ಭಾಗ್ಯದ ಲಕ್ಷ್ಮಿ ಬಾರಮ್ಮ |

ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ||

|| ಪ||

ಹೆಜ್ಜೆಯ ಮೇಲೊಂದೆಜ್ಜೆಯ‌ ನಿಕ್ಕುತ |

ಗೆಜ್ಜೆಯ ಕಾಲ ನಾದವ ತೋರುತ ||

ಸಜ್ಜನ ಸಾಧು ಪೂಜೆಯ ವೇಳೆಗೆ |

ಮಜ್ಜಿಗೆಯೊಳಗಿನ ಬೆಣ್ಣೆಯಂತೆ||

||ಭಾಗ್ಯದ ಲಕ್ಷ್ಮಿ ||


ಕನಕ ವ್ರಷ್ಟಿಯಗರೆಯುತ ಬಾರೇ|

ಮನಕೇ ಮಾನವ ಸಿದ್ದಿಯ ತೋರೇ||

ದಿನಕರ ಕೋಟಿತೇಜದಿ ಹೊಳೆಯುವ |

ಜನಕರಾಯನ ಕುಮಾರಿ ಬಾರೇ||

||ಭಾಗ್ಯದ ಲಕ್ಷ್ಮಿ ||


ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು‌|

ಕಂಕಣ ಕೈಯ ತಿರುಗುತ ಬಾರೆ||

ಕುಂಕುಮಾಂಕಿತೆ ಪಂಕಜಲೋಚನೆ|

ವೆಂಕಟರಮಣನ ಬಿಂಕದ ರಾಣಿ||

||ಭಾಗ್ಯದ ಲಕ್ಷ್ಮಿ ||


ಅತ್ತಿತ್ತಗಲದೆ ಭಕ್ತರ ಮನೆಯೊಳು|

ನಿತ್ಯ ಮಹೋತ್ಸವ ನಿತ್ಯ ಸುಮಂಗಲ||

ಸತ್ಯವ ತೋರುವ ಸಾದು ಸಜ್ಜನರ|

ಚಿತ್ತದಿ ಹೊಳೆಯುವ ಪುತ್ತಲಿಬೊಂಬೆ||

||ಭಾಗ್ಯದ ಲಕ್ಷ್ಮಿ ||


ಸಕ್ಕರೆ ತುಪ್ಪದ ಕಾಲುವೆ ಹರಿಸಿ|

ಶುಕ್ರವಾರದ ಪೂಜೆಯ ವೇಳೆಗೆ||

ಅಕ್ಕರೆಯುಳ್ಳ ಅಳಗಿರಿ ರಂಗನ|

ಚೊಕ್ಕ ಪುರಂದರ ವಿಠಲನ ರಾಣಿ||

||ಭಾಗ್ಯದ ಲಕ್ಷ್ಮಿ ||

***