ಅತ್ಯುತ್ತಮವಾದ ತಾಂತ್ರಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಸಲುವಾಗಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉತ್ತಮವಾದ ಉಪನ್ಯಾಸಕ ವೃಂದ ಹಾಗೂ ಶೈಕ್ಷಣಿಕ ಶಿಸ್ತಿನ ವಾತಾವರಣವನ್ನು ಒದಗಿಸಲಾಗಿದೆ. ವಿ.ತ.ವಿ ದ ಆದೇಶದಂತೆ, ಆಂತರಿಕ ಅಂಕಗಳನ್ನು ಅಂತಿಮಗೊಳಿಸುವ ಮೊದಲು, ಎರಡು ಕಿರುಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಲ್ಲದೇ ಮತ್ತೊಂದು ಐಚ್ಚಿಕ ಕಿರು ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಡಿಮೆ ಸರಾಸರಿ ಹೊಂದಿರುವ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದಲ್ಲದೆ ಹೆಚ್ಚಿನ ಅಧ್ಯಯನ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ.