ಶಿವ ಶಿವ ಎಂದರೆ ಭಯವಿಲ್ಲ|
ಶಿವ ನಾಮಕೆ ಸಾಟಿ ಬೇರಿಲ್ಲ|| ಶಿವ ನಾಮಕೆ ಸಾಟಿ ಬೇರಿಲ್ಲ ||ಪ||
ಶಿವ ಭಕ್ತನಿಗೆ ನರಕಾ ಇಲ್ಲ |
ಜನುಮ ಜನುಮಗಳ ಕಾಟವು ಇಲ್ಲ ||
|| ಶಿವ ಶಿವ ||
ಅನ್ನದಾನವ ಮರೆಯದಿರು|
ನಾನು ನನ್ನದು ಎನ್ನದಿರು||
ಉನ್ನತಿ ಸಾಧಿಸೆ ಹಗಲಿರುಳು|
ದೀನಾನಾಥನ ಮರೆಯದಿರು ||
|| ಶಿವ ಶಿವ ||
ಭೋಗ ಭಾಗ್ಯದ ಬಲೆಯೊಳಗೆ|
ಬಳಲಿ ಬಾಡದೆ ಇಳೆಯೊಳಗೆ ||
ಕಾಯಕ ಮಾಡುತ ಎಂದೆಂದೂ|
ಆತ್ಮಾನಂದವ ಪಡೆಯುತಿರು||
|| ಶಿವ ಶಿವ ||
ದಾನವೆ ಜಗದೊಳು ತಪವಯ್ಯ|
ಧ್ಯಾನವೆ ಘನತರ ಜಪವಯ್ಯ||
ಅಪಕಾರವ ನೀ ಮಾಡಿದರೆ|
ಕೈಲಾಸವದು ಸಿಗದಯ್ಯ ||
|| ಶಿವ ಶಿವ ||
***