ಸರಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನವು ೨೦೦೭ರಲ್ಲಿ ಆರಂಭವಾಯಿತು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪ್ರಮಾಣಿತಗೊಂಡಿದೆ ಮತ್ತು ಎ.ಐ.ಸಿ.ಟಿ.ಇ, ನವದೆಹಲಿಯಿಂದ ಅನುಮೋದಿತಗೊಂಡಿದೆ. ೨೦೦೭-೨೦೦೮ರಲ್ಲಿ ಕರ್ನಾಟಕ ಸರ್ಕಾರವು ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿ ೧೦ ತಾಂತ್ರಿಕ ಮಹಾವಿದ್ಯಾಲಯಗಳನ್ನು ಸ್ಥಾಪಿಸಿತು.
ಇದರಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು, ಹಾಸನ ಕೂಡ ಒಂದು. ನಮ್ಮ ಕಾಲೇಜು ಒಟ್ಟು ೪ ವಿಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ತ್ರಾನಿಕ್ಸ್ ಎಂಡ್ ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್. ಕಾಲೇಜಿನ ಅತ್ಯಂತ ವಿಶಾಲವಾದ ಕಟ್ಟಡ ಮತ್ತು ಪೂರ್ವಯೋಜಿತ ಉಪಯುಕ್ತತೆಗಳು ೪೦ ಎಕರೆಯ ವಿಶಾಲ ಭೂಪ್ರದೇಶದಲ್ಲಿ ಹರಡಿಕೊಂಡಿವೆ.
ನಮ್ಮ ಕರ್ನಾಟಕ ಸರ್ಕಾರವು ಈ ಎಲ್ಲ ಸರ್ಕಾರಿ ತಾಂತ್ರಿಕ ಕಾಲೇಜುಗಳನ್ನು "ಅಸಾಧ್ಯವಾದುದನ್ನು ಸಾಧಿಸಬೇಕು" ಎಂಬ ಏಕೈಕ ಗುರಿಯೊಂದಿಗೆ ಸ್ಥಾಪಿಸಿದೆ. ಪ್ರಖ್ಯಾತ ಶಿಕ್ಷಣ ತಜ್ಞ ನಿಡೊ ಕೊಬೇನ್ ಅವರು ಒಂದೆಡೆ ಹೇಳುತ್ತಾರೆ," ನಮ್ಮ ಇಂದಿನ ಪರಿಸ್ಥಿತಿಯು ನಮ್ಮ ಗುರಿಯನ್ನು ನಿರ್ಧರಿಸುವುದಿಲ್ಲ, ನಮ್ಮ ಪರಿಸ್ಥಿತಿಯು ಕೇವಲ ನಮ್ಮ ಕೆಲಸವನ್ನು ಹೇಗೆ ಆರಂಭಿಸಿದ್ದೇವೆ ಎಂಬುದನ್ನು ಬಿಂಬಿಸುತ್ತವೆ". ಇದರಂತೆ ನಮ್ಮ ಕಾಲೇಜು ಕೂಡ ಉತ್ಕೃಶ್ಟ ದರ್ಜೆಯ ಶಿಕ್ಷಣ ಹಾಗು ಉನ್ನತ ಮಟ್ಟದ ಸೌಲಭ್ಯಗಳನ್ನು ನೀಡುತ್ತ, ಒಂದು ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳೊತ್ತ, ಪ್ರಗತಿಯತ್ತ ಸಾಗುತ್ತಿದೆ.
ವಿದ್ಯಾರ್ಥಿಗಳು ಕಡಿಮೆ ಬೋಧನಾ ಶುಲ್ಕದೊಂದಿಗೆ ಕೇವಲ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿ.ಇ.ಟಿ) ಮುಖೇನ ಪ್ರವೇಶ ಪಡೆಯಬಹುದಾಗಿದೆ.ಇಲ್ಲಿ ವ್ಯಾಸಂಗ ಮಾಡುತ್ತಿರುವ ಬಹಳಷ್ಟು ವಿಧ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಬೋಧನಾ ಶುಲ್ಕವನ್ನು ಹಿಂದಿರುಗಿಸುತ್ತದೆ ಹಾಗು ವಿವಿಧ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ಒದಗಿಸುತ್ತಿವೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು,ಹಾಸನವು ಈ ಕೆಳಕಂಡ ಶೈಕ್ಷಣಿಕ ಧ್ಯೇಯಗಳನ್ನು ಹೊಂದಿದೆ,