ಆಹಾರದಲ್ಲಿ ಭಕ್ತಿ ಬೆರೆಸಿದರೆ ಪ್ರಸಾದವಾಗುತ್ತದೆ ನೀರಿನಲ್ಲಿ ಭಕ್ತಿ ಬೆರೆಸಿದರೆ ತೀರ್ಥವಾಗುತ್ತದೆ ಮಾಡುವ ಕೆಲಸದಲ್ಲಿ ಶ್ರದ್ದೆ ಭಕ್ತಿ ಬೆರೆಸಿದರೆ ಯಶಸ್ಸು ನಮ್ಮದಾಗುತ್ತದೆ.
2025-08-27
ಕಾಯುವುದನ್ನು ಕಲಿಯಿರಿ, ಏಕೆಂದರೆ ಎಲ್ಲಾಮುಗಿದು ಹೋಯಿತು ಅಂದುಕೊಂಡಾಗಲೇ ಹೊಸ ಅಧ್ಯಾಯಗಳು ಆರಂಭವಾಗುತ್ತವೆ.
2025-08-26
ಯಾರು ನಮ್ಮವರು ಎಂಬ ಪ್ರಶ್ನೆಗೆ, ಸಮಯ ಸಂದರ್ಭ ಪರಿಸ್ಥಿತಿಗಳೇ ನಮಗೆ ಉತ್ತರ ನೀಡುತ್ತವೆ.
2025-08-25
ಸಂಪಾದನೆ ಎಂದರೆ ಹಣ ಮಾತ್ರ ಅಲ್ಲ; ಅನುಭವ, ಸಂಬಂಧ, ಗೌರವ, ಪ್ರೀತಿ, ಇವು ಕೂಡ.
2025-08-24
ಬೇರೆಯವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೋ ಅಂತ ನೀವು ಯೋಚನೆ ಮಾಡದಿದ್ರೆ ನಿಮ್ಮ ಬದುಕು ಚೆನ್ನಾಗಿರುತ್ತದೆ,
2025-08-23
ಸಮಯಮತ್ತುಜೀವನ ಜಗತ್ತಿನ ಅತ್ಯುತ್ತಮ ಶಿಕ್ಷಕರು ಜೀವನವು ಸಮಯದ ಸಮರ್ಪಕ ಬಳಕೆಯನ್ನು ಕಲಿಸಿದರೆ ಸಮಯವು ಜೀವನದ ಪ್ರಾಮುಖ್ಯವನ್ನು ಮನಗಾಣಿಸುತ್ತದೆ.
2025-08-22
ಸಾಧ್ಯವೇ ಇಲ್ಲ ಎಂದು ಕೊಂಡರೆ ಏನನ್ನು ಸಾಧಿಸಲಾಗದು ಪ್ರಯತ್ನಿಸುವುದರಿಂದ ನಷ್ಟವೇನಿದೆ ಗೆದ್ದರೆ ಸಂತೋಷ ಸೋತರೆ ಅನುಭವ.
2025-08-21
ತಪ್ಪುಗಳು ನಿಮಿಷದಲ್ಲಿ ನಡೆಯುತ್ತದೆ ಆದರೆ ಅದರ ಪರಿಣಾಮಗಳು ವರ್ಷಗಟ್ಟಲೆ ಕಾಡುತ್ತದೆ, ಆದ್ದರಿಂದ ಯೋಚನೆ ಮಾಡಿ ಹೆಜ್ಜೆ ಇಡಿ.
2025-08-20
ಪ್ರಾರ್ಥನೆ ಮತ್ತು ನಂಬಿಕೆ ಎರಡು ಕಣ್ಣಿಗೆ ಕಾಣದೇ ಇರಬಹುದು ಆದರೆ ಅಸಾಧ್ಯವಾದುದ್ದನ್ನು ಸಾಧಿಸುವ ಶಕ್ತಿ ಈ ಎರಡಕ್ಕೂ ಇದೆ.
2025-08-19
ಯಾವಾಗಲೂ ಸಂಶಯ ಪಡುವ ವ್ಯಕ್ತಿಗೆ ಈ ಲೋಕದಲ್ಲಿ ಅಷ್ಟೇ ಅಲ್ಲ ಪರಲೋಕದಲ್ಲೂ ನೆಮ್ಮದಿ ಸಿಗುವುದಿಲ್ಲ.
2025-08-18
ನಮ್ಮ ಒಳ್ಳೆಯ ತನವನ್ನು ಸಾಬೀತುಪಡಿಸಬೇಕಾಗಿಲ್ಲ ನಮ್ಮ ವ್ಯಕ್ತಿತ್ವ ಬಲಿಷ್ಠ ವಾಗಿದ್ದರೆ ಕಾಲವೇ ನಮ್ಮ ಒಳ್ಳೆಯತನವನ್ನು ಸಾಬೀತು ಪಡಿಸುತ್ತದೆ.
2025-08-17
ನಮ್ಮವರು ತಮ್ಮವರು ಎನ್ನುವುದೇ ಸುಳ್ಳು, ಎಲ್ಲಾ ಅನುಕೂಲ ಅನಾನುಕೂಲಗಳ ಮೇಲೆ ನಿಂತಿರುವಂಥದ್ದು.
2025-08-16
ನಮಗೆ ಜಗತ್ತು ಅನಿವಾರ್ಯವೇ ಹೊರತು, ಜಗತ್ತಿಗೆ ನಾವು ಅನಿವಾರ್ಯವಲ್ಲ ಎಂದು ಅರಿತ ಕ್ಷಣ ಮನುಷ್ಯನ ಅಹಂಕಾರ ಕಡಿಮೆಯಾಗುತ್ತದೆ.
2025-08-15
ಜೀವನದಲ್ಲಿ ವಾಪಸ್ ಬರದೇ ಇರುವುದು ಮೂರು ಪ್ರಾಣ- ಯವ್ವನ -ಕಾಲ, ಬಂದು ಹೋಗುವದು ಮೂರು ರೋಗ-ಆಸ್ತಿ-ಕಷ್ಟ, ಬಂದು ಹೋಗದೆ ಇರುವುದು ಮೂರು ವಿದ್ಯೆ-ಸಂಬಂಧ-ಸ್ನೇಹ.
2025-08-14
ಶಿಕ್ಷಣ ಮತ್ತು ಸಂಸ್ಕಾರ ಬದುಕಿನ ಮೂಲ ಮಂತ್ರ, ಶಿಕ್ಷಣ ಎಂದಿಗೂ ಎಡವಲು ಬಿಡುವುದಿಲ್ಲ ಸಂಸ್ಕಾರ ಕೆಡಲು ಬಿಡುವುದಿಲ್ಲ.
2025-08-13
ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನವಲ್ಲ, ಸಮಸ್ಯೆಗಳೊಂದಿಗೆ ಬೆಳೆಯುವುದು ನಿಜವಾದ ಜೀವನ.
2025-08-12
ಬಡವನಿಗೆ ನೆಮ್ಮದಿ ಇರುತ್ತೆ ಆದರೆ ಹಣ ಇರಲ್ಲ, ಸಾಹುಕಾರನಿಗೆ ಹಣ ಇರುತ್ತೆ ಆದರೆ ನೆಮ್ಮದಿ ಇರಲ್ಲ, ಹಣ ಮತ್ತು ನೆಮ್ಮದಿ ಇದ್ದವನಿಗೆ ಒಳ್ಳೆ ಗುಣ ಇರಲ್ಲ , ಹಣ ಹಾಗೂ ಗುಣ ಮತ್ತು ನೆಮ್ಮದಿ ಇದ್ದವನಿಗೆ ಈ ಭೂಮಿ ಮೇಲೆ ಜಾಸ್ತಿ ದಿನ ಜಾಗ ಇರಲ್ಲ.
2025-08-11
ದೀಪದ ಬೆಳಕಿನಲ್ಲಿಒಬ್ಬ ಗೀತೆಯನ್ನು ಓದಬಲ್ಲ, ಇನ್ನೊಬ್ಬ ಕಳ್ಳತನ ಮಾಡಬಲ್ಲ, ಇದು ದೀಪದ ತಪ್ಪಲ್ಲ ಮನುಷ್ಯ ಗುಣದ ತಪ್ಪು.
2025-08-10
ಬರುವಾಗ ಏನನ್ನು ತರಲಿಲ ಹೋಗುವಾಗ ಏನನ್ನು ತಗೊಂಡು ಹೋಗುವುದಿಲ್ಲ, ಹೋಗಿ ಬರುವ ನಡುವೆದ್ವೇಷ ಯಾಕೆ?ಸಾಧ್ಯವಾದರೆ ಎಲ್ಲರನ್ನೂ ಪ್ರೀತಿಸೋಣ ದ್ವೇಷಕ್ಕೂ ಪ್ರೀತಿಕೊಟ್ಟು ಸ್ನೇಹದಿಂದ ಬದುಕೋಣ.
2025-08-09
16-07-2025
ಕಳೆದುಹೋದ ದಿನಗಳು ಹಿಂದಿರುಗುವುದಿಲ್ಲ, ಮುಂದಿನ ದಿನಗಳು ಹೇಗಿರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಜೀವನವನ್ನು ನಗು-ನಗುತ್ತಾ ಸಾಗಿರಿ.
21-05-2025
ಜೀವನದಲ್ಲಿ ಅಂದವಾಗಿ ಇರೋದಕ್ಕಿಂತ ಆನಂದವಾಗಿ ಇರೋದುಮುಖ್ಯ.
20-05-2025
ನನಸಾಗದ ಕನಸಿನ ಬೆನ್ನೆತ್ತಿ ಜೀವನದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಬದಲು, ಇರುವುದರಲ್ಲಿಯ ನೆಮ್ಮದಿಯನ್ನು ಕಂಡುಕೊಂಡು ಸಂತೋಷದಿಂದ ಜೀವನ ಮಾಡುವುದು ಒಳ್ಳೆಯದು.
19-05-2025
ಒಳ್ಳೆಯಜನರನ್ನು ಹುಡುಕಬೇಡಿ ಸಿಗುವುದಿಲ್ಲ. ಸ್ವತಹ: ನೀವೇ ಒಳ್ಳೆಯ ಮನುಷ್ಯರಾಗಿ. ಆಗ ಒಳ್ಳೆಯ ಜನ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.
18-05-2025
ಸಾಲ-ಗಾಯ-ಬೆಂಕಿ ಮತ್ತು -ಚಿಂತೆಗಳನ್ನು ಯಾವತ್ತೂ ಸಣ್ಣದೆಂದು ತಿಳಿಯಬಾರದು. ಏಕೆಂದರೆ ಇವುಗಳಿಗೆ ದೊಡ್ಡದಾಗಿ ಬೆಳೆದು ಜೀವ ಮತ್ತು ಜೀವನ ಹಾಳುಮಾಡುವ ಸಾಮರ್ಥ್ಯವಿದೆ.
17-05-2025
ಮನುಷ್ಯನ ದೇಹದಲ್ಲಿ ಅತಿಭಾರವಾದದ್ದು ಅಹಂಕಾರ. ಆಭಾರವನ್ನು ಹೊತ್ತಕೊಂಡವರು ಜೀವನದಲ್ಲಿ ಸೋಲುತ್ತಾರೆ, ಇಳಿಸಿದವರು ಗೆಲ್ಲುತ್ತಾರೆ.
16-05-2025
ಆತ್ಮದ ಸ್ಪಷ್ಟವಾದ ಜ್ಞಾನವೇ. ನಮ್ಮನ್ನುಪರಮಾತ್ಮನ ಸಮೀಪ ಕೊಂಡುಹೊಯ್ಯುತ್ತದೆ.
15-05-2025
ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಹ ತಾನು ಹುಟ್ಟುವ ಮುನ್ನ ಹೇರುವವರು ಯಾರೆಂಬುದನ್ನು ಹಾಗೆಯೇ ಸತ್ತನಂತರ ಹೋರುವವರು ಯಾರೆಂಬುದನ್ನು ಮಾತ್ರ ಅರಿಯಲಾರ.
14-05-2025
ಭಿಕ್ಷೆಬೇಡಿ ಬದುಕಿದರು ಪರವಾಗಿಲ್ಲ. ಆದರೆ ಇನ್ನೊಬ್ಬರ ಮನೆಯ ಹಾಳು ಮಾಡಿ ಮಾತ್ರ ಬದುಕಬಾರದು.
13-05-2025
ಕೆಲವೊಮ್ಮೆ ಜನ ಸತ್ಯವನ್ನು ಕೇಳಿಸಿಕೊಳ್ಳಲು ಇಚ್ಚಿಸುವುದಿಲ್ಲ. ಏಕೆಂದರೆ ತಮ್ಮ ಭ್ರಮೆಗಳನ್ನು ನಾಶಮಾಡಿಕೊಳ್ಳಲು ಅವರಿಗೆ ಬೇಕಿರುವುದಿಲ್ಲ.
12-05-2025
ಯಾವುದೇ ನಕರಾತ್ಮಕ ವಿಚಾರವೊಂದು ನಮ್ಮ ಹತ್ತಿರ ಬಂದರೆ ಅದು ನಮ್ಮ ಮೂಲಕ ಮತ್ತೊಬ್ಬರ ಬಳಿ ಹೋಗದಂತೆ ಎಚ್ಚರಿಕೆವಹಿಸಬೇಕು.
11-05-2025
ಪ್ರತಿಯೊಂದು ಅಡಚಣೆಯು ಒಂದುಸವಾಲು. ಅದನ್ನು ಒಪ್ಪಿಕೊಂಡಲ್ಲಿ ಅನೇಕ ಅವಕಾಶಗಳು ದೊರೆಯುತ್ತವೆ.
10-05-2025
ಜೀವನದಲ್ಲಿ ಯಾವುದಕ್ಕೂಚಿಂತೆ ಮಾಡಿ ಕೊರಗಬಾರದು ಒಳ್ಳೆಯದಾದರೆ ಅದ್ಭುತ ಎಂದು ಭಾವಿಸಬೇಕು. ಕೆಡುಕಾದರೆ ಅನುಭವಎಂದು ಪರಿಗಣಿಸಬೇಕು.
09-05-2025
ಹೆಚ್ಚಿನ ಆಸೆಗಳಿಲ್ಲದ ಜೀವನದ ಮುಂದಿನಕ್ಷಣಗಳು ಹಿಂದಿನ ಕ್ಷಣಗಳಿಗಿಂತ ಚೆನ್ನಾಗಿದ್ದರೆ ಅಷ್ಟೇ ಸಾಕು.
08-05-2025
ಕೆಲಸಕ್ಕೆ ಬಾರದ ಮಾತುಗಳು, ಕೆಲಸಕ್ಕೆ ಬಾರದ ಜನಗಳಿಂದ ಆದಷ್ಟು ದೂರವಿದ್ದರೆ ಮನಸ್ಸಿಗೆ ನೆಮ್ಮದಿ ತಾನಾಗಿಯೇ ದೊರಕುತ್ತದೆ.
07-05-2025
ಯೋಗ್ಯತೆಗೆ ಮೀರಿದ ಆಡಂಬರ ಮನುಷ್ಯನನ್ನು ಸಾಲಗಾರನನ್ನಾಗಿ ಮಾಡುತ್ತದೆ.
06-05-2025
ಸಂಬಂಧ ಮತ್ತು ಹಣವನ್ನು ಸಮಾನ ಗೌರವದಿಂದ ನೋಡಿರಿ, ಏಕೆಂದರೆ ಎರಡು ಗಳಿಸುವುದು ಕಷ್ಟ ಕಳೆದುಕೊಳ್ಳುವುದು ತುಂಬಾ ಸುಲಭ.
05-05-2025
ಜ್ಞಾನವು ಹಣಕ್ಕಿಂತಉತ್ತಮ, ಏಕೆಂದರೆ ಹಣವನ್ನು ನೀವು ರಕ್ಷಿಸಬೇಕು; ಆದರೆ ಜ್ಞಾನ ನಿಮ್ಮನ್ನುರಕ್ಷಿಸುತ್ತದೆ
04-05-2025
ಮನೆಯ ಹಿರಿಯರ ಕೈಯಲ್ಲಿ ನಿರ್ಧಾರ ಇರುವವರಿಗೆ ಮನೆ ಒಡೆಯುವುದಿಲ್ಲ. ಮನೆಯಲ್ಲಿ ಎಲ್ಲರೂ ಹಿರಿಯರಾಗಲು ಪ್ರಾರಂಭಿಸಿದಾಗ ಮನೆ ಒಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
03-05-2025
ದೇಹವನ್ನು ಹಾಳುಮಾಡುವ ಆಹಾರ, ಮನಸ್ಸನ್ನು ಹಾಳುಮಾಡುವ ಆಲೋಚನೆಗಳು ಮತ್ತು ಮನಸ್ಥಿತಿಯನ್ನು ಹಾಳು ಮಾಡುವ ಜನರಿಂದ ಯಾವಾಗಲೂ ದೂರವಿರಿ.
02-05-2025
ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ಹವ್ಯಾಸಗಳನ್ನು ಬದಲಾಯಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ಬದಲಾದಲ್ಲಿ, ನಿಮ್ಮಭವಿಷ್ಯವೂ ಬದಲಾಗುತ್ತದೆ.
01-05-2025
ಯೋಗ್ಯತೆಗೆ ಮೀರಿದ ಆಡಂಬರ ಮನುಷ್ಯನನ್ನು ಸಾಲಗಾರನನ್ನಾಗಿ ಮಾಡುತ್ತದೆ.
30-04-2025
ನಾಳೆಗಳ ನಂಬಿ ನಡೆಯುವವನಿಗೆ ನೆನ್ನೆಗಳ ಚಿಂತೆ ಇಲ್ಲ, ಹಾಗೆ ನೆನ್ನೆಗಳಚಿಂತೆಯಲ್ಲಿ ಇರುವವನಿಗೆ ನಾಳೆಗಳಿಲ್ಲ.
