ಒಂದು ಬಾರಿ ಬಂದು ನೋಡು | ಮರೆಯದು ಜೀವಾ ||
ಮಂತ್ರಾಲಯ ದರುಷನವೇ ದಿವ್ಯ ಅನುಭವ ||ಪ||
ಭೂಮಿಯೊಳಗೆ ನಾಕವೇ |
ಮಂತ್ರಾಲಯ ತಾಣವೇ ||
ಇಹಕು ಪರಕು ಸೇತುವೇ |
ರಾಘವೇಂದ್ರ ನಾಮವೆ ||
||ಒಂದು ಬಾರಿ||
ಏಳು ನೂರು ವರುಷಗಳು |
ಗುರುಗಳು ಇಲ್ಲಿಹರು ||
ಭಕ್ತ ಕೋಟಿ ಬೇಡಿಕೆಯ |
ಪ್ರೀತಿಯಿಂದ ತರುವರು ||
||ಒಂದು ಬಾರಿ||
***