
5. ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ.