ಉತ್ತರ: ನಾಲ್ವಡಿ ಕೃಷ್ಣರಾಜರು 1895ರಲ್ಲಿ ಪಟ್ಟಾಭಿಷಿಕ್ತ
ರಾದರು. ಆಗ ಅವರಿಗೆ ಹತ್ತು ವರ್ಷ.
ಉತ್ತರ: ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ
ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣಬದ್ಧರಾದರು.
ಉತ್ತರ: ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ
1907ರಲ್ಲಿ ವಾಣಿವಿಲಾಸ ಸಾಗರ (ಮಾರಿಕಣಿವೆ) ಕಟ್ಟಲ್ಪಟ್ಟಿತು.
ಉತ್ತರ: ಬ್ರಿಟಿಷ್ ಸರಕಾರವು ವಿಶ್ವೇಶ್ವರಯ್ಯ ಅವರಿಗೆ ಸರ್
ಪದವಿ ನೀಡಿ ಗೌರವಿಸಿತು.
ಉತ್ತರ: ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ
ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ
ನೇಮಿಸಿದರು.
ಉತ್ತರ: ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ
ಇಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಉತ್ತರ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು
ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ಪ್ರಜಾಪ್ರತಿನಿಧಿ ಸಭೆಯು ನೂತನ
ರೂಪವನ್ನು ಪಡೆದು ನಿಜವಾದ ಜನಪ್ರತಿನಿಧಿ ಸಭೆಯಾಗಿ ಪರಿವರ್ತನೆ
ಯಾಯಿತು. ಅದಕ್ಕಾಗಿ 1923ರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ
ತಂದು ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ದ ಸಂಸ್ಥೆಯನ್ನಾಗಿ
ಮಾರ್ಪಡಿಸಿದರು.
ಉತ್ತರ: 1900ರಲ್ಲಿಯೇ ಶಿವನಸಮುದ್ರದ ಬಳಿ ಕಾವೇರಿ
ನದಿಯಿಂದ ಜಲವಿದ್ಯುತ್ ಕೇಂದ್ರ ಪ್ರಾರಂಭವಾಯಿತು. ಇದು ಭಾರತ
ಮಾತ್ರವಲ್ಲ ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್
ಯೋಜನೆ. 1907ರಲ್ಲಿ ವಾಣಿವಿಲಾಸಸಾಗರ (ಮಾರಿಕಣಿವೆ)
ಕಟ್ಟಲ್ಪಟ್ಟಿತು. 1911ರಲ್ಲಿ ಕೃಷ್ಣರಾಜಸಾಗರ ಇವರ ಬೃಹತ್
ಮುಂಗಾಣ್ಮಯ ಕೊಡುಗೆ.
ಉತ್ತರ: ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ
ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು
ಸಂಜೀವಿನಿಯೆಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆ
ಗಳನ್ನು ರೂಪಿಸಿದರು. ಅದಕ್ಕಾಗಿ 1913ರಲ್ಲಿ ಪ್ರಾಥಮಿಕ ಶಿಕ್ಷಣ
ನಿಬಂಧನೆಯನ್ನು ಜಾರಿಗೆ ತಂದರು.
ಉತ್ತರ: ಪಂಡಿತ ಜವಾಹರಲಾಲ್ ನೆಹರೂ ಅವರು
ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ
ಸಮಾರಂಭದಲ್ಲಿ - ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು
ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ
ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ
ಹೊರತಾಗಿದ್ದೀರಿ. ಹಾವು ಕಡಿದು ಮಾತನಾಡಿದ್ದೀರಿ. ಹೆಚ್ಚು ಕೆಲಸ
ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ ಎಂದರು.
ಉತ್ತರ: ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರಬುನಾದಿ
ಹಾಕುವ ಉದ್ದೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಟು
ಮಾಡಿದರು. ಅದಕ್ಕಾಗಿ 1913ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು.
ಅನಂತರ ಉಳಿತಾಯ ಬ್ಯಾಂಕುಗಳು, ಫೀಡರ್ ಬ್ಯಾಂಕುಗಳು ಕೈಗಾರಿಕಾ
ಹೂಡಿಕೆ ಅಭಿವೃದ್ಧಿ ನಿಧಿ ರಚಿತಗೊಂಡವು. ಸಾರ್ವಜನಿಕ ಜೀವವಿಮಾ
ಯೋಜನೆ ಜಾರಿಗೆ ತಂದರು.
ಉತ್ತರ: 1902ರ ಆಗಸ್ಟ್ ಎಂಟನೆಯ ತಾರೀಕಿನಿಂದ
ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ
ಬಂದಿತು. ಆಗ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ರವರ
ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ
ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣಬದ್ಧರಾದರು. ಇವರ ಕಾಲದಲ್ಲಿ
ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ಧಿಯನ್ನು
ಮೈಸೂರು ರಾಜ್ಯವು ಕಂಡುದರಿಂದ ಮೈಸೂರು ಸಂಸ್ಥಾನಕ್ಕೆ ಮಾದರಿ
ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಯಿತು. ನಾಲ್ವಡಿ ಕೃಷ್ಣರಾಜ
ಒಡೆಯರು ಅರಸು ಮನೆತನದಿಂದ ಬಂದವರಾಗಿದ್ದರೂ ಸಹ ಜನತೆ
ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯ ಪರವಾಗಿದ್ದರು. ಇವರ ಕಾಲದಲ್ಲಿಯೇ
ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ಪ್ರಜಾಪ್ರತಿನಿಧಿ
ಸಭೆಯು ನೂತನ ರೂಪ ಪಡೆದು ನಿಜವಾದ ಜನಪ್ರತಿನಿಧಿ ಸಭೆಯಾಗಿ
ಪರಿವರ್ತನೆಯಾಯಿತು.
ಉತ್ತರ: ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ
ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ
ನೇಮಿಸುವ ಮೂಲಕ ಹೊಸ ಮನ್ವಂತರಕ್ಕೆ ಅಡಿಪಾಯ ಹಾಕಿದರು.
ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ ಕಛೇರಿಯ
ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅಷ್ಟೇ ಅಲ್ಲದೆ ದಕ್ಷತೆ
1 ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ
ಮುಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ
ರವನು ಪ್ರತ್ಯೇಕಗೊಳಿಸಿದರು. ಗಾಂಧೀಜಿಯವರು ಮೈಸೂರಿನ
ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು. ಇದರಿಂದ
ಮೈಸೂರು ಮಾದರಿ ಎಂಬ ಹೊಸ ಆಡಳಿತ ಮಾದರಿ ಜನ್ಮ ತಾಳಿತು.
ಉತ್ತರ: ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆ
ಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದರು. ಶಿಕ್ಷಣವು ಸಂಜೀವಿನಿ
ಎಂಬುದನ್ನರಿತಿದ್ದ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿ
ದರು. ಅದಕ್ಕಾಗಿ 1913ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು
ಜಾರಿಗೆ ತಂದರು. ಪ್ರೌಢಶಿಕ್ಷಣ ಶಾಲೆಗಳು ಮದ್ರಾಸ್ ವಿಶ್ವವಿದ್ಯಾ
ನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಬದಲಿಸಿ ಸಂಸ್ಥಾನವೇ
ಪ್ರತ್ಯೇಕವಾದ ಪ್ರೌಢ ಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ
ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ದೂರದೃಷ್ಟಿಯ
ಮತ್ತೊಂದು ಫಲಶ್ರುತಿ, ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ
ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮ ಹಕ್ಕಾಗಬೇಕು
ಎಂಬುದನ್ನು ಮನಗಂಡ ಅವರು ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ
- ಆದ್ಯತೆ ನೀಡಿದರು.
ಪಾಠ : ಭಾಗ್ಯಶಿಲ್ಪಿಗಳು
ಲೇಖಕರು : ಸಮಿತಿ ರಚನೆ / ಜಯಪ್ಪಗೌಡ.
ಆಕರ : ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ
ಕಾರ್ಯಸಾಧನೆಗಳು,
ಸಂದರ್ಭ ಸ್ವಾರಸ್ಯ: ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಳೀಯ
ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರೀಕರಣಕ್ಕೆ ಅನುವು
ಮಾಡಿಕೊಟ್ಟರು. ನಗರ ಪಾಲಿಕೆಗಳು ಹಾಗೂ ಗ್ರಾಮ ಪಂಚಾಯಿತಿ
ಗಳು ಕಾರ್ಯ ನಿರ್ವಹಿಸಲು ಆರಂಭಮಾಡಿದವು. ಇವರ ಕಾಲದಲ್ಲಿ 1.
ಗ್ರಾಮ ನಿರ್ಮಲೀಕರಣ, 2. ವೈದ್ಯಸಹಾಯ, 3. ವಿದ್ಯಾಪ್ರಚಾರ, 4.
ನೀರಿನ ಸೌಕರ್ಯ, 5. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು
ಸ್ವಯಂ ಆಡಳಿತ ಕೇಂದ್ರಗಳಾದವು. ಮೈಸೂರು ಸಂಸ್ಥಾನವನ್ನು ಮಾದರಿ
ಸಂಸ್ಥಾನವನ್ನಾಗಿ ರೂಪಿಸಿದರು. ಸಾಮಾಜಿಕ ಕಾನೂನುಗಳ ಹರಿಕಾರ
ಎಂದು ಹೆಸರಾದರು.