29-04-2025
ಮನುಷ್ಯಎಷ್ಟೊಂದು ವಿಚಿತ್ರ ತಾನು ಅಂದುಕೊಂಡಂತೆ ಆದರೆ ದೇವರಿದ್ದಾನೆ ಎನ್ನುತ್ತಾನೆ. ಒಂದು ವೇಳೆ ಅಂದು ಕೊಂಡಂತೆ ಆಗದಿದ್ದರೆ ದೇವರೇ ಇಲ್ಲ ಎನ್ನುತ್ತಾನೆ. ಆದರೆ ಯಾವತ್ತೂ ಕೂಡ ತಾನು ಅಂದು ಕೊಂಡಿರುವುದು ಯೋಗ್ಯನೋ ಅಥವಾ ಅಯೋಗ್ಯನೋ ಎಂದು ಯೋಚಿಸುವುದೇ ಇಲ್ಲ.
28-04-2025
ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ. ಸಾಧಿಸಿದ ನಂತರ ವಿಶೇಷವಾಗಿ ನೋಡುತ್ತಾರೆ. ಅದಕ್ಕಾಗಿ ನೀವು ಅಂದುಕೊಂಡಂತೆ ಮಾಡಿ. ನಾವು ಏನೇ ಮಾಡಿದರೂ ಜನಆಡಿಕೊಳ್ಳುವ ಅಭ್ಯಾಸವನ್ನು ಬಿಡುವುದಿಲ್ಲ.
27-04-2025
ಜನರ ಆಟದಲ್ಲಿ ಮೋಸ ಇರಬಹುದು, ಆದರೆ ಭಗವಂತನ ಆಟದಲ್ಲಿ ಎಂದು ಮೋಸ ಇರುವುದಿಲ್ಲ. ಯಾರಿಗೆ ಯಾವುದನ್ನು ಸೇರಿಸಬೇಕೆಂದು ನಿರ್ಧರಿಸಿದ್ದಾನೋ ಅದುಸಿಕ್ಕೇ ಸಿಗುವುದು.
26-04-2025
ಯಾರ ಜೊತೆ ಮಾತನಾಡಿದರೆ ನಿಮಗೆ ಸಂತೋಷವಾಗುತ್ತದೆಯೋ ಅಂತವರ ಜೊತೆ ಮಾತನಾಡುವುದಕ್ಕಿಂತ ನಿಮ್ಮ ಜೊತೆ ಮಾತನಾಡಿದರೆ ಯಾರು ಸಂತೋಷವಾಗಿರುತ್ತಾರೋ ಅಂಥವರ ಜೊತೆ ಮಾತನಾಡಿ.
25-04-2025
ಖಾಲಿ ತಲೆ ಮತ್ತು ಖಾಲಿ ಹೃದಯಕ್ಕಿಂತ ಖಾಲಿ ಜೇಬು ಅತ್ಯಂತ ಒಳ್ಳೆಯದು. ಖಾಲಿ ಜೇಬಿನಿಂದ ಯಾರಿಗೂ ಅಪಾಯವಿಲ್ಲ ಆದರೆ ಖಾಲಿ ತಲೆ ಮತ್ತು ಖಾಲಿಹೃದಯದಿಂದ ತನಗೂ ಮತ್ತು ಸಮಾಜಕ್ಕೂ ಅಪಾಯ.
24-04-2025
ಯಾವಾಗ ನಮಗೆ ನಮ್ಮ ಸಂಕಲ್ಪಗಳನ್ನು ಒಂದು ಸೆಕೆಂಡ್ನಲ್ಲಿ ನಿಲ್ಲಿಸಲು ಬರುವುದು, ಆಗ ನಾವು ಮನಸ್ಸಿಗೆ ಮಾಲೀಕರಾದೆವು ಎಂದರ್ಥ.
23-04-2025
ದೇವರುಇದ್ದಾನೆಎಂಬ ಬಲವಾದ ನಂಬಿಕೆ ಇರಲಿ, ಆದರೆ ದೇವರೇ ಎಲ್ಲವನ್ನು ಮಾಡುತ್ತಾನೆ ಎಂಬಭ್ರಮೆಯಲ್ಲಿ ಬದುಕಬೇಡಿ; ನಿಮ್ಮಪ್ರಯತ್ನ ಸದಾ ಇರಲಿ.
22-04-2025
ಬದುಕು ಪರೀಕ್ಷೆ ಮಾಡುತ್ತಲೇ ಇರುತ್ತದೆ, ಒಮ್ಮೆ ಪಾಸಾದರೆ ಮುಗಿಯುವುದಿಲ್ಲ, ಮತ್ತೊಂದಕ್ಕೆ ಅಣಿಯಾಗಬೇಕು.
