ಬದುಕಿನ ಬಂಡಿ ಹೇರಿ
ಹಿಡಿದೇ ನ್ಯಾಯದ ದಾರಿ
ಅಡ್ಡ ಬಂದಳು ನಾರಿ
ಹಿಡಿದೇ ನಾ ಅಡ್ಡದಾರಿ
ಮನಸ್ಸಿನ ಕಡಲಿಂದ
ಹೃದಯದ ಒಡಲಿಂದ
ನಲಿವಲಿ ಮಿಂದು
ನೋವಲಿ ಬೆಂದು
ಜಾರಿದೇ ಇಂದು
ಕಣ್ಣೀರ ಬಿಂದು
ಕತ್ತಲೆಯಲ್ಲಿ ಸಾಗುವಾಗ
ಬೆಳಕಾಗಿ ಬಂದ
ನನ್ನ ದಿಕ್ಕಿಗೆ
ದಿಕ್ಕ ಸೂಚಿಯ ಅರವಿಂದ
ಬಂದನೋ ಇವನು
ಕಾಣೇ ಎಲ್ಲಿಂದ
ಮೂಡಿಸಿದ ಮನದೊಲು
ಆನಂದ