ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್

ಕಾಲೇಜಿನ ಸ್ಥಾಪನೆಯೊಂದಿಗೆಯೇ ಆರಂಭವಾದ ಕಂಪ್ಯೂಟರ್ ಸೈನ್ಸ್ ವಿಭಾಗವು ಉತ್ತಮವಾದ ಮತ್ತು ನುರಿತ ಶಿಕ್ಷಕ ವೃಂದವನ್ನು ಹೊಂದಿದೆ. ಪ್ರತಿವರ್ಷ ಸಿ.ಇ.ಟಿ. ಮೂಲಕ ಪ್ರವೇಶ ಪಡೆದ 60 ವಿದ್ಯಾರ್ಥಿಗಳಿಗೆಗಣಕಶಾಸ್ತ್ರದಲ್ಲಿ ಬಿ.ಇ. ಪದವಿಯನ್ನು ಪಡೆಯುವ ಸೌಲಭ್ಯವನ್ನು ಈ ವಿಭಾಗದ ಮೂಲಕ ಒದಗಿಸಿಕೊಡಲಾಗಿದೆ. ಇಂಜಿನಿಯರಿಂಗ್ ನಲ್ಲಿ ಕಂಪ್ಯೂಟರ್ ಸೈನ್ಸ್ ಕ್ಷೇತ್ರವು ವಿಶಾಲವಾದ ಹಾಗೂ ಅತ್ಯುತ್ತಮವಾದ ಶೈಕ್ಷಣಿಕಕಾರ್ಯತಂತ್ರಗಳನ್ನು ಒಳಗೊಂಡಿದೆ.ಈ ವಿಭಾಗವು ಉನ್ನತಮಟ್ಟದ ಗಣಕೀಕೃತ ಸೌಲಭ್ಯಗಳನ್ನು ಹಾಗೂ ಹೆಚ್ಚಿನ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಎಲ್ಲಾ ರೀತಿಯ ಕಾರ್ಯಕ್ಷೇತ್ರಗಳಲ್ಲೂ ಗಣಕಯಂತ್ರಗಳುಪ್ರಾಮುಖ್ಯತೆ ಸಾಧಿಸುತ್ತಿರುವುದರಿಂದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳ ಉದ್ಯೋಗಶೀಲತೆಯನ್ನು ವೃದ್ಧಿಸುತ್ತದೆ.

ಬೋಧಕ ವರ್ಗ:

ಪ್ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು

ಡಾ||ಕೆ.ಸಿ.ರವಿಶಂಕರ್ B.E., M.Tech., Ph.D.,FIETE.,MIE.,LMISTE.

ಡಾ|| ಕೆ.ಸಿ.ರವಿಶಂಕರ್ ರವರು ತಮ್ಮ B.E. ವ್ಯಾಸಂಗವನ್ನು MCE, ಹಾಸನದಲ್ಲಿ 1990ರಲ್ಲಿ ಮುಗಿಸಿರುತ್ತಾರೆ. ಇವರು ತಮ್ಮ M.Tech ಪದವಿಯನ್ನು IIT, ದೆಹಲಿಯಿಂದ 1998ರಲ್ಲಿ ಪಡೆದಿರುತ್ತಾರೆ ಹಾಗೂ Ph.D. ಯನ್ನು ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 2009ರಲ್ಲಿ ಪಡೆದಿರುತ್ತಾರೆ. ಇವರ 3 ತಾಂತ್ರಿಕ ಪ್ರಬಂಧಗಳು ಅಂತರರಾಷ್ಟ್ರೀಯ ಹಾಗೂ 12 ತಾಂತ್ರಿಕ ಪ್ರಬಂಧಗಳು ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿವೆ.ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಹಾಗು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Ph:08172-265224, 9448895123 Mail: kcrshankar[at]gmail.com

ಸಹಾಯಕ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು

ಡಾ||.ರಘು.ಎಮ್.ಇ. B.E., M.Tech. PhD.

ಡಾ||ರಘು.ಎಮ್.ಇ.ರವರು ತಮ್ಮ B.E. ವ್ಯಾಸಂಗವನ್ನು UBDTCE, ದಾವಣಗೆರೆಯಲ್ಲಿ 1998ರಲ್ಲಿ ಮುಗಿಸಿರುತ್ತಾರೆ ಹಾಗೂM.Tech ಪದವಿಯನ್ನು JNNCE, ಶಿವಮೊಗ್ಗಾದ ಮೂಲಕ 2003ರಲ್ಲಿ ಪಡೆದಿರುತ್ತಾರೆ. ಪಿ.ಎಚ್.ಡಿ. ಯನ್ನು ವಿ.ತಾ.ವಿ ಇಂದ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ 1ತಾಂತ್ರಿಕ ಪ್ರಬಂಧಗಳು ಅಂತರರಾಷ್ಟ್ರೀಯ ಹಾಗೂ 2 ತಾಂತ್ರಿಕ ಪ್ರಬಂಧಗಳು ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿವೆ.