21-04-2025
ನನ್ನಿಂದ ಏನೂ ಆಗುವುದಿಲ್ಲ ಎಂದು ಒಂಟಿಯಾಗಿ ಅಳುತ್ತಾ ಕುಳಿತರೆ ನಿನಗೆ ನೀನೇ ಶತ್ರು. ನನ್ನಿಂದ ಎಲ್ಲವೂ ಸಾಧ್ಯ ಎಂದು ಎದ್ದು ನಿಂತರೆ ನಿನಗೆ ನೀನೆ ಮಿತ್ರ.
20-04-2025
ಅವಶ್ಯಕತೆಇರಲಿಇಲ್ಲದೆ ಇರಲಿ ಯಾವಾಗಲೂ ಒಂದೇ ತರ ಇರಿ. ನಟಿಸೋ ಸಂಬಂಧಗಳು ಯಾವತ್ತಿದ್ರೂ ಶಾಶ್ವತವಲ್ಲ ತಿಳಿದಿರಲಿ.
19-04-2025
ಸುಳ್ಳಿಗೆ ಭಯ ಹೆಚ್ಚು, ಅದಕ್ಕೆ ಅದು ಸದಾ ಮತ್ತೊಂದು ಸುಳ್ಳಿನ ಜೊತೆಯಲ್ಲಿ ಹೋಗಲು ಬಯಸುತ್ತದೆ; ಆದರೆ ಸತ್ಯಕ್ಕೆ ಧೈರ್ಯ ಹೆಚ್ಚು, ಹಾಗಾಗಿ ಒಂಟಿಯಾಗಿಯೇ ಸಾಗುತ್ತದೆ.
18-04-2025
ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ, ಮನಸ್ಸುಅಂಜುತ್ತದೆಯಷ್ಟೇ. ಧೈರ್ಯಮಾಡಿಮುಂದೆ ಸಾಗಿ, ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು, ಸೋತರೆ ನಾವೇ ಪಾಠಕಲಿಯಬಹುದು.
17-04-2025
ಜೇನುಹುಳ ಕೂಡಿಟ್ಟ ತುಪ್ಪ, ಜಿಪುಣ ಕೂಡಿಟ್ಟ ಹಣ ಎರಡು ಒಂದೇ. ಅವು ಯಾವತ್ತಿದ್ದರೂ ಪರರ ಪಾಲು ಜೀವನಕ್ಕೆ ಹಣ ಮುಖ್ಯವೇ ಹೊರತು ಹಣವೇ ಜೀವನ ಆಗಬಾರದು.
16-04-2025
ನಿಮಗೆ ಸಹಾಯ ಮಾಡಿದವರನ್ನು ಎಂದಿಗೂ ಮರೆಯಬೇಡಿ, ನಿಮ್ಮನ್ನುನಂಬಿದವರಿಗೆ ಎಂದಿಗೂ ಮೋಸಮಾಡಬೇಡಿ.
15-04-2025
ಬೆಂದಾಗಲೇ ಅಡುಗೆಗೆ ರುಚಿಬರುವುದು, ನೋಂದಾಗಲೇ ಜೀವನದಲ್ಲಿ ಬುದ್ದಿ ಬರುವುದು.
14-04-2025
ಯಾರಬಗ್ಗೆಯೂ ಕೇವಲವಾಗಿ ಮಾತನಾಡಬೇಡಿ, ಯಾಕೆಂದರೆ ಅವರ ಪರಿಸ್ಥಿತಿ ಮತ್ತು ಸಂದರ್ಭ ಅವರಿಗೆ ಮಾತ್ರ ಗೊತ್ತಿರುತ್ತದೆ.
13-04-2025
ರೋಗ-ಸಾಲ-ದ್ವೇಷ ಈ ಮೂರು ಇಲ್ಲದ ಸ್ಥಳದಲ್ಲಿ ಬದುಕಿ ಅದು ಗುಡಿಸಲಾದರೂ ಸರಿ ಅದೇ ನಿಜವಾದ ಶ್ರೀಮಂತಿಕೆ.
12-04-2025
ಮನುಷ್ಯಬಹಳವಿಚಿತ್ರ ಜೀವಿ. ಅವನಿಗೆ ತನ್ನಜ್ಞಾನದ ಬಗ್ಗೆ ಅಹಂಕಾರವಿದೆ, ಆದರೆ ತನ್ನ ಅಹಂಕಾರದ ಬಗ್ಗೆ ಜ್ಞಾನವಿಲ್ಲ.
