ವಂದಿಪೆ ನಿನಗೆ ಗಣನಾಥ |

ಮೊದಲೊಂದಿಪೆ ನಿನಗೆ ಗಣನಾಥ||ಪ||

ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ|

ಸಾದಿಸಿದ ರಾಜ್ಯವ ಗಣನಾಥ||1||

ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ|

ಸಂದನು ರಣದಲಿ ಗಣನಾಥ||2||

ಮಂಗಳ ಮೂರುತಿ‌ ಗುರು ರಂಗ ವಿಠಲನ ಪಾದ|

ಬಿಮ್ಮನೆ ಪಾಲಿಸೊ ಗಣನಾಥ||3||

***