ಪಾಠ : ಭಾಗ್ಯಶಿಲ್ಪಿಗಳು
ಲೇಖಕರು : ಸಮಿತಿ ರಚನೆ / ಜಯಪ್ಪಗೌಡ.
ಆಕರ : ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ
ಕಾರ್ಯಸಾಧನೆಗಳು,
ಸಂದರ್ಭ ಸ್ವಾರಸ್ಯ: ಸರ್ ಎಂ. ವಿಶ್ವೇಶ್ವರಯ್ಯನವರು ಮುಂಬೈ
ಸರಕಾರದ ಸೂಚನೆಯ ಮೇರೆಗೆ ಸಿಂದ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ
ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ
ಪೂರೈಸಿದರು. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ
ಲಾರ್ಡ್ ಸಂಡ್ರ್ಹ ಅವರು ಇವರನ್ನು ಮುಕ್ತಕಂಠದಿಂದ ಹಾಡಿ
ಹೊಗಳಿದರು. ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ
ಕೋಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು.
ಸ್ವಯಂಚಾಲಿತ ಬಾಗಿಲುಗಳ ಅನ್ವೇಷಣೆ ವಿಶ್ವೇಶ್ವರಯ್ಯ ಅವರ ಸಾಧನೆಯ
ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.
ಪಾಠ : ಭಾಗ್ಯಶಿಲ್ಪಿಗಳು
ಲೇಖಕರು : ಸಮಿತಿ ರಚನೆ / ಜಯಪ್ಪಗೌಡ.
ಆಕರ : ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ
ಕಾರ್ಯಸಾಧನೆಗಳು.
ಸಂದರ್ಭ ಸ್ವಾರಸ್ಯ: ಮೈಸೂರು ಸಂಸ್ಥಾನದ ಮಹಾರಾಜ
ರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು
ದಿವಾನರನ್ನಾಗಿ ನೇಮಿಸುವ ಮೂಲಕ ಹೊಸ ಮನ್ವಂತರಕ್ಕೆ ಅಡಿಪಾಯ
ಹಾಕಿದರು. ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ.
ಕಚೇರಿಯ ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅಷ್ಟೇ ಅಲ್ಲದೆ
ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡಿದರು. ಸಂಸ್ಥಾನದಲ್ಲಿ ಸ್ಥಳೀಯ
ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ
ಅಧಿಕಾರವನ್ನು ಪ್ರತ್ಯೇಕಗೊಳಿಸಿ ಮೈಸೂರನ್ನು ಮಾದರಿ ಮೈಸೂರು'
ಮಾಡಿದರು. ಆದರ್ಶ ಪುರುಷರೊಬ್ಬರು ದಿವಾನರಾಗಿದ್ದು ಮೈಸೂರು
ಸಂಸ್ಥಾನದ ಪುಣ್ಯವಿಶೇಷವೇ ಸರಿ.
ಪಾಠ : ಭಾಗ್ಯಶಿಲ್ಪಿಗಳು
ಲೇಖಕರು : ಸಮಿತಿ ರಚನೆ / ಜಯಪ್ಪಗೌಡ.
ಆಕರ : ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ
ಕಾರ್ಯಸಾಧನೆಗಳು.
ಸಂದರ್ಭ ಸ್ವಾರಸ್ಯ: ಪಂಡಿತ ಜವಾಹರಲಾಲ್ ನೆಹರೂ ಅವರು
ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ಅವರ ಶತಮಾನೋತ್ಸವ
ಸಮಾರಂಭದಲ್ಲಿ - “ದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು
ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ
ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ
ಹೊರತಾಗಿದ್ದೀರಿ.” “ತಾವು ಕಡಿಮೆ ಮಾತನಾಡಿದ್ದೀರಿ. ಹೆಚ್ಚು ಕೆಲಸ
ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ' ಎಂದು
ವಿಶ್ವೇಶ್ವರಯ್ಯನವರ ಬಗ್ಗೆ ಈ ರೀತಿ ನುಡಿದರು.
1. ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಗೆ ರೀಜೆಂಟ್ರಾಗಿ
ಕಾರ್ಯ ನಿರ್ವಹಿಸಿದವರು.............
2. 1914ರಲ್ಲಿ ಶಾಲಾ ಪ್ರವೇಶಕ್ಕೆ ........... ನಿಷೇಧವಾಯಿತು.
3. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ........ ಆಗಿ
ಸೇವೆ ಪ್ರಾರಂಭಿಸಿದರು.
4. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ........... ಅವರು
ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.