11-04-2025
ಒಬ್ಬಒಳ್ಳೆಯವ್ಯಕ್ತಿಯಿಂದ ತಪ್ಪು ನಡೆದು ಹೋಗಿದ್ದರೆ ಅವರನ್ನು ಕ್ಷಮಿಸಿ, ಏಕೆಂದರೆ ಒಂದು ವೇಳೆ ಮುತ್ತು ಕಸದಲ್ಲಿ ಬಿದ್ದರೂ ಅದು ಮೌಲ್ಯಯುತವಾಗಿಯೇ ಇರುತ್ತದೆ.
10-04-2025
ಹಣ ನಿಮ್ಮನ್ನು ಜನ ನೋಡುವಂತೆ ಮಾಡಬಲ್ಲದು, ಆದರೆ ಅವರನ್ನು ಗೆಲ್ಲಲು ನಿಮ್ಮಗುಣ ಚೆನ್ನಾಗಿರಬೇಕು.
09-04-2025
ಭಯ ಇಲ್ಲದವನನ್ನು ಸಮುದ್ರಕ್ಕೆ ಎಸೆದರು ಬದುಕಿ ಬರುತ್ತಾನೆ, ಆದರೆ ಭಯ ಇರುವವನನ್ನು ತೊಟ್ಟಿಗೆ ಹಾಕಿದರೂ ಹೆದರಿ ಪ್ರಾಣ ಬಿಡುತ್ತಾನೆ. ಮನಸ್ಸಿನಲ್ಲಿ ಇರುವ ಭಯವನ್ನುಮೊದಲು ದೂರ ಮಾಡಿ.
08-04-2025
ಹಣವಂತರ ಜೊತೆ ನೂರು ವರ್ಷ ಬದುಕುವುದಕ್ಕಿಂತ ಹೃದಯವಂತರ ಜೊತೆ ಮೂರು ದಿನ ಬದುಕುವುದೇ ಲೇಸು.
07-04-2025
ಯಾರು ಯಾರನ್ನು ಉದ್ದಾರಮಾಡಲು ಸಾಧ್ಯವಿಲ್ಲ, ಅಥವಾ ಹಾಳುಮಾಡಲು ಸಾಧ್ಯವಿಲ್ಲ. ಅವರವರ ಯೋಚನೆಗಳು ಉದ್ದಾರಕ್ಕೂ- ಹಾಳಾಗೋದಕ್ಕೂ ಕಾರಣವಾಗುತ್ತದೆ.
06-04-2025
ನಾಲಿಗೆ ಮತ್ತು ಕೈಗೆ ತುಂಬಾ ಹತ್ತಿರವಾದ ಸಂಬಂಧವಿದೆ. ಇವೆರಡನ್ನು ಬಳಸುವ ಮುನ್ನ ತುಂಬಾ ಎಚ್ಚರವಿರಲಿ. ಯಾವಾಗ ನೀವು ಕೈ ಚಾಚುತ್ತೀರಿ ನಾಲಿಗೆ ಬಿದ್ದುಹೋಗುತ್ತದೆ, ನೀವು ಕೈ ಚಾಚುವುದಿಲ್ವೋ ಆಡುವ ಮಾತಿನಲ್ಲಿ ಶಕ್ತಿಇರುತ್ತದೆ.
05-04-2025
ಕಾನೂನಿನ ಕಣ್ಣನ್ನು ಮುಚ್ಚಿಸಬಹುದು, ಆದರೆ ಕರ್ಮದ ಕಣ್ಣನ್ನು ಮುಚ್ಚಿಸಲು ಸಾಧ್ಯವಿಲ್ಲ. ನಾವು ಮಾಡುವ ಪ್ರತಿಯೊಂದು ಕರ್ಮದ ಫಲವು ನಮ್ಮ ಖಾತೆಗೆ ಜಮಾ ಆಗುತ್ತದೆ.
04-04-2025
ಮನುಷ್ಯಮೊದಲು ಭಿಕ್ಷುಕನಾಗಿ ದೇವರಲ್ಲಿ ಕೈ ಮುಗಿದು ಸಿರಿ ಸಂಪತ್ತನ್ನು ಬೇಡುತ್ತಾನೆ, ನಂತರ ಅಹಂಕಾರದಿಂದ ದೇವರಿಗೆ ದಾನ ನೀಡಿ ಕೆಳಗೆ ತನ್ನ ಮತ್ತು ತನ್ನ ಕುಟುಂಬದವರ ಹೆಸರು ಬರಿಸುತ್ತಾನೆ.
03-04-2025
ಜೀವನದಲ್ಲಿ ನೆಮ್ಮದಿಯಾಗಿದ್ದರೆ ಏನಾದರೂ ಸಾಧಿಸಬೇಕು ಅನ್ನಿಸುತ್ತದೆ, ಇಲ್ಲದಿದ್ದರೇ ಸಾಧನೆಗಿಂತ ನೆಮ್ಮದಿಯ ಮುಖ್ಯ ಎನಿಸುತ್ತದೆ.