Ph:08172-240444, 9900969903 Mail: raghu_me01[at]yahoo.com

ಸಹಾಯಕ ಪ್ರಾಧ್ಯಾಪಕರು

ಡಾ||.ಚೇತನ್.ಕೆ.ಸಿ. B.E., M.Tech. PhD

ಡಾ|| ಚೇತನ್.ಕೆ.ಸಿ.ರವರು ತಮ್ಮ B.E. ವ್ಯಾಸಂಗವನ್ನು BMSCE, ಬೆಂಗಳೂರಿನಲ್ಲಿ ಮುಗಿಸಿರುತ್ತಾರೆ ಹಾಗು ತಮ್ಮ M.Tech ಪದವಿಯನ್ನು Dr AIT., ಬೆಂಗಳೂರಿನ ಮೂಲಕ ಪಡೆದಿರುತ್ತಾರೆ. ಪಿ.ಎಚ್.ಡಿ. ಯನ್ನು ವಿ.ತಾ.ವಿ ಇಂದ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Ph: 91649-72287 Mail: hanichethan[at]gmail.com

ಡಾ||ರಂಗನಾಥ.ಎಸ್. B.E., M.Tech. PhD

ಡಾ||ರಂಗನಾಥ.ಎಸ್.ರವರು ತಮ್ಮ B.E. ವ್ಯಾಸಂಗವನ್ನು Kalpataru Institute of Technology,ತಿಪಟೂರಿನಲ್ಲಿ 2002ರಲ್ಲಿ ಮುಗಿಸಿದ್ದಾರೆ ಹಾಗೂ M.Tech(CS&E) ಪದವಿಯನ್ನು R.V. College of Engineering, ಬೆಂಗಳೂರಿನಿಂದ 2006ರಲ್ಲಿ ಪಡೆದಿರುತ್ತಾರೆ. ಪಿ.ಎಚ್.ಡಿ. ಯನ್ನು ವಿ.ತಾ.ವಿ ಇಂದ ಪಡೆದಿರುತ್ತಾರೆ ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Ph: 94487-73855 Mail: ranganath38[at]yahoo.co.in

ಶ್ರೀ.ಅಣ್ಣಯ್ಯ ಎಚ್ B.E., M.Tech.

ಶ್ರೀ.ಅಣ್ಣಯ್ಯ ಎಚ್., 2004 ರಲ್ಲಿ ಬಿ.ಇ.ಇ.ಟಿ., ದಾವಣಗೆರೆ ಅವರ ಬಿ.ಇ (ಸಿಎಸ್ ಮತ್ತು ಇ) ಮತ್ತು ಎನ್.ಐ.ಇ.ಯಿಂದ ಎಂ.ಟೆಕ್ ಮಾಡಿದರು. ಮೈಸೂರು 2006 ರಲ್ಲಿ. ಅವರು 4 ವರ್ಷಗಳ ಕಾಲ ಹಿರಿಯ ಸಾಫ್ಟ್ವೇರ್ ಇಂಜಿನಿಯರ್ ಆಗಿ ಮೈಸೂರು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ನಲ್ಲಿ ಸೇವೆ ಸಲ್ಲಿಸಿದ್ದರು. ಅವರ ಆಸಕ್ತಿಗಳ ಪ್ರದೇಶಗಳು ನೆಟ್ವರ್ಕಿಂಗ್ ಮತ್ತು ಡೇಟಾಬೇಸ್ ನಿರ್ವಹಣಾ ವ್ಯವಸ್ಥೆ.

Ph: 9008316684 Email: ha@gechassan.ac.in , annaiahh@gmail.com

ಶ್ರೀ.ತೀರ್ಥೆಗೌಡ B.E., M.Tech.

ಶ್ರೀ.ತೀರ್ಥೆಗೌಡ ರವರು ತಮ್ಮ B.E. ವ್ಯಾಸಂಗವನ್ನು BTLITM , ಬೆಂಗಳೂರಿನಲ್ಲಿ ಮುಗಿಸಿರುತ್ತಾರೆ ಹಾಗು ತಮ್ಮ M.Tech ಪದವಿಯನ್ನು SJCE, Mysore ಮೂಲಕ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Ph: 9886062009 Mail: thirthegowda.gech@gmail.com

ಪ್ರಯೋಗಾಲಯದ ಸೌಲಭ್ಯಗಳು:

ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಉತ್ತಮ ದರ್ಜೆಯ ಸುಸಜ್ಜಿತ ಗಣಕಯಂತ್ರ ಪ್ರಯೊಗಾಲಯವನ್ನು ಒದಗಿಸಿಕೊಡಲಾಗಿದೆ.ಈ ಪ್ರಯೋಗಾಲಯದಲ್ಲಿ ಎಲ್ಲಾ ೪ ವರ್ಷದ ವಿದ್ಯಾರ್ಥಿಗಳು ಕೂಡ ತಮ್ಮ ಪಠ್ಯಕ್ರಮದಲ್ಲಿ ಸೂಚಿಸಿದ ಪ್ರಯೋಗಗಳನ್ನು ಯಾವುದೇ ಕೊರತೆಯಿಲ್ಲದೆ ನೆಡೆಸಬಹುದು. ರಾಷ್ಟ್ರೀಯ ಶೈಕ್ಷಣಿಕ ಯೋಜನಯ ಆಡಿಯಲ್ಲಿ ವಿದ್ಯಾರ್ಥಿಗಳು ಹಾಗು ಬೋಧಕರಿಗೆ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