ತಾಯೇ ಬೇಡಿಕೊಂಬೆನು ನಾ |

ನೀ ಎಮ್ಮ ಪಾಲಿಸೇ ತಾಯೇ ||ಪ||

ಕರಗಳ ಜೋಡಿಸುತಾ ನಾನು| ಶಿರವ ಬಾಗುವೆನು ||

ನಿನ್ನಾ ಚರಣಕೆರಗುವೆನು||

|| ತಾಯೇ ||

ಮಥುರಾಪುರ‌ನಿಲಯೇ‌ ಮೀನಾಕ್ಷಿ‌| ಮಹಿಷಮರ್ಧಿನಿಯೇ||

ದೇವೀ ಮುಕ್ತಿದಾಯಕಿಯೇ ||

|| ತಾಯೇ ||

ಸದಾನಂದದಲೀ ‌| ನಿನ್ನ ಪಾದ ಕಮಲವನು ||

ನಿತ್ಯಾ ಬಿಡದೆ ಪೂಜಿಪೆನು ||

|| ತಾಯೇ ||

***