ನಿಯಮ ೧: ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕದ ನಂತರ ಯಾವುದೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಾರದು.
ನಿಯಮ ೨: ಕಾಲೇಜಿನಲ್ಲಿ ಅರ್ಹತೆಯುಳ್ಳ ಯಾವುದೇ ವಿದ್ಯಾರ್ಥಿಯು ನಿರ್ದಿಷ್ಟವಾದ ಕಂಪನಿಯ ನಿಶ್ಚಿತ ಉದ್ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.ವಿದ್ಯಾರ್ಥಿಯು ಕಂಪನಿಯ ಪೂರ್ವಭಾವಿ ಸಂವಾದದಲ್ಲಿ ಪಾಲ್ಗೊಂಡ ನಂತರ ಆ ಕಂಪನಿಯ ಮೇಲೆ ಆಸಕ್ತಿ ತೋರದಿದ್ದಲ್ಲಿ ಅಥವಾ ನಿಶ್ಚಿತ ಉದ್ಯೋಗದ ಮುಂದಿನ ಹಂತಗಳನ್ನು ಎದುರಿಸಲು ಇಷ್ಟಪಡದಿದ್ದಲ್ಲಿ ಲಿಖಿತ ರೂಪದಲ್ಲಿ ಕಾರಣಗಳನ್ನು ತಿಳಿಸಬೇಕು. ಕಂಪನಿಯು ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಅಂತಹ ವಿದ್ಯಾರ್ಥಿಗಳು ಕಡ್ಡಾಯವಾಗಿ ನಿಶ್ಚಿತ ಉದ್ಯೋಗ ಕಾರ್ಯಕ್ರಮದದ ಮುಂದಿನ ಹಂತಗಳನ್ನು ಎದುರಿಸಲೇಬೇಕು. ಈ ಹಂತದಲ್ಲಿ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ವಿದ್ಯಾರ್ಥಿಗಳು ಇದನ್ನು ತಪ್ಪಿ ವರ್ತಿಸಿದಲ್ಲಿ, ಅಂತಹ ವಿದ್ಯಾರ್ಥಿಗಳನ್ನು ಎರಡು ವಾರಗಳ ಕಾಲ ಯಾವುದೇ ನಿಶ್ಚಿತ ಉದ್ಯೋಗಗಳಲ್ಲಿ ಭಾಗವಹಿಸದಂತೆ ತಡೆಹಿಡಿಯಲಾಗುವುದು.
ನಿಯಮ ೩: ಯಾವುದೇ ವಿದ್ಯಾರ್ಥಿಯು ನಿಶ್ಚಿತ ಉದ್ಯೋಗಗಳ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದಲ್ಲಿ, ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು
ಈ ಕೆಳಗಿನ ಅನುಚಿತ ವರ್ತನೆಗಳನ್ನು ಸಂದರ್ಶನದ ಸಂದರ್ಭದಲ್ಲಿ ಕಡ್ದಾಯವಾಗಿ ನಿಷೇಧಿಸಲಾಗಿದೆ;
ಈ ಮೇಲಿನ ಯಾವುದೇ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಇರುವುದಾಗಿ ಕಂಡುಬಂದಲ್ಲಿ, ಅಂತಹ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಬಾಹಿರಗೊಳಿಸಬಹುದು ಅಥವಾ ಮುಂದಿನ ನಿಶ್ಚಿತ ಉದ್ಯೋಗ ಸಂದರ್ಶನಗಳಲ್ಲಿ ಪಾಲ್ಗೊಳ್ಳದಂತೆ ತಡೆಹಿಡಿಯಲಾಗುವುದು.
ನಿಯಮ ೪: ಸಂದರ್ಶನಗಳಿಗೆ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಮುಂದಿನ ಹಂತಗಳಿಗೆ ಸಾಗಲು ಅವಕಾಶಗಳಿರುವುದಿಲ್ಲ.
ನಿಯಮ ೫: ನಿಶ್ಚಿತ ಉದ್ಯೋಗದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳ ಉಡುಪುಗಳು ಸಭ್ಯತೆಯ ಚೌಕಟ್ಟನ್ನು ಮೀರದಂತಿರಬೇಕು.
ನಿಯಮ ೬: ವಿನೋದದ ಸಲುವಾಗಿ ಇತರ ಅಭ್ಯರ್ಥಿಗಳಿಗೆ ಕಿರುಕುಳ ನೀಡುವ ವಿದ್ಯಾರ್ಥಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.