ರಾಮ ಮಂತ್ರವ ಜಪಿಸೋ ಹೇ ಮನುಜ
ರಾಮ ಮಂತ್ರವ ಜಪಿಸೋ||
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ|
ಸೋಮಶೇಖರ ತನ್ನ ಸತಿಗೆ ಹೇಳಿದ ಮಂತ್ರ ||
||ರಾಮ ಮಂತ್ರವ ಜಪಿಸೋ||
ಕುಲಹೀನನಾದರು ಕೂಗಿ ಜಪಿಸುವ ಮಂತ್ರ |
ಸಲೆಬೀದಿಬೀದಿಯೊಳು ನುಡಿವ ಮಂತ್ರ||
ಹಲವು ಪಾಪಂಗಳ ಹತಗೊಳಿಸುವ ಮಂತ್ರ|
ಸುಲಭದಿಂದಲಿ ಸ್ವರ್ಗ ಸೂರೆಗೊoಬುವ ಮಂತ್ರ ||
||ರಾಮ ಮಂತ್ರವ ಜಪಿಸೋ||
ಸ್ನಾನ ಮೌನಂಗಳಿಗೆ ಸಾಧನದ ಮಂತ್ರ|
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ||
ಹೀನ ಗುಣಗಳ ಹಿಂಗಿಸುವ ಮಂತ್ರ|
ಪೊರೆದು ವಿಭೀಷಣಗೆ ಪಟ್ಟಗಟ್ಟಿದ ಮಂತ್ರ||
||ರಾಮ ಮಂತ್ರವ ಜಪಿಸೋ||
ಸಕಲ ವೇದ೦ಗಳಿಗೆ ಸಾರವೆನಿಪ ಮಂತ್ರ|
ಮುಕುತಿ ಮಾರ್ಗಕೆ ಇದೇ ಮೂಲ ಮಂತ್ರ||
ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ
ಸುಖನಿಧಿ ಪುರಂದರ ವಿಠಲನ ಮಂತ್ರ
||ರಾಮ ಮಂತ್ರವ ಜಪಿಸೋ||
***