ಶರಣು ಶರಣಯ್ಯ ಶರಣು ಬೆನಕಾ |
ನೀಡಯ್ಯಾ ಬಾಳೆಲ್ಲ ಬೆಳಗುವ ಬೆಳಕಾ ||
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ |
ತಂದೆ ಕಾಯೋ ನಮ್ಮ ಕರಿಮುಖ ||
||ಪ ||
ಎಲ್ಲಾರು ಒಂದಾಗಿ ನಿನ್ನ |
ನಮಿಸಿ ನಡೆಯೋದು ನೋಡೋಕೆ ಚೆನ್ನ ||
ಗರಿಕೆ ತಂದರೆ ನೀನು ಕೊಡುವೆ ವರವನ್ನ |
ಗತಿ ನೀನೆ ಗಣಪನೇ |
ಕೈ ಹಿಡಿಯೋ ಮುನ್ನ ||1||
ಸೂರ್ಯನೆದುರಲಿ ಮಂಜು ಕರಗುವ ರೀತಿ |
ನಿನ್ನ ನೆನೆಯಲು ಒಡನೆ ಓಡುವುದು ಭೀತಿ ||
ನೀಡಯ್ಯಾ ಕಷ್ಟಗಳ ಗೆಲ್ಲುವ ಶಕುತಿ |
ತೋರಯ್ಯ ನಮ್ಮಲ್ಲಿ ನಿನ್ನಯಾ ಪ್ರೀತಿ ||2||
||
ಬೆನಕ ಬೆನಕ ಏಕದಂತ |
ಪಚ್ಚೆ ಕಲ್ಲು ಪಾಣೆ ಮೆಟ್ಲು ||
ಒಪ್ಪುವಾ ವಿಘ್ನೇಶ್ವರಾ | ನಿನಗೆ ಇಪ್ಪತ್ತೊಂದು ನಮಸ್ಕಾರಗಳು ||
***