ಶರಣೆಂಬೆ ವಾಣಿ |

ಪೊರೆಯೆ ಕಲ್ಯಾಣಿ ||

ವಾಗಭಿಮಾನಿ ವರಬ್ರಹ್ಮಾಣಿ |

ಸುಂದರ ವೇಣಿ ಸುಚರಿತ್ರಾಣಿ ||

|| ಶರಣೆಂಬೆ ವಾಣಿ ||

ಜಗದೊಳು ನಿನ್ನ ಪೊಗಳುವರಮ್ಮ |

ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||

|| ಶರಣೆಂಬೆ ವಾಣಿ ||

ಪಾಡುವೆ ಸ್ತುತಿಯ ಬೇಡುವೆ ಮತಿಯ |

ಪುರಂದರ ವಿಠಲನ ಸೋದರ ಸೊಸೆಯ ||

|| ಶರಣೆಂಬೆ ವಾಣಿ ||

***