ಶರವು ಮಹಾಗಣಪತಿ| ನಮಗೆ ನಿನ್ನದೇ ಸ್ತುತಿ||
ಅನುದಿನವೂ ಭಕ್ತರು | ನಿನ್ನ ನಂಬಿ ಇರುವರು||
ಶರವು ಮಹಾಗಣಪತಿ||ಪ||
ಶರವು ಶಿವಾಲಯದ ತೆಂಕುದಿಕ್ಕಿನಲ್ಲಿ|
ದಿವ್ಯ ಮಹಾಗಣೇಶ | ಅವತರಿಸಿದನಲ್ಲಿ||
ನಿತ್ಯವೂ ಎಡೆ ಬಿಡದೇ ನಿನ್ನ ಪೂಜಿಸೇ |
ಸಕಲ ಇಷ್ಟಾರ್ಥವ ಪರಿಪಾಲಿಸೋ|
ಸಕಲ ಇಷ್ಟಾರ್ಥವ ಪರಿಪಾಲಿಸೋ||1||
ಪುಣ್ಯ ಪ್ರಸಾದವೇ ಪಂಚಕಜ್ಜಾಯ|
ಮುಕ್ತಿಯನು ನೀಡುವ ಭಕ್ತ ಜನಪ್ರಿಯ||
ಸತ್ಯ ಧರ್ಮದಿ ತೋರೋ ನಿನ್ನ ಮಾಯೆಯ|
ಶಾಸ್ತ್ರ ಸಂಪೂಜಿತ ಸಿದ್ಧಿವಿನಾಯಕ|
ಶಾಸ್ತ್ರ ಸಂಪೂಜಿತ ಸಿದ್ಧಿವಿನಾಯಕ||2||
***