ನಮ್ಮ ಆಸೆಗಳಲ್ಲಿ ಬಹುಪಾಲು ನಮ್ಮ ಸುತ್ತಲಿನವರನ್ನು ನೋಡಿ ಬಯಸಿದಂತವುಗಳೇ. ವಿವೇಚನೆಯಿಲ್ಲದೇ ಎಲ್ಲವನ್ನೂ ಬಯಸಿದರೆ ಇದ್ದ ನೆಮ್ಮದಿಯೂ ಕೆಡುತ್ತದೆ.
ಬದುಕಿನಲ್ಲಿ ಸಂತೋಷವಾಗಿರಬೇಕು ಎಂದರೆ ನಮ್ಮ ಕೈಮೀರಿದ ಸಂಗತಿಗಳ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು.
ಕಳೆದುಕೊಂಡಿದ್ದು ವಸ್ತುವಾದರೆ ಹುಡುಕಬಹುದು, ಇಲ್ಲವೇ ಮತ್ತೊಂದು ತೆಗೆದು ಕೊಳ್ಳಬಹುದು. ಕಳೆದುಕೊಂಡಿದ್ದು ನಂಬಿಕೆಯಾದರೆ ಹುಡುಕಿದರೂ ಸಿಗದು, ಕೊಂಡುಕೊಳ್ಳಲು ಸಾಧ್ಯವಾಗದು..
ಕೆಳಗೆ ಬಿದ್ದರೆ ಒಡೆದು ಹೋಗುವ ಪೋನ್ ಗೆ ಬಹಳ ಬೆಲೆ ಕೊಡುತ್ತವೆ... ಅದೇ ತರಹ ಜೀವನ ಪರ್ಯಂತ ನಮ್ಮ ಜೊತೆ ಇರುವ ಸಂಬಂಧಗಳಿಗೆ ಇನ್ನಷ್ಟು ಬೆಲೆ ಕೊಡಬೇಕು ಚಿಕ್ಕ ಪುಟ್ಟ ಕಾರಣಗಳಿಂದ ಸಂಬಂಧಗಳನ್ನು ದೂರ ಮಾಡಿಕೋಳ್ಳಬಾರದು.
ನಮ್ಮ ಸಂತೋಷಕ್ಕೆ ಸುತ್ತ ನಡೆಯುವ ವಿದ್ಯಮಾನಗಳಿಗಿಂತ ಅಂತರಂಗದಲ್ಲಿ ನಡೆಯುವ ಬದಲಾವಣೆಯೇ ಕಾರಣವಾಗಬೇಕು. ಅ ಖುಷಿಗೆ ಆಯುಷ್ಯ ಹೆಚ್ಚು.
ಮನೆಯಾಗಲಿ-ಮನಸ್ಸಾಗಲಿ ಒಡೆಯಲು ತಪ್ಪಿಗಿಂತ ಹೆಚ್ಚಾಗಿ ಮಧ್ಯದವರ ಕೈವಾಡವೆ ಹೆಚ್ಚು.
ದಾರಿಯಲ್ಲಿ ಮುನ್ನಡೆಯಲು, ನಾವು ಗಮನ ಹರಿಸಬೇಕಿರುವುದು ನಾವು ಎಲ್ಲಗೆ ಹೋಗುತ್ತಿದ್ದೀವೀ ಎಂಬುದರ ಮೇಲಷ್ಟೆ. ನಾವು ಎಲ್ಲಿಂದ ಬಂದಿವೀ ಎಂಬುದರ ಮೇಲೆಲ್ಲ.
ನಮ್ಮದು ನಾವು ನಂಬಿ ನಿಂತಾಗ ನಂಬಿಕೆಯು ನಮ್ಮನ್ನು ಕೈ ಹಿಡಿದು ನಡೆಸುತ್ತದೆ. ಪರರನ್ನು ನಂಬಿ ನಿಂತಾಗ ನಂಬಿಕೆಯೇ ನಮ್ಮನ್ನು ನೋಯಿಸುತ್ತದೆ.
ನಿಜವಾದ ಸಂಬಂಧ ಹೃದಯದಿಂದ ಆಗ ಬೇಕೇ ಹೊರತು ಅವಶ್ಯಕತೆಗಳಿಂದಲ್ಲ...
ಮುಂದುವರೆಯುತ್ತಿರುವ ವ್ಯಕ್ತಿ ಮತ್ತೊಬ್ಬರಿಗೆ ತೊಂದರೆ ಮಾಡುವುದಿಲ್ಲ.
ಬದುಕಿನ ದಾರಿಯಲ್ಲಿ ಕಳೆದುಕೊಂಡು ಇದೇ ಕೊನೆ ಎಂದುಕೊಂಡರೆ, ಭಗವಂತ ನಕ್ಕು ನುಡಿಯುತ್ತಾನೆ, ಇದು ಬರೀ ಒಂದು ತಿರುವಷ್ಟೆ ಕೊನೆಯಲ್ಲ