02-04-2025
ಎಲ್ಲಿಯವರೆಗೆಶರೀರವು ಆರೋಗ್ಯವಾಗಿರುತ್ತದೆಯೋ ಮತ್ತು ಮೃತ್ಯು ದೂರದಲ್ಲಿರುತ್ತೆಯೋ ಅಲ್ಲಿಯವರೆಗೆ ಆತ್ಮಕಲ್ಯಾಣವನ್ನು ಮಾಡಿಕೊಳ್ಳಿ ಕೊನೆ ಕ್ಷಣದಲ್ಲಿ ಏನು ತಾನೇ ಮಾಡಲು ಸಾಧ್ಯ.
31-03-2025
ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ, ತಪ್ಪು ಸರಿಯೋ ಹೆಜ್ಜೆ ಹಾಕಿ ನೋಡಿ, ಗೆದ್ದರೆ ಮುಂದಕ್ಕೆ ನಡೆಯುತ್ತೇವೆ, ಸೋತರೆ ಮುಂದೆ ನೀನು ಏನು ಮಾಡಬೇಕೆಂದು ಕಲಿಸುತ್ತದೆ.
23-03-2025
ನಿರೀಕ್ಷೆಗಳ ತೂಕ ಕಡಿಮೆಯಾದಂತೆಲ್ಲಾ, ನೆಮ್ಮದಿಯ ತೂಕ ಹೆಚ್ಚಾಗುತ್ತಾ ಹೋಗುತ್ತದೆ.
22-03-2025
ನಿಮ್ಮಚಿಂತೆಗಳನ್ನು ಭಗವಂತನಮುಂದೆ ಮಾತ್ರ ಹೇಳಿಕೊಂಡು ಅಳಿ, ಯಾಕೆಂದರೆ ಭಗವಂತ ಯಾರ ಹತ್ತಿರವ ಹೇಳಿ ನಗುವುದಿಲ್ಲ.
21-03-2025
ನಮ್ಮಭಾಗ್ಯದಲ್ಲಿ ಏನಿದಿಯೋ ಅದೇ ನಮಗೆ ದೊರಕುವಂತದ್ದು, ನಮಗೆಬೇಕಾದದ್ದು ಆ ಸಮಯಕ್ಕೆ ದೊರಕದೇ ಇರುವುದೇ ಮರ್ಮ.
20-03-2025
ಮಾತು ಅನ್ನುವದು ಮಮತೆಯಿಂದಕೂಡಿರಬೇಕು, ವಿನಹಃ ಮಾತು ಅನ್ನುವುದು ಮಂತ್ರದಿಂದ ಕೂಡಿರಬಾರದು.
19-03-2025
ಕೋಪ ಯಾವ ಸಮಸ್ಯೆಯನ್ನುಪರಿಹರಿಸುವದಿಲ್ಲ, ಏನನ್ನು ಸೃಷ್ಟಿಸುವುದಿಲ್ಲ, ಆದರೆ ಎಲ್ಲವನ್ನೂ ನಾಶಪಡಿಸಬಲ್ಲದು.
18-03-2025
ಜೀವನದಲ್ಲಿ ನಮ್ಮ ಗುರಿ ಏನೇ ಇರಬಹುದು, ಆದರೆ ಅದರಅಂತ್ಯ ಹೇಗಿರಬೇಕೆಂದು ಭಗವಂತನ ನಿರ್ಧಾರವಾಗಿರುತ್ತದೆ.
17-03-2025
ಕಷ್ಟದ ಸಮಯದಲ್ಲಿ ದೇವರು ಏಕೆ ಸುಮ್ಮನಿದ್ದಾನೆ ಎಂದುಚಿಂತಿಸಬೇಡಿ, ಏಕೆಂದರೆ ಪಾಠ ಕಲಿಸಿದ ಶಿಕ್ಷಕರು ಕೂಡ ಪರೀಕ್ಷೆಯ ಕೊಠಡಿಯಲ್ಲಿ ಸುಮ್ಮನಿರುತ್ತಾರೆ.
16-03-2025
ಜೀವನದಲ್ಲಿ ಏನೂ ಇಲ್ಲದಾಗ ತಾಳ್ಮೆ ಮುಖ್ಯ. ಆದರೆ ಎಲ್ಲವೂ ಸಿಕ್ಕಮೇಲೆ ವಿನಯ ತುಂಬಾನೇ ಮುಖ್ಯ.